ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಂದೂ ಬಾಲಕಿಯ ಬಲವಂತದ ಮದುವೆ ರದ್ದುಗೊಳಿಸಿದ ಪಾಕಿಸ್ತಾನ ಕೋರ್ಟ್‌

By Coovercolly Indresh
|
Google Oneindia Kannada News

ಇಸ್ಲಾಮಾಬಾದ್, ಫೆಬ್ರವರಿ 20: ಮತಾಂತರಗೊಂಡು ದೇಶದ ಸಿಂಧ್ ಪ್ರಾಂತ್ಯದ ಮುಸ್ಲಿಂ ವ್ಯಕ್ತಿಯನ್ನು ಮದುವೆಯಾದ ಅಪ್ರಾಪ್ತ ಹಿಂದೂ ಹುಡುಗಿಯ ಮದುವೆಯನ್ನು ಪಾಕಿಸ್ತಾನ ನ್ಯಾಯಾಲಯವು ರದ್ದುಪಡಿಸಿದೆ.

ಒಂಬತ್ತನೇ ತರಗತಿಯಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಯನ್ನು ಕಳೆದ ಜನವರಿ 15ರಂದು ಜಾಕೋಬಾದ್ ಜಿಲ್ಲೆಯಿಂದ ಅಲಿ ರಾಜಾ ಸೋಲಂಗಿ ಎಂಬಾತ ಅಪಹರಿಸಿ, ಬಲವಂತವಾಗಿ ಮದುವೆಯಾಗಿದ್ದಾನೆ ಎಂದು ಆಕೆಯ ತಂದೆ ಎಫ್‌ಐಆರ್ ದಾಖಲಿಸಿದ್ದರು. ಅಪಹರಣಕ್ಕೊಳಗಾದಾಗ ಮಗಳಿಗೆ 15 ವರ್ಷ ವಯಸ್ಸಾಗಿತ್ತು ಎಂದು ಅವರು ಹೇಳಿದರು. ಈ ಪ್ರಕರಣದ ವಿಚಾರಣೆ ನಡೆಸಿದ ಹೆಚ್ಚುವರಿ ಸೆಷನ್ ನ್ಯಾಯಾಧೀಶ ಗುಲಾಮ್ ಅಲಿ ಖಸ್ರೊ ಅವರು ತೀರ್ಪು ನೀಡಿ, ಈಕೆ ಅಪ್ರಾಪ್ತೆ ಆಗಿರುವುದರಿಂದ ವಿವಾಹವು ಸಿಂಧುವಲ್ಲ ಎಂದು ಹೇಳಿದ್ದಾರೆ. ಸೋಲಂಗಿಯನ್ನು ಮದುವೆಯಾಗಲು ಈಕೆ ಇಸ್ಲಾಂಗೆ ಮತಾಂತರವಾಗಿ ಅಲಿಜ ಎಂದು ಹೆಸರನ್ನಿಟ್ಟುಕೊಂಡಿದ್ದಳು ಎಂದು ಹೇಳಲಾಗಿತ್ತು.

ಪಾಕ್‌ನಲ್ಲಿ ಹುಡುಗಿ ಋತುಮತಿಯಾದರೆ ಏನು ಬೇಕಾದರೂ ಮಾಡಬಹುದಂತೆ..!ಪಾಕ್‌ನಲ್ಲಿ ಹುಡುಗಿ ಋತುಮತಿಯಾದರೆ ಏನು ಬೇಕಾದರೂ ಮಾಡಬಹುದಂತೆ..!

ಅಪಹರಣಕಾರ ಸೋಲಂಗಿ ಅಪ್ರಾಪ್ತೆಯು ಸ್ವ ಇಚ್ಛೆಯಿಂದ ಇಸ್ಲಾಂ ಧರ್ಮವನ್ನು ಸ್ವೀಕರಿಸಿರುವುದಾಗಿ ವಾದಿಸಿದ್ದ. ಸಾಕ್ಷಿ ಮತ್ತು ದಾಖಲೆಗಳನ್ನು ಉಲ್ಲೇಖಿಸಿ ನ್ಯಾಯಾಧೀಶರು, ಬಾಲಕಿ ಅಪ್ರಾಪ್ತ ವಯಸ್ಸಿನವಳಾಗಿದ್ದು ಮತ್ತು ಸಿಂಧ್ ಬಾಲ್ಯ ವಿವಾಹ ನಿರ್ಬಂಧ ಕಾಯ್ದೆಯ ಸೆಕ್ಷನ್ 3 ಮತ್ತು 4 ರ ಪ್ರಕಾರ ಮದುವೆಗೆ ಸೂಕ್ತವಲ್ಲ ಎಂದು ತೀರ್ಪು ನೀಡಿದರು.

