ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವದ ಐದನೇ ಪರಮಾಣು ಶಕ್ತಿಯಾಗಿ ಪಾಕ್? ಟಾಪ್ 10 ಪರಮಾಣು ರಾಷ್ಟ್ರಗಳ ಪಟ್ಟಿ

|
Google Oneindia Kannada News

ಮುಂದಿನ ಹತ್ತು ವರ್ಷಗಳಲ್ಲಿ ಇಸ್ಲಾಮಿಕ್ ರಾಷ್ಟ್ರ ಪಾಕಿಸ್ತಾನ, ವಿಶ್ವದ ಐದನೇ ಪ್ರಬಲ ಪರಮಾಣು ಶಕ್ತಿಯಾಗಿ ಹೊರಹೊಮ್ಮುವ ಸಾಧ್ಯತೆಯಿದೆ ಎಂದು ರಕ್ಷಣಾ ತಜ್ಞರಾದ ಹ್ಯಾನ್ಸ್ ಕ್ರಿಸ್ಟೆನ್ಸನ್, ರಾಬರ್ಟ್ ನಾರಿಸ್ ಮತ್ತು ಜೂಲಿಯಾ ಡೈಮಂಡ್ ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದಾರೆ.

'ಪಾಕಿಸ್ತಾನಿ ಶಸ್ತ್ರಾಸ್ತ್ರ ಬಲ - 2018' ಎಂಬ ವರದಿಯಲ್ಲಿ ಈ ವಿಚಾರವನ್ನು ಪ್ರಸ್ತಾವಿಸಿರುವ ತಜ್ಞರು, ಈಗಿನ ವೇಗದಲ್ಲಿ ಪಾಕಿಸ್ತಾನ ಪರಮಾಣು ಸಿಡಿತಲೆಗಳನ್ನು ಹೊಂದುತ್ತಾ ಸಾಗಿದರೆ, 2025ರೊಳಗೆ ವಿಶ್ವದ ಐದನೇ ಅತಿದೊಡ್ದ ಪರಮಾಣು ರಾಷ್ಟ್ರವಾಗಲಿದೆ ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಸದ್ಯ ಪಾಕಿಸ್ತಾನ 140-150 ಪರಮಾಣು ಸಿಡಿತಲೆಗಳನ್ನು ( nuclear warheads) ಹೊಂದಿದೆ, ಮುಂದಿನ ಹತ್ತು ವರ್ಷಗಳಲ್ಲಿ ಇದರ ಸಂಖ್ಯೆ 220-250ಕ್ಕೂ ಹೆಚ್ಚು ದಾಟಲಿದೆ, ಇದು ಅಮೆರಿಕ ರಕ್ಷಣಾ ಗುಪ್ತಚರ ಸಂಸ್ಥೆ ಅಂದಾಜಿಸಿದ್ದ ಸಂಖ್ಯೆಗಿಂತಲೂ ಹೆಚ್ಚು ಎಂದು ಮೂವರು ತಜ್ಞರು ಹೇಳಿದ್ದಾರೆ.

ಪರಮಾಣು ಶಸ್ತ್ರ ಪರೀಕ್ಷಿಸಿದ ಉತ್ತರ ಕೊರಿಯಾದಲ್ಲಿ ಭೂಕಂಪಪರಮಾಣು ಶಸ್ತ್ರ ಪರೀಕ್ಷಿಸಿದ ಉತ್ತರ ಕೊರಿಯಾದಲ್ಲಿ ಭೂಕಂಪ

ಪಾಕಿಸ್ತಾನದ ರಕ್ಷಣಾ ಮತ್ತು ವಾಯುಪಡೆ ನೆಲೆಗಳ ಉಪಗ್ರಹ ಚಿತ್ರಣಗಳನ್ನು ವಿಶ್ಲೇಷಣೆ ಮಾಡುವುದಾದರೆ, ಮೊಬೈಲ್ ಉಡಾವಣಾ ಮತ್ತು ಭೂಗತ ಸೌಲಭ್ಯಗಳನ್ನು ಹೊಂದಿರುವ ಹಲವಾರು ನೆಲೆಗಳನ್ನು ಪಾಕಿಸ್ತಾನದ ಮಿಲಿಟರಿ ಹೊಂದಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಪಾಕಿಸ್ತಾನ ತನ್ನ ಪರಮಾಣು ಶಸ್ತ್ರಾಸ್ತ್ರಗಳನ್ನು ಹೆಚ್ಚಿಸಿಕೊಳ್ಳುತ್ತಿರುವುದಕ್ಕೆ ಎರಡು ಅಂಶಗಳಿವೆ. ಒಂದು, ಪಾಕಿಸ್ತಾನ ಮತ್ತು ಭಾರತದ ಪರಮಾಣು ಶಸ್ತ್ರಾಸ್ತ್ರಗಳನ್ನು ನಿಯೋಜಿಸುವ ಪರಮಾಣು-ಸಾಮರ್ಥ್ಯದ ಉಡಾವಣಾಗಳ ಸಂಖ್ಯೆ, ಎರಡು ಅತಿಹೆಚ್ಚು ಪರಮಾಣು ಸಿಡಿತಲೆಗಳನ್ನು ಹೊಂದುವ ಮೂಲಕ, ವಿಶ್ವದ ಅತಿದೊಡ್ಡ ಪರಮಾಣು ಶಕ್ತಿಯಾಗಿ ಹೊರಹೊಮ್ಮುವುದು ಎಂದು ವರದಿಯಲ್ಲಿ ಹೇಳಲಾಗಿದೆ.

