ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ಯಾಲೆಸ್ತೇನ್ ಸ್ವತಂತ್ರ ರಾಷ್ಟ್ರವಾಗಲಿ : ನರೇಂದ್ರ ಮೋದಿ

|
Google Oneindia Kannada News

ರಾಮಲ್ಲಾಹ್, ಫೆಬ್ರವರಿ 10: "ಇದು ಭಾರತ ಮತ್ತು ಪ್ಯಾಲೆಸ್ತೇನ್ ಆತ್ಮೀಯ ಸಂಬಂಧದ ಸಂಕೇತ. ಎಲ್ಲ ಭಾರತೀಯರ ಪರವಾಗಿ ನನ್ನ ವಂದನೆಗಳು" ಎಂದು ತಮ್ಮ ಪ್ಯಾಲೆಸ್ತೇನ್ ಭೇಟಿಯನ್ನು ವ್ಯಾಖ್ಯಾನಿಸಿದರು ಪ್ರಧಾನಿ ನರೇಂದ್ರ ಮೋದಿ.

ತಮ್ಮ ಮೂರು ರಾಷ್ಟ್ರಗಳ ಭೇಟಿಯ ಮೊದಲ ಭಾಗವಾಗಿ ಇಂದು(ಫೆ.10) ಪ್ಯಾಲೆಸ್ತಾನ್ ಗೆ ಭೇಟಿ ನೀಡಿರುವ ನರೇಂದ್ರ ಮೋದಿ, ಮೊದಲು ಪ್ಯಾಲೆಸ್ತೇನ್ ಮಾಜಿ ಅಧ್ಯಕ್ಷ ಯಾಸಿರ್ ಅರಾಫತ್ ಅವರ ಸಮಾಧಿಗೆ ನಮನ ಸಲ್ಲಿಸಿದರು.

ಪ್ಯಾಲೆಸ್ತೇನ್ ನಲ್ಲಿ ನರೇಂದ್ರ ಮೋದಿಯವರಿಗೆ ಆತ್ಮೀಯ ಸ್ವಾಗತಪ್ಯಾಲೆಸ್ತೇನ್ ನಲ್ಲಿ ನರೇಂದ್ರ ಮೋದಿಯವರಿಗೆ ಆತ್ಮೀಯ ಸ್ವಾಗತ

ನಂತರ ಪ್ಯಾಲೆಸ್ತೇನ್ ಅಧ್ಯಕ್ಷ ಮೊಹ್ಮದ್ ಅಬ್ಬಾಸ್ ಅವರೊಂದಿಗೆ ಹಲವು ಮಹತ್ವದ ಒಪ್ಪಂದಗಳಿಗೆ ಸಹಿ ಮಾಡಿದ ಅವರು, ಪ್ಯಾಲೆಸ್ತೇನ್ ನಮ್ಮ ವಿದೇಶಾಂಗ ನೀತಿಯಲ್ಲಿ ಎಂದಿಗೂ ಮೇಲ್ ಸ್ತರದಲ್ಲಿ ನಿಲ್ಲುತ್ತದೆ ಎಂದರು.

ಪ್ಯಾಲೆಸ್ತೇನ್ ನಲ್ಲಿ ಎಂದಿಗೂ ಶಾಂತಿ, ಸಮೃದ್ಧಿ ನೆಲೆಗೊಳ್ಳಬೇಕೆಂದು ನಾವು ಬಯಸುತ್ತೇವೆ ಎಂದು ಅವರು ಹಾರೈಸಿದರು. ಪ್ಯಾಲೆಸ್ತೇನ್ ನಲ್ಲಿ ಮೋದಿ ಮಾತಿನ ಮುಖ್ಯಾಂಶ ಇಲ್ಲಿದೆ.

