ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಪಂಜ್‌ಶೀರ್‌ ಸಂಪೂರ್ಣವಾಗಿ ತನ್ನ ವಶದಲ್ಲಿದೆ' ಎಂದ ತಾಲಿಬಾನ್‌

|
Google Oneindia Kannada News

ಕಾಬೂಲ್‌, ಸೆಪ್ಟೆಂಬರ್‌ 06: ಪಂಜ್‌ಶೀರ್‌ ಕಣಿವೆಯನ್ನು ಸಂಪೂರ್ಣವಾಗಿ ನಾವು ನಮ್ಮ ವಶಕ್ಕೆ ಪಡೆದುಕೊಂಡು ಆಗಿದೆ ಎಂದು ತಾಲಿಬಾನ್‌ ಹೇಳಿಕೊಂಡಿದೆ. ನಿನ್ನೆಯಷ್ಟೇ ತಾಲಿಬಾನ್‌ ಒಟ್ಟು ನಾಲ್ಕು ಜಿಲ್ಲೆಗಳನ್ನು ತನ್ನ ವಶಕ್ಕೆ ಪಡೆದುಕೊಂಡಿದೆ ಎಂದು ಹೇಳಿಕೊಂಡಿತ್ತು. ಈಗ ಒಟ್ಟು ಏಳು ಜಿಲ್ಲೆಗಳನ್ನು ಕೂಡಾ ತಾಲಿಬಾನ್‌ ತನ್ನ ವಶಕ್ಕೆ ಪಡೆದುಕೊಂಡಿದೆ ಎಂದು ಹೇಳಿದೆ.

ಅಮೆರಿಕ ತನ್ನ ಸೇನೆಯನ್ನು ಅಫ್ಘಾನಿಸ್ತಾನದಿಂದ ಹಿಂದಕ್ಕೆ ಕರೆಸಿಕೊಳ್ಳುತ್ತಿದ್ದಂತೆ ತಾಲಿಬಾನ್‌ ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದುಕೊಂಡಿದೆ. ಆದರೆ ತಾಲಿಬಾನ್‌ಗೆ ಪಂಜ್‌ಶೀರ್‌ ಕಣಿವೆಯನ್ನು ಮಾತ್ರ ವಶಕ್ಕೆ ಪಡೆದುಕೊಳ್ಳುವುದು ಸಾಧ್ಯವಾಗಿಲ್ಲ.

'600 ತಾಲಿಬಾನಿಗಳ ಹತ್ಯೆಗೈಯಲಾಗಿದೆ' ಎಂದ ಪಂಜ್ಶೀರ್‌ ಪಡೆ'600 ತಾಲಿಬಾನಿಗಳ ಹತ್ಯೆಗೈಯಲಾಗಿದೆ' ಎಂದ ಪಂಜ್ಶೀರ್‌ ಪಡೆ

ಅಫ್ಘಾನಿಸ್ತಾನದ ಈಶಾನ್ಯ ಪ್ರಾಂತ್ಯವಾದ ಪಂಜ್ಶೀರ್‌ನಲ್ಲಿ ತಾಲಿಬಾನ್‌ ಹಾಗೂ ವಿರೋಧಿ ಪಡೆ ನ್ಯಾಷನಲ್‌ ರೆಸಿಸ್ಟೆನ್ಸ್‌ ಫ್ರಂಟ್ ಆಫ್‌ ಅಫ್ಘಾನಿಸ್ತಾನ (ಎನ್‌.ಆರ್‌.ಎಫ್‌) ನಡುವೆ ಭಾರೀ ಕಾಳಗ ನಡೆದಿದ್ದು, ಇದಕ್ಕೂ ಹಿಂದೆ ನ್ಯಾಷನಲ್‌ ರೆಸಿಸ್ಟೆನ್ಸ್‌ ಫ್ರಂಟ್ ಆಫ್‌ ಅಫ್ಘಾನಿಸ್ತಾನ 600 ಕ್ಕೂ ಅಧಿಕ ತಾಲಿಬಾನಿಗರು ನಾವು ಹತ್ಯೆ ಮಾಡಿದ್ದೇವೆ ಎಂದು ಹೇಳಿಕೊಂಡಿತ್ತು.

