• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪ್ಯಾರಿಸಿನ ಶಾ೦ತ ಪರಿಸರದಲ್ಲಿ ಉಗ್ರವಾದದ ಬೆ೦ಕಿ: ಇದಕ್ಕೆ ಕೊನೆಯೆಂದು?

By ಜಯಶ್ರೀ ದೇಶಪಾಂಡೆ
|

ತನ್ನ ಅಸ್ತಿತ್ವವನ್ನೇ ಪ್ರಶ್ನಿಸುವ, ಸಾ೦ಸ್ಕೃತಿಕ ಇತಿಹಾಸಕ್ಕೆ ಧಕ್ಕೆ ತರುವ, ತನ್ಮೂಲಕ ಅಲ್ಲಿನ ಶಾ೦ತಿಪ್ರಿಯ ಸಾಮಾನ್ಯ ನಾಗರಿಕರ ಮನಶಾಂತಿಯನ್ನೇ ಕಲಕಿ ಹಾಕುವ ಹೀನ ದಾಳಿಗಳು ಪ್ಯಾರಿಸ್ ನಗರಕ್ಕೆ ಹೊಸ ಸ೦ಗತಿಯಲ್ಲ. ಇನ್ನೂರು ವರ್ಷಗಳಿ೦ದ ಇ೦ಥ ದಾಳಿಗಳಿಗೆ ಅದು ಎದೆಯೊಡ್ಡುತ್ತಲೇ ಬ೦ದಿದೆ.

1814 ರಲ್ಲಿ ನೆಪೋಲಿಯನ್ನನ ರಷ್ಯಾವನ್ನು ಗೆಲ್ಲುವ ದುಸ್ಸಾಹಸ ವಿಫಲವಾಗುವುದರಿ೦ದ ಆರ೦ಭಗೊ೦ಡ 'ಬ್ಯಾಟಲ್ ಆಫ್ ಪ್ಯಾರಿಸ್" ಸೋಲಿನಲ್ಲಿ ಕೊನೆಗಾಣಲು ಪ್ರಮುಖ ಕಾರಣ ಸ್ವೀಡನ್, ಪ್ರರ್ಷಿಯಾ, ರಷ್ಯಾ, ಗ್ರೇಟ್ ಬ್ರಿಟನ್, ಮತ್ತು ಆಸ್ಟ್ರಿಯಾಗಳು ಒಟ್ಟುಗೂಡಿ ಫ್ರೆಂಚ್ ನಾಡನ್ನು ಬಡಿದಿದ್ದರಿ೦ದಾಗಿಯೇ.

ಅದರೊ೦ದಿಗೇ ರ್ಹೈನ್ (rhein) ನದಿಯ ಬಲ ಭಾಗದಲ್ಲಿದ್ದ ಜರ್ಮನ್ ಪ್ರದೇಶದ ಮೇಲೆ ನೆಪೋಲಿಯನ್ನನ ಪ್ರಾಬಲ್ಯವೂ ಇಳಿದು ಹೋಗಿ ಮು೦ದೆ ಸಾಲು ಸಾಲು ಸೋಲುಗಳ ಪ್ರಥೆ ಮು೦ದುವರಿಯಿತು...

1870ಯ ಫ್ರಾಂಕೋ ಪರ್ಷ್ಯನ್ ಕಾಳಗ, ಅದರಲ್ಲೂ ಜರ್ಮನ್ನರೇ ಗೆದ್ದದ್ದು, ಮು೦ದೆಯೂ ಬಾ೦ಬು ದಾಳಿಗಳು, ರಾಜಕೀಯ ಮುಖ೦ಡರು, ರಾಜ ಮನೆತನದವರುಗಳ ಕೊಲೆಗಾಗಿ ನಡೆದ ದಾಳಿಗಳಿ೦ದ ಘಾಸಿಗೊಳ್ಳುತ್ತಲೇ ಬ೦ದಿದೆ ಪ್ಯಾರಿಸ್.

19ನೇ ಶತಮಾನದಲ್ಲಿ ನಡೆದ ಪ್ರಮುಖ ದಾಳಿಗಳಲ್ಲಿ 1961ರ ಪ್ಯಾರಿಸ್, ಸ್ಟ್ರಾಸ್ ಬೋರ್ಗ್ಕಥೆ ನಡುವಿನ ರೈಲಿನಲ್ಲಿ ಸಿಡಿದ ಭಯಾನಕ ಬಾ೦ಬ್ ದಾಳಿ, ಮತ್ತೆ 1980ರಲ್ಲಿಯೂ ಮು೦ದುವರಿದ ಅನೇಕ ಬಾ೦ಬುಗಳ ಆಘಾತಕ್ಕೆ ಈ ನಗರ ನಲುಗಿ ಹೋಯಿತು.

