ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪರ್ಸ್ ಎಗರಿಸಿ ಸಿಕ್ಕಿಬಿದ್ದ ಪಾಕ್ ಆಡಳಿತ ಸೇವೆ ಅಧಿಕಾರಿ, ಶೇಮ್ ಶೇಮ್

|
Google Oneindia Kannada News

ಇಸ್ಲಾಮ್ ಬಾದ್ ನಲ್ಲಿ ಪಾಕಿಸ್ತಾನದ ಹಿರಿಯ ಅಧಿಕಾರಿಯೊಬ್ಬರು ಕುವೈತ್ ನ ನಿಯೋಗದ ಸದಸ್ಯರೊಬ್ಬರ ಪರ್ಸ್ ಕದಿಯುವ ದೃಶ್ಯ ಕ್ಯಾಮೆರಾದಲ್ಲಿ ಈಚೆಗೆ ಸೆರೆಯಾಗಿದೆ ಎಂದು ಪಾಕ್ ಮಾಧ್ಯಮಗಳು ವರದಿ ಮಾಡಿವೆ.

ಡಾನ್ ಪತ್ರಿಕೆಯ ಪ್ರಕಾರ, ಆರ್ಥಿಕ ಸಚಿವಾಲಯದಲ್ಲಿ ನಿಯೋಜಿತರಾಗಿರುವ ಪಾಕಿಸ್ತಾನ ಆಡಳಿತ ಸೇವೆ ವಿಭಾಗದ ಗ್ರೇಡ್- 20 ಅಧಿಕಾರಿಯಿಂದ ಈ ಕೃತ್ಯ ನಡೆದಿದೆ. ಪಾಕಿಸ್ತಾನ- ಕುವೈತ್ ಜಂಟಿ ಸಚಿವರ ನಿಯೋಗದ ಎರಡು ದಿನದ ಸಭೆಯಲ್ಲಿ ಭಾಗವಹಿಸಿದ್ದ ಝರಾರ್ ಹೈದರ್ ಖಾನ್ ಪರ್ಸ್ ಕದ್ದ ಅಧಿಕಾರಿ.

ನಿಯಮ ಉಲ್ಲಂಘಿಸಿದ ಪಾಕ್ ಹೆಲಿಕಾಪ್ಟರ್ ಭಾರತದ ಗಡಿಯಲ್ಲಿ ಹಾರಾಟನಿಯಮ ಉಲ್ಲಂಘಿಸಿದ ಪಾಕ್ ಹೆಲಿಕಾಪ್ಟರ್ ಭಾರತದ ಗಡಿಯಲ್ಲಿ ಹಾರಾಟ

ಸಿಸಿಟಿವಿ ವಿಡಿಯೋ ದೃಶ್ಯಗಳು ಈಗ ವೈರಲ್ ಆಗಿವೆ. ಆರ್ಥಿಕ ವ್ಯವಹಾರಗಳ ವಿಭಾಗದಿಂದ ಸಭೆ ನಡೆದ ಸಭಾಂಗಣ ತೆರವಾಗಿದೆ. ಕುವೈತ್ ನಿಯೋಗದ ಸದಸ್ಯರು ಅಲ್ಲಿಂದ ಹೊರಟಿದ್ದಾರೆ. ಆ ವೇಳೆ ಅಧಿಕಾರಿ ಝರಾರ್ ಹೈದರ್ ಖಾನ್ ಟೇಬಲ್ ನಲ್ಲಿದ್ದ ಪರ್ಸ್ ಅನ್ನು ಎತ್ತಿಟ್ಟುಕೊಂಡಿರುವುದು ಕಂಡುಬಂದಿದೆ.

Pakistani administrative service official caught stealing Kuwaiti delegate’s wallet on CCTV

ಕುವೈತ್ ಅಧಿಕಾರಿಗಳು ದೂರು ನೀಡಿದ ನಂತರ ಸಮಗ್ರವಾಗಿ ತನಿಖೆ ನಡೆದಿದೆ. ಉದ್ಯೋಗಿಗಳನ್ನು ಪ್ರಶ್ನೆ ಮಾಡಲಾಗಿದೆ. ಕೊನೆಗೆ ಒಬ್ಬೊಬ್ಬರನ್ನು ಪರಿಶೀಲಿಸಲಾಗಿದೆ. ಕೊನೆಗೆ ಸಿಸಿಟಿವಿ ಫೂಟೇಜ್ ಪರಿಶೀಲಿಸಿದಾಗ ಝರಾರ್ ಖಾನ್ ಪರ್ಸ್ ಎತ್ತಿಕೊಂಡಿರುವುದು ಕಂಡುಬಂದಿದೆ. ಈ ಬಗ್ಗೆ ಪೊಲೀಸರಲ್ಲಿ ಯಾವುದೇ ದೂರು ದಾಖಲಾಗಿಲ್ಲ.

ಸಿಸಿಟಿವಿ ಕ್ಯಾಮೆರಾದ ಕಣ್ಣಿಗೆ ಬಿದ್ದ ಕಳ್ಳ ಮಾಡಿದ್ದೇನು?: ತಮಾಷೆಯ ವಿಡಿಯೋಸಿಸಿಟಿವಿ ಕ್ಯಾಮೆರಾದ ಕಣ್ಣಿಗೆ ಬಿದ್ದ ಕಳ್ಳ ಮಾಡಿದ್ದೇನು?: ತಮಾಷೆಯ ವಿಡಿಯೋ

ಅಧಿಕಾರಿ ವಿರುದ್ಧ ಆಂತರಿಕ ನಡೆಸಿ, ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವಾಲಯ ತಿಳಿಸಿದೆ. ಮೊದಲಿಗೆ ಪಾಕ್ ಅಧಿಕಾರಿಯ ಮಾಹಿತಿಯನ್ನು ಕುವೈತ್ ನಿಯೋಗಕ್ಕೆ ಬಿಟ್ಟುಕೊಟ್ಟಿಲ್ಲ. ಆದರೆ ನಂತರ ಸಿಸಿಟಿವಿ ಫೂಟೇಜ್ ಸಹಿತ ತಿಳಿಸಲಾಗಿದೆ.

English summary
A senior Pakistani bureaucrat was caught on camera stealing a wallet belonging to a member of a Kuwaiti delegation in Islamabad recently, Pakistan media reported.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X