ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಗ್ಧರ ರಕ್ತ ಹೀರಲು ಸಿದ್ಧರಾದ ಉಗ್ರರು, ಶಾಂತಿ ಮಾತುಕತೆ ಬೇಡವಂತೆ!

|
Google Oneindia Kannada News

ತಪ್ಪು ಯಾರದ್ದೋ, ಶಿಕ್ಷೆ ಇನ್ಯಾರಿಗೋ ಎಂಬಂತಹ ಸ್ಥಿತಿ ಮಧ್ಯಪ್ರಾಚ್ಯದಲ್ಲಿ ಎದುರಾಗಿದೆ. ಪ್ಯಾಲೆಸ್ತೇನ್‌ ಉಗ್ರ ಪಡೆ ಮೇಲೆ ರೊಚ್ಚಿಗೆದ್ದು ಇಸ್ರೇಲ್ ಗಾಜಾ ಪಟ್ಟಿ ಮೇಲೆ ನಡೆಸಿದ್ದ ಪರಿಣಾಮ ಅರ್ಧಕರ್ಧ ಗಾಜಾ ಪಟ್ಟಿಯೇ ನೆಲಸಮವಾಗಿತ್ತು. ಈ ಘಟನೆ ನಡೆದು ತಿಂಗಳು ಕಳೆಯುವ ಮೊದಲೇ ಮತ್ತೆ ಹಿಂಸೆ ಆರಂಭವಾಗಿದೆ. ಆದರೆ ಸಂಘರ್ಷಕ್ಕೆ ಅಂತ್ಯ ಹಾಡಲು ಮುಂದಾಗಿದ್ದ ವಿಶ್ವಸಂಸ್ಥೆಗೆ 'ಹಮಾಸ್' ಉಗ್ರರ ಗ್ಯಾಂಗ್ ಅವಮಾನ ಮಾಡಿದೆ.

ಪದೇ ಪದೆ ಇಸ್ರೇಲ್ ಮೇಲೆ ದಾಳಿ ನಡೆಸುವ ಹಮಾಸ್ ಉಗ್ರರು, ದಾಳಿ ಮಾಡಿ ಎಸ್ಕೇಪ್ ಆಗುತ್ತಾರೆ. ಆಗ ರೊಚ್ಚಿಗೇಳುವ ಇಸ್ರೇಲ್ ಗಾಜಾ ಪಟ್ಟಿ ಮೇಲೆ ಬಾಂಬ್‌ಗಳ ಸುರಿಮಳೆ ಸುರಿಸುತ್ತೆ. ಹೀಗೆ ನಡೆಯುವ ದಾಳಿಗೆ ಸಿಲುಕಿ ಸಾಯುವವರೇ ಅಮಾಯಕರು. ಉಗ್ರರು ಮಾತ್ರ ಜೀವ ಉಳಿಸಿಕೊಂಡು ಎಸ್ಕೇಪ್ ಆಗುತ್ತಾರೆ.

ಉಗ್ರರ ನಾಯಕನ ಹೆಣ ಉರುಳಿಸಿತು ಇಸ್ರೇಲ್ ಸೇನೆಯ ರಾಕೆಟ್..!ಉಗ್ರರ ನಾಯಕನ ಹೆಣ ಉರುಳಿಸಿತು ಇಸ್ರೇಲ್ ಸೇನೆಯ ರಾಕೆಟ್..!

ಇದೇ ಕಾರಣಕ್ಕೆ ಮುಗ್ಧರ ಜೀವ ಉಳಿಸಲು, ಉಗ್ರರಿಗೆ ಬುದ್ಧಿ ಹೇಳೋಕೆ ವಿಶ್ವಸಂಸ್ಥೆ ಸಂಧಾನ ಸಭೆ ಆಯೋಜಿಸಿತ್ತು. ಆದರೆ ಹಮಾಸ್ ಉಗ್ರರ ಜೊತೆಗಿನ ಸಂಧಾನ ಸಭೆ ವಿಫಲವಾಗಿದೆ. 'ವಿಶ್ವಸಂಸ್ಥೆ ಬ್ಲ್ಯಾಕ್‌ಮೇಲ್ ಮಾಡುತ್ತಿದೆ' ಅಂತಾ ಆರೋಪಿಸಿ ಹಮಾಸ್ ಉಗ್ರರು ಸಂಧಾನಕ್ಕೆ ಕೊಕ್ಕೆ ಹಾಕಿದ್ದಾರೆ.