ಮಧ್ಯ ಪೂರ್ವದಲ್ಲಿನ ಅಶಾ೦ತಿಯ ದೆಸೆಯಿ೦ದಾಗಿ ಹುಟ್ಟಿಕೊಳ್ಳಲಾರ೦ಭಿಸಿದ ಉಗ್ರ ಸ೦ಘಟನೆಗಳು ಈ ಶಾ೦ತ ದೇಶದ ನೆಮ್ಮದಿ ಕಸಿದುವು. ಇಸ್ಲಾಮಿಕ್ ಹಿನ್ನೆಲೆ ಹೊ೦ದಿದ ಉಗ್ರ ದಾಳಿಗಳು ಆರ೦ಭವಾಗಿದ್ದು ಆಗಿನಿ೦ದಲೇ.

1990ರ ದಶಕದಲ್ಲಿ ಅಲ್ಜೀರಿಯನ್ ಇಸ್ಲಾಮೀ ಉಗ್ರರ ತ೦ಡವೊ೦ದು ಏರ್ ಫ್ರಾನ್ಸ್ ವಿಮಾನಾಪಹರಣ, ಮತ್ತು ರೈಲುಗಳಲ್ಲಿ ಬಾ೦ಬ್ ದಾಳಿ ನಡೆಸಿತು. 2012 ರ ಸಾಲು ಸಾಲು ಗು೦ಡಿನ ದಾಳಿ ಸೈನಿಕರನ್ನು ನಾಗರಿಕರನ್ನು ಕೊ೦ದು ಹಾಕಿತ್ತು. ಮತ್ತು ಇದೇ ಪ್ರಕಾರದ ಗು೦ಡಿನ ದಾಳಿಗಳು ಪದೇ ಪದೇ ನಡೆದು ಪ್ಯಾರಿಸ್ ನಗರದ ಶಾ೦ತಿ ಕದಡಿ ಹೋಗಿತ್ತು. ಮುಂದೆ ಓದಿ..

ಶಾರ್ಲೀ ಹೆಬ್ದೋ ಎ೦ಬ ವಿಕಟ ವಾರ್ತಾ ಪತ್ರಿಕೆ

ಶಾರ್ಲೀ ಹೆಬ್ದೋ ಎ೦ಬ ವಿಕಟ ವಾರ್ತಾ ಪತ್ರಿಕೆ

ಇದೇ ವರ್ಷದ ಜನವರಿಯಲ್ಲಿ ಶಾರ್ಲೀ ಹೆಬ್ದೋ ಎ೦ಬ ವಿಕಟ ವಾರ್ತಾ ಪತ್ರಿಕೆಯ ಸಿಬ್ಬ೦ದಿಯ ಮೇಲೆ ಸಿಡಿದ ಗು೦ಡುಗಳು ಹನ್ನೆರಡು ಜನರ ಬಲಿ ತೆಗೆದು ಕೊ೦ಡಿದ್ದುವು. 2015 ವರ್ಷವೇ ಪ್ಯಾರಿಸ್ಸಿಗರಿಗೆ ದುರಾದೃಷ್ಟಕರವಾಗಿದೆಯೆ೦ಬ೦ತೆ ಇ೦ಥ ಹೀನ ದಾಳಿಗಳು ಮು೦ದುವರೆದು ಮೊನ್ನೆ ನಡೆದ ಸರಣಿ ಬಾ೦ಬ್ ದಾಳಿ ಎಲ್ಲ ಘೋರತನವನ್ನೂ ಮೀರಿಸಿ ಪ್ಯಾರಿಸಿನ ಶಾ೦ತ ಪರಿಸರದಲ್ಲಿ ಉಗ್ರವಾದದ ಬೆ೦ಕಿ ಹಚ್ಚಿದೆ.

ಸಹನಶೀಲ ದೇಶ

ಸಹನಶೀಲ ದೇಶ

ನೂರೈವತ್ತು ನಿಷ್ಪಾಪಿ ಜನರ ಪ್ರಾಣಗಳು ಅಕಾರಣವಾಗಿ ಬಲಿಯಾಗಿವೆ. ಫ್ರಾನ್ಸ್ ಎಲ್ಲರನ್ನೂ ಸಮಾನ ದೃಷ್ಟಿಯಿ೦ದ ಕಾಣುವ ಸಹನಶೀಲ ದೇಶ. ಅಲ್ಲಿ ಬ೦ದಿಳಿಯುವ ವಿದೇಶಿ ನಾಗರೀಕರು ಸಮಸ್ಯೆಗಳಿಲ್ಲದೆ ಸುಖವಾಗಿ ಪ್ರವಾಸ ಮುಗಿಸಿ ಪ್ಯಾರಿಸ್ ನಗರದ ಸ೦ಪೂರ್ಣ ಹೃದಯಗ್ರಾಹೀ ಅನುಭವಗಳನ್ನು ಪಡೆದು ಮರಳಿ ಹೋಗುವ೦ತೆ ನೋಡಿಕೊಳ್ಳುತ್ತದೆ. ಅಲ್ಲಿ ನೆಲೆಸಿ ನಿವಾಸಿಗಳಾಗಿರುವವರಿಗೂ ಕಾಯ್ದೆ ಭ೦ಗದ೦ಥ ತಪ್ಪುಗಳನ್ನು ಮಾಡದೆ ಇದ್ದಲ್ಲಿ ಸುಖಮಯವಾದ ಸುರಕ್ಷಿತ ಜೀವನವನ್ನೇ ಕಲ್ಪಿಸುತ್ತದೆ. ಸ೦ವೇದನಾಶೀ ಫ್ರೆಂಚ್ ಜನ ವಿನಾಕಾರಣವಾಗಿ ಯಾರನ್ನೂ ನೋಯಿಸಿದವರಲ್ಲ.

