ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕ್‌ನಲ್ಲಿ ಆತ್ಮಾಹುತಿ ದಾಳಿಗೆ ಮಕ್ಕಳ ಬಳಕೆ: ವಿಶ್ವಸಂಸ್ಥೆ

|
Google Oneindia Kannada News

ವಿಶ್ವಸಂಸ್ಥೆ, ಜೂನ್ 28: ಆತ್ಮಾಹುತಿ ಬಾಂಬ್ ದಾಳಿಗಳನ್ನು ನಡೆಸಲು ಪಾಕಿಸ್ತಾನದ ಸಶಸ್ತ್ರ ಗುಂಪುಗಳು ಮಕ್ಕಳನ್ನು ನೇಮಕಾತಿ ಮಾಡಿಕೊಳ್ಳುವುದನ್ನು ಮುಂದುವರಿಸಿವೆ ಎಂದು ವಿಶ್ವಸಂಸ್ಥೆ ವರದಿ ತಿಳಿಸಿದೆ.

ಮಕ್ಕಳು ಮತ್ತು ಶಸ್ತ್ರ ಸಂಘರ್ಷದ ಕುರಿತ ವಿಶ್ವಸಂಸ್ಥೆಯ ವಾರ್ಷಿಕ ವರದಿಯಲ್ಲಿ, ಪಾಕಿಸ್ತಾನದ ಭಯೋತ್ಪಾದನಾ ಸಂಘಟನೆಗಳು ಆತ್ಮಾಹುತಿ ದಾಳಿಗಳನ್ನು ಹೇಗೆ ನಡೆಸಬೇಕು ಎಂಬ ಬಗ್ಗೆ ಮಕ್ಕಳಿಗೆ ತರಬೇತಿ ನೀಡುವ ವಿಡಿಯೋಗಳನ್ನು ಬಿಡುಗಡೆ ಮಾಡಿವೆ ಎಂದು ತಿಳಿಸಲಾಗಿದೆ.

ಜುಲೈ 16ರಂದು ಬಹುನಿರೀಕ್ಷಿತ ಪುಟಿನ್-ಟ್ರಂಪ್ ಭೇಟಿಜುಲೈ 16ರಂದು ಬಹುನಿರೀಕ್ಷಿತ ಪುಟಿನ್-ಟ್ರಂಪ್ ಭೇಟಿ

ಮದರಸಾಗಳು ಸೇರಿದಂತೆ ವಿವಿಧೆಡೆಯ ಮಕ್ಕಳನ್ನು ಉಗ್ರರ ಗುಂಪುಗಳು ಆತ್ಮಾಹುತಿ ದಾಳಿ ನಡೆಸಲು ನೇಮಕಾತಿ ಮಾಡಿಕೊಳ್ಳುತ್ತಿವೆ ಎಂದು ವರದಿ ತಿಳಿಸಿದೆ.

pakistani children recruited to carry suicide attacks

ಜನವರಿಯಲ್ಲಿ ತೆಹ್ರೀಕ್ ತಾಲಿಬಾನ್ ಪಾಕಿಸ್ತಾನ ಸಂಘಟನೆಯು ಬಿಡುಗಡೆ ಮಾಡಿದ ವಿಡಿಯೋದಲ್ಲಿ ಬಾಲಕಿಯರು ಸೇರಿದಂತೆ ಮಕ್ಕಳಿಗೆ ಆತ್ಮಾಹುತಿ ದಾಳಿಗಳನ್ನು ನಡೆಸುವ ಕುರಿತು ಸಲಹೆಗಳನ್ನು ನೀಡುವುದು ಕಂಡುಬಂದಿದೆ.

ಶಾಲೆಗಳ ಮೇಲೆ, ಮುಖ್ಯವಾಗಿ ಹೆಣ್ಣುಮಕ್ಕಳ ಶಿಕ್ಷಣ ಸಂಸ್ಥೆಗಳನ್ನು ಗುರಿಯಾಗಿರಿಸಿಕೊಂಡು ದಾಳಿಗಳು ನಡೆಯುತ್ತಿರುವುದರ ಕುರಿತು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟರೆಸ್ ಕಳವಳ ವ್ಯಕ್ತಪಡಿಸಿದ್ದಾರೆ.

ಭವಿಷ್ಯದಲ್ಲಿ ಶಾಲೆಗಳ ಮೇಲೆ ದಾಳಿಗಳು ನಡೆಯದಂತೆ ತಡೆಯಲು ಪಾಕಿಸ್ತಾನ ಸರ್ಕಾರ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಅದು ಹೇಳಿದೆ.

English summary
A UN report released on Thursday said the armed groups in Pakistan continue to recruit children for suicide attacks.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X