ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Video: ಕೊರೊನಾದಿಂದ ಪಾರಾಗಲು ಮುಖಕ್ಕೆ ಪ್ಲಾಸ್ಟಿಕ್ ಸುತ್ತಿಕೊಂಡ ಪ್ರಯಾಣಿಕ

|
Google Oneindia Kannada News

ಸಿಡ್ನಿ, ಫೆಬ್ರವರಿ.20: ಕೊರೊನಾ ವೈರಸ್ ಅನ್ನೋ ಹೆಸರನ್ನು ಕೇಳಿದರೆ ಜನರು ಕನಸಿನಲ್ಲೂ ಬೆಚ್ಚಿ ಬೀಳುವಂತಾ ವಾತಾವರಣ ನಿರ್ಮಾಣವಾಗಿ ಬಿಟ್ಟಿದೆ. ಇದಕ್ಕೆ ಬೆಸ್ಟ್ ಎಕ್ಸಾಂಪಲ್ ಎನ್ನುವಂತಾ ಘಟನೆಯೊಂದು ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆದಿದೆ.

ಚೀನಾದಲ್ಲಿ ಮರಣ ಮೃದಂಗ ಬಾರಿಸುತ್ತಿರುವ ಮಾರಕ ಸೋಂಕು ಜನರಲ್ಲಿ ಎಷ್ಟರ ಮಟ್ಟಿಗೆ ಭಯವನ್ನು ಹುಟ್ಟಿಸಿದೆ ಎನ್ನುವುದಕ್ಕೆ ಈ ವಿಡಿಯೋ ಸಾಕ್ಷಿ. ವಿಮಾನದಲ್ಲಿ ಕುಣಿತ ಪ್ರಯಾಣಿಕರು ತಮ್ಮ ಸಹ ಪ್ರಯಾಣಿಕರಿಂದ ಸೋಂಕು ಹರಡಬಹುದು ಎಂಬ ಆತಂಕದಲ್ಲಿ ಮುಖಕ್ಕೆ ಪ್ಲಾಸ್ಟಿಕ್ ಸುತ್ತಿಕೊಂಡು ಕುಳಿತಿದ್ದಾರೆ.

ಆಸ್ಟ್ರೇಲಿಯಾದ ಸಿಡ್ನಿಯಿಂದ ಹ್ಯಾಮಿಲ್ಟನ್ ಗೆ ಹೊರಟಿದ್ದ ಫ್ಲೈಟ್ ನಲ್ಲಿ ಇಂಥದೊಂದು ದೃಶ್ಯವು ಕಂಡು ಬಂದಿದೆ. ದಂಪತಿಗಳು ಮುಖಕ್ಕೆ ಪ್ಲಾಸ್ಟಿಕ್ ಸುತ್ತಿಕೊಂಡು ಕುಳಿತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.

Passengers Covered His Face With Plastic In Flight For Secured From Coronavirus

ಆಸ್ಟ್ರೇಲಿಯಾದಲ್ಲಿ 15 ಸೋಂಕಿತ ಪ್ರಕರಣ ಪತ್ತೆ:

ಆಸ್ಟ್ರೇಲಿಯಾದಲ್ಲಿ ಇದುವರೆಗೂ 15 ಮಂದಿಗೆ ಕೊರೊನಾ ವೈರಸ್ ಸೋಂಕು ತಗಲಿರುವ ಬಗ್ಗೆ ಸ್ಪಷ್ಟವಾಗಿದೆ. ಈ ಎಲ್ಲ ಸೋಂಕಿತರು ನೇರವಾಗಿ ಅಥವಾ ಪರೋಕ್ಷವಾಗಿ ಚೀನಾದ ವುಹಾನ್ ನಗರಕ್ಕೆ ಭೇಟಿ ಕೊಟ್ಟು ಬಂದವರೇ ಎಂದು ತಿಳಿದು ಬಂದಿದೆ.

ಈಗಾಗಲೇ ಚೀನಾದಿಂದ ಆಗಮಿಸುವ ಎಲ್ಲ ಪ್ರವಾಸಿಗರಿಗೆ ಆಸ್ಟ್ರೇಲಿಯಾದಲ್ಲಿ ನಿರ್ಬಂಧ ವಿಧಿಸಲಾಗಿದೆ. 14 ದಿನಗಳ ಹಿಂದೆಯೇ ಆಸ್ಟ್ರೇಲಿಯಾ ಸರ್ಕಾರ ಈ ಸಂಬಂಧ ಆದೇಶ ಹೊರಡಿಸಿದ್ದು, 1 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳ ಆಗಮನಕ್ಕೂ ತಡೆ ಹೇರಲಾಗಿದೆ.

English summary
Australian Passengers Covered His Face With Plastic In Flight For Secured From Coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X