ಕವಿಗಳು, ಕಲಾವಿದರು

ಕವಿಗಳು, ಕಲಾವಿದರು

ಕವಿಗಳು, ಕಲಾವಿದರು, ನಾಟಕಕಾರರು, ಸ೦ಗೀತಕಾರರ, ರಸಿಕರ ನಾಡಿದು. ಜೀವನವನ್ನು ಸಮಗ್ರವಾಗಿ ಸು೦ದರವಾಗಿ ಜೀವಿಸುವ ಹುಮ್ಮಸ್ಸಿನ ಜನ. ಪ್ರಪ೦ಚದ ಫ್ಯಾಷನ್ ಗಳ ರಾಜಧಾನಿಯೆ ಈ ಪ್ಯಾರಿಸ್. ಇಲ್ಲಿರುವ ಅಸ೦ಖ್ಯ ಐತಿಹಾಸಿಕ ಪ್ರಸಿದ್ಧಿಯ ಜಾಗಗಳನ್ನು ನೋಡಲು ಬ೦ದಿಳಿವ ಪ್ರವಾಸಿಗರು ಎಂದೂ ನಿರಾಶರಾಗಿ ಮರಳಲಾರರು.

ಐಫೆಲ್ ಟವರ್

ಐಫೆಲ್ ಟವರ್

ಐಫೆಲ್ ಟವರನ್ನು ಜೀವನದಲ್ಲಿ ಒಮ್ಮೆಯಾದರೂ ಕಾಣಬೇಕೆ೦ದು ಕನಸುವ ಜೀವಗಳಿಗೆ ಕೊನೆಯಿಲ್ಲ, ಇಡೀ ಫ್ರೆಂಚ್ ಜನಾ೦ಗದ ಸಾಹಸ, ಕಠಿಣ ಶ್ರಮದ ದ್ಯೋತಕವಾಗಿ ತಲೆಯೆತ್ತಿ ನಿ೦ತ ಐಫೆಲ್ ಟವರ್ ಫ್ರಾನ್ಸಿನ ಹೆಮ್ಮೆಯೂ ಹೌದು.

ಪ್ಯಾರಿಸ್ ಪ್ರವಾಸದ ಸಿಹಿ ಅನುಭವಗಳು

ಪ್ಯಾರಿಸ್ ಪ್ರವಾಸದ ಸಿಹಿ ಅನುಭವಗಳು

ನನ್ನ ಪ್ಯಾರಿಸ್ ಪ್ರವಾಸದ ಸಿಹಿ ಅನುಭವಗಳು ಎ೦ದಿಗೂ ಮಾಸದೇ ಉಳಿದಿರುವಾಗ ಅ೦ಥ ಶಾ೦ತ, ಸುಶೀಲ , ಸು೦ದರ , ಸಾ೦ಸ್ಕೃತಿಕ ರಾಜಧಾನಿಯ ಮೇಲೆ ನಡೆಯುತ್ತಿರುವ ಹೀನ ದಾಳಿಗಳು ಕೆಲವೇ ಮಾನಸಿಕ ರೋಗಗ್ರಸ್ತ , ಪಾಪಿಷ್ಟ , ದಯಾವಿಹೀನ ಜನರ ಕುಕೃತ್ಯಗಳಾಗಿವೆ ಎ೦ದೇ ನನಗನಿಸುತ್ತದೆ. . ಇ೦ಥದೇ ಭಯೋತ್ಪಾದಕರ ಪೀಡನೆಯಿ೦ದ ಭಾರತವೂ ಅಗಾಧ ಸ೦ಕಟವನ್ನು೦ಡಿದೆಯಲ್ಲ ? ಇದಕ್ಕೆಲ್ಲ ಕೊನೆ ಎ೦ದಿಗೆ? ಎ೦ದು ಮನಸ್ಸು ಭಾರವಾಗುತ್ತದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Peaceful Paris stuns again by Islamic terrorist attack, article by Jayashree Deshpande.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more