ಪ್ಯಾಲೆಸ್ತೇನ್ ಜನರನ್ನು ಮೆಚ್ಚಿದ ಮೋದಿ

"ಪ್ಯಾಲೆಸ್ತೇನ್ ನ ಜನರು ಎಂಥ ಸನ್ನಿವೇಶಗಳನ್ನೂ ಎದುರಿಸಿ ಧೈರ್ಯ ಮೆರೆದಿದ್ದಾರೆ. ಯಾವ ಕ್ಷಣದಲ್ಲೂ ಸ್ಥರವಾದ ಸನ್ನಿವೇಶವಿಲ್ಲದ ಸಂದರ್ಭದಲ್ಲೂ ನೀವು ಸಂಕಷ್ಟಗಳನ್ನೆಲ್ಲ ಧ್ದೈರ್ಯವಾಗಿ ಎದುರಿಸಿ ಮೆಚ್ಚುಗೆಗೆ ಪಾತ್ರರಾಗಿದ್ದೀರಿ. ನಿಮ್ಮ ಬಗ್ಗೆ ನಮಗೆ ಹೆಮ್ಮೆಯಿದೆ"- ನರೇಂದ್ರ ಮೋದಿ.

ಭಾರತ ಪ್ಯಾಲೆಸ್ತೇನ್ ಜನರ ಸಂಕಷ್ಟಕ್ಕೆ ಸ್ಪಂದಿಸುತ್ತದೆ

"ಭಾರತ ಎಂದಿಗೂ ಪ್ಯಾಲೆಸ್ತೇನ್ ಜನರ ಸಂಕಷ್ಟಕ್ಕೆ ಸ್ಪಂದಿಸುತ್ತದೆ ಎಂದು ನಾನು ಅಧ್ಯಕ್ಷ ಅಬ್ಬಾಸ್ ಅವರಿಗೆ ಅಭಯ ನೀಡಬಲ್ಲೆ. ಕೆಲವೇ ದಿನಗಳಲ್ಲಿ ಪ್ಯಾಲೆಸ್ತೇನ್ ಒಂದು ಸ್ವತಂತ್ರ್ ಮತ್ತು ಶಾಂತ ರಾಷ್ಟ್ರವಾಗುತ್ತದೆ ಎಂದು ನಾನು ವಿಶ್ವಾಸದಿಂದ ಹೇಳಬಲ್ಲೆ" - ನರೇಂದ್ರ ಮೋದಿ

ರಾಯಭಾರ ಸಂಸ್ಥೆ ಸ್ಥಾಪನೆಗೆ ನೆರವು

"ಪ್ಯಾಲೆಸ್ತೇನ್ ನಲ್ಲಿ ರಾಯಭಾರ ಸಂಸ್ಥೆಯನ್ನು ಕಟ್ಟಲು ಭಾರತ ಎಲ್ಲರೀತಿಯ ಸಹಕಾರ ನೀಡಲಿದೆ. ಎರಡು ದೇಶಗಳು ಪರಸ್ಪರ ಸಹಕಾರದೊಂದಿಗೆ ಮುಂದುವರಿಯುವುದ ಸಂತಸದ ವಿಷಯವಾಗಿದೆ" - ನರೇಂದ್ರ ಮೋದಿ

ಪ್ಯಾಲೆಸ್ತೇನ್ ಸಮಸ್ಯೆಗೆ ಶಾಶ್ವತ ಪರಿಹಾರದ ಭರವಸೆ

"ಪ್ಯಾಲೆಸ್ತೇನ್ ನಲ್ಲಿ ಶಾಂತಿ, ಸ್ಥಿರತೆ ನೆಲೆಸಲಿ. ಪ್ಯಾಲೆಸ್ತೇನ್ ಸಮಸ್ಯೆಗೆ ಮಾತುಕತೆಯ ಮೂಲಕವೇ ಶಾಶ್ವತ ಪರಿಹಾರ ದೊರಕಲಿ ಎಂದು ನಾವು ಹಾರೈಸುತ್ತೇವೆ. ರಾಯಭಾರದಿಂದ ಮಾತ್ರವೇ ಈ ಹಿಂಸೆ, ಅಸಹನೆಯನ್ನು ಪರಿಹರಿಸುವುದಕ್ಕೆ ಸಾಧ್ಯ. ಇದು ಸುಲಭವಲ್ಲ ಎಂಬುದು ನಮಗೆ ಗೊತ್ತು, ಆದರೆ ಅಸಾಧ್ಯವೂ ಅಲ್ಲ ಎಂದು ನಾನು ಹೇಳಬಲ್ಲೆ"- ನರೇಂದ್ರ ಮೋದಿ

English summary
PM Narendra Modi and Palestine President Mahmoud Abbas witness exchange of agreements between India and Palestine in Ramallah. Modi is in Palestine as a part of his 3 nation tour.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X