ದಾಳಿ ಬೇಡ ಅಂದಿದ್ದೇ ತಪ್ಪಾ..?

ದಾಳಿ ಬೇಡ ಅಂದಿದ್ದೇ ತಪ್ಪಾ..?

ಹೇಗಾದ್ರೂ ಮಾಡಿ ಹಮಾಸ್ ಉಗ್ರರು ದಾಳಿ ನಡೆಸುವುದನ್ನು ತಪ್ಪಿಸಬೇಕು, ಆಗ ಇಸ್ರೇಲ್ ಶಾಂತವಾಗಿರುತ್ತೆ. ಇದರಿಂದ ಲಕ್ಷಾಂತರ ಅಮಾಯಕರ ಜೀವ ಉಳಿಸಬಹುದು ಎಂಬುದು ವಿಶ್ವಸಂಸ್ಥೆ ಲೆಕ್ಕಾಚಾರ. ಆದರೆ ಪಾಪಿ ಉಗ್ರರಿಗೆ ಅದು ಅರ್ಥವಾಗಿಲ್ಲ, ತಮ್ಮವರನ್ನೇ ಬಲಿ ಕೊಡಲು ಹಮಾಸ್ ಪದೇ ಪದೆ ಮುಂದಾಗುತ್ತಿದೆ.

ಈಗ ಕೂಡ ತನ್ನ ಹಳೇ ಚಾಳಿ ಮುಂದುವರಿಸಿ ಸಂಧಾನಕ್ಕೆ ಒಪ್ಪದೆ ವಿಶ್ವಸಂಸ್ಥೆಗೆ ಅವಮಾನ ಮಾಡಿದ್ದಾರೆ ರಾಕ್ಷಸರು. ಇದು ಇಸ್ರೇಲ್ ಮಿಲಿಟರಿ ಕಣ್ಣು ಕೆಂಪಾಗುವಂತೆ ಮಾಡಿದ್ದು, ಹಮಾಸ್ ಉಗ್ರರನ್ನು ಬಲಿ ಹಾಕಲು ರಣತಂತ್ರ ಹೆಣೆಯುತ್ತಿದ್ದಾರೆ. ಗಾಜಾ ಪಟ್ಟಿಯ ಅಮಾಯಕರು ಹಿಂಸೆ ಮತ್ತಷ್ಟು ಹೆಚ್ಚಾಗುವ ಆತಂಕದಲ್ಲಿದ್ದಾರೆ.

ಉಗ್ರರು ಎಸ್ಕೇಪ್ ಆಗ್ತಾರೆ..!

ಉಗ್ರರು ಎಸ್ಕೇಪ್ ಆಗ್ತಾರೆ..!

ಪ್ರತಿಬಾರಿ ಗಾಜಾ ಪಟ್ಟಿ ಹಾಗೂ ಇಸ್ರೇಲ್ ನಡುವೆ ಹಿಂಸಾಚಾರ ನಡೆದಾಗಲೂ ಹಮಾಸ್ ಉಗ್ರರ ಕೈವಾಡ ಎದ್ದು ಕಾಣುತ್ತದೆ. ಆದರೆ ಮೊದಲು ಬೆಂಕಿ ಹಚ್ಚುವ ಕೆಲಸ ಮಾಡುವ ಉಗ್ರರ ಗ್ಯಾಂಗ್, ಇಸ್ರೇಲ್ ಪ್ರತಿದಾಳಿ ಆರಂಭಿಸುತ್ತಿದ್ದಂತೆ ಎಸ್ಕೇಪ್ ಆಗಿಬಿಡುತ್ತಾರೆ. ಇದೇ ರೀತಿ ಈಗಲೂ ಯುದ್ಧ ಆರಂಭವಾಗುತ್ತಿದ್ದಂತೆ ಉಗ್ರರು ಎಸ್ಕೇಪ್ ಆಗಿದ್ದಾರೆ. ಇದಕ್ಕಾಗಿ ಉಗ್ರರು ಸುರಂಗ ರಚಿಸಿಕೊಂಡು, ವ್ಯವಸ್ಥಿತವಾಗಿ ಇಸ್ರೇಲ್‌ ಸೇನೆ ಕೈಗೆ ಸಿಗದೆ ಓಡಿ ಹೋಗುತ್ತಾರೆ. ಆದರೆ ಈ ಬಾರಿ ಉಗ್ರರ 35 ಸ್ಥಳಗಳನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಲಾಗಿತ್ತು.

