• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪಾಕಿಸ್ತಾನದಲ್ಲಿ ಮೊಟ್ಟ ಮೊದಲ ಮೆಟ್ರೋ ರೈಲು ಸಂಚಾರ ಆರಂಭ

|

ಇಸ್ಲಾಮಾಬಾದ್, ಅಕ್ಟೋಬರ್ 26 : ಪಾಕಿಸ್ತಾನದಲ್ಲಿ ಮೊದಲ ಮೆಟ್ರೋ ರೈಲು ಸಂಚಾರ ಆರಂಭವಾಗಿದೆ. 27 ಕಿ. ಮೀ. ಮಾರ್ಗದಲ್ಲಿ ಎರಡು ಸುರಂಗ ಮಾರ್ಗ ನಿಲ್ದಾಣಗಳು ಇವೆ.

ಚೀನಾದ ಸ್ಟೇಟ್ ರೈಲ್ವೆ ಗ್ರೂಪ್ ಕಂಪನಿ ಮತ್ತು ಚೀನಾದ ನಾರ್ತ್ ಇಂಡಸ್ಟ್ರೀಸ್ ಕಾರ್ಪೊರೇಷನ್ ಸಹಯೋಗದಲ್ಲಿ ಲಾಹೋರ್‌ನಲ್ಲಿ ಮೆಟ್ರೋ ರೈಲು ಸೇವೆ ಆರಂಭಿಸಲಾಗಿದೆ.

ನಮ್ಮ ಮೆಟ್ರೋ: ಅಂಜನಾಪುರದಿಂದ ಯಲಚೇನಹಳ್ಳಿಗೆ ಕೇವಲ ಹತ್ತೇ ನಿಮಿಷ

ಒಟ್ಟು 5 ವರ್ಷಗಳ ಕಾಲ ಮೆಟ್ರೋ ಕಾಮಗಾರಿಯ ವೇಳೆ 7 ಸಾವಿರ ಸ್ಥಳೀಯರಿಗೆ ಉದ್ಯೋಗ ಸಿಕ್ಕಿದೆ. ಆರೆಂಜ್ ಲೈನ್ ಮೆಟ್ರೋದಿಂದಾಗಿ 2 ಸಾವಿರ ಉದ್ಯೋಗ ಸೃಷ್ಟಿಯಾಗಿದೆ.

ತವರು ರಾಜ್ಯದಿಂದ ವಾಪಸ್ ಬಂದ ಮೆಟ್ರೋ ಕಾರ್ಮಿಕರಿಗೆ ಕೋವಿಡ್ ಸೋಂಕು

ಮೆಟ್ರೋ ಮಾರ್ಗ ಒಟ್ಟು 27 ಕಿ. ಮೀ. ಇದ್ದು, 26 ನಿಲ್ದಾಣಗಳನ್ನು ಒಳಗೊಂಡಿದೆ. 24 ನಿಲ್ದಾಣಗಳು ಫ್ಲೈ ಓವರ್‌ನಲ್ಲಿದ್ದು, ಎರಡು ನಿಲ್ದಾಣ ಸುರಂಗ ಮಾರ್ಗದಲ್ಲಿವೆ.

ನಮ್ಮ ಮೆಟ್ರೋ; ಸ್ಮಾರ್ಟ್‌ ಕಾರ್ಡ್ ರಿಚಾರ್ಜ್‌ ಇನ್ನು ಸರಳ, ಸುಲಭ

ಮೆಟ್ರೋ ರೈಲು ಉದ್ಘಾಟನಾ ಸಮಾರಂಭದಲ್ಲಿ ಪಂಜಾಬ್ ಪ್ರಾಂತ್ಯದ ಮುಖ್ಯಮಂತ್ರಿ ಸರ್ದಾರ್ ಉಸ್ಮಾನ್ ಬುಜ್ದಾರ್ ಪಾಲ್ಗೊಂಡಿದ್ದರು. "ಯೋಜನೆ ಸಾಕಾರಗೊಳಿಸಿದ ಎಲ್ಲರಿಗೂ ಕೃತಜ್ಞತೆ ಅರ್ಪಿಸಿದ ಅವರು, ಇದರಿಂದಾಗಿ ಸಾಕಷ್ಟು ಆರ್ಥಿಕ ಅಭಿವೃದ್ಧಿಯ ನಿರೀಕ್ಷೆ ಇದೆ" ಎಂದರು.

5 ಹವಾನಿಯಂತ್ರಿತ ಬೋಗಿಯನ್ನು ಒಳಗೊಂಡಿರುವ 27 ಮೆಟ್ರೋ ರೈಲುಗಳು ಸಂಚಾರ ನಡೆಸಲಿವೆ. 80 ಕಿ. ಮೀ. ವೇಗದಲ್ಲಿ ರೈಲುಗಳು ಸಂಚಾರ ನಡೆಸಬಲ್ಲವು. 2 ಲಕ್ಷದ 50 ಸಾವಿರ ಜನರು ಪ್ರತಿನಿತ್ಯ ಸಂಚಾರ ನಡೆಸಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.

English summary
Pakistan's first ever metro train service started commercial operation in Lahore. The Orange line metro has 27 km and 26 stations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X