ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೂದು ಪಟ್ಟಿಯಲ್ಲೇ ಉಳಿದ ಪಾಕಿಸ್ತಾನ, ಟರ್ಕಿ ಬೆಂಬಲ ವ್ಯರ್ಥ

|
Google Oneindia Kannada News

ಗ್ಲೋಬಲ್ ವಾಚ್‌ ಡಾಗ್ ಸಿದ್ಧ ಪಡಿಸಿರುವ ಹಣಕಾಸು ಕ್ರಿಯಾ ಯೋಜನೆಯ(ಎಫ್‌ಎಟಿಎಫ್‌) 27 ಅಂಶಗಳಲ್ಲಿ ಆರು ಅಂಶಗಳನ್ನು ಅನುಸರಿಸುವಲ್ಲಿ ವಿಫಲವಾದ ಹಿನ್ನಲೆಯಲ್ಲಿ ಪಾಕಿಸ್ತಾನ ಬೂದು ಪಟ್ಟಿಯಲ್ಲೇ ಉಳಿದಿದೆ ಎಂದು ಶುಕ್ರವಾರ ಅಧಿಕೃತವಾಗಿ ಪ್ರಕಟಿಸಲಾಗಿದೆ.

ಮೊಟ್ಟ ಮೊದಲ ವರ್ಚುಯಲ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಧ್ಯಕ್ಷ ಮಾರ್ಕಸ್ ಪ್ಲೇಯರ್, ಪಾಕಿಸ್ತಾನವು 27 ಅಂಶಗಳ ಪೈಕಿ 21ಪೂರ್ಣಗೊಳಿಸಿದ್ದು 6 ಅಂಶಗಳ ಬಗ್ಗೆ ಕೈಗೊಂಡ ಕ್ರಮಗಳು ಪರಿಣಾಮಕಾರಿಯಾಗಿಲ್ಲ ಎಂದರು. ಪಾಕಿಸ್ತಾನದ ನಡೆ ಬಗ್ಗೆ ಇನ್ನೊಮ್ಮೆ ಯೋಚಿಸುವಂತೆ ಟರ್ಕಿ ಎಫ್ಎಟಿಎಫ್ ಸಭೆಯಲ್ಲಿ ಪ್ರತಿಪಾದಿಸಿ, ಪಾಕಿಸ್ತಾನಕ್ಕೆ ಬೆಂಬಲಿಸಿದ್ದು, ವ್ಯರ್ಥವಾಯಿತು. ಚೀನಾ, ಮಲೇಷಿಯಾ, ಸೌದಿ ಅರೇಬಿಯಾ ಸೇರಿದಂತೆ ಸದಸ್ಯ ರಾಷ್ಟ್ರಗಳ ಪೈಕಿ 38 ಸದಸ್ಯರಲ್ಲಿ ಯಾರಿಗೂ ಟರ್ಕಿ ಪ್ರಸ್ತಾವನೆ ಒಪ್ಪಿಗೆಯಾಗಲಿಲ್ಲ. ಮುಂದಿನ ಸಭೆಯನ್ನು ಫೆಬ್ರವರಿ 2021ರಂದು ನಡೆಸಲು ನಿರ್ಣಯಿಸಲಾಯಿತು.

ಯುಕೆಯಲ್ಲಿ 3 ತಿಂಗಳಲ್ಲಿ ಎಲ್ಲರಿಗೂ ಕೊರೊನಾ ಲಸಿಕೆ ಯುಕೆಯಲ್ಲಿ 3 ತಿಂಗಳಲ್ಲಿ ಎಲ್ಲರಿಗೂ ಕೊರೊನಾ ಲಸಿಕೆ

ಎಫ್‌ಎಟಿಎಫ್‌ ಪಾಕಿಸ್ತಾನವನ್ನು ಜೂನ್ 2018ರಲ್ಲಿ ಬೂದು ಪಟ್ಟಿಗೆ ಸೇರಿಸಿತ್ತು. 2019ರೊಳಗೆ ಭಯೋತ್ಪಾದಕರಿಗೆ ಹಣಕಾಸು ನೆರವು ನೀಡುವುದು ಮತ್ತು ಅಕ್ರಮ ಹಣ ವರ್ಗಾವಣೆಯನ್ನು ನಿಯಂತ್ರಿಸುವಂತೆ ಸೂಚಿಸಿತ್ತು.

Pakistan will remain on the Financial Action Task Force (FATF) grey list.

