• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಇದಕ್ಕೆ ಹೇಳೋದು ಅಮೆರಿಕದ ಮಾತು ನಂಬೋದು ಕಷ್ಟ..ಕಷ್ಟ. ಅಂತಾ!

|
Google Oneindia Kannada News

ಅಮೆರಿಕ ತನ್ನ ಸ್ವಾರ್ಥಕ್ಕೆ ಯಾರನ್ನು ಬೇಕಾದ್ರೂ ಬಳಸಿಕೊಳ್ಳುತ್ತದೆ, ಯಾರಿಗೆ ಬೇಕಾದರೂ ದೋಖ ಮಾಡುತ್ತೆ ಅನ್ನೋ ಆರೋಪಗಳಿವೆ. ಹಾಗೇ ಈ ಆರೋಪಗಳಿಗೆ ತಕ್ಕಂತೆ ಅಮೆರಿಕ ಕೂಡ ನಡೆದುಕೊಳ್ಳುತ್ತಿದೆ. ಪಾಕಿಸ್ತಾನ ವಿಚಾರದಲ್ಲೂ ಅಮೆರಿಕ ಇಂತಹದ್ದೇ ನಿಲುವು ತಳೆದಿದೆ. ಸರಿಯಾಗಿ 1 ದಶಕದ ಹಿಂದೆ, ಅಂದ್ರೆ 2011ರ ಬಳಿಕ ಪಾಕಿಸ್ತಾನದ ಜೊತೆ ಅಮೆರಿಕ ಮುನಿಸಿಕೊಂಡಿತ್ತು. ನಟೋರಿಯಸ್ ಉಗ್ರ ಒಸಮಾ ಬಿನ್ ಲಾಡೆನ್ ಹತ್ಯೆಯ ಬಳಿಕ ಪಾಕಿಸ್ತಾನ ಮತ್ತು ಅಮೆರಿಕದ ಸಂಬಂಧ ಹಳಸಿತ್ತು.

ಆದ್ರೆ ಕಳೆದ 10 ವರ್ಷಗಳಿಂದಲೂ ಪಾಕ್‌ ವಿರುದ್ಧ ಕೆಂಡಕಾರುತ್ತಿದ್ದ ಅಮೆರಿಕ ಈಗ ದೋಸ್ತಿಗೆ ಮುಂದಾಗಿದೆ. ಇದಕ್ಕೆಲ್ಲಾ ಪ್ರಮುಖ ಕಾರಣ ತಾಲಿಬಾನ್ ಉಗ್ರರು. ಹೌದು, ಅಮೆರಿಕ ಸೇನೆ ಅಫ್ಘಾನಿಸ್ತಾನ ಬಿಟ್ಟು ಹೊರಬಂದಿದೆ. ಹೀಗೆ ಅಮೆರಿಕ ಹೊರ ಹೋಗುತ್ತಿದ್ದಂತೆ ಉಗ್ರರ ಗ್ಯಾಂಗ್ ಅಫ್ಘಾನಿಸ್ತಾನದ ಮೇಲೆ ನಿಯಂತ್ರಣ ಸಾಧಿಸುತ್ತಿದೆ. ಈ ಹೊತ್ತಲ್ಲಿ ಅಫ್ಘಾನ್ ಪಕ್ಕದಲ್ಲಿ ಕಾವಲಿಗೆ ಒಬ್ಬ ಮಿತ್ರ ಬೇಕು ಎಂಬ ನೆಪದಲ್ಲಿ ಅಮೆರಿಕ ಪಾಕಿಸ್ತಾನ ಜೊತೆ ಮಾತುಕತೆಗೆ ಮುಂದಾಗಿದೆ.

ಇದೇ ಸಮಯಕ್ಕಾಗಿ ಕಾದು ಕುಳಿತಿದ್ದ ಪಾಕಿಸ್ತಾನ, ಅಮೆರಿಕದ ಜೊತೆ ಮಾತುಕತೆಗೆ ಮುಂದಾಗಿದೆ. ಪಾಕಿಸ್ತಾನ ರಾಷ್ಟ್ರೀಯ ಭದ್ರತಾ ಸಲಹೆಗಾರ ಮೊಯೀದ್ ಯೂಸುಫ್, ವಾಶಿಂಗ್ಟನ್‌ಗೆ ಭೇಟಿನೀಡಿ ಮಾತುಕತೆ ನಡೆಸಿದ್ದಾರೆ. ಜೇಕ್ ಸಲಿವನ್ ಜೊತೆ ಸುಧೀರ್ಘ ಚರ್ಚೆ ನಡೆಸಿರುವ ಮೊಯೀದ್ ಯೂಸುಫ್, ತಾಲಿಬಾನ್ ಉಗ್ರರು ಹಾಗೂ ಅಫ್ಘಾನ್‌ನ ಪರಿಸ್ಥಿತಿಯೂ ಸೇರಿದಂತೆ ಹಲವು ವಿಚಾರಗಳನ್ನ ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ.

