ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಡೋದೆಲ್ಲ ಮಾಡಿ ವಿಶ್ವಸಂಸ್ಥೆ ಮುಂದೆ ಗೊಳೋ ಎಂದು ಅತ್ತ ಪಾಕ್!

|
Google Oneindia Kannada News

ಇಸ್ಲಾಮಾಬಾದ್, ಫೆಬ್ರವರಿ 19: ಮಾಡೋದೆಲ್ಲ ಮಾಡಿ ತಾನು ಅಮಾಯಕ ಎಂಬಂತೆ ವಿಶ್ವಸಂಸ್ಥೆ ಮುಂದೆ ಪಾಕಿಸ್ತಾನ ಕೈಕಟ್ಟಿ ನಿಂತಿದೆ.

ಹೌದು, ಪುಲ್ವಾಮಾ ದಾಳಿಯ ನಂತರ ಭಾರತ-ಪಾಕಿಸ್ತಾನದ ನಡುವೆ ಯುದ್ಧ ಏರ್ಪಡುವಂಥ ಸನ್ನಿವೇಶ ನಿರ್ಮಾಣವಾದ ನಂತರ ಪಾಕ್ ವಿದೇಶಾಂಗ ಸಚಿವ ಶಾ ಮಹಮ್ಮೂದ್ ಖುರೇಷಿ, ವಿಶ್ವಸಂಸ್ಥೆಗೆ ಪತ್ರ ಬರೆದಿದ್ದಾರೆ.

ನಾವೇ ದಾಳಿ ಮಾಡಿದ್ದು ಅನ್ನೋದಕ್ಕೆ ಸಾಕ್ಷ್ಯ ಕೊಡಿ ಎಂದ ಪಾಕ್!ನಾವೇ ದಾಳಿ ಮಾಡಿದ್ದು ಅನ್ನೋದಕ್ಕೆ ಸಾಕ್ಷ್ಯ ಕೊಡಿ ಎಂದ ಪಾಕ್!

"ಭಾರತವು ಪಾಕಿಸ್ತಾನದ ವಿರುದ್ಧ ತನ್ನ ಸೇನಾ ಶಕ್ತಿಯನ್ನು ಪ್ರಯೋಗಿಸುವ ಲಕ್ಷಣಗಳು ಎದ್ದು ಕಾಣುತ್ತಿವೆ. ಈ ಬಗ್ಗೆ ನಿಮ್ಮ ಗಮನ ಸೆಳೆಯಲು ಪತ್ರ ಬರೆಯುತ್ತಿದ್ದೇನೆ. ಈಗಾಗಲೇ ಗಡಿಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಈ ವಿಷಯವನ್ನು ತುರ್ತಾಗಿ ಗಮನಿಸಬೇಕು" ಎಂದು ಪಾಕ್ ಪತ್ರ ಬರೆದಿದೆ.

Pakistan writes letter to UN and complains against India

'ನಾವೇ ದಾಳಿ ಮಾಡಿದ್ದು ಎಂಬುದಕ್ಕೆ ಸಾಕ್ಷ್ಯಾಧಾರ ನೀಡಿ' ಎಂದು ಉದ್ಧಟತನದ ಹೇಳಿಕೆಯನ್ನು ಈಗಾಗಲೇ ಪಾಕ್ ಪ್ರಧಾನಿ ಇಮ್ರಾನ್ ಖಾಲ್ ನೀಡಿದ್ದರೂ, 'ಯುದ್ಧಕ್ಕೆ ನಾವು ಸಿದ್ಧ' ಎಂದು ಉತ್ತರನ ಪೌರಷ ತೋರಿದ್ದರೂ ಭಾರತವೇನಾದರೂ ಪಾಕ್ ಮೇಲೆ ಯುದ್ಧ ಸಾರಿದರೆ ಪಾಕ್ ಉಳಿಯುವುದು ಸುಲಭವಲ್ಲ ಎಂಬುದು ಗೊತ್ತಿರುವುದರಿಂದಲೇ ಇದೀಗ ವಿಶ್ವಸಂಸ್ಥೆ ಮುಂದೆ ಗೋಳೋ ಎಂದು ಅಳುತ್ತಿದೆ ಪಾಕ್.

ಪುಲ್ವಾಮಾ ದಾಳಿ ಬಳಿಕ Paytm ಗೂ ಶುರುವಾಯ್ತು ಸಂಕಷ್ಟಪುಲ್ವಾಮಾ ದಾಳಿ ಬಳಿಕ Paytm ಗೂ ಶುರುವಾಯ್ತು ಸಂಕಷ್ಟ

ಫೆಬ್ರವರಿ 14 ರಂದು ಪುಲ್ವಾಮಾದಲ್ಲಿ ನಡೆದ ಆತ್ಮಾಹುತಿ ಕಾರ್ ಬಾಂಬ್ ದಾಳಿಯಲ್ಲಿ ಭಾರತದ 44 ಯೋಧರು ಹುತಾತ್ಮರಾಗಿದ್ದರು. ಈ ದಾಳಿಗೆ ಪಾಕ್ ಮೂಲದ ಜೈಷ್ ಇ ಮೊಹಮ್ಮದ್ ಸಂಘಟನೆಯೇ ಕಾರಣ ಎಂಬುದು ದೃಢವಾಗಿತ್ತು.

English summary
Pakistan Foreign Min Shah Mahmood Qureshi in letter addressed to UN Secretary-General: It is with a sense of urgency that I draw your attention to the deteriorating security situation in our region resulting from the threat of use of force against Pakistan by India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X