ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೆಟ್ರೋಲ್ ಬೆಲೆ ಏರಿಕೆ ವಿರುದ್ಧ ಪಾಕಿಸ್ತಾನ ಸಂಸದ ಪ್ರತಿಭಟನೆ

|
Google Oneindia Kannada News

ಇಸ್ಲಾಮಾಬಾದ್, ನವೆಂಬರ್ 08: ಪೆಟ್ರೋಲ್ ಬೆಲೆ ಏರಿಕೆ ವಿರುದ್ಧ ಪಾಕಿಸ್ತಾನ ಸಂಸದ ಬಹ್ರಾಮಂದ್ ಖಾನ್ ತಂಗಿ ಪ್ರತಿಭಟನೆ ನಡೆಸಿದ್ದಾರೆ.

ನನಗೆ ಪೆಟ್ರೋಲ್ ಖರೀದಿಸಲು ಸಾಧ್ಯವಾಗುತ್ತಿಲ್ಲ ಎಂದು ಘೋಷಣೆ ಕೂಗುತ್ತಾ ಸೈಕಲ್‌ನಲ್ಲಿ ಪ್ರತಿಭಟನೆ ನಡೆಸಿ ಇಮ್ರಾನ್ ಖಾನ್ ಸರ್ಕಾರದ ವಿರುದ್ಧ ಗುಡುಗಿದ್ದಾರೆ.

ಪಾಕ್ ಇತಿಹಾಸದಲ್ಲೇ ಮೊದಲ ಬಾರಿಗೆ ಪೆಟ್ರೋಲ್, ಡೀಸೆಲ್ ಬೆಲೆ ದಾಖಲೆ ಮಟ್ಟದಲ್ಲಿ ಏರಿಕೆಪಾಕ್ ಇತಿಹಾಸದಲ್ಲೇ ಮೊದಲ ಬಾರಿಗೆ ಪೆಟ್ರೋಲ್, ಡೀಸೆಲ್ ಬೆಲೆ ದಾಖಲೆ ಮಟ್ಟದಲ್ಲಿ ಏರಿಕೆ

ಇಮ್ರಾನ್ ಖಾನ್ ತೈಲ ಬೆಲೆ ಏರಿಕೆ ಮಾಡಿದ್ದು, ಪೆಟ್ರೋಲಿಯಂ ದರವನ್ನು ಪಾಕಿಸ್ತಾನಿ ರುಪಿಯಲ್ಲಿ ಪ್ರತಿ ಲೀಟರ್‌ಗೆ 8.14ರಷ್ಟು ಏರಿಕೆ ಮಾಡಲಾಗಿದೆ. ತಕ್ಷಣದಿಂದಲೇ ಈ ದರ ಜಾರಿಯಾಗುವಂತೆ ಸೂಚಿಸಲಾಗಿದೆ.

Pakistan Senator Protests Imran Khan Govts Fuel Rate Hike By Reaching Parliament On Cycle

ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಇದೀಗ ಲೀಟರ್‌ಗೆ 110 ಪಿಕೆಆರ್‌ನಷ್ಟಿದೆ. ಒಂದೇ ಬಾರಿಗೆ ಇಷ್ಟೊಂದು ದರ ಹೆಚ್ಚಳ ಮಾಡಿದ್ದು, ಪಾಕಿಸ್ತಾನದ ಇತಿಹಾಸದಲ್ಲೇ ಇದು ಮೊದಲಾಗಿದೆ.

ಅಂತಾರಾಷ್ಟ್ರೀಯ ಹಣಕಾಸು ನಿಧಿ ಯೋಜನೆಯಲ್ಲಿ ಈ ದರ ಏರಿಕೆ ಮಾಡಲಾಗಿದೆ ಎಂದು ಡಾನ್ ವರದಿ ಮಾಡಿದೆ. ಪಾಕಿಸ್ತಾನದಲ್ಲಿ ಪೆಟ್ರೋಲ್ ಬೆಲೆಯಲ್ಲಿ ಲೀಟರ್‌ಗೆ 8.03 ಪಿಕೆಆರ್ ಹೆಚ್ಚಿಸಿದ್ದರೆ , ಹೈಸ್ಪೀಡ್ ಡೀಸೆಲ್ ಬೆಲೆಯನ್ನು 8.14 ಪಿಕೆಆರ್ ಏರಿಕೆ ಮಾಡಲಾಗಿದೆ. ಸೀಮೆ ಎಣ್ಣೆ ಬೆಲೆಯನ್ನು 6.27ಪಿಕೆಆರ್‌ನಷ್ಟು ಹೆಚ್ಚಿಸಲಾಗಿದೆ. ಲಘು ಡೀಸೆಲ್ ಬೆಲೆಯನ್ನು ಲೀಟರ್‌ಗೆ 5.72 ಪಿಕೆಆರ್‌ನಷ್ಟು ಹೆಚ್ಚಳ ಮಾಡಲಾಗಿದೆ. ಭಾರತದ ಒಂದು ರೂ ಅಲ್ಲಿಯ 2.29 ಪಿಕೆಆರ್‌ಗೆ ಸಮನಾಗಿರುತ್ತದೆ.

