ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ, ಪಾಕ್ ವಿಭಜನೆ: 92 ವರ್ಷದ ಬಳಿಕ ಕುಟುಂಬಸ್ಥರನ್ನು ಸೇರಿದ ಪಂಜಾಬ್ ಮೋಹನ್

|
Google Oneindia Kannada News

1947ರ ಭಾರತ, ಪಾಕಿಸ್ತಾನ ವಿಭಜನೆಯ ದುರಂತವು ಅನೇಕ ಜನರ ಮನೆಗಳನ್ನು ನಾಶಪಡಿಸಿತು. ಈ ಸಮಯದಲ್ಲಿ ಅನೇಕ ಜನರು ತಮ್ಮ ಕುಟುಂಬಸ್ಥರಿಂದ ಸಂಬಂಧಿಕರಿಂದ ಬೇರ್ಪಟ್ಟರು. ಆ ಸಮಯದಿಂದ ಹೀಗೆ ದೂರವಾದ ಅನೇಕ ಜನರು ಈ ಜಗತ್ತಿನಲ್ಲಿದ್ದಾರೆಯೇ ಅಥವಾ ಇಲ್ಲವೇ ಎಂದು ತಿಳಿದಿರಲಿಲ್ಲ. ಆದರೆ ಈ ಸಂದರ್ಭದಲ್ಲಿ ಪಾಕಿಸ್ತಾನದ ಕುಟುಂಬದಿಂದ ದೂರವಾಗಿ ಭಾರತದ ಪಂಜಾಬ್‌ನಲ್ಲಿ ಉಳಿದುಕೊಂಡ ವ್ಯಕ್ತಿ ಸದ್ಯ ತನ್ನ ಕುಟುಂಬಸ್ಥರನ್ನು ತಲುಪುವಲ್ಲಿ ಯಶಸ್ವಿಯಾಗಿದ್ದಾರೆ.

ಭಾರತ-ಪಾಕಿಸ್ತಾನ ವಿಭಜನೆ ಅನೇಕ ಜೀವಗಳನ್ನು ಬಲಿ ತೆಗೆದುಕೊಂಡಿತು. ಅವರನ್ನು ಸಾಕಷ್ಟು ಸಂಕಷ್ಟದ ಹಾದಿಯಲ್ಲಿ ನಿಲ್ಲುವಂತೆ ಮಾಡಿತು. ತಮ್ಮವರನ್ನು ನೋಡಲು ಸಾಧ್ಯವಾಗದಂತ ಪರಿಸ್ಥಿತಿ ಉಂಟಾಯಿತು. ಈ ದುರಂತವನ್ನು ಕಂಡವರಲ್ಲಿ ಒಬ್ಬರ ಹೆಸರು ಮೋಹನ್ ಸಿಂಗ್. ಇವರು ಕೇವಲ 6 ವರ್ಷ ವಯಸ್ಸಿನಲ್ಲಿರುವಾಗಲೇ ಕುಟುಂಬದಿಂದ ಬೇರ್ಪಟ್ಟರು. ಈ ವಿಭಜನೆ ಅವರಿಂದ ಬಹಳಷ್ಟು ಕಳೆದುಕೊಳ್ಳುವಂತೆ ಮಾಡಿತು. 1947ರ ಕೋಮುಗಲಭೆಯಲ್ಲಿ ಮೋಹನ್ ಕುಟುಂಬದ 22 ಮಂದಿ ಸಾವಿಗೀಡಾಗಿದ್ದರು.

ಸಿಂಗ್ ಅವರ ಮನೆಯ ಪುರುಷರನ್ನು ಗಲಭೆಕೋರರು ಬರ್ಬರವಾಗಿ ಕೊಂದರು. ಈ ವೇಳೆ ಮಹಿಳೆಯರು ತಮ್ಮ ಗೌರವ ಕಾಪಾಡಲು ಮಕ್ಕಳೊಂದಿಗೆ ಬಾವಿಗೆ ಹಾರಿದ್ದಾರೆ. ಆದರೆ ಈ ವೇಳೆ ಮೋಹನ್ ಪ್ರಾಣ ಉಳಿಸಿಕೊಂಡು ಪರಾರಿಯಾಗಿದ್ದಾರೆ. ವಿಭಜನೆಯ ದುರಂತಕ್ಕೆ ಈಗ 75 ವರ್ಷಗಳು ಕಳೆದಿವೆ.

