ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅವಿಶ್ವಾಸ ನಿರ್ಣಯ ತಿರಸ್ಕಾರ: ಪಾಕ್‌ ಸುಪ್ರೀಂನಲ್ಲಿ ವಿಚಾರಣೆ

|
Google Oneindia Kannada News

ಇಸ್ಲಾಮಾಬಾದ್‌, ಏಪ್ರಿಲ್‌ 04: "ಸಾಂವಿಧಾನಿಕ" ಆಧಾರದ ಮೇಲೆ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧದ ಅವಿಶ್ವಾಸ ನಿರ್ಣಯವನ್ನು ತಿರಸ್ಕರಿಸುವ ರಾಷ್ಟ್ರೀಯ ಅಸೆಂಬ್ಲಿ ಸ್ಪೀಕರ್ ಅಸದ್ ಕೈಸರ್ ಅವರ ತೀರ್ಪಿನ ವಿಚಾರಣೆಯನ್ನು ಪಾಕಿಸ್ತಾನ ಸುಪ್ರೀಂ ಕೋರ್ಟ್ ಸೋಮವಾರಕ್ಕೆ ಮುಂದೂಡಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಭಾನುವಾರ ಮುಂಜಾನೆ, ಅಧ್ಯಕ್ಷ ಆರಿಫ್ ಅಲ್ವಿ ಅವರು ರಾಷ್ಟ್ರೀಯ ಸಂಸತ್ತು ವಿಸರ್ಜನೆಯನ್ನು ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತವಾಗಿ ತೆಗೆದುಕೊಂಡಿತು. ಪಾಕಿಸ್ತಾನದಲ್ಲಿ ತನ್ನ ಅಧಿಕಾರವನ್ನು ಉಳಿಸಿಕೊಳ್ಳಲು ಇಮ್ರಾನ್‌ ಖಾನ್‌ ಹೂಡಿದ ಕೊನೆಯ ಅಸ್ತ್ರವಾದ ವಿರ್ಸಜನೆಯ ವಿಚಾರವು ಪಾಕಿಸ್ತಾನದ ಮೆಟ್ಟಿಲೇರಿದೆ. ಅವಿಶ್ವಾಸ ನಿರ್ಣಯ ತಿರಸ್ಕಾರ ಹಾಗೂ ಪಾಕಿಸ್ತಾನ ಸಂಸತ್ತು ವಿಸರ್ಜನೆ ಬಗ್ಗೆ ಪಾಕಿಸ್ತಾನದ ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತವಾಗಿ ವಿಚಾರಣೆಯನ್ನು ಕೈಗೆತ್ತಿಕೊಂಡಿದೆ.

ಚುನಾವಣೆಗೆ ಸಿದ್ಧರಾಗಲು ಕರೆ ನೀಡಿದ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ಚುನಾವಣೆಗೆ ಸಿದ್ಧರಾಗಲು ಕರೆ ನೀಡಿದ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್

ಪಾಕಿಸ್ತಾನದಲ್ಲಿ ಇಮ್ರಾನ್ ಖಾನ್ ಸರ್ಕಾರದ ವಿರುದ್ಧ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯವನ್ನು ರಾಷ್ಟ್ರೀಯ ಅಸೆಂಬ್ಲಿಯ ಉಪ ಸ್ಪೀಕರ್ ಖ್ವಾಸಿಂ ಸೂರಿ ಭಾನುವಾರ ಮುಂಜಾನೆ ತಿರಸ್ಕಾರ ಮಾಡಿದ್ದಾರೆ, ಈ ಸಂದರ್ಭದಲ್ಲಿ ಸಂವಿಧಾನದ 5 ನೇ ಪರಿಚ್ಛೇದವನ್ನು ಉಲ್ಲೇಖ ಮಾಡಿದ್ದರು. ಪಾಕಿಸ್ತಾನದ ಸಂವಿಧಾನದ 5 ನೇ ವಿಧಿಯ ಪ್ರಕಾರ, ರಾಷ್ಟ್ರೀಯ ಅಸೆಂಬ್ಲಿಯಲ್ಲಿ ತಂದ ನಿರ್ಣಯದ ಅವಧಿಯು ನಿಗದಿತ ಸಮಯವನ್ನು ಮೀರಿದರೆ, ಅದನ್ನು ತಿರಸ್ಕರಿಸುವ ಆಯ್ಕೆಯನ್ನು ಸ್ಪೀಕರ್ ಹೊಂದಿರುತ್ತಾರೆ. ಅವಿಶ್ವಾಸ ಮತವು ವಿದೇಶಿ ಪಿತೂರಿಯ ಭಾಗವಾಗಿದೆ ಎಂದು ಸ್ಪೀಕರ್ ತೀರ್ಪು ನೀಡಿದ ನಂತರ ರಾಷ್ಟ್ರೀಯ ಅಸೆಂಬ್ಲಿ ಅಧಿವೇಶನವನ್ನು ಅಮಾನತುಗೊಳಿಸಲಾಗಿದೆ.