 Panjshir Valley Completely Captured, says Taliban

ಈಗ ಸೋಮವಾರ ಈ ಬಗ್ಗೆ ಹೇಳಿಕೆ ನೀಡಿರುವ ತಾಲಿಬಾನ್‌, "ನಾವು ಪಂಜ್‌ಶೀರ್‌ ಕಣಿವೆಯನ್ನು ಸಂಪೂರ್ಣವಾಗಿ ವಶಕ್ಕೆ ಪಡೆದುಕೊಂಡಿದ್ದೇವೆ," ಎಂದು ಹೇಳಿಕೊಂಡಿದೆ.

ಮಾಹಿತಿ ನೀಡಿರುವ ತಾಲಿಬಾನ್‌ ಮುಖ್ಯ ವಕ್ತಾರ ಜಬೀಯುಲ್ಲ ಮುಜಾಹಿದ್, "ಈ ವಿಜಯದೊಂದಿಗೆ ನಮ್ಮ ದೇಶವನ್ನು ನಾವು ಸಂಪೂರ್ಣವಾಗಿ ನಮ್ಮ ತೆಕ್ಕೆಗೆ ಪಡೆದುಕೊಂಡಿದ್ದೇವೆ," ಎಂದಿದ್ದಾರೆ.

ಅಫ್ಘಾನಿಸ್ತಾನದ ಪಂಜ್‌ಶೀರ್‌ನಲ್ಲಿ 700 ತಾಲಿಬಾನಿಗಳ ಹತ್ಯೆ?ಅಫ್ಘಾನಿಸ್ತಾನದ ಪಂಜ್‌ಶೀರ್‌ನಲ್ಲಿ 700 ತಾಲಿಬಾನಿಗಳ ಹತ್ಯೆ?

"ಅಫ್ಘಾನಿಸ್ತಾನದಲ್ಲಿ ಬಾಕಿ ಉಳಿದಿದ್ದ ಒಂದು ಪ್ರದೇಶವನ್ನು ಕೂಡಾ ನಾವು ವಶಕ್ಕೆ ಪಡೆದುಕೊಂಡೆವು," ಎಂದು ತಾಲಿಬಾನ್‌ ಮುಖ್ಯ ವಕ್ತಾರ ಜಬೀಯುಲ್ಲ ಮುಜಾಹಿದ್ ತಿಳಿಸಿದ್ದಾರೆ. ಪಂಜ್‌ಶೀರ್‌ನ ಗವರ್ನರ್‌ ಗೇಟ್‌ ಮುಂಭಾಗದಲ್ಲಿ ತಾಲಿಬಾನ್‌ಗಳು ಇರುವ ಚಿತ್ರವು ಸದ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಕಂಡು ಬಂದಿದೆ.

ಇನ್ನು ಈ ಬಗ್ಗೆ ನ್ಯಾಷನಲ್‌ ರೆಸಿಸ್ಟೆನ್ಸ್‌ ಫ್ರಂಟ್ ಆಫ್‌ ಅಫ್ಘಾನಿಸ್ತಾನದ ನಾಯಕ ಅಹಮ್ಮದ್‌ ಮಸೌದ್‌ ಮಾತ್ರ ಯಾವುದೇ ಹೇಳಿಕೆಯನ್ನು ನೀಡಿಲ್ಲ. ಇನ್ನು ತಾಲಿಬಾನ್‌ ಎನ್‌ ಆರ್‌ ಎಫ್‌ನ ವಕ್ತಾರ ಫಾಹಿಮ್‌ ದಸ್ತಿ, ಗುಲ್‌ ಹೈದರ್‌ ಖಾನ್‌, ಮುನೀಬ್‌ ಅಮೀರಿ, ವಾವೂದ್‌ ಸೇರಿದಂತೆ ಹಲವಾರು ವಕ್ತಾರರನ್ನು ಹತ್ಯೆ ಮಾಡಿದೆ ಎಂದು ವರದಿಯಾಗಿದೆ.

