ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕ ಡಾಲರ್ ವಿರುದ್ಧ ಸಾರ್ವಕಾಲಿಕ ಕುಸಿತ ಕಂಡ ಪಾಕಿಸ್ತಾನದ ರುಪಾಯಿ

|
Google Oneindia Kannada News

ಇಸ್ಲಾಮಾಬಾದ್, ಮೇ 16: ಅಮೆರಿಕದ ಡಾಲರ್ ಮೌಲ್ಯದ ವಿರುದ್ಧ ಪಾಕಿಸ್ತಾನದ ರುಪಾಯಿ ಸಾರ್ವಕಾಲಿಕ ಕುಸಿತ ಕಂಡಿದೆ. ಕಳೆದ ವಾರವಷ್ಟೇ ಪಾಕಿಸ್ತಾನವು ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಯಿಂದ $ 6 ಬಿಲಿಯನ್ ನೆರವಿಗಾಗಿ ಪ್ರಾಥಮಿಕ ಒಪ್ಪಂದಕ್ಕೆ ಸಹಿ ಹಾಕಿತ್ತು. ಗುರುವಾರ ಬೆಳಗ್ಗೆ ಅಮೆರಿಕ ಡಾಲರ್ ವಿರುದ್ಧ ಪಾಕಿಸ್ತಾನದ ರುಪಾಯಿ ಮೌಲ್ಯ 147ಕ್ಕೆ ಕುಸಿಯಿತು.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಕಳೆದ ವಾರ ಡಾಲರ್ ವಿರುದ್ಧ 141 ರುಪಾಯಿಗೆ ವಹಿವಾಟು ಆಗುತ್ತಿತ್ತು. ಪಾಕಿಸ್ತಾನದ ಕರೆನ್ಸಿ ಮೌಲ್ಯದ ಸ್ಥಿರತೆ ಕಾಪಾಡಿಕೊಳ್ಳುವ ಬಗ್ಗೆ ಸರಕಾರಿ ಅಧಿಕಾರಿಗಳು ಕರೆನ್ಸಿ ಡೀಲರ್ ಗಳ ಜತೆಗೆ ಸಭೆ ನಡೆಸಿದ್ದರು. ಕಳೆದ ವಾರವಷ್ಟೇ ಪಾಕಿಸ್ತಾನವು ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ ಜತೆಗೆ ಪ್ರಾಥಮಿಕ ಒಪ್ಪಂದ ಮಾಡಿಕೊಂಡು, ಮಾರುಕಟ್ಟೆ ನಿರ್ಧಾರಿತ ವಿನಿಮಯ ದರವನ್ನು ಅನುಸರಿಸುವುದಾಗಿ ಒಪ್ಪಿಕೊಂಡಿತ್ತು.

Pakistani rupee touched all time low against US dollar

ಸದ್ಯಕ್ಕೆ ಪಾಕಿಸ್ತಾನದ ಕೇಂದ್ರ ಬ್ಯಾಂಕ್ ನಿಂದಲೇ ಕರೆನ್ಸಿ ವಿನಿಮಯ ದರವನ್ನು ನಿಯಂತ್ರಣ ಮಾಡಲಾಗುತ್ತಿದೆ. ವಿದೇಶಿ ವಿನಿಮಯದ ಪ್ರಮಾಣದಲ್ಲಿನ ಕುಸಿತ, ಪ್ರಗತಿಯಲ್ಲಿ ಇಳಿಮುಖ ಹಾಗೂ ವಿತ್ತೀಯ ಕೊರತೆಯಲ್ಲಿ ಏರಿಕೆ ಈ ಎಲ್ಲ ಕಾರಣದಿಂದಾಗಿ ಪಾಕಿಸ್ತಾನವು ತೀವ್ರವಾದ ಆರ್ಥಿಕ ಸವಾಲುಗಳನ್ನು ಎದುರಿಸುತ್ತಿದೆ.

English summary
Pakistani rupee touched all time low against US dollar on Thursday morning. Last week Pakistan signed preliminary agreement with IMF for $ 6 billion bail out.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X