ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಹಿಜಾಬ್' ಕುರಿತು ಟ್ವೀಟ್: ಪಾಕ್‌ನಲ್ಲಿ ಚೀನಾ ಅಧಿಕಾರಿ ವಿರುದ್ಧ ಕಿಡಿ

|
Google Oneindia Kannada News

ಇಸ್ಲಾಮಾಬಾದ್, ಮಾರ್ಚ್ 8: ಪಾಕಿಸ್ತಾನದಲ್ಲಿನ ಚೀನಾ ರಾಯಭಾರ ಕಚೇರಿಯ ಚೀನಾದ ಸಾಂಸ್ಕೃತಿಕ ಕೌನ್ಸುಲರ್ ಝಾಂಗ್ ಹೆಕಿಂಗ್, ತೀವ್ರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಚೀನಾದ ಯುವತಿಯೊಬ್ಬಳು ನರ್ತಿಸುವ ವಿಡಿಯೋವನ್ನು ಟ್ವೀಟ್ ಮಾಡಿರುವ ಹೆಕಿಂಗ್, 'ನಿಮ್ಮ ಹಿಜಾಬ್ ತೆಗೆಯಿರಿ. ನಿಮ್ಮ ಕಣ್ಣುಗಳನ್ನು ನೋಡಲು ಬಿಡಿ. #ಕ್ಸಿಂಜಿಯಾಂಗ್ ಡ್ಯಾನ್ಸ್' ಎಂದು ತಮ್ಮ ಟ್ವೀಟ್‌ಗೆ ಕ್ಯಾಪ್ಷನ್ ನೀಡಿದ್ದರು. ಇದು ಪಾಕಿಸ್ತಾನದ ಜನರ ಕೆಂಗಣ್ಣಿಗೆ ಒಳಗಾಗಿದೆ.

ತಮ್ಮ ಟ್ವೀಟ್‌ಅನ್ನು ಅಳಿಸಿ ಹಾಕುವಂತೆ ಟ್ವಿಟ್ಟರಿಗರು ಹೆಕಿಂಗ್ ಅವರಿಗೆ ಒತ್ತಾಯಿಸಿದ್ದರು. ಪ್ರತಿಭಟನೆಗೆ ಮಣಿದ ಅವರು ಟ್ವೀಟ್ ಡಿಲೀಟ್ ಮಾಡಿದ್ದಾರೆ.

ಕೋವಿಡ್ ಬಳಿಕ ಚೀನಾದ ರಫ್ತು ವಹಿವಾಟಿನಲ್ಲಿ ಭಾರಿ ಏರಿಕೆಕೋವಿಡ್ ಬಳಿಕ ಚೀನಾದ ರಫ್ತು ವಹಿವಾಟಿನಲ್ಲಿ ಭಾರಿ ಏರಿಕೆ

ಹೆಕಿಂಗ್ ಅವರ ಟ್ವೀಟ್, ಇಸ್ಲಾಂ ಅನ್ನು ಅವಹೇಳನೆ ಮಾಡಿದೆ ಎಂದು ಪಾಕಿಸ್ತಾನದ ಟ್ವಿಟರ್ ಬಳಕೆದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಚೀನಾ-ಪಾಕಿಸ್ತಾನ ಸಂಬಂಧದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ ಎಂದು ಕೂಡ ಕೆಲವರು ಅಭಿಪ್ರಾಯಪಟ್ಟಿದ್ದಾರೆ.

Pakistan Twitter Users Slams Chinese Embassy Official For Hijab Off Tweet

'ಇದು ಬಹಳ ಕೀಳುಮಟ್ಟದ ಹೇಳಿಕೆ. ಆದರೆ ಚೀನಾ ಇಂತಹ ಇಸ್ಲಾಮೋಫೋಬಿಕ್ ಹೇಳಿಕೆಗಳನ್ನು ನೀಡಿದರೆ, ಪಾಕ್-ಚೀನಾ ಸಂಬಂಧ ಒಳ್ಳೆಯ ರೀತಿಯಲ್ಲಿ ಉಳಿದುಕೊಳ್ಳುವುದಿಲ್ಲ. ಆದರೆ ಅವರಂತಹ ಮೂರ್ಖ ಜನರು, ತಪ್ಪು ಅಭಿಪ್ರಾಯಗಳನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕು. ಆತನ ವಿರುದ್ಧ ಚೀನಾ ಸರ್ಕಾರಕ್ಕೆ ದೂರು ಸಲ್ಲಿಸಬೇಕು' ಎಂದು ಒಬ್ಬ ಟ್ವಿಟರ್ ಬಳಕೆದಾರ ಹೇಳಿದ್ದಾರೆ.

'ನಾವು ಚೀನಾವನ್ನು ದೇಶವಾಗಿ ಗೌರವಿಸುತ್ತೇವೆ. ಆದರೆ ಮುಸ್ಲಿಂ ಮಹಿಳೆಯರ ವಿರುದ್ಧ ಅವಹೇಳನಾಕಾರಿ ಟ್ವೀಟ್ ಮಾಡುವ ಮೂಲಕ ನೀವು ಎಲ್ಲೆ ಮೀರಿದ್ದೀರಿ. ನಿಮ್ಮ ಬಗ್ಗೆ ನಿಮಗೆ ನಾಚಿಕೆಯಾಗಬೇಕು. ಜತೆಗೆ ನಿಮ್ಮ ಮಾನಗೇಡಿ ಟ್ವೀಟ್‌ಗೆ ಕ್ಷಮೆ ಕೋರಬೇಕು' ಎಂದು ಕೆಲವು ಕಿಡಿಕಾರಿದ್ದಾರೆ.

English summary
Pakistan twitter users slammed Chinese Embassy Cultural Counsellor Zhang Heqing for his tweet 'Off Hijab'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X