Pakistan Supreme Court To hear no-trust vote rejection Monday

ಈ ನಡುವೆ ಪ್ರಧಾನಿ ಇಮ್ರಾನ್ ಖಾನ್ ಅವರ ಸಲಹೆಯ ಮೇರೆಗೆ ಅಧ್ಯಕ್ಷ ಆರಿಫ್ ಅಲ್ವಿ ರಾಷ್ಟ್ರೀಯ ಅಸೆಂಬ್ಲಿಯನ್ನು ವಿಸರ್ಜಿಸಿದ್ದಾರೆ. ಪಾಕಿಸ್ತಾನದ ಅಸೆಂಬ್ಲಿಯನ್ನು ವಿಸರ್ಜಿಸುವಂತೆ ಅಧ್ಯಕ್ಷರಿಗೆ ಪತ್ರ ಬರೆದು ದೇಶದಲ್ಲಿ ಹೊಸ ಚುನಾವಣೆಗೆ ಕರೆ ನೀಡಿರುವುದಾಗಿ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ. "ವಿಧಾನಸಭೆಗಳನ್ನು ವಿಸರ್ಜಿಸುವಂತೆ ನಾನು ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದೇನೆ. ಪ್ರಜಾಸತ್ತಾತ್ಮಕ ರೀತಿಯಲ್ಲಿ ಚುನಾವಣೆ ನಡೆಯಬೇಕು. ಚುನಾವಣೆಗೆ ತಯಾರಿ ನಡೆಸುವಂತೆ ನಾನು ಜನರಿಗೆ ಕರೆ ನೀಡುತ್ತೇನೆ," ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.

ಪಾಕಿಸ್ತಾನ ಸಂಸತ್ತು ವಿಸರ್ಜನೆ, ಹೊಸ ಚುನಾವಣೆ: ಇಲ್ಲಿದೆ ಪ್ರಮುಖ 10 ಬೆಳವಣಿಗೆಪಾಕಿಸ್ತಾನ ಸಂಸತ್ತು ವಿಸರ್ಜನೆ, ಹೊಸ ಚುನಾವಣೆ: ಇಲ್ಲಿದೆ ಪ್ರಮುಖ 10 ಬೆಳವಣಿಗೆ

ಬಿಲಾವಲ್ ಭುಟ್ಟೋ ಜರ್ದಾರಿ ಟ್ವಿಟ್ಟರ್‌ನಲ್ಲಿ ವಾಗ್ದಾಳಿ

"ಸರ್ಕಾರ ಸಂವಿಧಾನವನ್ನು ಉಲ್ಲಂಘಿಸಿದೆ. ವಿಶ್ವಾಸಮತ ಯಾಚನೆಗೆ ಅವಕಾಶ ನೀಡಲಿಲ್ಲ. ಸಂಯುಕ್ತ ಪ್ರತಿಪಕ್ಷಗಳು ಸಂಸತ್ತನ್ನು ಬಿಡುತ್ತಿಲ್ಲ. ನಮ್ಮ ವಕೀಲರು ಸುಪ್ರೀಂ ಕೋರ್ಟ್‌ಗೆ ತೆರಳುತ್ತಿದ್ದಾರೆ. ಪಾಕಿಸ್ತಾನದ ಸಂವಿಧಾನವನ್ನು ರಕ್ಷಿಸಲು, ಎತ್ತಿಹಿಡಿಯಲು, ರಕ್ಷಿಸಲು ಮತ್ತು ಜಾರಿಗೊಳಿಸಲು ನಾವು ಎಲ್ಲಾ ಸಂಸ್ಥೆಗಳಿಗೆ ಕರೆ ನೀಡುತ್ತೇವೆ," ಎಂದು ಬಿಲಾವಲ್ ಭುಟ್ಟೋ ಜರ್ದಾರಿ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಇನ್ನು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಅವಿಶ್ವಾಸ ನಿರ್ಣಯವನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಇಸ್ಲಾಮಾಬಾದ್‌ನಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ.