ಭಾನುವಾರವಷ್ಟೇ ಈ ತಾಲಿಬಾನ್‌ ಹಾಗೂ ನ್ಯಾಷನಲ್‌ ರೆಸಿಸ್ಟೆನ್ಸ್‌ ಫ್ರಂಟ್ ಆಫ್‌ ಅಫ್ಘಾನಿಸ್ತಾನದ ನಡುವಿನ ಕದನದ ಬಗ್ಗೆ ಹೇಳಿಕೆ ನೀಡಿದ್ದ ಎನ್‌ ಆರ್‌ ಎಫ್‌ನ ವಕ್ತಾರ ಫಾಹಿಮ್‌ ದಸ್ತಿ, "ಇಂದು ಬೆಳಿಗ್ಗೆಯಿಂದೀಚೆಗೆ ಪಂಜ್ಶೀರ್‌ನ ವಿವಿಧ ಜಿಲ್ಲೆಗಳಲ್ಲಿ 600 ಕ್ಕೂ ಅಧಿಕ ಮಂದಿ ತಾಲಿಬಾನ್‌ ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ. ಹಾಗೆಯೇ ಸಾವಿರಕ್ಕೂ ಅಧಿಕ ತಾಲಿಬಾನ್‌ ಭಯೋತ್ಪಾದಕರನ್ನು ಬಂಧನ ಮಾಡಲಾಗಿದೆ ಅಥವಾ ಅವರಾಗಿಯೇ ಶರಣಾಗಿದ್ದಾರೆ," ಎಂದು ತಿಳಿಸಿದ್ದರು.

ಹಾಗೆಯೇ ತಾಲಿಬಾನ್‌ಗೆ ಅಫ್ಘಾನಿಸ್ತಾನದ ಇತರೆ ಪ್ರಾಂತ್ಯಗಳಿಂದ ಸಲಕರಣೆಗಳನ್ನು ಪಡೆಯುವಲ್ಲಿ ಸಮಸ್ಯೆ ಉಂಟಾಗಿದೆ ಎಂದು ಕೂಡಾ ಎನ್‌ ಆರ್‌ ಎಫ್‌ನ ವಕ್ತಾರರು ಹೇಳಿದ್ದರು. ಇಡೀ ಅಫ್ಘಾನಿಸ್ತಾನವನ್ನೇ ತನ್ನ ವಶಕ್ಕೆ ಪಡೆದುಕೊಂಡಿದ್ದ ತಾಲಿಬಾನ್‌ಗೆ ಪಂಜ್‌ಶೀರ್‌ ಕಣಿವೆಯನ್ನು ಮಾತ್ರ ತನ್ನ ವಶಕ್ಕೆ ಪಡೆದುಕೊಳ್ಳುವುದು ಸಾಧ್ಯವಾಗಿರಲಿಲ್ಲ. 1996 ರಿಂದ 2001 ರವರೆಗೆ ದೇಶದ ಆಡಳಿತವನ್ನು ತಾಲಿಬಾನ್‌ ನಡೆಸುತ್ತಿದ್ದಾಗಲೂ ಈ ಪಂಜ್‌ಶೀರ್‌ ಕಣಿವೆಯನ್ನು ಮಾತ್ರ ತಾಲಿಬಾನ್‌ ತನ್ನ ಹಿಡಿತಕ್ಕೆ ಪಡೆದುಕೊಳ್ಳಲು ಆಗಿರಲಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿದೆ.

ಇನ್ನು ಭಾನುವಾರ 600 ಕ್ಕೂ ಅಧಿಕ ಮಂದಿ ತಾಲಿಬಾನ್‌ ಉಗ್ರರನ್ನು ವಶಕ್ಕೆ ಪಡೆದುಕೊಂಡಿದ್ದೇವೆ ಎಂದು ನ್ಯಾಷನಲ್‌ ರೆಸಿಸ್ಟೆನ್ಸ್‌ ಫ್ರಂಟ್ ಆಫ್‌ ಅಫ್ಘಾನಿಸ್ತಾನ ಹೇಳಿಕೊಂಡ ಸಂದರ್ಭದಲ್ಲಿ ತಾಲಿಬಾನ್‌ ಇದನ್ನು ಅಲ್ಲಗಳೆದಿತ್ತು.

(ಒನ್‌ ಇಂಡಿಯಾ ಸುದ್ದಿ)

English summary
We Completely Captured Panjshir Valley said Taliban spokesman, Zabihullah Mujahid.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X