ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನ ಸುಪ್ರೀಂಕೋರ್ಟ್‌ಗೆ ಮೊದಲ ಮಹಿಳಾ ನ್ಯಾಯಮೂರ್ತಿಯಾಗಿ ಆಯಿಷಾ ಮಲಿಕ್ ಆಯ್ಕೆ

|
Google Oneindia Kannada News

ಇಸ್ಲಾಮಾಬಾದ್, ಜನವರಿ 07: ಲಾಹೋರ್ ಹೈಕೋರ್ಟ್‌ನ ನ್ಯಾಯಮೂರ್ತಿ ಆಯಿಷಾ ಮಲಿಕ್ ಅವರನ್ನು ಪಾಕಿಸ್ತಾನದ ಸುಪ್ರೀಂ ಕೋರ್ಟ್‌ನ ಮೊದಲ ಮಹಿಳಾ ನ್ಯಾಯಾಮೂರ್ತಿಯಾಗಿ ಆಯ್ಕೆಮಾಡಲಾಗಿದೆ.

ಲಾಹೋರ್ ಹೈಕೋರ್ಟ್‌ನ ನ್ಯಾಯಮೂರ್ತಿ ಆಯಿಷಾ ಅವರಿಗೆ ಪಾಕಿಸ್ತಾನ ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಯಾಗಿ ಬಡ್ತಿ ನೀಡುವ ಪ್ರಸ್ತಾವಕ್ಕೆ ಉನ್ನತ ಮಟ್ಟದ ಸಮಿತಿ ಅನುಮತಿ ನೀಡಿದೆ. ಇದರೊಂದಿಗೆ ದೇಶದ ಸುಪ್ರೀಂಕೋರ್ಟ್‌ಗೆ ಮೊದಲ ಮಹಿಳಾ ನ್ಯಾಯಮೂರ್ತಿಯನ್ನು ನೇಮಕ ಮಾಡುವ ಐತಿಹಾಸಿಕ ಕ್ರಮಕ್ಕೆ ಸರ್ಕಾರ ಮುಂದಾಗಿದೆ.

ಜಪಾನ್‌: ಮೃತ ಮುಸ್ಲಿಂ ವ್ಯಕ್ತಿಯ ಸಂಸ್ಕಾರದ ರೀತಿಗೆ ಪಾಕ್ ಜನತೆ ಗರಂಜಪಾನ್‌: ಮೃತ ಮುಸ್ಲಿಂ ವ್ಯಕ್ತಿಯ ಸಂಸ್ಕಾರದ ರೀತಿಗೆ ಪಾಕ್ ಜನತೆ ಗರಂ

ಚೀಫ್ ಜಸ್ಟಿಸ್ ಗುಲ್ಜಾರ್ ಅಹ್ಮದ್ ನೇತೃತ್ವದಲ್ಲಿ ಪಾಕಿಸ್ತಾನ ನ್ಯಾಯಾಂಗ ಆಯೋಗ(ಜೆಸಿಪಿ) ನಾಲ್ವರ ವಿರುದ್ಧ ಐದು ಬಹುಮತಗಳಿಂದ ಗೆದ್ದ ನ್ಯಾಯಮೂರ್ತಿ ಆಯಿಷಾ ಮಲಿಕ್ ಅವರನ್ನು ನ್ಯಾಯಾಮೂರ್ತಿಯಾಗಿ ನೇಮಕಗೊಳಿಸಲು ಅನುಮೋದಿಸಿದೆ.

Pakistan To Get Its First Woman Supreme Court Judge - Justice Ayesha Malik

ನ್ಯಾಯಮೂರ್ತಿ ಆಯಿಷಾ ಮಲಿಕ್ ಅವರ ಬಡ್ತಿಗೆ ಸಂಬಂಧಿಸಿದಂತೆ ಜೆಸಿಪಿ ಸಭೆ ನಡೆಸುತ್ತಿರುವ ಎರಡನೇ ಬಾರಿ ಸಭೆ ಇದಾಗಿದ್ದು, ಕಳೆದ ವರ್ಷ ಸೆಪ್ಟೆಂಬರ್ 9 ರಂದು ಮೊದಲ ಬಾರಿಗೆ ಆಯಿಷಾ ಮಲಿಕ್ ಅವರ ಹೆಸರು ಕೇಳಿಬಂದಿತ್ತು. ಆ ವೇಳೆ ನಾಲ್ವರ ವಿರುದ್ಧ ನಾಲ್ಕು ಅಂದರೆ ಸಮಾನ ಮತಗಳನ್ನು ಪಡೆದಿದ್ದ ಕಾರಣ ಅವರ ಹೆಸರನ್ನು ನಿರಾಕರಿಸಲಾಗಿತ್ತು.

