ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಓಮಿಕ್ರಾನ್ ರೂಪಾಂತರ ಸೋಂಕು ತಗುಲಿದರೆ ಮನೆಯಲ್ಲೇ ಚಿಕಿತ್ಸೆ!

|
Google Oneindia Kannada News

ಜೋಹಾನ್ಸ್ ಬರ್ಗ್, ನವೆಂಬರ್ 29: "ಕೊರೊನಾವೈರಸ್ ಹೊಸ ರೂಪಾಂತರಿ ಓಮಿಕ್ರಾನ್ ಈವರೆಗೂ ಸೌಮ್ಯ ಲಕ್ಷಣಗಳನ್ನು ಹೊಂದಿದೆ. ಈ ರೀತಿಯ ಸೋಂಕಿತರಿಗೆ ಮನೆಯಲ್ಲೇ ಚಿಕಿತ್ಸೆ ನೀಡಬಹುದು," ಎಂದು ದಕ್ಷಿಣ ಆಫ್ರಿಕಾದಲ್ಲಿ ಹೊಸ ತಳಿಯ ರೋಗಿಗೆ ಚಿಕಿತ್ಸೆ ನೀಡಿದ ವೈದ್ಯರು ತಿಳಿಸಿದ್ದಾರೆ.

"ಕಳೆದ ನವೆಂಬರ್ 18ರಂದು ತಮ್ಮ ಆಸ್ಪತ್ರೆಗೆ ಆಗಮಿಸಿದ ಏಳು ರೋಗಿಗಳಲ್ಲಿ ಡೆಲ್ಟಾ ರೂಪಾಂತರಕ್ಕಿಂತ ವಿಭಿನ್ನವಾದ ಲಕ್ಷಣಗಳು ಗೋಚರಿಸಿದವು. ಆದರೆ ಅದು ಅತ್ಯಂತ ಸೌಮ್ಯವಾಗಿದ್ದವು," ಎಂದು ಖಾಸಗಿ ವೈದ್ಯರು ಹಾಗೂ ಸೌತ್ ಆಫ್ರಿಕನ್ ಮೆಡಿಕಲ್ ಅಸೋಸಿಯೇಶನ್‌ನ ಅಧ್ಯಕ್ಷರು ಆಗಿರುವ ಡಾ. ಏಂಜೆಲಿಕ್ ಕೋಟ್ಜಿ ತಿಳಿಸಿದ್ದಾರೆ.

ಓಮಿಕ್ರಾನ್ ಭೀತಿ: ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಪರಿಷ್ಕೃತ ಮಾರ್ಗಸೂಚಿಓಮಿಕ್ರಾನ್ ಭೀತಿ: ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಪರಿಷ್ಕೃತ ಮಾರ್ಗಸೂಚಿ

ಈಗ ಆ ರೂಪಾಂತರ ತಳಿಗೆ ವಿಶ್ವ ಆರೋಗ್ಯ ಸಂಸ್ಥೆಯು Omicron ಎಂದು ಹೆಸರಿಸಿದೆ. ಕಳೆದ ನವೆಂಬರ್ 14 ರಿಂದ ನವೆಂಬರ್ 16ರ ನಡುವೆ ಪ್ರಯೋಗಾಲಯದಲ್ಲಿ ಪರೀಕ್ಷಿಸಿದ ಮಾದರಿಗಳ ಪೈಕಿ ಕೆಲವರಲ್ಲಿ ಈ ಹೊಸ ರೂಪಾಂತರ ತಳಿ ಪತ್ತೆಯಾಗಿದೆ ಎಂದು ನವೆಂಬರ್ 25ರಂದು ದಕ್ಷಿಣ ಆಫ್ರಿಕಾದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಕಮ್ಯುನಿಕಬಲ್ ಡಿಸೀಸ್ (NICD) ಘೋಷಿಸಿತ್ತು.

