ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಎಸ್‌ಐಎಸ್‌ಗೆ ಸೇರಲು ಅಮೆರಿಕದಿಂದ ಹೊರಟಿದ್ದ ಪಾಕಿಸ್ತಾನಿ ವೈದ್ಯನ ಬಂಧನ

|
Google Oneindia Kannada News

ಇಸ್ಲಾಮಾಬಾದ್, ಮಾರ್ಚ್ 20: ಐಎಸ್‌ಐಎಸ್ ಉಗ್ರ ಸಂಘಟನೆಗೆ ಸೇರಬೇಕು ಎಂದು ಅಮೆರಿಕದಿಂದ ಸಿರಿಯಾಗೆ ಹೊರಟಿದ್ದ ಪಾಕಿಸ್ತಾನಿ ವೈದ್ಯನನ್ನು ಬಂಧಿಸಲಾಗಿದೆ.

ಮೊಹಮ್ಮದ್ ಮಸೂದ್(28) ಬಂಧಿತ ವೈದ್ಯ, ಲಾಸ್ ಏಂಜಲೀಸ್‌ಗೆ ತೆರಳುತ್ತಿದ್ದ ವೈದ್ಯನನ್ನು ಸೇಂಟ್ ಪೌಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೆರೆಹಿಡಿಯಲಾಗಿದೆ.
ಸಿರಿಯಾದಲ್ಲಿರುವ ಐಎಸ್‌ಐಎಸ್ ಸಂಘಟನೆ ಸೇರ ಬಯಸಿದ್ದ ವೈದ್ಯ ಲಾಸ್‌ಏಂಜಲಿಸ್‌ನಲ್ಲಿರುವ ಓರ್ವ ವ್ಯಕ್ತಿಯ ಸಹಾಯದಿಂದ ಕಾರ್ಗೋ ಹಡಗಿನ ಮೂಲಕ ತೆರಳುವವನಿದ್ದ.

ಮೊಹಮದ್ ಮಸೂದ್ ಮೇಲೆ ಸಾಕಷ್ಟು ಪ್ರಕರಣಗಳಿವೆ. ವಿದೇಶಿ ಉಗ್ರ ಸಂಘಟನೆಗಳಿಗೆ ಮೆಟೀರಿಯಲ್‌ಗಳನ್ನು ರವಾನಿಸುತ್ತಿದ್ದ ಎನ್ನುವ ಮಾಹಿತಿ ಲಭ್ಯವಾಗಿದೆ.

Pakistani Doctor Arrested After He Planned To Join ISIS

ಮಾರ್ಚ್ 24ರವರೆಗೆ ಮಸೂದ್‌ನನ್ನು ವಶಕ್ಕೆ ನೀಡಲಾಗಿದೆ. ಜನವರಿ 2020 ಹಾಗೂ ಮಾರ್ಚ್ 2020 ರವರೆಗೆ ಮಸೂದ್ ಹಲವು ಹೇಳಿಕೆಗಳನ್ನು ನೀಡಿದ್ದ. ಕೊರೊನಾ ವೈರಸ್‌ನಿಂದಾಗಿ ಸಿರಿಯಾ ಗಡಿಯಲ್ಲಿ ನಿಷೇಧ ಹೇರಲಾಗಿದೆ. ಹೀಗಾಗಿ ಹಡಗಿನಲ್ಲಿ ತೆರಳಲು ಸಂಚು ರೂಪಿಸಿದ್ದ.

ಎಲ್ಲೆಲ್ಲೂ ಕೊರೊನಾ ಭೀತಿ ಎದುರಾಗಿದ್ದು, ಸಾಕಷ್ಟು ದೇಶಗಳು ರೈಲು, ವಿಮಾನ ಸೇವೆಯನ್ನು ನಿಲ್ಲಿಸಿದೆ.

English summary
Pakistani doctor who expressed his desire to go to syria to fight for dreaded terrorist organization ISIS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X