ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೀವಂತ ದಂತಕತೆ ಪೀಲೆ ಕನಸು ಬಹಿರಂಗ

By Mahesh
|
Google Oneindia Kannada News

ಸಾವೊ ಪೌಲೊ, ಜೂ.10: ಫುಟ್ಬಾಲ್ ಜಗತ್ತಿನ ಜೀವಂತ ದಂತಕತೆ ಪೀಲೆ ಅವರು ತಮ್ಮ ಕನಸನ್ನು ಬಹಿರಂಗ ಮಾಡಿದ್ದಾರೆ. ಫೀಫಾ ವಿಶ್ವಕಪ್ 2014ರ ಫೈನಲ್‌ನಲ್ಲಿ ಬ್ರೆಜಿಲ್ ತಂಡ ಉರುಗ್ವೆ ತಂಡವನ್ನು ಮಣಿಸಿ 1950ರ ವಿಶ್ವಕಪ್ ಸೋಲಿಗೆ ಸೇಡು ತೀರಿಸಿಕೊಂಡರೆ ನನಗೆ ತೃಪ್ತಿಯಾಗುತ್ತದೆ ಎಂದಿದ್ದಾರೆ ಎಂದು ಹೇಳಿದ್ದಾರೆ.

ಜುಲೈ 13 ರಂದು ಮರಕಾನ ಸ್ಟೇಡಿಯಂನಲ್ಲಿ ನಡೆಯಲಿರುವ ವಿಶ್ವಕಪ್ ಫೈನಲ್‌ನಲ್ಲಿ ಬ್ರೆಜಿಲ್ ಹಾಗೂ ಅರ್ಜೆಂಟೀನಾ ಮುಖಾಮುಖಿಯಾಗುವುದನ್ನು ಇಷ್ಟಪಡುತ್ತೀರಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪೀಲೆ, ಫೈನಲ್‌ನಲ್ಲಿ ಉರುಗ್ವೆ ವಿರುದ್ಧ ಆಡಿ ಆ ತಂಡವನ್ನು ಮಣಿಸಿದರೆ ನನಗೆ ತುಂಬಾ ಸಂತೋಷವಾಗುತ್ತದೆ ಎಂದರು.

''1950ರಲ್ಲಿ ಬ್ರೆಝಿಲ್‌ನಲ್ಲಿ ನಡೆದ ವಿಶ್ವಕಪ್ ಫೈನಲ್‌ನಲ್ಲಿ ಉರುಗ್ವೆ ವಿರುದ್ಧ ಸೋಲಿಗೆ ಬ್ರೆಝಿಲ್ ಸೇಡು ತೀರಿಸಿಕೊಳ್ಳುವುದಕ್ಕೆ ನಾನು ಆದ್ಯತೆ ನೀಡುವೆ' ಎಂದು ಫಿಫಾದಿಂದ ಆಹ್ವಾನಿಸಲ್ಪಟ್ಟ ಆಯ್ದ ಪತ್ರಕರ್ತರೊಂದಿಗಿನ ಸಂವಾದದಲ್ಲಿ ಮೂರು ಬಾರಿ ವಿಶ್ವಕಪ್ ಜಯಿಸಿದ ತಂಡದ ಆಟಗಾರ ಪೀಲೆ ತಿಳಿಸಿದ್ದಾರೆ.

Pele wants Brazil to banish the ghost of 1950 final

1950ರಲ್ಲಿ ಮರಕಾನ ಸ್ಟೇಡಿಯಂನಲ್ಲಿ ನಡೆದ ಫೈನಲ್‌ನಲ್ಲಿ ಕೊನೆಯ ಕ್ಷಣದಲ್ಲಿ ಗೋಲನ್ನು ದಾಖಲಿಸಿದ್ದ ಉರುಗ್ವೆ ತಂಡ ಬ್ರೆಝಿಲ್ ತಂಡವನ್ನು 2-1 ರಿಂದ ಮಣಿಸಿ 2,00,000 ಬ್ರೆಜಿಲ್ ಅಭಿಮಾನಿಗಳನ್ನು ದಂಗುಬಡಿಸಿತ್ತು. 'ವಿಶ್ವದಾದ್ಯಂತವಿರುವ ಬ್ರೆಜಿಲ್‌ನ ಘನತೆಯನ್ನು ಕೀಳಾಗಿ ಅಂದಾಜಿಸದೆ ಇರುವುದು ಫುಟ್ಬಾಲ್‌ಗೆ ಅತಿ ಮುಖ್ಯವಾಗಿದೆ.

ವಿಶ್ವಕಪ್ ಟೂರ್ನಿಯು ವಿಶ್ವದ ಎಲ್ಲೆಡೆ ಇರುವ ಅಭಿಮಾನಿಗಳಿಗೆ ಬ್ರೆಜಿಲ್ ಕುರಿತು ತಿಳಿದುಕೊಳ್ಳಲು ಅವಕಾಶ ಮಾಡಿಕೊಟ್ಟಿದೆ. ನಾನು 17ನೆ ಹರೆಯದಲ್ಲಿ 1958ರಲ್ಲಿ ಸ್ವೀಡನ್‌ನಲ್ಲಿ ವಿಶ್ವಕಪ್ ವೃತ್ತಿಜೀವನವನ್ನು ಆರಂಭಿಸಿದ್ದೆ. ನಮ್ಮ ಬಗ್ಗೆ ಯಾರಿಗೂ ಗೊತ್ತಿರಲಿಲ್ಲ. ಪತ್ರಕರ್ತರಿಗೂ ನಮ್ಮ ಕುರಿತು ತಿಳಿದಿರಲಿಲ್ಲ.

ಜನರಿಗೆ ಬ್ರೆಜಿಲ್ ಬಗ್ಗೆ ತಿಳಿದಿರಲಿಲ್ಲ ಅರ್ಜೆಂಟೀನ ಹಾಗೂ ಅಮಜಾನ್ ಕಡೆ ಎಂದು ಗೊಂದಲಕ್ಕೆ ಒಳಗಾಗಿದ್ದರು. ವಿಶ್ವಕಪ್‌ನ ಮೂಲಕ ವಿಶ್ವದ ಜನರಿಗೆ ಬ್ರೆಜಿಲ್ ಏನೆಂಬುದು ಗೊತ್ತಾಗಿತ್ತು ಇದೆಲ್ಲವೂ ವಿಶ್ವಕಪ್ ಗೆಲುವಿನಿಂದ ಸಾಧ್ಯವಾಗಿದೆ ಎಂದು ಎಂದು 1977ರಲ್ಲಿ ಫುಟ್ಬಾಲ್‌ನಿಂದ ನಿವೃತ್ತಿಯಾಗಿರುವ 73ರ ಹರೆಯದ ಪೀಲೆ ಹೇಳಿದ್ದಾರೆ.

English summary
Brazil avenging their traumatic 1950 World Cup final defeat by beating Uruguay in the final in July would be the ideal result said three time World Cup winner Brazilian legend 73-year-old Pele.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X