ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾವಲ್ಪಿಂಡಿಯಲ್ಲಿ ಪಾಕಿಸ್ತಾನ ಮಿಲಿಟರಿ ವಿಮಾನ ಅಪಘಾತ: 17 ಮಂದಿ ಸಾವು

|
Google Oneindia Kannada News

ಇಸ್ಲಾಮಾಬಾದ್, ಜುಲೈ 30: ರಾವಲ್‌ಪಿಂಡಿಯಲ್ಲಿ ಪಾಕಿಸ್ತಾನದ ಮಿಲಿಟರಿ ವಿಮಾನ ಅಪಘಾತಕ್ಕೀಡಾಗಿದ್ದು, 17 ಮಂದಿ ಮೃತಪಟ್ಟಿರುವ ಘಟನೆ ವರದಿಯಾಗಿದೆ.

ತರಬೇತಿ ಹಾರಾಟದಲ್ಲಿದ್ದ ಪಾಕಿಸ್ತಾನದ ಮಿಲಿಟರಿ ವಿಮಾನವು ಮಂಗಳವಾರ ಮುಂಜಾನೆ ಗ್ಯಾರಿಸನ್ ನಗರದ ರಾವಲ್ಪಿಂಡಿಯಲ್ಲಿ ನಿರ್ಮಿಸಲಾದ ಪ್ರದೇಶದಲ್ಲಿ ಅಪಘಾತಕ್ಕೀಡಾಗಿದ್ದು, ಎಲ್ಲಾ ಐವರು ಸಿಬ್ಬಂದಿ ಮತ್ತು 12 ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಸೇನೆಯ ಹೇಳಿಕೆ ತಿಳಿಸಿದೆ.

ಎಎನ್ 32 ವಿಮಾನಾಪಘಾತ ಸ್ಥಳದಿಂದ ಯೋಧರ ಶವ ಹೊರಕ್ಕೆ ಎಎನ್ 32 ವಿಮಾನಾಪಘಾತ ಸ್ಥಳದಿಂದ ಯೋಧರ ಶವ ಹೊರಕ್ಕೆ

ದಿ ನ್ಯೂಸ್ ಪತ್ರಿಕೆಯ ವೆಬ್‌ಸೈಟ್ ನಲ್ಲಿ ಪ್ರಕಟವಾದ ಸುದ್ದಿ ಪ್ರಕಾರ, ಅಪಘಾತಕ್ಕೀಡಾದ ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡ ಬಗ್ಗೆ ಫೋಟೋವನ್ನು ತೋರಿಸಲಾಗಿದೆ. ಆದರೆ, ಈ ವಿಮಾನ ಅಪಘಾತಕ್ಕೆ ಕಾರಣ ಏನು ಎಂಬ ಬಗ್ಗೆ ಇನ್ನೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

Pakistani Military Plane Crash Atleast 17 Killed

ಬೆಂಕಿ ಕಾಣಿಸಿಕೊಂಡಿದ್ದರಿಂದ ಅಪಘಾತದಲ್ಲಿ ಇನ್ನೂ 12 ನಾಗರಿಕರು ಗಾಯಗೊಂಡಿದ್ದಾರೆ ಎನ್ನಲಾಗಿದೆ. ರಾವಲ್ಪಿಂಡಿ ಪಾಕಿಸ್ತಾನ ಸೇನೆಯ ಪ್ರಧಾನ ಕಚೇರಿ ನೆಲೆಗೊಂಡಿರುವ, ರಾಷ್ಟ್ರ ರಾಜಧಾನಿ ಇಸ್ಲಾಮಾಬಾದ್‌ಗೆ ಹತ್ತಿರದಲ್ಲಿದೆ. ಪಾಕಿಸ್ತಾನದ ಐವರು ಸೈನಿಕರು ಕೂಡ ಮೃತಪಟ್ಟಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇಬ್ಬರು ಪೈಲಟ್‌ಗಳು ಮೃತಪಟ್ಟಿದ್ದಾರೆ

English summary
Pakistani Military Plane Crash Atleast 17 Killed,Seventeen people were killed when a small military plane crashed early Tuesday into a residential area in the Pakistani city of Rawalpindi near the capital Islamabad, a rescue official said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X