ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಂಡರ್ ಫುಲ್ ವರದಿ: ಕೊರೊನಾಗೆ ಬಲಿ ಆದವರಿಗಿಂತ ಸಾವು ಗೆದ್ದವರೇ ಹೆಚ್ಚು!

|
Google Oneindia Kannada News

ನವದೆಹಲಿ, ಏಪ್ರಿಲ್.26: ನೊವೆಲ್ ಕೊರೊನಾ ವೈರಸ್.. ಕೊವಿಡ್-19.. ಸಾರ್ಸ್ ಕೊರೊನಾ ವೈರಸ್-2.. ಹೀಗೆ ಬಗೆ ಬಗೆಯ ಹೆಸರಿನಲ್ಲಿ ಗುರುತಿಸಿಕೊಂಡಿರುವ ಮಹಾಮಾರಿಯದ್ದೇ ಎಲ್ಲೆಲ್ಲೂ ಸದ್ದು. ಜಾಗತಿಕ ವಲಯದಲ್ಲಿ ಲಕ್ಷ ಲಕ್ಷ ಜನರಿಗೆ ತಗಲಿರುವ ಸೋಂಕು ಲಕ್ಷಾಂತರ ಜನರ ಪ್ರಾಣವನ್ನೇ ತೆಗೆದಿದೆ.

ವಿಶ್ವದಲ್ಲೇ ಶನಿವಾರದ ಅಂಕಿ-ಅಂಶಗಳ ಪ್ರಕಾರ 28,91,073ಕ್ಕೂ ಅಧಿಕ ಮಂದಿಗೆ ಕೊರೊನಾ ವೈರಸ್ ಸೋಂಕು ತಗಲಿರುವ ಬಗ್ಗೆ ಸ್ಪಷ್ಟವಾಗಿದೆ. 2,01,501ಕ್ಕೂ ಹೆಚ್ಚು ಜನರು ಇದೇ ಮಹಾಮಾರಿಗೆ ಸಿಲುಕಿ ಸಾವನ್ನಪ್ಪಿದ್ದಾರೆ. ಕಳೆದ 24 ಗಂಟೆಗಳಲ್ಲಿ ವಿಶ್ವಾದ್ಯಂತ 62,247 ಹೊಸ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದರೆ, ಕೊವಿಡ್-19ನಿಂದ ಒಂದೇ ದಿನದಲ್ಲಿ 4,402 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಎಂದು ಅಂತಾರಾಷ್ಟ್ರೀಯ ಸುದ್ದಿ ವಾಹಿನಿಗಳು ವರದಿ ಮಾಡಿವೆ.

ಅಚ್ಚರಿ ಸುದ್ದಿ: 20 ದಿನ ಕಣ್ಣಿನಲ್ಲೇ ಕೊರೊನಾ ವೈರಸ್ ಕಾಲಹರಣ!ಅಚ್ಚರಿ ಸುದ್ದಿ: 20 ದಿನ ಕಣ್ಣಿನಲ್ಲೇ ಕೊರೊನಾ ವೈರಸ್ ಕಾಲಹರಣ!

ಪ್ರತಿನಿತ್ಯ ಕೊರೊನಾ ವೈರಸ್ ಸೋಂಕಿತ ಪ್ರಕರಣ ಹಾಗೂ ಸಾವಿನ ಬಗ್ಗೆ ಸುದ್ದಿಗಳು ಬರುತ್ತಿವೆಯೇ ವಿನಃ ಸೋಂಕಿತರು ಗುಣಮುಖರಾದ ಪ್ರಕರಣಗಳೆಷ್ಟು. ಈ ಅಂಕಿ-ಅಂಶಗಳಿಂದ ತಿಳಿದು ಬರುವುದೇನು. ಅತಿಹೆಚ್ಚು ಸೋಂಕಿತರನ್ನು ಹೊಂದಿರುವ ಟಾಪ್-5 ರಾಷ್ಟ್ರಗಳಲ್ಲಿನ ಕಂಡೀಷನ್ ಹೇಗಿದೆ. ಆತಂಕದಲ್ಲಿರುವ ಜನರಲ್ಲಿ ಆತ್ಮಸ್ಥೈರ್ಯದ ಜೊತೆಗೆ ಸೋಂಕಿತರಿಗೂ ಸಮಾಧಾನ ನೀಡುವಂತಾ ವಿಶೇಷ ವರದಿ ಇಲ್ಲಿದೆ ನೋಡಿ.