ಭಾರೀ ಪ್ರಮಾಣದ ಸಾಲ ಪಾಕಿಸ್ತಾನವನ್ನು ತತ್ತರಿಸುವಂತೆ ಮಾಡಿದೆ. ಡಾಲರ್ ಎದುರು ಪಾಕಿಸ್ತಾನ ರೂಪಾಯಿ ಮೌಲ್ಯ ಭಾರಿ ಪ್ರಮಾಣದಲ್ಲಿ ಕುಸಿತ ಕಂಡಿದ್ದು, 1 ಡಾಲರ್ 170+ ಪಾಕಿಸ್ತಾನಿ ರೂಪಾಯಿಯಾಗಿದೆ.

ಅವಶ್ಯಕ ವಸ್ತುಗಳ ಬೆಲೆಗಳು ಗಗನಕ್ಕೇರಿದ್ದು, ಅಲ್ಲಿನ ನಾಗರಿಕರು ಇಮ್ರಾನ್ ಖಾನ್ ನೇತೃತ್ವದ ಸರ್ಕಾರವನ್ನು ತೀವ್ರವಾಗಿ ಟೀಕಿಸುತ್ತಿದ್ದಾರೆ.

ಪಾಕಿಸ್ತಾನದ ಪರಿಸ್ಥಿತಿ ಎಷ್ಟರಮಟ್ಟಿಗೆ ಹದಗೆಟ್ಟಿದೆ ಅಂದರೆ, ಅಲ್ಲಿನ ಪ್ರಜೆಗಳು ಒಂದು ಕೆಜಿ ಸಕ್ಕರೆ ತೆಗೆದುಕೊಳ್ಳಬೇಕೆಂದರೆ 150 ರೂಪಾಯಿ ಪಾವತಿಸಬೇಕಾಗುತ್ತದೆ. ಆದರೆ ಇದೇ ಸಂದರ್ಭದಲ್ಲಿ ಪೆಟ್ರೋಲ್ ಪ್ರತಿ ಲೀಟರ್ ಗೆ 138 ರೂಪಾಯಿ ಆಸುಪಾಸಿನಲ್ಲಿ ಬಿಕರಿಯಾಗುತ್ತಿದೆ.

ಪಾಕಿಸ್ತಾನದ ಮಾಧ್ಯಮ ಜಿಯೋ ನ್ಯೂಸ್ ಪ್ರಕಾರ, ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ತೀವ್ರ ಏರಿಕೆಯಾಗಿದೆ. ಇತ್ತೀಚೆಗಷ್ಟೇ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್, ಬೆಲೆ ಏರಿಕೆ ನಿಯಂತ್ರಿಸುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದರು. ಆದರೂ ಸಹ ಸಕ್ಕರೆ ಬೆಲೆ 150 ರೂಪಾಯಿ ಗಡಿ ದಾಟಿದೆ.

ಪಾಕಿಸ್ತಾನದ ಡೀಲರ್ಸ್ ಅಸೋಸಿಯೇಷನ್ ಪ್ರಕಾರ, ಪೇಶಾವರದಲ್ಲಿ ಪ್ರತಿ ಕೆಜಿ ಸಕ್ಕರೆ 140 ರೂಪಾಯಿ ರೇಟ್ ನಲ್ಲಿ ಮಾರಾಟವಾಗುತ್ತಿದೆ. ಆದರೆ, ಇದು ಚಿಲ್ಲರೆ ವ್ಯಾಪಾರಿಗಳ ಕೈಯಲ್ಲಿ 145-150 ರೂಪಾಯಿಗೆ ಏರಿಕೆಯಾಗಿದೆ ಅಂತಾ ತಿಳಿಸಿದೆ.

ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ತಮ್ಮ ದೇಶದ ಜನತೆಯನ್ನುದ್ದೇಶಿಸಿ ಮಾತನಾಡಿದ್ದು ವಿಶ್ವದ ಹಾಗೂ ಪಾಕಿಸ್ತಾನದಲ್ಲಿನ ಹಣದುಬ್ಬರದ ಕುರಿತು ಹಲವು ವಿಷಯಗಳನ್ನು ತಿಳಿಸಿದ್ದಾರೆ. ಈ ವೇಳೆ ಅವರು ಭಾರತದಲ್ಲಿನ ಪೆಟ್ರೋಲ್ ಬೆಲೆಯ ಕುರಿತು ಕೂಡ ಉಲ್ಲೇಖಿಸಿದ್ಧಾರೆ. ಈ ಸಂದರ್ಭದಲ್ಲಿ ಇತರ ದೇಶಗಳಲ್ಲಿನ ಪೆಟ್ರೋಲ್-ಡಿಸೇಲ್ ಬೆಲೆಯ ಕುರಿತು ಮಾಹಿತಿ ನೀಡಿರುವ ಇಮ್ರಾನ್ ಪಾಕಿಸ್ತಾನದಲ್ಲಿನ ಪ್ರತಿ ಲೀಟರ್ ಪೆಟ್ರೋಲ್ ದರ ಕಡಿಮೆ ಇಟ್ಟಿರುವುದಕ್ಕಾಗಿ ಸಮರ್ಥಿಸಿಕೊಂಡಿದ್ದಾರೆ.

ಪಾಕ್ ನಲ್ಲಿ ನಡೆದ ರಾಲಿಯಯನ್ನುದ್ದೇಶಿಸಿ ಮಾತನಾಡಿದ ಇಮ್ರಾನ್ ಖಾನ್, 'ಪೆಟ್ರೋಲ್ ಬೆಲೆಗೆ ಸಂಬಂಧಿಸಿದಂತೆ ಭಾರತದಲ್ಲಿ ಭಾರಿ ಕೋಲಾಹಲ ನಡೆಯುತ್ತಿದೆ.

ಬಾಂಗ್ಲಾದೇಶದಲ್ಲಿ ಪೆಟ್ರೋಲ್ 200 ರೂ. ಆದರೆ ಪಾಕಿಸ್ತಾನದಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ 146 ರೂ ಇದೆ ಮತ್ತು ಇದು ಅತ್ಯಂತ ಕಡಿಮೆ ದರವಾಗಿದೆ ಎಂದು ಹೇಳಿದ್ದಾರೆ.
ತಮ್ಮ ಸರ್ಕಾರ ಪೆಟ್ರೋಲ್ ಮೇಲಿನ ತೆರಿಗೆ ಮತ್ತು ಹಲವು ವಿಧದ ಸುಂಕಗಳನ್ನು ತೆಗೆದುಹಾಕಿರುವುದರಿಂದ ಪಾಕಿಸ್ತಾನದಲ್ಲಿ ಪೆಟ್ರೋಲ್ ಅಗ್ಗವಾಗಿದೆ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ. ಹಣದುಬ್ಬರಕ್ಕೆ ಕೊರೊನಾ ವೈರಸ್ ಕಾರಣ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.

ಲಾಕ್‌ಡೌನ್ ಕಾರಣ ಈ ಹಿಂದೆ ವಸ್ತುಗಳು ಅಗ್ಗವಾಗಿದ್ದವು ಮತ್ತು ಇದೀಗ ಇದ್ದಕ್ಕಿದ್ದಂತೆ ಮತ್ತೆ ದುಬಾರಿಯಾಗಿವೆ. ಇತರ ದೇಶಗಳಿಗೆ ಹೋಲಿಸಿದರೆ ಪಾಕಿಸ್ತಾನದಲ್ಲಿ ಹಣದುಬ್ಬರ ಕಡಿಮೆ ಇದೆ ಎಂದು ಇಮ್ರಾನ್ ತಮ್ಮ ದೇಶದ ಜನರಿಗೆ ದಾರಿತಪ್ಪಿಸುವ ಹೇಳಿಕೆಗಳನ್ನು ಹೇಳಿದ್ದಾರೆ.

English summary
Marking his protest against the hiking petrol prices in the country, Pakistan Peoples Party (PPP) senator Bahramand Khan Tangi arrived at the Parliament on a bicycle on Friday, 5 November. Tangi arrived at the Parliament house on a bicycle after the Imran Khan-led government increased petrol and diesel prices overnight.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X