ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಥಂಡಿ ಹಿಡಿದ ವಿಮಾನವನ್ನೇ ತಳ್ಳಿದ ಪ್ರಯಾಣಿಕರುǃ

|
Google Oneindia Kannada News

ಇಗಾರ್ಕಾ(ರಷ್ಯಾ), ನ. 26: ಭಾರತದಲ್ಲಿ ಸರ್ಕಾರಿ ಬಸ್ಸುಗಳು ಕೆಟ್ಟು ನಿಲ್ಲುವುದು ಸಾಮಾನ್ಯ. ತಳ್ಳಲು ಪ್ರಯಾಣಿಕರು ಇಳಿದು ಬರುವುದು ಕಡಿಮೆಯೇ, ಚಾಲಕ ಮತ್ತು ನಿರ್ವಾಹಕ ಅಯ್ಯೋ, ಅಪ್ಪಾ ಎಂದು ಜನರನ್ನು ಕರೆಸಿ ಬಸ್ ಚಾಲೂ ಮಾಡಲು ಹರಸಾಹಸ ಪಡುವುದನ್ನು ದಿನಾ ನೋಡುತ್ತೇವೆ.

ಆದರೆ ಸೈಬಿರಿಯಾದ ಪ್ರಯಾಣಿಕರು ಬಸ್ ಅಲ್ಲ ವಿಮಾನವನ್ನೇ ತಳ್ಳಿದ್ದಾರೆ. ಅಲ್ಲದೇ ಸ್ಟಾರ್ಟ್ ಆದ ನಂತರ ಸುರಕ್ಷಿತವಾಗಿ ಸೇರಬೇಕಾದ ಸ್ಥಳವನ್ನು ಸೇರಿದ್ದಾರೆ. ಅಷ್ಟಕ್ಕೂ ಈ ವಿಮಾನವೇನೂ ಕೆಟ್ಟು ನಿಂತಿರಲಿಲ್ಲ.[ಮತ್ತೊಂದು ವಿಮಾನ ದುರಂತ, 116 ಜನ ಸಾವು?]

india

ವಾತಾವರಣದ ಉಷ್ಣಾಂಶ ಮೈನಸ್ 52 ಡಿಗ್ರಿ ಇದ್ದ ಪರಿಣಾಮ ಸುಮಾರು 74 ಪ್ರಯಾಣಿಕರಿದ್ದ ವಿಮಾನ ಇಗಾರ್ಕಾ ರನ್ ವೇ ಯಲ್ಲಿ ಚಲಿಸದೇ ನಿಂತಿತ್ತು. ಏನೂ ಮಾಡುವುದೆಂದೂ ಯೋಚಿಸುತ್ತಿರುವಾಗ ಚಳಿಯಿಂದ ರಕ್ಷಣೆ ಮಾಡಿಕೊಳ್ಳುವ ಕೋಟು ಧರಿಸಿದ ಪ್ರಯಾಣಿಕರೆಲ್ಲ ಒಂದಾಗಿ ರನ್ ವೇ ಉದ್ದಕ್ಕೂ ತಳ್ಳಿದರು.

ಯು ಟ್ಯೂಬ್ ನಲ್ಲಿ ಇಂಥದ್ದೊಂದು ವಿಡಿಯೋ ಹರಿದಾಡುತ್ತಿದ್ದು ಅನೇಕ ಸಾವಿರ ಜನ ಈಗಾಗಲೇ ವೀಕ್ಷಣೆ ಮಾಡಿದ್ದಾರೆ. ಥಂಡಿ ಹಿಡಿದಿದ್ದ ವಿಮಾನದಿಂದ ಇಳಿದ ಒಬ್ಬೊಬ್ಬರೇ ಪ್ರಯಾಣಿಕರು ಸ್ವಯಂ ಪ್ರೇರಿತವಾಗಿ ಪ್ಲೇನ್ ತಳ್ಳಲು ಆರಂಭಿಸಿದರು. ಯಾಕೆಂದರೆ ಪ್ರತಿಯೊಬ್ಬರಿಗೂ ಮನೆ ಸೇರಿವುದು ಮುಖ್ಯವಾಗಿತ್ತು ಎಂದು ಪ್ರಯಾಣಿಕನೊಬ್ಬ ಹೇಳಿದ್ದಾನೆ.

ರಷ್ಯಾದ ಅಧಿಕಾರಿಗಳು ಈ ದೃಶ್ಯವನ್ನು ಪ್ರತ್ಯಕ್ಷವಾಗಿ ನೋಡಿದ್ದು ವಿಮಾನ ಇಗಾರ್ಕಾದಿಂದ ಮಾಸ್ಕೋ ಕಡೆ ಪ್ರಯಾಣ ಬೆಳೆಸುತ್ತಿತ್ತು. ಘಟನೆಗೆ ಕಾರಣವೇನು? ವಾತಾವರಣದ ಅರಿವಿದ್ದರೂ ಫೈಲೆಟ್ ಗಳು ಯಾಕೆ ಮುಂಜಾಗೃತಾ ಕ್ರಮ ತೆಗೆದುಕೊಂಡಿಲ್ಲ? ಎಂಬುದನ್ನು ತನಿಖೆ ಮಾಡಲಾಗುತ್ತಿದೆ ಎಂದು ಸೈಬಿರಿಯಾದ ಅಧಿಕಾರಿಗಳು ತಿಳಿಸಿದ್ದಾರೆ.

English summary
Siberia air passengers had to get out and push their plane in temperatures of minus 52 degrees Celsius after its chassis froze. Passengers pushed the plane until it was able to turn and then the tow truck took over.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X