ಮದ್ದಿಲ್ಲದೇ ಮಾಯವಾಗುತ್ತಿದೆಯಾ ಕೊರೊನಾ ವೈರಸ್!

ಮದ್ದಿಲ್ಲದೇ ಮಾಯವಾಗುತ್ತಿದೆಯಾ ಕೊರೊನಾ ವೈರಸ್!

ಕೊವಿಡ್-19 ಮಹಾಮಾರಿ ಮದ್ದಿಲ್ಲದೇ ಮಾಯವಾಗುತ್ತಿದೆಯಾ ಎಂದು ಕೇಳಿದರೆ ಅದು ಶುದ್ಧಸುಳ್ಳು. ಕೊರೊನಾ ವೈರಸ್ ನಿವಾರಣೆಗೆ ನಿರ್ದಿಷ್ಟ ಔಷಧಿ ಅಥವಾ ಲಸಿಕೆಯನ್ನು ಯಾವುದೇ ದೇಶವು ಇದುವರೆಗೂ ಪತ್ತೆ ಮಾಡಿಲ್ಲ. ಹೀಗಿದ್ದರೂ ಕೊರೊನಾ ವೈರಸ್ ಸೋಂಕಿತರು ಸಾವಿನ ಸಂಖ್ಯೆ ಮತ್ತು ಗುಣಮುಖರಾದವರ ಸಂಖ್ಯೆಯನ್ನು ಅವಲೋಕಿಸಿ ನೋಡಿದಾಗ ಮನಸ್ಸಿಗೊಂದು ಸಮಾಧಾನ. ಏಕೆಂದರೆ ವಿಶ್ವ, ಭಾರತ ಅಥವಾ ಕರ್ನಾಟಕದ ಅಂಕಿ-ಅಂಶಗಳನ್ನೇ ತುಲನೆ ಮಾಡಿ ನೋಡಿದಾಗ ಕೊರೊನಾ ಸೋಂಕಿತರ ಪೈಕಿ ಪ್ರಾಣ ಬಿಟ್ಟವರಿಗಿಂತಲೂ ಚೇತರಿಸಿಕೊಂಡವರ ಸಂಖ್ಯೆಯೇ ಮೂರ್ನಾಲ್ಕು ಪಟ್ಟು ಹೆಚ್ಚಾಗಿದೆ. ಈ ಅಂಕಿ-ಅಂಶವು ಕೆಲವು ಪ್ರದೇಶದಲ್ಲಿ ಸಾವಿರಾರು ಪಟ್ಟು ಹೆಚ್ಚಾಗಿರುವುದನ್ನೂ ಕಾಣಬಹುದಾಗಿದೆ.

ಕನ್ವೆಲೆಸೆಂಟ್ ಪ್ಲಾಸ್ಮಾ ಥೆರಪಿ ಮೊರೆಗೆ ವೈದ್ಯರು

ಕನ್ವೆಲೆಸೆಂಟ್ ಪ್ಲಾಸ್ಮಾ ಥೆರಪಿ ಮೊರೆಗೆ ವೈದ್ಯರು

ಜಾಗತಿಕ ಮಟ್ಟದಲ್ಲಿ ನಿತ್ಯ ಸಾವಿರ ಜನರನ್ನು ಬಲಿ ಪಡೆಯುತ್ತಿರುವ ಕೊರೊನಾ ವೈರಸ್ ನಿಂದ ರಕ್ಷಿಸಿಕೊಳ್ಳುವುದಕ್ಕೆ ಸದ್ಯ ವಿಶ್ವದಲ್ಲೇ ವೈದ್ಯರ ತಂಡ ಕನ್ವೆಲೆಸೆಂಟ್ ಪ್ಲಾಸ್ಮಾ ಥೆರಪಿ ಎಂಬ ಚಿಕಿತ್ಸಾ ವಿಧಾನಕ್ಕೆ ಮೊರೆ ಹೋಗಿದ್ದಾರೆ. ಸೋಂಕಿತರ ಆರೋಗ್ಯದಲ್ಲಿ ಪ್ರಾಥಮಿಕ ಹಂತದಲ್ಲಿ ಕೊಂಚ ಚೇತರಿಕೆ ಕಂಡು ಬಂದಿದ್ದು, ವೈದ್ಯರಲ್ಲಿ ಮತ್ತು ಸಂಶೋಧಕರಲ್ಲಿ ಹೊಸ ಭರವಸೆಯನ್ನು ಮೂಡಿಸಿದೆ. ಈ ಚಿಕಿತ್ಸಾ ವಿಧಾನವನ್ನೇ ಕೊರೊನಾ ವೈರಸ್ ವಿರುದ್ಧ ರಾಮಬಾಣವಾಗಿ ಪ್ರಯೋಗಿಸುವುದಕ್ಕೆ ವಿಶ್ವದಾದ್ಯಂತ ವೈದ್ಯರು ಅಣಿಯಾಗಿದ್ದಾರೆ. ಚೀನಾ, ಅಮೆರಿಕಾ, ಇಂಗ್ಲೆಂಡ್ ಅಷ್ಟೇ ಏಕೆ ಭಾರತದಲ್ಲೂ ಕನ್ವೆಲೆಸೆಂಟ್ ಪ್ಲಾಸ್ಮಾ ಥೆರಪಿ ವಿಧಾನವನ್ನು ಈಗಾಗಲೇ ಪ್ರಾಯೋಗಿಕವಾಗಿ ಬಳಸಿಕೊಳ್ಳಲಾಗಿದೆ.