ಆದರೆ, ಕೋವಿಡ್‌ 19 ಸಾಂಕ್ರಾಮಿಕ ರೋಗದ ಕಾರಣದಿಂದ ಪಾಕಿಸ್ತಾನಕ್ಕೆ ನೀಡಿದ್ದ ಗಡುವನ್ನು ವಿಸ್ತರಿಸಿತ್ತು. ಮುಂದಿನ ವರ್ಷದ ಜೂನ್ ವೇಳೆಗೆ ಎಫ್‌ಎಟಿಎಫ್‌ನ (FATF) ಗ್ರೇ ಪಟ್ಟಿಯಿಂದ ನಿರ್ಗಮಿಸುವಲ್ಲಿ ಪಾಕಿಸ್ತಾನ ಯಶಸ್ವಿಯಾಗಲಿದೆ ಎಂದು ಪಾಕಿಸ್ತಾನದ ರಾಜತಾಂತ್ರಿಕ ಕಚೇರಿಯ ಮೂಲಗಳನ್ನು ಉಲ್ಲೇಖಿಸಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿತ್ತು.

ಅಂತಾರಾಷ್ಟ್ರೀಯ ಹಣಕಾಸು ಕ್ರಿಯಾ ಕಾರ್ಯಪಡೆ ಸಿದ್ಧ ಪಡಿಸಿರುವ 27 ಅಂಶಗಳಲ್ಲಿ ಆರು ಅಂಶಗಳನ್ನು ಅನುಸರಿಸುವಲ್ಲಿ ವಿಫಲವಾದ ಹಿನ್ನಲೆಯಲ್ಲಿ ಪಾಕಿಸ್ತಾನ ಫತ್ಫ್ ನ ಗ್ರೇ ಪಟ್ಟಿಯಲ್ಲೇ ಉಳಿಯಲಿದೆ.

ಪಾಕಿಸ್ತಾನ: ಮುಂದುವರಿದ ಸೇನೆ-ಪೊಲೀಸ್ ಸಂಘರ್ಷಪಾಕಿಸ್ತಾನ: ಮುಂದುವರಿದ ಸೇನೆ-ಪೊಲೀಸ್ ಸಂಘರ್ಷ

ಅ.23ರವರೆಗೆ 'ಭಯೋತ್ಪಾದಕರಿಗೆ ಹಣಕಾಸು ನೆರವು ನೀಡುವುದು ಮತ್ತು ಅಕ್ರಮ ಹಣ ವರ್ಗಾವಣೆ' ಕುರಿತು ಪ್ಯಾರಿಸ್‌ ಮೂಲದ ಗ್ಲೋಬಲ್ ವಾಚ್‌ಡಾಗ್‌ ಸಂಸ್ಥೆ ಆಯೋಜಿಸಿರುವ ವರ್ಚುವಲ್ ಪ್ಲೀನರಿ ಅಧಿವೇಶದಲ್ಲಿ, ಈ 27 ಅಂಶಗಳ ಕ್ರಿಯಾ ಯೋಜನೆಯಲ್ಲಿ ಪಾಕಿಸ್ತಾನ ಯಾವ ಸ್ಥಾನದಲ್ಲಿದೆ ಎಂದು ಪ್ರಗತಿ ಪರಿಶೀಲಿಸಲಾಗುತ್ತದೆ.

Recommended Video

Grama Panchayat ಚುನಾವಣೆಗೆ Green ಸಿಗ್ನಲ್!! | Oneindia Kannada

ಬೂದು ಪಟ್ಟಿಯಿಂದ ಹೊರಬರಲು ಪಾಕಿಸ್ತಾನಕ್ಕೆ ನಿಷೇಧಿತ 88 ಭಯೋತ್ಪಾದಕ ಗುಂಪುಗಳು ಮತ್ತು ಅವರ ನಾಯಕರ ಮೇಲೆ ಆರ್ಥಿಕ ನಿರ್ಬಂಧಗಳನ್ನು ವಿಧಿಸಲು ಸೂಚಿಸಲಾಗಿತ್ತು. ಆದರೆ, ಮೂಲ ಪಟ್ಟಿಯಲ್ಲಿದ್ದ 7,600 ಭಯೋತ್ಪಾದಕರ ಹೆಸರಿನ ಪೈಕಿ 4,000 ಹೆಸರು ಮಾಯವಾಗಿತ್ತು. ಈ ಪಟ್ಟಿಯಲ್ಲಿ ದಾವೂದ್ ಇಬ್ರಾಹಿಂ, ಮೌಲಾನಾ ಮಸೂದ್ ಅಜರ್, ಹಫೀಜ್ ಸಯೀದ್ ಹಾಗೂ ಝಾಕೀರ್ ಉರ್ ರೆಹಮಾನ್ ಲಖ್ವಿ ಹೆಸರನ್ನು ಸೇರಿಸಿರಲಿಲ್ಲ.

English summary
The Financial Action Task Force (FATF), the world’s top anti-terrorism monitoring group, on Friday voted to keep Pakistan on a grey list for failing to comply with six out of the 27-point action plan handed to it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X