Pakistan Supreme Court To hear no-trust vote rejection Monday

ಪಾಕಿಸ್ತಾನ ರಾಜಕೀಯದಲ್ಲಿ ಸೇನೆಯ ಪಾತ್ರ?

ಈ ನಡುವೆ ಪಾಕಿಸ್ತಾನದ ರಾಜಕೀಯ ಸ್ಥಿತಿಯಲ್ಲಿ ಸೇನೆಯ ಪಾತ್ರವಿದೆ ಎಂದು ಸುದ್ದಿಯಾಗಿದೆ. ಆದರೆ ಪಾಕಿಸ್ತಾನ ಸೇನೆಯು ಈ ವದಂತಿಯನ್ನು ಅಲ್ಲಗಳೆದಿದೆ. ದೇಶದಲ್ಲಿ ಚಾಲ್ತಿಯಲ್ಲಿರುವ ರಾಜಕೀಯ ಪರಿಸ್ಥಿತಿಯಲ್ಲಿ ಸೇನೆಯ ಯಾವುದೇ ರೀತಿಯ ಪಾಲ್ಗೊಳ್ಳುವಿಕೆ ಇಲ್ಲ ಎಂದು ಪಾಕಿಸ್ತಾನದ ಮಿಲಿಟರಿ ವಕ್ತಾರ ಮೇಜರ್ ಜನರಲ್ ಬಾಬರ್ ಇಫ್ತಿಕರ್ ಸ್ಪಷ್ಟಪಡಿಸಿದ್ದಾರೆ. "ಇಂದು ಪಾಕಿಸ್ತಾನ ಸಂಸತ್ತಿನಲ್ಲಿ ಏನಾಯಿತು ಎಂಬುದಕ್ಕೂ ಸೈನ್ಯಕ್ಕೂ ಯಾವುದೇ ಸಂಬಂಧವಿಲ್ಲ," ಎಂದು ಪಾಕಿಸ್ತಾನದ ಮಿಲಿಟರಿ ವಕ್ತಾರ ಮೇಜರ್ ಜನರಲ್ ಬಾಬರ್ ಇಫ್ತಿಕರ್ ಹೇಳಿದ್ದಾರೆ.

ಇನ್ನು ಈ ಹಿಂದಿನಿಂದಲೇ ''ಸ್ಪೀಕರ್ ನಿರ್ಧಾರಕ್ಕೆ ನಾನು ಪ್ರತಿಯೊಬ್ಬ ಪಾಕಿಸ್ತಾನಿಯನ್ನು ಅಭಿನಂದಿಸುತ್ತೇನೆ. ಅವಿಶ್ವಾಸ ನಿರ್ಣಯವು ನಮ್ಮ ವಿರುದ್ಧ ವಿದೇಶಿ ಷಡ್ಯಂತ್ರವಾಗಿದೆ. ಅವರನ್ನು ಯಾರು ಆಳಬೇಕು ಎಂಬುದನ್ನು ರಾಷ್ಟ್ರದ ನಿರ್ಧರಿಸಬೇಕು. ವಿದೇಶಿ ಶಕ್ತಿಗಳೊಂದಿಗೆ ಷಡ್ಯಂತ್ರ ಮಾಡುವ ಭ್ರಷ್ಟರಲ್ಲ. ಚುನಾವಣೆಗೆ ತಯಾರಿ ಮಾಡಿಕೊಳ್ಳಿ. ನೀವು ನಿರ್ಧರಿಸುತ್ತೀರಿ,'' ಎಂದು ಇಮ್ರಾನ್ ಖಾನ್ ಹೇಳುತ್ತಾ ಬಂದಿದ್ದಾರೆ.

English summary
Pakistan Supreme Court To hear no-trust vote rejection Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X