ಲ್ಯಾಬ್ ಬೇಕಾಗಿಲ್ಲ: ಕೊರೊನಾ ಸೋಂಕಿತರನ್ನು ಪತ್ತೆ ಹಚ್ಚಲು ಹೊಸ ಅಸ್ತ್ರ!ಲ್ಯಾಬ್ ಬೇಕಾಗಿಲ್ಲ: ಕೊರೊನಾ ಸೋಂಕಿತರನ್ನು ಪತ್ತೆ ಹಚ್ಚಲು ಹೊಸ ಅಸ್ತ್ರ!

ಸಾವು ಜಯಿಸಲು ಇಮ್ಯೂನಿಟಿ ಪವರ್ ಇಂಪಾರ್ಟೆಂಟ್

ಸಾವು ಜಯಿಸಲು ಇಮ್ಯೂನಿಟಿ ಪವರ್ ಇಂಪಾರ್ಟೆಂಟ್

ಕೊರೊನಾ ವೈರಸ್ ಸೋಂಕಿಗೆ ಸಿಲುಕಿ ಪ್ರಾಥಮಿಕ ಹಂತದಲ್ಲಿ ಇರುವಾಗಲೇ ಚಿಕಿತ್ಸೆ ಪಡೆದು ಗುಣಮುಖವಾದ ಪ್ರಕರಣಗಳು ಸಾಕಷ್ಟಿವೆ. ಹೈಡ್ರೋಕ್ಸಿ ಕ್ಲೋರಿನ್ ಅಥವಾ ಪ್ಯಾರಾಸಿಟಮಲ್ ಮಾತ್ರೆಗಳಿಂದಲೇ ಚೇತರಿಸಿಕೊಂಡ ಸೋಂಕಿತರೂ ಇದ್ದಾರೆ. ಇದಕ್ಕೆ ಮುಖ್ಯವಾಗಿ ಕಾರಣವಾಗಿರುವುದೇ ಸೋಂಕಿತರಲ್ಲಿದ್ದ ರೋಗನಿರೋಧಕ ಶಕ್ತಿ ಜೊತೆಗೆ ಆತ್ಮಸ್ಥೈರ್ಯ. ಇಮ್ಯೂನಿಟಿ ಪವರ್ ಹೆಚ್ಚಾಗಿರುವ ವ್ಯಕ್ತಿಗಳು ಕೊರೊನಾ ವೈರಸ್ ಸೋಂಕನ್ನು ಜಯಿಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ ಎಂದು ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಆರಂಭಿಕ ಹಂತದಲ್ಲಿ ತಿಳಿಸಿದ್ದರು. ರೋಗನಿರೋಧಕ ಶಕ್ತಿಯನ್ನು ವೃದ್ಧಿಸಿಕೊಳ್ಳುವಂತೆ ಸಲಹೆಯನ್ನೂ ನೀಡಿದ್ದರು.

ಕನ್ವೆಲೆಸೆಂಟ್ ಪ್ಲಾಸ್ಮಾ ಥೆರಪಿ ಚಿಕಿತ್ಸಾ ವಿಧಾನ ಹೇಗಿರುತ್ತೆ?

ಕನ್ವೆಲೆಸೆಂಟ್ ಪ್ಲಾಸ್ಮಾ ಥೆರಪಿ ಚಿಕಿತ್ಸಾ ವಿಧಾನ ಹೇಗಿರುತ್ತೆ?