ಜ್ಯೇಷ್ಠತೆಯ ಆಧಾರದಲ್ಲಿ ಆಯಿಷಾ ಮಲಿಕ್ ಅವರನ್ನು ನೇಮಕಗೊಳಿಸಿದ್ದಕ್ಕೆ ಪಾಕಿಸ್ತಾನದ ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ಅಧ್ಯಕ್ಷ ಅಬ್ದುಲ್ ಲತೀಫ್ ಅಫ್ರಿದಿ ವಿರೋಧ ವ್ಯಕ್ತಪಡಿಸಿ ದೇಶಾದ್ಯಂತ ಪ್ರತಿಭಟನೆಗೆ ಕರೆ ನೀಡಿದ್ದರು.

ನ್ಯಾಯಮೂರ್ತಿ ಆಯಿಷಾ ಮಲಿಕ್ ದೇಶದ ಐದು ಹೈಕೋರ್ಟ್‍ಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅನೇಕ ನ್ಯಾಯಾಧೀಶರಿಗಿಂತ ಕಿರಿಯರು ಎಂದು ಅಫ್ರಿದಿ ಮಾಧ್ಯಮಗಳಿಗೆ ತಿಳಿಸಿದ್ದರು. ಅಲ್ಲದೇ ಆಯಿಷಾ ಮಲಿಕ್ ಅವರ ಹೆಸರನ್ನು ಆಯ್ಕೆಮಾಡಿದ್ದಕ್ಕೆ ಕೋರ್ಟ್ ಕಲಾಪ ಬಹಿಷ್ಕರಿಸುವುದಾಗಿ ಬೆದರಿಕೆ ಹಾಕಿದ್ದರು. ಆದರೆ ಜೆಸಿಪಿ ಅನುಮೋದನೆ ಬಳಿಕ ಆಯಿಷಾ ಅವರ ಹೆಸರನ್ನು ಸಂಸದೀಯ ಸಮಿತಿ ಪರಿಗಣಿಸಲಿದೆ. ಸಾಮಾನ್ಯವಾಗಿ ಜೆಸಿಪಿ ಶಿಫಾರಸ್ಸಿನ ವಿರುದ್ಧ ಸಂಸದೀಯ ಸಮಿತಿ ನಿರ್ಧಾರ ಕೈಗೊಳ್ಳುವುದಿಲ್ಲ.

ಮುಖ್ಯ ನ್ಯಾಯಮೂರ್ತಿ ಗುಲ್ಝರ್ ಅಹ್ಮದ್ ನೇತೃತ್ವದ ಪಾಕಿಸ್ತಾನದ ನ್ಯಾಯಾಂಗ ಆಯೋಗ 5-4 ಮತಗಳ ಬಹುಮತದೊಂದಿಗೆ ಆಯಿಷಾ ಅವರ ನೇಮಕ ಪ್ರಸ್ತಾವವನ್ನು ಅನುಮೋದಿಸಿದೆ ಎಂದು ತಿಳಿದುಬಂದಿದೆ.

ಜ್ಯೇಷ್ಠತೆ ಆಧಾರದಲ್ಲಿಆಯಿಷಾ ನೇಮಕಕ್ಕೆ ಸುಪ್ರೀಂಕೋರ್ಟ್ ವಕೀಲರ ಸಂಘ ವಿರೋಧ ವ್ಯಕ್ತಪಡಿಸಿತ್ತು, ಹಾಲಿ ಹೈಕೋರ್ಟ್ ನ್ಯಾಯಮೂರ್ತಿಗಳಿಂದ ಸೇವಾ ಜ್ಯೇಷ್ಠತೆಯಲ್ಲಿ ಕೆಳಗೆ ಇರುವ ಆಯಿಷಾ ನೇಮಕ ಪ್ರಸ್ತಾವದ ವಿರುದ್ಧ ದೇಶಾದ್ಯಂತ ಪ್ರತಿಭಟನೆಗೆ ಅಧ್ಯಕ್ಷ ಅಬ್ದುಲ್ ಲತೀಫ್ ಆಫ್ರಿದಿ ಕರೆ ನೀಡಿದ್ದರು, ಕೋರ್ಟ್ ಕಲಾಪ ಬಹಿಷ್ಕರಿಸುವ ಬೆದರಿಕೆಯನ್ನೂ ಹಾಕಲಾಗಿತ್ತು.

2021ರ ಮಾರ್ಚ್‌ನಲ್ಲಿ ಹೈಕೋರ್ಟ್ ನ್ಯಾಯಮೂರ್ತಿಯಾಗಿ ಅಧಿಕಾರವಹಿಸಿಕೊಂಡಿದ್ದ ಆಯಿಷಾ ಲಾಹೋರ್ ಹೈಕೋರ್ಟ್‌ನ ನ್ಯಾಯಮೂರ್ತಿಗಳ ಜ್ಯೇಷ್ಠತಾ ಪಟ್ಟಿಯಲ್ಲಿ ನಾಲ್ಕನೆಯವರಾಗಿದ್ದರು.

English summary
Pakistan is set to get its first woman Supreme Court judge - Justice Ayesha Malik of the Lahore High Court.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X