Patients with Omicron covid variant have very mild symptoms says South African doctor

ತಲೆನೋವು ಮತ್ತು ಮೈ-ಕೈ ನೋವು:

ನವೆಂಬರ್ 18 ರಂದು ರೋಗಿಯೊಬ್ಬರು ತಮ್ಮ ಚಿಕಿತ್ಸಾಲಯದಲ್ಲಿ ಎರಡು ದಿನಗಳವರೆಗೆ ಮೈ-ಕೈ ನೋವು ಮತ್ತು ತಲೆನೋವಿನಿಂದ "ತೀವ್ರವಾಗಿ ದಣಿದಿದ್ದಾರೆ" ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. "ಈ ಹಂತದಲ್ಲಿ ರೋಗದ ಲಕ್ಷಣಗಳು ಸಾಮಾನ್ಯವಾದ ವೈರಲ್ ಸೋಂಕಿಗೆ ಸಂಬಂಧಿಸಿದಂತೆ ಇರುತ್ತವೆ. ಕಳೆದ 8 ರಿಂದ 10 ವಾರಗಳಿಂದ ಕೊವಿಡ್-19 ಸೋಂಕಿನ ತಪಾಸಣೆ ಮತ್ತು ಸಾವಿನ ಬಗ್ಗೆ ವರದಿಯಾಗದ ಹಿನ್ನೆಲೆ ಪರೀಕ್ಷಿಸುವುದಕ್ಕೆ ನಿರ್ಧರಿಸಿದೆವು. ಆಗ ರೋಗಿಯ ಜೊತೆಗೆ ಇಡೀ ಕುಟುಂಬಕ್ಕೆ ಸೋಂಕು ತಗುಲಿರುವುದು ದೃಢಪಟ್ಟಿತು.

ಇಡೀ ಕುಟುಂಬಕ್ಕೆ ಕೊವಿಡ್-19 ಸೋಂಕು ತಗುಲಿರುವುದು ದೃಢಪಟ್ಟ ದಿನವೇ ಅದೇ ರೀತಿಯ ಲಕ್ಷಣಗಳನ್ನು ಹೊಂದಿರುವ ಮತ್ತಷ್ಟು ರೋಗಿಗಳು ಆಸ್ಪತ್ರೆಗೆ ಬರುವುದಕ್ಕೆ ಆರಂಭಿಸಿದರು. ಆಗ ವೈದ್ಯರ ಮನಸ್ಸಿನಲ್ಲಿ ಹೊಸ ಅನುಮಾನ ಹುಟ್ಟಿಕೊಂಡಿತು. ರೋಗದ ಕುರಿತು ಆಲೋಚಿಸುತ್ತಿರುವಾಗಲೇ ಪ್ರತಿನಿತ್ಯ ಅದೇ ರೀತಿಯ ಲಕ್ಷಣಗಳನ್ನು ಹೊಂದಿರುವ ಇಬ್ಬರಿಂದ ಮೂವರು ರೋಗಿಗಳು ಆಸ್ಪತ್ರೆಗೆ ಆಗಮಿಸುವುದಕ್ಕೆ ಶುರುವಾಯಿತು.

ಎನ್ಐಸಿಡಿಗೆ ಎಚ್ಚರಿಕೆ ಸಂದೇಶ ರವಾನೆ:

"ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಮೂರನೇ ಅಲೆಯ ಸಂದರ್ಭದಲ್ಲಿ ನಾವು ಬಹಳಷ್ಟು ಡೆಲ್ಟಾ ರೂಪಾಂತರ ರೋಗಿಗಳನ್ನು ನೋಡಿದ್ದೇವೆ. ಆದರೆ ಈಗ ಪತ್ತೆಯಾಗುತ್ತಿರುವ ಹೊಸ ತಳಿಯು ಡೆಲ್ಟಾವನ್ನು ಹೋಲುತ್ತಿಲ್ಲ," ಎಂದು ಡಾ. ಏಂಜೆಲಿಕ್ ಕೋಟ್ಜಿ ಹೇಳಿದ್ದರು. ಅದೇ ದಿನ ತಮ್ಮ ಕ್ಲಿನಿಕಲ್ ಫಲಿತಾಂಶಗಳೊಂದಿಗೆ NICD ಗೆ ಎಚ್ಚರಿಸಿದ್ದರು.