ವಿಶ್ವದಾದ್ಯಂತ ಕನ್ವೆಲೆಸೆಂಟ್ ಪ್ಲಾಸ್ಮಾ ಥೆರಪಿ ಚಿಕಿತ್ಸಾ ವಿಧಾನಕ್ಕೆ ಮಾತು. ಕೊರೊನಾ ವೈರಸ್ ಸೋಂಕಿತರನ್ನು ಗುಣಮುಖಗೊಳಿಸುವ ನಿಟ್ಟಿನಲ್ಲಿ ಕನ್ವೆಲೆಸೆಂಟ್ ಪ್ಲಾಸ್ಮಾ ಥೆರಪಿ ಚಿಕಿತ್ಸಾ ವಿಧಾನವನ್ನು ವೈದ್ಯಕೀಯ ಲೋಕದಲ್ಲಿ ರಾಮಬಾಣದಂತೆ ಪ್ರಯೋಗಿಸಲಾಗುತ್ತಿದೆ. ಅಸಲಿಗೆ ಸೋಂಕಿನಿಂದ ಗುಣಮುಖರಾದ ವ್ಯಕ್ತಿಗಳಲ್ಲಿ ವೈರಸ್ ಗಳ ವಿರುದ್ಧ ಹೋರಾಡುವ ಶಕ್ತಿ ವೃದ್ಧಿಯಾಗಿರುತ್ತದೆ. ಹೀಗೆ ಗುಣಮುಖರಾದ ವ್ಯಕ್ತಿಗಳಲ್ಲಿನ ಪ್ಲಾಸ್ಮಾವನ್ನು ಸಂಗ್ರಹಿಸಲಾಗುತ್ತಿದೆ. ಈ ಪ್ಲಾಸ್ಮಾವನ್ನು ಕೊವಿಡ್-19 ಸೋಂಕಿತರಿಗೆ ಇಂಜೆಕ್ಟ್ ಮಾಡಲಾಗುತ್ತಿದೆ. ಇದರಿಂದ ಗುಣಮುಖನಾದ ವ್ಯಕ್ತಿಯಲ್ಲಿದ್ದ ಕೊರೊನಾ ವೈರಸ್ ವಿರುದ್ಧ ಹೋರಾಡುವ ಶಕ್ತಿಯು ಸೋಂಕಿತನಲ್ಲಿಯೂ ಸೃಷ್ಟಿಯಾಗುತ್ತದೆ ಎಂದು ವೈದ್ಯರು ತಿಳಿಸುತ್ತಿದ್ದಾರೆ.

ಲಕ್ಷಲಕ್ಷ ಬಲಿ ಪಡೆದ ಕೊರೊನಾ ವೈರಸ್ ಸೋಂಕಿಗೆ ಸಿಕ್ಕಿತು ಔಷಧಿ!ಲಕ್ಷಲಕ್ಷ ಬಲಿ ಪಡೆದ ಕೊರೊನಾ ವೈರಸ್ ಸೋಂಕಿಗೆ ಸಿಕ್ಕಿತು ಔಷಧಿ!

ಕೊರೊನಾ ಸೋಂಕಿತರಿಗೆ ನಿರ್ದಿಷ್ಟ ಔಷಧಿ, ಲಸಿಕೆಯಿಲ್ಲ

ಕೊರೊನಾ ಸೋಂಕಿತರಿಗೆ ನಿರ್ದಿಷ್ಟ ಔಷಧಿ, ಲಸಿಕೆಯಿಲ್ಲ

ಕೊರೊನಾ ವೈರಸ್ ಸೋಂಕು ಕಾಣಿಸಿಕೊಂಡ ಆರಂಭಿಕ ಹಂತದಿಂದ ಈವರೆಗೂ ಮಾರಕ ರೋಗದಿಂದ ಪ್ರಾಣ ಬಿಟ್ಟವರಿಗಿಂತಲೂ ಗುಣಮುಖರಾದವರ ಸಂಖ್ಯೆಯೇ ಹೆಚ್ಚಾಗಿದೆ. ಹೀಗಿದ್ದರೂ ಜನರು ಮೈ ಮರೆಯುವಂತಿಲ್ಲ. ಏಕೆಂದರೆ ಕೊರೊನಾ ವೈರಸ್ ನಿವಾರಿಸಬಲ್ಲ ಯಾವುದೇ ನಿರ್ದಿಷ್ಟ ಲಸಿಕೆಯಾಗಲಿ ಮಾತ್ರೆಗಳಾಗಿ, ಔಷಧಿಯಾಗಲಿ ಇಂದಿಗೂ ಯಾವ ರಾಷ್ಟ್ರದಲ್ಲೂ ಸಿಕ್ಕಿಲ್ಲ. ಹೀಗಿದ್ದರೂ ಆತಂಕಪಡುವ ಅಗತ್ಯವಿಲ್ಲ ಎಂಬ ಅಂಶವನ್ನು ಸೋಂಕಿತರು ಮತ್ತು ಮೃತರ ನಡುವಿನ ಅಂಕಿ-ಅಂಶಗಳೇ ಸಾರಿ ಸಾರಿ ಹೇಳುತ್ತಿವೆ.

