ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಮಾತ್-ಉದ್-ದವಾಗೆ ಲಕ್ಷಗಟ್ಟಲೆ ಖರ್ಚು ಮಾಡುತ್ತಿದ್ದೇವೆ: ಪಾಕ್ ಸಚಿವ

|
Google Oneindia Kannada News

ಇಸ್ಲಾಮಾಬಾದ್, ಸೆಪ್ಟೆಂಬರ್ 12: ಪಾಕಿಸ್ತಾನವು ಲಕ್ಷಾಂತರ ರುಪಾಯಿಯನ್ನು ಭಯೋತ್ಪಾದಕ ಸಂಘಟನೆ ಜಮಾತ್- ಉದ್- ದವಾ (ಜೆಯುಡಿ)ಗಾಗಿ ಖರ್ಚು ಮಾಡುತ್ತಿದೆ ಎಂದು ಆಂತರಿಕ ಸಚಿವ ರಾಷ್ಟ್ರೀಯ ವಾಹಿನಿಯಲ್ಲಿ ಒಪ್ಪಿಕೊಂಡಿದ್ದಾರೆ. ಬ್ರಿಗೇಡಿಯರ್ ಇಜಾಜ್ ಅಹ್ಮದ್ ಷಾ ಮಾತನಾಡಿ, ಮುಖ್ಯವಾಹಿನಿಗೆ ಕರೆತರುವ ನಿಟ್ಟಿನಲ್ಲಿ ಇಮ್ರಾನ್ ಖಾನ್ ಸರಕಾರ ಲಕ್ಷಾಂತರ ರುಪಾಯಿ ಖರ್ಚು ಮಾಡುತ್ತಿದೆ ಎಂದು ಹೇಳಿದ್ದಾರೆ.

ಪತ್ರಕರ್ತ ನದೀಂ ಮಲಿಕ್ ರ ಟಾಕ್ ಶೋನಲ್ಲಿ ಮಾತನಾಡಿದ ಷಾ, ಜೆಯುಡಿ ಮೇಲೆ ಲಕ್ಷಾಂತರ ರುಪಾಯಿ ಖರ್ಚು ಮಾಡುತ್ತಿದ್ದೇವೆ. ಆ ಸಂಘಟನೆ ಸದಸ್ಯರು ಮಾಡುತ್ತಿರುವ ಕೆಲಸದಿಂದ ವಿಮುಖರಾಗಿ ಮುಖ್ಯವಾಹಿನಿಗೆ ಬರಲಿ ಎಂಬ ಕಾರಣಕ್ಕೆ ಇಷ್ಟು ಖರ್ಚು ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.

ಪಾಕಿಸ್ತಾನದ ಆರ್ಥಿಕತೆ ಕುರಿತು ಪಾಕ್ ಪ್ರಧಾನಿಗೆ ಬಾಲಕನ ಪಾಠಪಾಕಿಸ್ತಾನದ ಆರ್ಥಿಕತೆ ಕುರಿತು ಪಾಕ್ ಪ್ರಧಾನಿಗೆ ಬಾಲಕನ ಪಾಠ

ಜುಲೈನಲ್ಲಿ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅಮೆರಿಕಕ್ಕೆ ಭೇಟಿ ನೀಡಿದ್ದ ವೇಳೆಯೂ ಇಂಥದ್ದೇ ವಿಚಾರ ಬಯಲು ಮಾಡಿದ್ದರು. ಪಾಕಿಸ್ತಾನದಲ್ಲಿ ಈಗಲೂ ಮೂವತ್ತರಿಂದ ನಲವತ್ತು ಸಾವಿರ ಉಗ್ರರು ಇದ್ದಾರೆ. ಅವರಿಗೆ ಅಪ್ಘಾನಿಸ್ತಾನ ಅಥವಾ ಕಾಶ್ಮೀರದಲ್ಲಿ ತರಬೇತಿಯಾಗಿ, ಅಲ್ಲೇ ಹೋರಾಟ ನಡೆಸಿದವರು ಎಂದು ತಿಳಿಸಿದ್ದರು.

Pakistan Spending Millions Of Money To Jamat- Ud- Dawa

ಗಡಿಗಳ ಬಳಿ ನಲವತ್ತು ವಿವಿಧ ಉಗ್ರ ಸಂಘಟನೆಗಳು ಕಾರ್ಯ ನಿರ್ವಹಿಸುತ್ತಿವೆ ಎಂದು ಇಮ್ರಾನ್ ಖಾನ್ ಮತ್ತೊಂದು ಕಾರ್ಯಕ್ರಮದಲ್ಲಿ ಹೇಳಿದ್ದರು. ಮುಂದಿನ ಅಕ್ಟೋಬರ್ ನಲ್ಲಿ ಪ್ಯಾರಿಸ್ ಮೂಲದ ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ ಜತೆಗೆ ಸಭೆ ಇದ್ದು, ಅದಕ್ಕೂ ಮುನ್ನ ಸಚಿವ ಷಾ ಈ ಹೇಳಿಕೆ ನೀಡಿದ್ದಾರೆ ಎಂಬ ಮಾತಿದೆ.

ಮತ್ತೊಂದು ಮುಜುಗರದ ಸಂಗತಿ ಏನೆಂದರೆ, ಅದೇ ಟಾಕ್ ಶೋನಲ್ಲಿ ಷಾ ಮಾತನಾಡುತ್ತಾ, ಕಾಶ್ಮೀರ ವಿಚಾರದಲ್ಲಿ ಅಂತರರಾಷ್ಟ್ರೀಯ ಸಮುದಾಯದ ಬೆಂಬಲ ಪಡೆಯಲು ಪಾಕಿಸ್ತಾನ ವಿಫಲವಾಗಿದೆ ಎಂದಿದ್ದಾರೆ.

English summary
Internal minister of Pakistan Ijaj Ahmad Shah revealed that, Pakistan spending millions of money to terrorist outfit Jamat- Ud- Dawa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X