ಸೌಮ್ಯ ಲಕ್ಷಣಗಳನ್ನು ಹೊಂದಿರುವ ರೋಗಿಗಳು:

"ಹೊಸ ರೂಪಾಂತರ ಪತ್ತೆಯಾದ ರೋಗಿಗಳಲ್ಲಿ ಹೆಚ್ಚಿನವರಿಗೆ ತುಂಬಾ ಸೌಮ್ಯವಾದ ರೋಗಲಕ್ಷಣಗಳು ಕಾಣಿಸಿಕೊಂಡಿವೆ. ಅಲ್ಲದೇ ಈ ರೋಗಿಗಳ ಪೈಕಿ ಇದುವರೆಗೆ ಯಾರೊಬ್ಬರೂ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿಲ್ಲ. ನಾವು ಈ ರೋಗಿಗಳಿಗೆ ಮನೆಯಲ್ಲಿ ಚಿಕಿತ್ಸೆ ನೀಡುತ್ತಿದ್ದೇವೆ," ಎಂದು ಅವರು ಹೇಳಿದ್ದಾರೆ.

ಯಾವುದೇ ಗಂಭೀರ ಸಮಸ್ಯೆಗಳು ಕಾಣಿಸಿಕೊಂಡಿಲ್ಲ:

ಕೊರೊನಾವೈರಸ್ ಸೋಂಕಿನ ಡೆಲ್ಟಾ ರೂಪಾಂತರವು ಹೆಚ್ಚು ಅಪಾಯಕಾರಿಯಾಗಿತ್ತು. ಆದರೆ ಹೊಸ ರೂಪಾಂತರ ಓಮಿಕ್ರಾನ್ ಇದುವರೆಗೂ ಅಷ್ಟೊಂದು ಅಪಾಯಕಾರಿ ಎನಿಸಿಲ್ಲ. ಡೆಲ್ಟಾದ ರೀತಿಯಲ್ಲಿ ಈ ಹೊಸ ರೂಪಾಂತರ ತಗುಲಿದ ರೋಗಿಗಳಲ್ಲಿ ಯಾವುದೇ ಗಂಭೀರ ಲಕ್ಷಣಗಳು ಗೋಚರಿಸಿಲ್ಲ. ರೋಗಿಗಳು ವಾಸನೆ ಅಥವಾ ರುಚಿಯನ್ನು ಕಳೆದುಕೊಳ್ಳುವುದು, ಆಮ್ಲಜನಕದ ಮಟ್ಟದಲ್ಲಿ ಕುಸಿತ ಕಂಡು ಬರುವ ಲಕ್ಷಣಗಳು ಗೋಚರಿಸಿಲ್ಲ ಎಂದು ಡಾ. ಏಂಜೆಲಿಕ್ ಕೋಟ್ಜಿ ತಿಳಿಸಿದರು.

ಈ ಓಮಿಕ್ರಾನ್ ರೂಪಾಂತರ ತಳಿಯು 40 ಅಥವಾ ಕಡಿಮೆ ವಯಸ್ಸಿನ ಜನರ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಎಂಬುದು ವೈದ್ಯರ ಅನುಭವವಾಗಿದೆ. ಅವರು ಚಿಕಿತ್ಸೆ ನೀಡಿದ ಓಮಿಕ್ರಾನ್ ರೋಗಲಕ್ಷಣಗಳನ್ನು ಹೊಂದಿರುವ ಸುಮಾರು ಅರ್ಧದಷ್ಟು ರೋಗಿಗಳು ಲಸಿಕೆ ಪಡೆದುಕೊಂಡಿಲ್ಲ ಎಂಬುದನ್ನು ಇಲ್ಲಿ ಗಮನಿಸಬೇಕಿದೆ.

Recommended Video

Omicron Virus ಹರಡದಂತೆ ಮುನ್ನಚ್ಚರಿಕೆ ವಹಿಸಿದ ರಾಜ್ಯ ಸರ್ಕಾರ | Oneindia Kannada

English summary
South African doctor Dr. Angelique Coetzee says symptoms of the Omicron covid variant were so far mild and could be treated at home.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X