ಕೊರೊನಾ ವೈರಸ್ ಅದೆಷ್ಟು ವೇಗವಾಗಿ ಹರಡುತ್ತಿದೆ ಎಂಬ ಭೀತಿಯಲ್ಲೇ ಜನರು ಕಾಲ ಕಳೆಯುತ್ತಿದ್ದು, ಸೋಂಕು ತಗುಲಿದರೆ ಸಾವು ನಿಶ್ಚಿತವೇ ಎಂಬ ಭಯ ಇಂದಿಗೂ ಸಾರ್ವಜನಿಕರನ್ನು ಕಾಡುತ್ತಿದೆ. ಆದರೆ ವಿಶ್ವದಾದ್ಯಂತ ಅಂಕಿ-ಅಂಶಗಳು ಇದನ್ನು ಸುಳ್ಳಾಗಿಸಿವೆ. ಏಕೆಂದರೆ ಕೊರೊನಾ ವೈರಸ್ ನಿಂದ ಪ್ರಾಣ ಬಿಟ್ಟವರ ಸಂಖ್ಯೆಗಿಂತಲೂ ಮದ್ದು ಇಲ್ಲದಿದ್ದರೂ ಗುಣಮುಖರಾದವರ ಸಂಖ್ಯೆಯೇ ಹೆಚ್ಚಾಗಿದೆ. ವಿಶ್ವದಲ್ಲೇ ಟಾಪ್-5 ರಾಷ್ಟ್ರಗಳಲ್ಲಿನ ಕಂಡೀಷನ್ ಹೇಗಿದೆ ಅನ್ನೋದನ್ನು ಒಂದೊಂದಾಗಿ ನೋಡೋಣ.

ಅಮೆರಿಕಾದಲ್ಲಿ 1.10 ಲಕ್ಷ ಕೊರೊನಾ ಸೋಂಕಿತರು ಡಿಸ್ಚಾರ್ಜ್

ಅಮೆರಿಕಾದಲ್ಲಿ 1.10 ಲಕ್ಷ ಕೊರೊನಾ ಸೋಂಕಿತರು ಡಿಸ್ಚಾರ್ಜ್

ಕೊರೊನಾ ವೈರಸ್ ಅಟ್ಟಹಾಸಕ್ಕೆ ನಲುಗಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ ಅಗ್ರಸ್ಥಾನದಲ್ಲಿದೆ. ಅಮೆರಿಕಾದಲ್ಲಿ ಈವರೆಗೂ 9,45,249 ಜನರಿಗೆ ಕೊರೊನಾ ಸೋಂಕು ತಗಲಿರುವುದು ದೃಢಪಟ್ಟಿದೆ. ಶನಿವಾರವೇ 1,050 ಮಂದಿ ಕೊರೊನಾದಿಂದ ಪ್ರಾಣ ಬಿಟ್ಟಿದ್ದು, ದೇಶದಲ್ಲಿ ಮೃತರ ಸಂಖ್ಯೆ 53,243ಕ್ಕೆ ಏರಿಕೆಯಾಗಿದೆ. ಈ ಅಂಕಿ-ಸಂಖ್ಯೆಯ ಎರಡು ಪಟ್ಟು ಸೋಂಕಿತರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಅಮೆರಿಕಾದಲ್ಲಿ ಇದುವರೆಗೂ 1,10,834 ಕೊರೊನಾ ವೈರಸ್ ಸೋಂಕಿತರು ಗುಣಮುಖರಾಗಿದ್ದಾರೆ. ಇದುವರೆಗೂ ದೇಶದಲ್ಲಿ 51,71,621 ಜನರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ.

