ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಸ್ರೇಲ್‌ ಗಡಿಯಲ್ಲಿ ಪ್ರತಿಭಟನೆ: ಸೇನೆ ಗುಂಡಿಗೆ 16 ಬಲಿ

|
Google Oneindia Kannada News

ಪ್ಯಾಲೆಸ್ಟೀನ್, ಮೇ 14: ಗಾಜಾ ಪಟ್ಟಿಯಲ್ಲಿ ಇಸ್ರೇಲ್‌ ಸೇನಾ ಪಡೆ ನಡೆಸಿದ ಗುಂಡಿನ ದಾಳಿಗೆ ಕನಿಷ್ಠ 16 ಪ್ರತಿಭಟನಾಕಾರರು ಮೃತಪಟ್ಟಿದ್ದಾರೆ.

ಜೆರುಸಲೆಂನಲ್ಲಿ ಅಮೆರಿಕದ ಹೊಸ ರಾಯಭಾರ ಕಚೇರಿಯನ್ನು ತೆರೆಯುತ್ತಿರುವುದನ್ನು ಖಂಡಿಸಿ ಸಾವಿರಾರು ಪ್ಯಾಲೆಸ್ಟೀನ್‌ ಪ್ರತಿಭಟನಾಕಾರರು ಇಸ್ರೇಲ್ ಗಡಿಭಾಗದಲ್ಲಿ ಸೋಮವಾರ ನೆರೆದಿದ್ದರು.

ಇಂಡೋನೇಶ್ಯಾದ ಪೊಲೀಸ್ ಕಚೇರಿಯಲ್ಲಿ ಬಾಂಬ್ ದಾಳಿ: 7 ಮಂದಿ ಬಲಿಇಂಡೋನೇಶ್ಯಾದ ಪೊಲೀಸ್ ಕಚೇರಿಯಲ್ಲಿ ಬಾಂಬ್ ದಾಳಿ: 7 ಮಂದಿ ಬಲಿ

ಈ ವೇಳೆ ಪ್ರತಿಭಟನಾಕಾರರು ಟೈರ್‌ಗಳಿಗೆ ಬೆಂಕಿ ಹಚ್ಚಿದರು. ಭಾರಿ ಪ್ರಮಾಣದ ಬೆಂಕಿ ದಟ್ಟವಾದ ಹೊಗೆ ಗಡಿಭಾಗವನ್ನು ಆವರಿಸಿತು. ಈ ವೇಳೆ ಇಸ್ರೇಲ್ ಸೈನಿಕರು ಪ್ರತಿಭಟನಾಕಾರರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.

palestinian protesters killed in gaza border by israel

ಪ್ರತಿಭಟನಾಕಾರರು ಗಡಿ ಬೇಲಿಯನ್ನು ಮುರಿಯಲು ಪ್ರಯತ್ನಿಸಿದ್ದರು ಎಂದು ಇಸ್ರೇಲ್ ಸೇನಾ ಪಡೆ ಆರೋಪಿಸಿದೆ. ಘಟನೆಯಲ್ಲಿ ಐನೂರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಪ್ಯಾಲೆಸ್ಟೀನ್ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

English summary
Atleast 16 palestinian protesters have been killed by israel army fire in Gaza border on Monday. Thousands of protesters gathered in border opposing opening of new US embassy in Jerusalem.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X