Pakistani Court Cancels Forced Marriage Of Hindu Girl

ಬಾಲ್ಯ ವಿವಾಹವನ್ನು ನಡೆಸಲು ಮತ್ತು ಸಹಾಯ ಮಾಡಲು ಮುಂದಾದ ಎಲ್ಲರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅವರು ಲರ್ಕಾನಾದ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಲಾರ್ಕಾನಾದ ಮಹಿಳಾ ಆಶ್ರಯ ಮನೆಯಿಂದ ಬಾಲಕಿಯನ್ನು ನ್ಯಾಯಾಲಯಕ್ಕೆ ಕರೆತರಲಾಗಿತ್ತು.
ಸ್ಥಳೀಯ ಹಿಂದೂ ಮತ್ತು ಮುಸ್ಲಿಂ ಮುಖಂಡರು ಪಟ್ಟಣದಲ್ಲಿ ಜಮಾವಣೆಗೊಂಡಿದ್ದುದರಿಂದ ವಿಚಾರಣೆ ನ್ಯಾಯಾಲಯದಲ್ಲಿ ಮತ್ತು ಸುತ್ತಮುತ್ತ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು.

ಗುಂಡ್ಲುಪೇಟೆಯಲ್ಲಿ ಮದುವೆ ಹಿಂದಿನ ದಿನ ನಸುಕಿನಲ್ಲಿ ಪರಾರಿಯಾದ ವಧುಗುಂಡ್ಲುಪೇಟೆಯಲ್ಲಿ ಮದುವೆ ಹಿಂದಿನ ದಿನ ನಸುಕಿನಲ್ಲಿ ಪರಾರಿಯಾದ ವಧು

ಹಿಂದೂಗಳು ಪಾಕಿಸ್ತಾನದ ಅತಿದೊಡ್ಡ ಅಲ್ಪಸಂಖ್ಯಾತ ಸಮುದಾಯ: ಪಾಕಿಸ್ತಾನದ ಹಿಂದೂಗಳು ಬಹುಪಾಲು ವಾಸಿಸುವ ಸಿಂಧ್ ಪ್ರಾಂತ್ಯದಲ್ಲಿ ಹಿಂದೂ ಮಹಿಳೆಯರ ಅಪಹರಣ ಮತ್ತು ಮತಾಂತರ ಪ್ರಮುಖ ವಿಷಯವಾಗಿದೆ. ಪ್ರತೀ ವರ್ಷವೂ ಸಾವಿರಾರು ಹಿಂದೂ ಹಾಗೂ ಕ್ರಿಶ್ಚಿಯನ್‌ ಹೆಣ್ಣು ಮಕ್ಕಳನ್ನು ಅಪಹರಿಸಿ ಬಲವಂತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಿಸಿ ಮುಸ್ಲಿಂ ಯುವಕರ ಜತೆಗೆ ಮದುವೆ ಮಾಡಿಸಲಾಗುತ್ತಿದೆ. ಕಳೆದ ತಿಂಗಳಷ್ಟೆ 9ನೇ ತರಗತಿ ಓದುತ್ತಿದ್ದ ಕ್ರಿಶ್ಚಿಯನ್‌ ಬಾಲಕಿಯ ಅಪಹರಣ ಹಾಗೂ ಬಲವಂತದ ಮದುವೆ ಕುರಿತು ತೀರ್ಪು ನೀಡಿದ್ದ ಪಾಕಿಸ್ಥಾನದ ಹೈಕೋರ್ಟ್‌ ಷರಿಯ ಕಾನೂನಿನ ಪ್ರಕಾರ ಮೈ ನೆರೆದ ಯುವತಿಯರು ಮದುವೆ ಹಾಗೂ ಮತಾಂತರಕ್ಕೆ ಅರ್ಹರು ಎಂದು ತೀರ್ಪು ನೀಡಿತ್ತು. ಈ ತೀರ್ಪಿನ ವಿರುದ್ಧ ಮಾನವ ಹಕ್ಕು ಸಂಘಟನೆಗಳು ಪ್ರತಿಭಟನೆ ವ್ಯಕ್ತಪಡಿಸಿದ್ದವು.

English summary
A Pakistani court has canceled the marriage of a minor Hindu girl who converted and married a Muslim man in the country's Sindh province,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X