ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಷ್ಟದಲ್ಲಿರುವ ದೋಸ್ತಿ ಪಾಕಿಸ್ತಾನಕ್ಕೆ ಚೀನಾದಿಂದ 14000 ಕೋಟಿ ನೆರವು

|
Google Oneindia Kannada News

ಇಸ್ಲಾಮಾಬಾದ್ (ಪಾಕಿಸ್ತಾನ), ಮಾರ್ಚ್ 22: ನಗದು ಕೊರತೆಯ ಸುಳಿಯಲ್ಲಿ ಸಿಲುಕಿರುವ ಪಾಕಿಸ್ತಾನಕ್ಕೆ ಚೀನಾವು $2 ಬಿಲಿಯನ್ (ಭಾರತೀಯ ರುಪಾಯಿಗಳಲ್ಲಿ 14000 ಕೋಟಿ) ಸೋಮವಾರದೊಳಗೆ ನೀಡುತ್ತಿದೆ. ಸಂಕಷ್ಟದಲ್ಲಿರುವ ಆರ್ಥಿಕತೆಗೆ ಇದರಿಂದ ಅನುಕೂಲ ಆಗಲಿದೆ ಎಂದು ಪಾಕಿಸ್ತಾನದ ಹಣಕಾಸು ಸಚಿವಾಲಯ ಘೋಷಣೆ ಮಾಡಿದೆ.

ಪಾಕಿಸ್ತಾನ ಸಚಿವಾಲಯದ ಸಲಹೆಗಾರ ಹಾಗೂ ವಕ್ತಾರ ಖಕಾನ್ ನಜೀಬ್ ಖಾನ್ ಮಾತನಾಡಿ, $2.1 ಬಿಲಿಯನ್ ಸಾಲ ವರ್ಗಾವಣೆಗೆ ಎಲ್ಲ ಪ್ರಕ್ರಿಯೆಗಳು ಮುಗಿದಿವೆ. ಸೋಮವಾರದೊಳಗೆ ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನ್ ನ ಖಾತೆಯೊಳಗೆ ಹಣ ವರ್ಗಾವಣೆ ಆಗಲಿದೆ ಎಂದು ಹೇಳಿರುವುದಾಗಿ ಡಾನ್ ಪತ್ರಿಕೆ ವರದಿ ಮಾಡಿದೆ.

'ಪಾಕ್ ರಾಷ್ಟ್ರೀಯ ದಿನಕ್ಕೆ ಭಾರತ ಪರವಾಗಿ ಯಾರೂ ಭಾಗವಹಿಸಲ್ಲ''ಪಾಕ್ ರಾಷ್ಟ್ರೀಯ ದಿನಕ್ಕೆ ಭಾರತ ಪರವಾಗಿ ಯಾರೂ ಭಾಗವಹಿಸಲ್ಲ'

ಆರ್ಥಿಕ ಸಂಕಷ್ಟದಿಂದ ಹೊರಬರುವ ಸಲುವಾಗಿ ಸೌದಿ ಅರೇಬಿಯಾ ಹಾಗೂ ಯುಎಇಯಿಂದ ತಲಾ $1 ಬಿಲಿಯನ್ ಪಾಕಿಸ್ತಾನ ಪಡೆದಿದೆ. ವಿದೇಶಿ ವಿನಿಮಯ ಸಂಗ್ರಹ ತಳ ಕಚ್ಚಿದ ಪರಿಸ್ಥಿತಿಯಲ್ಲಿ ನಾನಾ ಕಡೆಗೆ ನೆರವಿಗಾಗಿ ಕೈ ಚಾಚಿದೆ ಪಾಕಿಸ್ತಾನ. ಸೌದಿ ಅರೇಬಿಯಾವು ಒಟ್ಟು ಆರು ಬಿಲಿಯನ್ ಅಮೆರಿಕನ್ ಡಾಲರ್ ನೆರವನ್ನು ವಿವಿಧ ರೂಪದಲ್ಲಿ ನೀಡಲು ಕಳೆದ ವರ್ಷ ಅಕ್ಟೋಬರ್ ನಲ್ಲಿ ಒಪ್ಪಿಕೊಂಡಿದೆ.