ವಿಶ್ವದ ಟಾಪ್ ಟೆನ್ ಪರಮಾಣು ಶಕ್ತಿ ರಾಷ್ಟ್ರಗಳು (ಮಾಹಿತಿ: ಆರ್ಮಿ ಟೆಕ್ನಾಲಜಿ)

ರಷ್ಯಾ ಮತ್ತು ಅಮೆರಿಕ

ರಷ್ಯಾ ಮತ್ತು ಅಮೆರಿಕ

ಸ್ಥಾನ: 01
ದೇಶ: ರಷ್ಯಾ
ಹೊಂದಿರುವ ಪರಮಾಣು ಸಿಡಿತಲೆಗಳು: 8,500

ಸ್ಥಾನ: 02
ದೇಶ: ಅಮೆರಿಕ
ಹೊಂದಿರುವ ಪರಮಾಣು ಸಿಡಿತಲೆಗಳು: 7,200 - 7,500

ಉತ್ತರ ಕೊರಿಯಾ ಮೇಲಿನ ನಿರ್ಬಂಧ ನಿಷ್ಪ್ರಯೋಜಕ : ಪುಟಿನ್‌ಉತ್ತರ ಕೊರಿಯಾ ಮೇಲಿನ ನಿರ್ಬಂಧ ನಿಷ್ಪ್ರಯೋಜಕ : ಪುಟಿನ್‌

ಫ್ರಾನ್ಸ್ ಮತ್ತು ಚೀನಾ

ಫ್ರಾನ್ಸ್ ಮತ್ತು ಚೀನಾ

ಸ್ಥಾನ: 03
ದೇಶ: ಫ್ರಾನ್ಸ್
ಹೊಂದಿರುವ ಪರಮಾಣು ಸಿಡಿತಲೆಗಳು: 300

ಸ್ಥಾನ: 04
ದೇಶ: ಚೀನಾ
ಹೊಂದಿರುವ ಪರಮಾಣು ಸಿಡಿತಲೆಗಳು: 250

ಉತ್ತರ ಕೊರಿಯಾದಿಂದ ಯಶಸ್ವೀ 'ಅಣ್ವಸ್ತ್ರ ಪರೀಕ್ಷೆ', ಬೆಚ್ಚಿಬಿದ್ದ ವಿಶ್ವಉತ್ತರ ಕೊರಿಯಾದಿಂದ ಯಶಸ್ವೀ 'ಅಣ್ವಸ್ತ್ರ ಪರೀಕ್ಷೆ', ಬೆಚ್ಚಿಬಿದ್ದ ವಿಶ್ವ

ಬ್ರಿಟನ್ ಮತ್ತು ಪಾಕಿಸ್ತಾನ

ಬ್ರಿಟನ್ ಮತ್ತು ಪಾಕಿಸ್ತಾನ

ಸ್ಥಾನ: 05
ದೇಶ: ಬ್ರಿಟನ್
ಹೊಂದಿರುವ ಪರಮಾಣು ಸಿಡಿತಲೆಗಳು: 225

ಸ್ಥಾನ: 06
ದೇಶ: ಪಾಕಿಸ್ತಾನ
ಹೊಂದಿರುವ ಪರಮಾಣು ಸಿಡಿತಲೆಗಳು: 140-150

ಭಾರತ ಮತ್ತು ಇಸ್ರೇಲ್

ಭಾರತ ಮತ್ತು ಇಸ್ರೇಲ್

ಸ್ಥಾನ: 07
ದೇಶ: ಭಾರತ
ಹೊಂದಿರುವ ಪರಮಾಣು ಸಿಡಿತಲೆಗಳು: 100

ಸ್ಥಾನ: 08
ದೇಶ: ಇಸ್ರೇಲ್
ಹೊಂದಿರುವ ಪರಮಾಣು ಸಿಡಿತಲೆಗಳು: 80

ಉತ್ತರ ಕೊರಿಯಾ ಮತ್ತು ಇರಾನ್

ಉತ್ತರ ಕೊರಿಯಾ ಮತ್ತು ಇರಾನ್

ಸ್ಥಾನ: 09
ದೇಶ: ಉತ್ತರ ಕೊರಿಯಾ
ಹೊಂದಿರುವ ಪರಮಾಣು ಸಿಡಿತಲೆಗಳು: 10

ಸ್ಥಾನ: 10
ದೇಶ: ಇರಾನ್
ಹೊಂದಿರುವ ಪರಮಾಣು ಸಿಡಿತಲೆಗಳು: ಸ್ಪಷ್ಟತೆಯಿಲ್ಲ

English summary
If the current trend continues, Pakistan is set to emerge as the world’s fifth largest nuclear power by 2025. Top TEN Countries with the biggest nuclear weapon stockpiles.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X