ಉದಾಹರಣೆ ಸಹಿತ ಸ್ಟೋರಿ: ಕೊರೊನಾಗೆ ಬ್ರೇಕ್ ಹಾಕಿದ್ದು ಹೇಗೆ ವಿಯೆಟ್ನಾಂ?ಉದಾಹರಣೆ ಸಹಿತ ಸ್ಟೋರಿ: ಕೊರೊನಾಗೆ ಬ್ರೇಕ್ ಹಾಕಿದ್ದು ಹೇಗೆ ವಿಯೆಟ್ನಾಂ?

ಜರ್ಮನಿಯಲ್ಲಿ ಸೋಂಕಿತರ ಪೈಕಿ ಸಾವು ಗೆದ್ದವರೇ ಹೆಚ್ಚು!

ಜರ್ಮನಿಯಲ್ಲಿ ಸೋಂಕಿತರ ಪೈಕಿ ಸಾವು ಗೆದ್ದವರೇ ಹೆಚ್ಚು!

ಕೊರೊನಾ ವೈರಸ್ ಅಟ್ಟಹಾಸಕ್ಕೆ ತತ್ತರಿಸಿರುವ ರಾಷ್ಟ್ರಗಳ ಪೈಕಿ ಜರ್ಮನಿ ಕೂಡಾ ಒಂದು. ಅಚ್ಚರಿಯ ವಿಚಾರ ಎಂದರೆ ಜರ್ಮನಿಯಲ್ಲಿ ಇದುವರೆಗೂ 1,55,418 ಮಂದಿಗೆ ಕೊರೊನಾ ವೈರಸ್ ಪಾಸಿಟಿವ್ ಬಂದಿದೆ. ಈ ಪೈಕಿ ಶನಿವಾರ ಮೃತಪಟ್ಟ 45 ಮಂದಿ ಸೇರಿದಂತೆ ಇದುವರೆಗೂ 5,805 ಜನರ ಕೊರೊನಾ ವೈರಸ್ ನಿಂದ ಪ್ರಾಣ ಬಿಟ್ಟಿದ್ದಾರೆ. ಆದರೆ 1,09,800ಕ್ಕೂ ಅಧಿಕ ಜನರು ಕೊರೊನಾ ವೈರಸ್ ನಿಂದ ಚೇತರಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು, ಜರ್ಮನಿಯಲ್ಲಿ ಇದುವರೆಗೂ 20,72,669ಕ್ಕೂ ಹೆಚ್ಚು ಜನರನ್ನು ಕೊರೊನಾ ವೈರಸ್ ಸೋಂಕು ತಪಾಸಣೆಗೆ ಒಳಪಡಿಸಲಾಗಿದೆ.

ಸ್ಪೇನ್ ನಲ್ಲಿ ಸತ್ತವರಿಗಿಂತ ನಾಲ್ಕುಪಟ್ಟು ಸೋಂಕಿತರು ಆರಾಮ

ಸ್ಪೇನ್ ನಲ್ಲಿ ಸತ್ತವರಿಗಿಂತ ನಾಲ್ಕುಪಟ್ಟು ಸೋಂಕಿತರು ಆರಾಮ

ಕೊರೊನಾ ವೈರಸ್ ನಿಂದ ಬೆಚ್ಚಿ ಬಿದ್ದಿರುವ ಸ್ಪೇನ್ ನಲ್ಲೂ ಕೂಡಾ ಮಹಾಮಾರಿಯಿಂದ ಪ್ರಾಣ ಬಿಟ್ಟವರಿಗಿಂತಲೂ ಗುಣಮುಖರಾದವರ ಸಂಖ್ಯೆಯೇ ಹೆಚ್ಚಾಗಿದೆ. ದೇಶದಲ್ಲಿ ಇದುವರೆಗೂ ಕೊವಿಡ್-19 2,23,759 ಸೋಂಕಿತರ ಪೈಕಿ 22,902 ಮಂದಿ ಮಾರಕ ರೋಗಕ್ಕೆ ಬಲಿಯಾಗಿದ್ದಾರೆ. ಶನಿವಾರವೇ 378 ಮಂದಿ ಕೊರೊನಾದಿಂದ ಪ್ರಾಣ ಬಿಟ್ಟಿದ್ದಾರೆ. ಆದರೆ ಸ್ಪೇನ್ ನಲ್ಲಿ ಮೃತಪಟ್ಟವರಿಗಿಂತ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ ನಾಲ್ಕು ಪಟ್ಟಿದೆ. 95,708 ಕೊರೊನಾ ವೈರಸ್ ಸೋಂಕಿತರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಈವರೆಗೂ ಸ್ಪೇನ್ ನಲ್ಲಿ 9,30,230 ಜನರನ್ನು ಕೊರೊನಾ ವೈರಸ್ ಸೋಂಕು ಪತ್ತೆ ತಪಾಸಣೆ ನಡೆಸಲಾಗಿದೆ.