Pakistan to receive 14000 crore loan from China by Monday

ಈ ಮಧ್ಯೆ ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆ ಬಳಿ ಕೂಡ ನೆರವಿಗೆ ಇಸ್ಲಾಮಾಬಾದ್ ಚರ್ಚೆ ನಡೆಸಿದೆ. ಈಗ ಚೀನಾ ನೀಡುವ ನೆರವಿನಿಂದ ವಿದೇಶಿ ವಿನಿಮಯ ಸಂಗ್ರಹ ಬಲಪಡಿಸಿಕೊಳ್ಳಬಹುದು. ಜತೆಗೆ ಆಮದು ಪಾವತಿ ಮಾಡಬಹುದು ಎನ್ನಲಾಗಿದೆ.

ಸಮಗ್ರ ಮಾಹಿತಿಯುಳ್ಳ ಲೋಕಸಭೆ ಚುನಾವಣೆಯ ವಿಶೇಷ ಪುಟ

ಕಳೆದ ವರ್ಷ ನವೆಂಬರ್ ನಲ್ಲಿ ಚೀನಾಗೆ ತೆರಳಿದ್ದ ಪಾಕಿಸ್ತಾನದ ಪ್ರಧಾನಿ ನೆರವಿಗಾಗಿ ಕೇಳಿದ್ದರು. ಅದಕ್ಕೆ ಚೀನಾ ಒಪ್ಪಿಕೊಂಡಿತ್ತು. ಆದರೆ ಅದರ ನಿಯಮಗಳ ಬಗ್ಗೆ ಇನ್ನೂ ಗೊತ್ತಾಗಿಲ್ಲ. ಪಾಕಿಸ್ತಾನದ ಆರ್ಥಿಕತೆಗೆ ಉತ್ತೇಜನ ನೀಡುವ ಸಲುವಾಗಿ ಈ ನೆರವು ನೀಡಲಾಗಿದೆ. ಚೀನಾವು ವಿವಿಧ ವಲಯಗಳಲ್ಲಿ ಪಾಕ್ ನಲ್ಲಿ ಹೂಡಿಕೆ ಮಾಡುತ್ತಿದೆ. ಸಾಲ ನೀಡುವ ಬದಲಿಗೆ ಹೊಸ ವ್ಯಾಪಾರ-ವ್ಯವಹಾರಗಳನ್ನು ಆ ದೇಶದಲ್ಲಿ ಆರಂಭಿಸಲಾಗುವುದು ಎಂದು ಚೀನಾ ಹೇಳಿದೆ.

ಪಾಕ್ ಸೇನೆಯಿಂದ ಕದನ ವಿರಾಮ ಉಲ್ಲಂಘನೆ, ಯೋಧ ಹುತಾತ್ಮ ಪಾಕ್ ಸೇನೆಯಿಂದ ಕದನ ವಿರಾಮ ಉಲ್ಲಂಘನೆ, ಯೋಧ ಹುತಾತ್ಮ

ಇದಕ್ಕೂ ಮುನ್ನ, ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಯಿಂದ ಎಂಟು ಬಿಲಿಯನ್ ಅಮೆರಿಕನ್ ಡಾಲರ್ ಕೇಳುವುದಾಗಿ ಪಾಕಿಸ್ತಾನ ಹೇಳಿತ್ತು. ಹಾಗೆ ಆಗಿದ್ದರೆ ಅದು ಅತಿ ದೊಡ್ಡ ಹಣಕಾಸಿನ ನೆರವಾಗಿರುತ್ತಿತ್ತು.

English summary
The Pakistan ministry adviser and spokesperson Khaqan Najeeb Khan said "all procedural formalities" for the transfer of the $2.1 billion (15 billion yuan) loan being provided by the Chinese government have been completed, and "the funds will be deposited in the State Bank of Pakistan's account by Monday, March 25", the Dawn newspaper reported.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X