‘ಜಿನೀವಾ’ದಲ್ಲೂ ಮಾತುಕತೆ ನಡೆದಿತ್ತು

‘ಜಿನೀವಾ’ದಲ್ಲೂ ಮಾತುಕತೆ ನಡೆದಿತ್ತು

ಅಮೆರಿಕ ಏಕಾಏಕಿ ಪಾಕ್ ಜೊತೆ ಸಂಪರ್ಕ ಸಾಧಿಸುತ್ತಿಲ್ಲ, ಯಾವಾಗ ಅಮೆರಿಕ ಅಫ್ಘಾನಿಸ್ತಾನ ಬಿಟ್ಟು ಹೊರಗೆ ಬರುವುದು ಪಕ್ಕಾ ಆಗಿತ್ತೋ ಅಂದಿನಿಂದಲೇ ದೋಸ್ತಿಗೆ ಪ್ರಯತ್ನ ಶುರುವಾಗಿತ್ತು. ಸ್ವಿಜರ್ಲ್ಯಾಂಡ್‌​ನ ‘ಜಿನೀವಾ' ಎರಡೂ ರಾಷ್ಟ್ರಗಳ ಪ್ರಥಮ ಮಾತುಕತೆಗೆ ವೇದಿಕೆ ಒದಗಿಸಿತ್ತು. ಆದ್ರೆ ಪಾಕ್ ರಾಷ್ಟ್ರೀಯ ಭದ್ರತಾ ಸಲಹೆಗಾರ ಮೊಯೀದ್ ಯೂಸುಫ್ ವಾಶಿಂಗ್ಟನ್‌ಗೆ ದಿಢೀರ್ ಭೇಟಿ ನೀಡಿರುವುದು ಕುತೂಹಲ ಕೆರಳಿಸಿದೆ. ಭವಿಷ್ಯದಲ್ಲಿ ಅಫ್ಘಾನಿಸ್ತಾನ ವಿಚಾರದಲ್ಲಿ ಪಾಕ್ ಯಾವ ನಿಲುವು ತಳೆಯಬಹುದು ಎಂಬ ಚರ್ಚೆಗಳು ಶುರುವಾಗಿವೆ. ಆದರೆ ಚೀನಾ ಈ ಎಲ್ಲಾ ಬೆಳವಣಿಗೆಗಳನ್ನ ಹತ್ತಿರದ, ಸೂಕ್ಷ್ಮವಾಗಿ ಗಮನಿಸುತ್ತಿದೆ.

ಭಾರತದ ಜೊತೆ ಸ್ನೇಹದ ನಾಟಕ..?

ಭಾರತದ ಜೊತೆ ಸ್ನೇಹದ ನಾಟಕ..?

ಪಾಕಿಸ್ತಾನ ನಮ್ಮ ದೊಡ್ಡ ಶತ್ರು. ಭಾರತಕ್ಕೆ ಮಗ್ಗಲ ಮುಳ್ಳಾಗಿರುವ ಪಾಕಿಸ್ತಾನ ಗಡಿಯಲ್ಲಿ ಪ್ರತಿದಿನವೂ ಕಿರಿಕ್ ಮಾಡುತ್ತಲೇ ಇದೆ. ಆದ್ರೆ ಈ ಹೊತ್ತಲ್ಲೇ ಅಮೆರಿಕ ಪಾಕಿಸ್ತಾನದ ಜೊತೆ ಸ್ನೇಹಕ್ಕೆ ಮುಂದಾಗಿದ್ದು ಏಕೆ? ಇದರ ಹಿಂದಿನ ಕಾರಣಗಳು ಏನು? ಇಂತಹ ಹಲವು ಪ್ರಶ್ನೆಗಳು ಉದ್ಭವಿಸುತ್ತಿವೆ. ಒಂದು ಕಡೆ ಚೀನಾ ಜೊತೆ ಪಾಕ್ ಸ್ನೇಹ ಸಾಧಿಸಿ, ತನಗೆ ಬೇಕಾದ ಕೆಲಸ ಮಾಡಿಸಿಕೊಳ್ಳುತ್ತಿದೆ. ಭಾರತದ ವಿರುದ್ಧ ವಿಷ ಕಾರುತ್ತಿರುವ ಪಾಕಿಸ್ತಾನ ಈಗ ಅಮೆರಿಕದ ಜೊತೆಗೂ ಸ್ನೇಹಕ್ಕೆ ಮುಂದಾಗಿದೆ. 10 ವರ್ಷಗಳ ಮುನಿಸು ಮರೆತು ಒಂದಾಗುವ ಪ್ರಯತ್ನ ಸಾಗಿದೆ. ಆದರೆ ಭಾರತದ ಜೊತೆ ಅಮೆರಿಕ ಸ್ನೇಹದ ನಾಟಕ ಆಡುತ್ತಿದೆಯಾ ಎಂಬ ಅನುಮಾನ ಮೂಡಿದೆ.

