ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ಯಾರಿಸ್‌ ಉಗ್ರರ ದಾಳಿ ಹಿಂದಿರುವವರು ಯಾರು?

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ನವೆಂಬರ್ 14 : ಫ್ರಾನ್ಸ್‌ ರಾಜಧಾನಿ ಪ್ಯಾರಿಸ್‌ನಲ್ಲಿ ನಡೆದ ಉಗ್ರ ಅಟ್ಟಹಾಸದ ಹಿಂದಿರುವವರು ಯಾರು? ಎಂಬ ಪ್ರಶ್ನೆ ಎದ್ದಿದೆ. ಅಲ್‌ಖೈದಾ ಅಥವ ಐಎಸ್‌ಐಎಸ್‌ ನಂತಹ ಉಗ್ರ ಸಂಘಟನೆಗಳು ತಿಂಗಳುಗಟ್ಟಲೇ ಯೋಜನೆ ರೂಪಿಸಿ ಈ ಮಾರಣ ಹೋಮ ನಡೆಸಿವೆ ಎಂದು ಶಂಕಿಸಲಾಗುತ್ತಿದೆ. [ಪ್ಯಾರಿಸ್ ದಾಳಿಯ ಚಿತ್ರಗಳು]

ಪ್ಯಾರಿಸ್‌ಗೆ ನುಗ್ಗಿರುವ ಶಸ್ತ್ರ ಸಜ್ಜಿತ ಉಗ್ರರು ಮನಬಂದಂತೆ ಗುಂಡಿನ ದಾಳಿ ನಡೆಸಿ 150 ಜನರನ್ನು ಹತ್ಯೆ ಮಾಡಿದ್ದಾರೆ. ಇಬ್ಬರು ಆತ್ಮಾಹುತಿ ಬಾಂಬರ್‌ಗಳು ತಮ್ಮನ್ನು ಸ್ಫೋಟಿಸಿಕೊಂಡು ಇತರರ ಜೀವವನ್ನು ಬಲಿಪಡೆದಿದ್ದಾರೆ. ಆದ್ದರಿಂದ, ಈ ದಾಳಿಯ ಹಿಂದೆ ದೊಡ್ಡ ಭಯೋತ್ಪಾದಕ ಗುಂಪಿದೆ ಎಂದು ಅಂದಾಜಿಸಲಾಗುತ್ತಿದೆ. [ಪ್ಯಾರಿಸ್ : ಉಗ್ರರ ಅಟ್ಟಹಾಸ 150 ಸಾವು]

Paris terror attack

ಸಿರಿಯಾ ಅಥವ ಇರಾಕ್‌ನಲ್ಲಿ ಯೋಜನೆ : ಇಂತಹ ದೊಡ್ಡ ದಾಳಿ ನಡೆಸಲು ತಿಂಗಳುಗಟ್ಟಲೇ ಯೋಜನೆ ರೂಪಿಸಬೇಕಾಗುತ್ತದೆ. ಐಎಸ್‌ಐಎಸ್ ಉಗ್ರರು ತಮ್ಮ ಭದ್ರ ನೆಲೆಯಾದ ಸಿರಿಯಾ ಅಥವ ಇರಾಕ್‌ನಲ್ಲಿ ಈ ದಾಳಿಯ ಸಂಚು ರೂಪಿಸಿರಬಹುದು ಎಂಬುದು ಸದ್ಯದ ಮಾಹಿತಿ. [ಇರಾಕಿ ಉಗ್ರರ ವಿರುದ್ಧ ಕರ್ನಾಟಕ ಮಸೀದಿಗಳ ಯುದ್ಧ]

ಕೆಲವು ತಿಂಗಳ ಹಿಂದೆ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಅಂಡ್ ಸಿರಿಯಾ (ಐಎಸ್‌ಐಎಸ್‌) ಉಗ್ರರು ವಿವಿಧ ದೇಶಗಳಲ್ಲಿ ದಾಳಿ ನಡೆಸುತ್ತೇವೆ ಎಂದು ಬಹಿರಂಗ ಹೇಳಿಕೆ ನೀಡಿದ್ದರು. ಈ ಯೋಜನೆಯ ಅಂಗವಾಗಿಯೇ ಪ್ಯಾರಿಸ್‌ನಲ್ಲಿ ದಾಳಿ ನಡೆಸಲಾಗಿದೆ ಎಂದು ಶಂಕಿಸಲಾಗುತ್ತಿದೆ.

26/11ರ ಮುಂಬೈ ದಾಳಿಗೆ ಸಾಮ್ಯತೆ : ಪ್ಯಾರಿಸ್‌ನಲ್ಲಿ ನಡೆದ ಉಗ್ರರ ದಾಳಿಗೂ ಮುಂಬೈನಲ್ಲಿ ನಡೆದ 26/11ರ ದಾಳಿಗೂ ಹಳ ಸಾಮ್ಯತೆ ಇದೆ ಎನ್ನುತ್ತಾರೆ ತಜ್ಞರು. ಪ್ಯಾರಿಸ್‌ನಲ್ಲಿ ಒತ್ತೆಯಾಳಾಗಿ ಜನರನ್ನು ಹಿಡಿದಿಟ್ಟುಕೊಂಡರೂ ಯಾವುದೇ ಬೇಡಿಕೆ ಮುಂದಿಡದೇ ಅವರನ್ನು ಹತ್ಯೆ ಮಾಡಲಾಗಿದೆ.

ಉಗ್ರರಿಗೆ ತರಬೇತಿ : ಇಂತಹ ದಾಳಿಗಳನ್ನು ನಡೆಸುವಾಗ ಉಗ್ರರಿಗೆ ತರಬೇತಿ ನೀಡಲಾಗುತ್ತದೆ. ದಾಳಿಗೆ ಬಳಸಿದ ಶಸ್ತ್ರಾಸ್ತ್ರಗಳನ್ನು ಉಗ್ರರು ಅಕ್ರಮ ಸಾಗಣೆ ಮೂಲಕ ಪಡೆದಿರುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

English summary
No group has claimed responsibility for the Paris attack. Experts says that, ISIS being behind this attack. An attack of this magnitude would have required several months of planning. ISIS may planned for Paris attack at Iraq or Syria where they have a strong base.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X