 ‘ಹಮಾಸ್ ಉಗ್ರರು ಹೇಡಿಗಳು’

‘ಹಮಾಸ್ ಉಗ್ರರು ಹೇಡಿಗಳು’

ಹಮಾಸ್ ಉಗ್ರರ ವಿರುದ್ಧ ಕಳೆದ ತಿಂಗಳು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದ ಅಂದಿನ ಇಸ್ರೇಲ್ ಪಿಎಂ ನೆತನ್ಯಾಹು, ಹಮಾಸ್ ಉಗ್ರರ ಗ್ಯಾಂಗ್ ಜನರ ಮಧ್ಯೆ ಅಡಗಿ ಕೂತು ಜನರ ಮೇಲೆಯೇ ದಾಳಿ ಮಾಡುತ್ತಿದೆ ಎಂದಿದ್ದರು. ಈ ಮೂಲಕ ಹಮಾಸ್ ಉಗ್ರ ಪಡೆಯನ್ನು ಹೇಡಿಗಳು ಎಂದು ಪರೋಕ್ಷವಾಗಿ ಟೀಕಿಸಿದ್ದರು. ಇದೆಲ್ಲಾ ಕಳೆದು ತಿಂಗಳು ಮುಗಿಯುವ ಮೊದಲೇ ಮತ್ತೆ ಹಿಂಸೆ ಆರಂಭವಾಗಿದೆ. ಹಮಾಸ್ ಉಗ್ರರು ಹೇಡಿಗಳಂತೆ ಅಟ್ಯಾಕ್ ಮಾಡುತ್ತಿದ್ದು, ಇಸ್ರೇಲ್ ಕೂಡ ಇದಕ್ಕೆ ತಕ್ಕ ಉತ್ತರ ನೀಡುತ್ತಿದೆ. ಆದರೆ ಇವರಿಬ್ಬರ ಕಿತ್ತಾಟದಲ್ಲಿ ಅಮಾಯಕ ಜನರ ಬದುಕು ಬೀದಿಗೆ ಬೀಳುತ್ತಿದೆ.

2 ಸಾವಿರ ಮನೆಗಳು ನಾಶ

2 ಸಾವಿರ ಮನೆಗಳು ನಾಶ

ಬರೋಬ್ಬರಿ 11 ದಿನಗಳ ಕಾಲ ನಡೆದ ಭೀಕರ ಕಾಳಗದಲ್ಲಿ ಸುಮಾರು 2000 ಸಾವಿರಕ್ಕೂ ಹೆಚ್ಚು ಮನೆಗಳು ಸರ್ವನಾಶವಾಗಿ ಹೋಗಿದ್ದರೆ, 15 ಸಾವಿರಕ್ಕೂ ಹೆಚ್ಚು ಮನೆಗಳು ಅರ್ಧ ಭಾಗ ಬಿದ್ದು ಹೋಗಿವೆ. ಇಸ್ರೇಲ್ ನಡೆಸಿದ ದಾಳಿ ಪರಿಣಾಮ ಗಾಜಾ ಪಟ್ಟಿ ಅಕ್ಷರಶಃ ನರಕವಾಗಿದೆ. ಅತ್ತ ಹಮಾಸ್ ಉಗ್ರರು ಇಸ್ರೇಲ್‌ ಮೇಲೆ ರಾಕೆಟ್ ದಾಳಿ ನಡೆಸುತ್ತಿದ್ದರೆ, ಇತ್ತ ಇಸ್ರೇಲ್ ಕೂಡ ಗಾಜಾ ಪಟ್ಟಿಯ ಮೇಲೆ ಅಟ್ಯಾಕ್ ಮಾಡುತ್ತಿತ್ತು. ಹೀಗೆ ಇಬ್ಬರ ಜಗಳದಲ್ಲಿ ಅಮಾಯಕರ ರಕ್ತಪಾತ ನಡೆಯಿತು. ಸುಮಾರು 300 ನಾಗರಿಕರು ಬಡಿದಾಟದಲ್ಲಿ ಜೀವ ಕಳೆದುಕೊಂಡರು.

English summary
Peace talks between the United Nations Organisation & Hamas has failed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X