ಅಮೆರಿಕ ಓಡಿ ಹೋಯ್ತಾ..?

ಅಮೆರಿಕ ಓಡಿ ಹೋಯ್ತಾ..?

ಅಮೆರಿಕ ತಪ್ಪು ನಿರ್ಧಾರ ಕೈಗೊಂಡಿದೆ ಎಂಬ ಆಕ್ರೋಶ ಜಗತ್ತಿನಾದ್ಯಂತ ವ್ಯಕ್ತವಾಗುತ್ತಿದೆ. ಅಫ್ಘಾನ್ ನೆಲದಿಂದ ಸೇನೆ ಹಿಂದಕ್ಕೆ ಕರೆಸಿಕೊಳ್ಳುತ್ತಿರುವ ಅಮೆರಿಕ ನಿರ್ಧಾರಕ್ಕೆ ಬೇಸರ ವ್ಯಕ್ತವಾಗಿದೆ. ಅದರಲ್ಲೂ ಅಫ್ಘಾನ್ ಅಧ್ಯಕ್ಷ ಸೇರಿದಂತೆ ಸೇನಾಧಿಕಾರಿಗಳು ಅಮೆರಿಕ ಮಿಲಿಟರಿ ವಿರುದ್ಧ ರೊಚ್ಚಿಗೆದ್ದಿದ್ದಾರೆ. ಈಗಲೂ ಅಂತಹದ್ದೇ ಆರೋಪ ಕೇಳಿಬಂದಿದೆ. ಕೆಲ ದಿನಗಳ ಹಿಂದೆ ಅಮೆರಿಕ ಸೇನೆ ಬಗ್ರಾಮ್ ವಾಯು ನೆಲೆಯಿಂದ ಹೊರ ನಡೆದಿತ್ತು. ಆದರೆ ಹೊರ ಹೋಗುವ ಮೊದಲು ಅಮೆರಿಕ ಸೇನೆ ಸುಳಿವು ನೀಡಿರಲಿಲ್ಲ ಎಂಬ ಆರೋಪ ಕೇಳಿಬಂದಿದೆ. ಅಮೆರಿಕ ರಾತ್ರೋರಾತ್ರಿ ಎಸ್ಕೇಪ್ ಆಗಿದೆ ಅಂತಾ ಅಫ್ಘಾನ್ ಸೇನಾಧಿಕಾರಿಗಳು ಆರೋಪಿಸಿದ್ದಾರೆ. ಇದು ಬರೀ ಒಂದು ಜಾಗದ ಕಥೆಯಲ್ಲ, ಅಮೆರಿಕ ಬಿಟ್ಟು ಹೊರಟಿರುವ ಪ್ರತಿಯೊಂದು ಸೇನಾ ನೆಲೆಯ ಕಥೆಯೂ ಇದೇ ಆಗಿದೆ.

 ಆತಂಕಕ್ಕೆ ಕಾರಣ ಏನು..?

ಆತಂಕಕ್ಕೆ ಕಾರಣ ಏನು..?

ಅಮೆರಿಕ ತೊರೆದು ಹೋಗಿರುವ ಬಗ್ರಾಮ್ ಏರ್ ಬೇಸ್‌ ಕೇವಲ ಸೇನಾ ನೆಲೆಯಾಗಿಲ್ಲ. ಬದಲಾಗಿ ಉಗ್ರರಿಗೆ ಅಂತಾ ನಿರ್ಮಿಸಿರುವ ಜೈಲು ಕೂಡ ಇಲ್ಲೇ ಇದೆ. ಹಾಗೇ ಸುಮಾರು 5 ಸಾವಿರ ತಾಲಿಬಾನ್ ಉಗ್ರರು ಜೈಲಿನ ಒಳಗಿದ್ದಾರೆ. ಆದರೆ ಏಕಾಏಕಿ ಅಮೆರಿಕ ಸೇನೆ ಯಾವುದೇ ಸುಳಿವನ್ನ ನೀಡದೆ ಬಗ್ರಾಮ್ ಬೇಸ್‌ ಬಿಟ್ಟೋಗಿದೆ. ಇದು ಸಹಜವಾಗಿ ಅಫ್ಘಾನಿಸ್ತಾನ ಸೇನೆ ಹಾಗೂ ಸರ್ಕಾರದ ಕಣ್ಣು ಕೆಂಪಗಾಗಿಸಿದೆ. ಅವರು ಓಡಿ ಹೋಗಿದ್ದಾರೆ ಅಂತಾ ಅಫ್ಘಾನ್ ಸೇನಾಧಿಕಾರಿಗಳು ಅಮೆರಿಕ ಸೇನೆಯನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.

English summary
Pak’s national security adviser Moeed Yusuf is met with his US counterpart Jake Sullivan in Washington
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X