• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸರ್ಕಾರದ ವಿರುದ್ಧ ಕಿಡಿಕಾರುತ್ತಿದ್ದ ಜನಪ್ರಿಯ ಪತ್ರಕರ್ತ ನಾಪತ್ತೆ

|

ಇಸ್ಲಾಮಾಬಾದ್, ಜುಲೈ 21: ಪಾಕಿಸ್ತಾನದ ಜನಪ್ರಿಯ ಪತ್ರಕರ್ತ ಮತಿಯುಲ್ಲಾ ಜಾನ್ ಮಂಗಳವಾರದಂದು ಕಣ್ಮರೆಯಾಗಿದ್ದಾರೆ. ಇಮ್ರಾನ್ ಸರ್ಕಾರ, ಮಿಲಿಟರಿ ವಿರುದ್ಧ ಸತತವಾಗಿ ಕಿಡಿಕಾರುತ್ತಿದ್ದ ಮತಿಯುಲ್ಲಾ ನಾಪತ್ತೆ ಪ್ರಕರಣ ಭಾರಿ ಸಂಚಲನ ಮೂಡಿಸಿದೆ.

ಇಸ್ಲಾಮಾಬಾದಿನ ಸರ್ಕಾರಿ ಶಾಲೆಯೊಂದರ ಹೊರಗಡೆ ಮಂಗಳವಾರ ಸಂಜೆ ಕೊನೆಯ ಬಾರಿ ಕಾಣಿಸಿಕೊಂಡಿದ್ದರು. ಈ ಶಾಲೆಯಲ್ಲಿ ಅವರ ಪತ್ನಿ ಶಿಕ್ಷಕಿಯಾಗಿದ್ದಾರೆ, ಪಾರ್ಕಿಂಗ್ ಸ್ಥಳದಲ್ಲಿ ಅವರ ಕಾರು ಇರುವುದು ಪತ್ತೆಯಾಗಿದೆ ಎಂದು ತನಿಖಾಧಿಕಾರಿ ನುಸ್ರುಲ್ಲಾ ಹೇಳಿದ್ದಾರೆ.

ಮಕ್ಕಳ ಎದುರಲ್ಲೆ ಪತ್ರಕರ್ತನ ತಲೆಗೆ ಗುಂಡಿಕ್ಕಿದ ದುಷ್ಕರ್ಮಿಗಳು

ಜಾನ್ ಅವರ ಪತ್ನಿ ಕನೀಜ್ ಸುಘ್ರಾ(42) ಅವರು ಈ ಬಗ್ಗೆ ಪ್ರತಿಕ್ರಿಯಿಸಿ, ಶಾಲೆ ಮುಚ್ಚಲಾಗಿತ್ತು. ವಿದ್ಯಾರ್ಥಿಗಳಿರಲಿಲ್ಲ, ಪಾರ್ಕಿಂಗ್ ಸ್ಥಳದಲ್ಲಿ ಗಲಾಟೆ ಸದ್ದು ಕೇಳಿಸಿತು ಆಮೇಲೆ ಹೊರಗಡೆ ಬಂದು ನೋಡಿದರೆ ಅವರು ಇರಲಿಲ್ಲ ಎಂದಿದ್ದಾರೆ.

World Press Freedom Index ನಲ್ಲಿ 180 ದೇಶಗಳ ಪೈಕಿ ಪಾಕಿಸ್ತಾನ 145ನೇ ಸ್ಥಾನದಲ್ಲಿದೆ. 1992ರಲ್ಲಿ 61 ಪಾಕಿಸ್ತಾನಿ ಪತ್ರಕರ್ತರನ್ನು ಹತ್ಯೆ ಮಾಡಲಾಗಿತ್ತು.

ವಖ್ತ್ ನ್ಯೂಸ್ ನಿಂದ ರಾಜೀನಾಮೆ ನೀಡಿದ ಬಳಿಕ ಮುತಿಯುಲ್ಲಾ ಅವರು ಇಮ್ರಾನ್ ಖಾನ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಾ ಬಂದಿದ್ದರು. ಮಿಲಿಟರಿ ಕೈಲಿರುವ ಸರ್ಕಾರ ಎಂದು ಗೇಲಿ ಮಾಡಿದ್ದರು. ಯೂಟ್ಯೂಬ್ ನಲ್ಲಿ ಜಾನ್ ಅವರ ವಿಡಿಯೋಗಳು ಹೆಚ್ಚು ಪ್ರಚಾರ ಪಡೆದುಕೊಂಡಿವೆ.

English summary
Senior Pakistani journalist Matiullah Jan was abducted with impunity from G 6, Islamabad.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X