ಬೆಂಗಳೂರಲ್ಲೇ ಕನ್ವೆಲೆಸೆಂಟ್ ಪ್ಲಾಸ್ಮಾ ಥೆರಪಿ: ಹೇಗಿರುತ್ತೆ ಚಿಕಿತ್ಸೆ?ಬೆಂಗಳೂರಲ್ಲೇ ಕನ್ವೆಲೆಸೆಂಟ್ ಪ್ಲಾಸ್ಮಾ ಥೆರಪಿ: ಹೇಗಿರುತ್ತೆ ಚಿಕಿತ್ಸೆ?

ಚೀನಾದಲ್ಲಿ ರಾಮನ ಲೆಕ್ಕ ಬೇರೆ, ಕೃಷ್ಣನ ಲೆಕ್ಕ ಬೇರೆ!

ಚೀನಾದಲ್ಲಿ ರಾಮನ ಲೆಕ್ಕ ಬೇರೆ, ಕೃಷ್ಣನ ಲೆಕ್ಕ ಬೇರೆ!

ಕೊರೊನಾ ವೈರಸ್ ಸೋಂಕು ಎಂಬ ಮಹಾಮಾರಿಯ ಮಾತೃಭೂಮಿಯೇ ಚೀನಾದ ವುಹಾನ್ ನಗರ. ವಿಶ್ವದಲ್ಲಿ ಮಾರಣಹೋಮ ನಡೆಸಿರುವ ಕೊರೊನಾ ವೈರಸ್ ಚೀನಾದಲ್ಲಿ ಇದೀಗ ಸೈಲೆಂಟ್ ಆಗಿದೆಯಂತೆ. ಆರಂಭದಲ್ಲಿ ಸಾವಿರ ಸಾವಿರ ಜನರಿಗೆ ತಗುಲಿದ್ದ ಸೋಂಕಿನ ಪ್ರಮಾಣ ಚೀನಾದಲ್ಲಿ ಇದೀಗ ತಗ್ಗಿದೆಯಂತೆ. ಹೀಗೆಂದು ಚೀನಾ ಸರ್ಕಾರವು ಅಂಕಿ-ಅಂಶಗಳನ್ನು ನೀಡುತ್ತಿದೆ. ಆದರೆ ಅಮೆರಿಕಾ ಸೇರಿದಂತೆ ಬಹುತೇಕ ರಾಷ್ಟ್ರಗಳು ಚೀನಾದಲ್ಲಿನ ಕೊರೊನಾ ವೈರಸ್ ಸೋಂಕಿತರು ಮತ್ತು ಸಾವಿನ ಸಂಖ್ಯೆ ಮೇಲೆ ಶಂಕೆ ವ್ಯಕ್ತಪಡಿಸುತ್ತಿದ್ದಾರೆ. ಅಸಲಿಗೆ ಚೀನಾ ಸರ್ಕಾರ ನೀಡಿರುವ ಅಂಕಿ-ಅಂಶಗಳು ಸಹ ಅದೇ ರೀತಿಯಾಗಿವೆ.