Partition of India Pakistan: Punjab Mohan Singh joined his family after 92 years

75 ವರ್ಷಗಳ ನಂತರ ಮೋಹನ್ ಮತ್ತೊಮ್ಮೆ ತಮ್ಮ ಕುಟುಂಬವನ್ನು ಭೇಟಿಯಾಗಲಿದ್ದಾರೆ. ಅವರು ತಮ್ಮ ಕುಟುಂಬವನ್ನು ಭೇಟಿ ಮಾಡಲು ಯಶಸ್ವಿಯಾಗಿದ್ದಾರೆ. ಮೋಹನ್ ಪಾಕಿಸ್ತಾನದಲ್ಲಿ ಮುಸ್ಲಿಂ ಕುಟುಂಬದಿಂದ ಬೆಳೆದರು. ಕುಟುಂಬಸ್ಥರು ಸಾಕಷ್ಟು ಹುಡುಕಾಡಿದರೂ ಮೋಹನ್ ಪತ್ತೆಯಾಗಿರಲಿಲ್ಲ.

ಕುಟುಂಬಸ್ಥರನ್ನು ಕಳೆದುಕೊಂಡರು; ಮೋಹನ್ ಅವರ ಚಿಕ್ಕಪ್ಪ, ಜಲಂಧರ್ ನಿವಾಸಿ ಸರ್ವಾನ್ ಸಿಂಗ್, ಅವರ ಪೋಷಕರು, ಇಬ್ಬರು ಸಹೋದರರು ಮತ್ತು ಇಬ್ಬರು ಸಹೋದರಿಯರು ಈ ಹಿಂಸಾತ್ಮಕ ಗಲಭೆಗಳಲ್ಲಿ ಕೊಲ್ಲಲ್ಪಟ್ಟರು. ಸದ್ಯ ಅವರ ಅಣ್ಣನ ಮಗನನ್ನು (ಮೋಹನ್) ಭೇಟಿಯಾಗಲು ಉತ್ಸುಕರಾಗಿದ್ದಾರೆ.

ಸರ್ವಾನ್ ಸಿಂಗ್ ಅವರ ಮಗಳು ರಾಚ್‌ಪಾಲ್ ಕೌರ್ ಅವರ ಭೇಟಿಯ ಸಮಯದಲ್ಲಿ ಅವರೊಂದಿಗೆ ಬರಲಿದ್ದಾರೆ. ಕೌರ್ ಈ ಗಲಭೆಗಳಲ್ಲಿ ಬದುಕುಳಿದ ನಮ್ಮ ಕುಟುಂಬದ ಸದಸ್ಯರು. ಬಳಿಕ ಮೋಹನ್ ನನ್ನು ಹುಡುಕಲು ಸಾಕಷ್ಟು ಪ್ರಯತ್ನ ನಡೆಸಿದ್ದರು. ಆದರೆ ಆತ ಪತ್ತೆಯಾಗಿರಲಿಲ್ಲ. ಗಲಭೆ ಶಾಂತವಾದ ಬಳಿಕ ಕುಟುಂಬಸ್ಥರು ತಮ್ಮ 6 ವರ್ಷದ ಮಗು (ಮೋಹನ್)ನಿಗಾಗಿ ಸಾಕಷ್ಟು ಹುಡುಕಾಟ ನಡೆಸಿದ್ದಾರೆ. ತನ್ನ ಮಗುವಿಗೆ ಏನಾಯಿತು? ಮತ್ತು ಅವನು ಎಲ್ಲಿದ್ದಾನೆ? ಎಂದು ಅವನು ಯೋಚಿಸುತ್ತಿದ್ದರು.

Partition of India Pakistan: Punjab Mohan Singh joined his family after 92 years

ಸರ್ವಾನ್ ಸಿಂಗ್ ಕುರಿತ ಸಾಕ್ಷ್ಯಚಿತ್ರ; ಸಿಖ್ ಲೇಖಕ ಸುಖದೀಪ್ ಸಿಂಗ್ ಬರ್ನಾಲಾ ಅವರು ವಿಭಜನೆಯ ದುರಂತದ ಕುರಿತು 'ದಿ ಅದರ್ ಸೈಡ್ ಆಫ್ ಫ್ರೀಡಮ್' ಎಂಬ ಶೀರ್ಷಿಕೆಯ ಯೂಟ್ಯೂಬ್ ಸಾಕ್ಷ್ಯಚಿತ್ರವನ್ನು ಮಾಡಿದರು. ಈ ಸರಣಿಯ ಒಂದು ಸಂಚಿಕೆಯು ಸರ್ವಾನ್ ಸಿಂಗ್ ಅವರ ಕುಟುಂಬವನ್ನು ಆಧರಿಸಿದೆ. ಇದರಿಂದಾಗಿ ಇವರಿಬ್ಬರನ್ನು ಪತ್ತೆ ಹಚ್ಚಲು ಸಹಾಯವಾಗಿದೆ. ಇದರಿಂದ ಇಬ್ಬರು ಒಗ್ಗೂಡಲು ಸಹಾಯವಾಯಿತು.

English summary
Mohan Singh of Punjab, who was lost in the tragedy of India-Pakistan partition in 1947, is going to visit his nephew in Pakistan. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X