ಚೀನಾದಲ್ಲಿ ಅಚ್ಚರಿ ಮೂಡಿಸುತ್ತಿರುವ ಅಂಕಿ-ಸಂಖ್ಯೆ

ಚೀನಾದಲ್ಲಿ ಅಚ್ಚರಿ ಮೂಡಿಸುತ್ತಿರುವ ಅಂಕಿ-ಸಂಖ್ಯೆ

ಡ್ರ್ಯಾಗನ್ ರಾಷ್ಟ್ರದಲ್ಲಿ ಶನಿವಾರ 12 ಹೊಸ ಸೋಂಕಿತ ಪ್ರಕರಣ ಪತ್ತೆಯಾಗಿದ್ದು, 82,816 ಜನರಿಗಷ್ಟೇ ಕೊರೊನಾ ವೈರಸ್ ಸೋಂಕು ತಗಲಿದೆ ಎಂದು ಸರ್ಕಾರ ತಿಳಿಸಿದೆ. ಇದರ ಜೊತೆಗೆ ಜಾಗತಿಕ ಮಟ್ಟದಲ್ಲಿ ಸಾವಿರ ಸಾವಿರ ಜನರನ್ನು ಬಲಿ ತೆಗೆದುಕೊಂಡ ಕೊರೊನಾಗೆ ಶನಿವಾರ ಚೀನಾದಲ್ಲಿ ಒಬ್ಬರೇ ಒಬ್ಬರು ಪ್ರಾಣ ಬಿಟ್ಟಿಲ್ಲ. ಈ ಹಿನ್ನೆಲೆ ಇದುವರೆಗೂ ದೇಶದಲ್ಲಿ 4,632 ಮಂದಿ ಕೊರೊನಾದಿಂದ ಪ್ರಾಣ ಬಿಟ್ಟಿದ್ದರೆ, ಇದರ 16 ಪಟ್ಟು ಮಂದಿ ಗುಣಮುಖರಾಗಿದ್ದಾರೆ. ಅಂದರೆ ದೇಶದಲ್ಲಿ ಇದುವರೆಗೂ 77,346 ಜನರು ಗುಣಮುಖರಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಇರಾನ್ ನಲ್ಲಿ ಕೊರೊನಾದಿಂದ ಚೇತರಿಸಿಕೊಂಡವರೇ ಅಧಿಕ

ಇರಾನ್ ನಲ್ಲಿ ಕೊರೊನಾದಿಂದ ಚೇತರಿಸಿಕೊಂಡವರೇ ಅಧಿಕ

ಕೊರೊನಾ ವೈರಸ್ ಮಹಾಮಾರಿಯಿಂದಾಗಿ ಇರಾನ್ ಕೂಡಾ ದಿಕ್ಕೆಟ್ಟು ಕುಳಿತಿದೆ. ಇದರ ಮಧ್ಯೆ ಕೊವಿಡ್-19 ನಿಂದ ಗುಣಮುಖರಾದವರ ಸಂಖ್ಯೆಯು ಕೊಂಚ ನಿಟ್ಟುಸಿರು ಬಿಡುವಂತೆ ಮಾಡಿದೆ. ಇರಾನ್ ನಲ್ಲಿ 89,328 ಮಂದಿ ಕೊರೊನಾ ವೈರಸ್ ಸೋಂಕಿತರ ಪೈಕಿ 5,650 ಜನರು ಪ್ರಾಣ ಬಿಟ್ಟಿದ್ದಾರೆ. ದೇಶದಲ್ಲಿ ಈವರೆಗೂ 68,193 ಜನ ಸೋಂಕಿತರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಅಲ್ಲದೇ ಇದುವರೆಗೂ 4,10,075 ಜನರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.

ಭಾರತದಲ್ಲಿ ಕೊರೊನಾ ವೈರಸ್ ಅಂಕಿ-ಅಂಶಗಳು ಹೇಳೋದೇನು?

ಭಾರತದಲ್ಲಿ ಕೊರೊನಾ ವೈರಸ್ ಅಂಕಿ-ಅಂಶಗಳು ಹೇಳೋದೇನು?

ಚೀನಾವನ್ನು ಹೊರತುಪಡಿಸಿದರೆ ವಿಶ್ವದಲ್ಲೇ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರ ಭಾರತ. ಇಂಥ ದೇಶದಲ್ಲಿ ಕೊರೊನಾ ವೈರಸ್ ಹರಡುವಿಕೆಗೆ ಶಿಸ್ತುಬ್ಧ ಕ್ರಮಗಳ ಮೂಲಕ ಕಡಿವಾಣ ಹಾಕಲಾಗುತ್ತಿದೆ. ಈವರೆಗೂ ದೇಶದಲ್ಲಿ 24,942 ಜನರಿಗೆ ಕೊರೊನಾ ವೈರಸ್ ಸೋಂಕು ಇರುವುದು ದೃಢಪಟ್ಟಿದೆ. ಈ ಪೈಕಿ 780 ಮಂದಿ ಕೊರೊನಾಗೆ ಬಲಿಯಾಗಿದ್ದರೆ, 5,498 ಸೋಂಕಿತರು ಗುಣಮುಖರಾಗಿದ್ದಾರೆ. ದೇಶದಲ್ಲಿ ಇದುವರೆಗೂ 5,79,957 ಜನರನ್ನು ಕೊರೊನಾ ವೈರಸ್ ತಪಾಸಣೆಗೆ ಒಳಪಡಿಸಲಾಗಿದೆ ಎಂದು ತಿಳಿದು ಬಂದಿದೆ.

English summary
Good News: Peoples Must Know Difference Between Coronavirus Death And Cure Cases.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X