• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪಾಕಿಸ್ತಾನದಲ್ಲಿ ರಂಜಾನ್ ಮುಗಿಯುತ್ತಿದ್ದಂತೆಯೇ ಆಹಾರ ಬೆಲೆ ದುಬಾರಿ; ಜನರು ಕಂಗಾಲು

|
Google Oneindia Kannada News

ಇಸ್ಲಾಮಾಬಾದ್, ಮೇ 7: ಮುಸ್ಲಿಮರ ಪವಿತ್ರ ರಂಜಾನ್ ಹಬ್ಬದ ಪ್ರಯುಕ್ತ ಪಾಕಿಸ್ತಾನ ಸರಕಾರ ಎಲ್ಲಾ ಜನರಿಗೂ ಪರಿಹಾರ ಪ್ಯಾಕೇಜ್ ಒದಗಿಸಿತ್ತು. ದಿನೋಪಯೋಗಿ ಆಹಾರ ವಸ್ತುಗಳನ್ನ ಅಗ್ಗದ ದರದಲ್ಲಿ ಜನರಿಗೆ ಹಂಚಲಾಗಿತ್ತು. ಇದೀಗ ರಂಜಾನ್ ಹಬ್ಬ ಮುಗಿಯುತ್ತಿದ್ದಂತೆಯೇ ಈ ಯೋಜನೆ ಅಂತ್ಯಗೊಂಡಿದೆ. ಇದರ ಬೆನ್ನಲ್ಲೇ ಆಹಾರ ವಸ್ತುಗಳ ಬೆಲೆ ಗಗನಕ್ಕೇರಿದೆ. ಇವುಗಳು ರಂಜಾನ್ ಪೂರ್ವದಲ್ಲಿ ಇದ್ದ ಮೂಲಬೆಲೆಗಿಂತಲೂ ಈಗ ಬಹಳ ಹೆಚ್ಚು ದುಬಾರಿಯಾಗಿವೆ.

ಕಡಲೆ ಹಿಟ್ಟು ಮೊದಲಾದ ಆಹಾರಗಳ ಬೆಲೆ ಕಿಲೋಗೆ 20 ರೂವರೆಗೂ ಹೆಚ್ಚಳವಾಗಿದೆ. ಅಡುಗೆ ಎಣ್ಣೆ, ಅಕ್ಕಿ ಬೇಳೆ ಕಾಳು ಇತ್ಯಾದಿ ಎಲ್ಲಾ ಆಹಾರ ವಸ್ತುಗಳ ಬೆಲೆ ದಿಢೀರ್ ದುಬಾರಿಯಾಗಿದೆ. ಪಾಕಿಸ್ತಾನದ ಉಗ್ರಾಣ ನಿಗಮವೇ ಅಧಿಕೃತವಾಗಿ ಬಿಡುಗಡೆ ಮಾಡಿದ ದರ ಪಟ್ಟಿಯಲ್ಲಿ ಈ ಹೊಸ ಬೆಲೆಗಳು ನಮೂದಾಗಿವೆ ಎಂದು ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ನಾನೊಬ್ಬ ಕತ್ತೆ; ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಾಯಲ್ಲಿ ಇದೆಂಥಾ ಮಾತು!? ನಾನೊಬ್ಬ ಕತ್ತೆ; ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಾಯಲ್ಲಿ ಇದೆಂಥಾ ಮಾತು!?

ಇಮ್ರಾನ್ ಖಾನ್ ಕೊಟ್ಟಿದ್ದ ಪ್ಯಾಕೇಜ್:
ಇಮ್ರಾನ್ ಖಾನ್ ಪ್ರಧಾನಿಯಾಗಿದ್ದಾಗ ಸರಕಾರದ ಆರ್ಥಿಕ ಸಮನ್ವಯ ಸಮಿತಿ (ಇಸಿಸಿ) ಇದೇ ಮಾರ್ಚ್ ತಿಂಗಳಲ್ಲಿ 8.3 ಬಿಲಿಯನ್ ಪಾಕ್ ರೂ (ಭಾರತೀಯ ರೂಪಾಯಿಯಲ್ಲಿ ಇದು 342 ಕೋಟಿ) ಮೊತ್ತದ ರಂಜಾನ್ ರಿಲೀಫ್ ಪ್ಯಾಕೇಜ್‌ಗೆ ಅನುಮೋದನೆ ಕೊಟ್ಟಿತ್ತು. ವಿವಿಧ ಬೇಳೆ ಕಾಳು, ಹಿಟ್ಟು, ಸಕ್ಕರೆ, ತುಪ್ಪ, ಖರ್ಜೂರ, ಹಾಲು, ಟೀ ಇತ್ಯಾದಿ 19 ಅಗತ್ಯ ಅಡುಗೆ ವಸ್ತುಗಳ ಮೇಲೆ ಸಬ್ಸಿಡಿ ಒದಗಿಸಲಾಗಿತ್ತು.

ಇಮ್ರಾನ್ ಖಾನ್ ಪದಚ್ಯುತಿ ಬಳಿಕ ಅಧಿಕಾರಕ್ಕೆ ಬಂದ ಶಬಾಜ್ ಷರೀಫ್ ನೇತೃತ್ವದ ಸರಕಾರ ಏಪ್ರಿಲ್ ತಿಂಗಳಲ್ಲಿ ಕೆಲ ವಸ್ತುಗಳ ಬೆಲೆ ಇಳಿಸಿತ್ತು. ಆದರೂ ರಂಜಾನ್ ಬಳಿಕ ಅನೇಕ ಆಹಾರವಸ್ತುಗಳ ಬೆಲೆ ವಿಪರೀತ ಹೆಚ್ಚಳವಾಗಿದೆ.

Pakistan sees steep rise in food prices after Ramzan

ಪಾಕಿಸ್ತಾನ ಇದೀಗ ಆರ್ಥಿಕ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದೆ. ಚೀನಾಗೆ ಕೊಡಬೇಕಿದ್ದ ಸಾಲವನ್ನು ಮರುಪಾವತಿ ಮಾಡಿದ ಬಳಿಕ ಪಾಕಿಸ್ತಾನದ ಆರ್ಥಿಕತೆ ಅಕ್ಷರಶಃ ದುರ್ಬಲಗೊಂಡಿದೆ. ಪುನಶ್ಚೇತನಕ್ಕೆ ಈಗ ಪಾಕಿಸ್ತಾನಕ್ಕೆ ಹೊಸ ಸಾಲ ಅತ್ಯಗತ್ಯವಾಗಿದೆ. ಐಎಂಎಫ್ ಬಿಟ್ಟರೆ ಯಾರೂ ಕೂಡ ಪಾಕಿಸ್ತಾನಕ್ಕೆ ಸಾಲ ಕೊಡಲು ಮುಂದೆ ಬರುತ್ತಿಲ್ಲ. ಮಿತ್ರ ದೇಶಗಳಾದ ಸೌದಿ ಅರೇಬಿಯಾ, ಯುಎಇಗಳಿಂದಲೂ ಸಾಲ ಬಂದಿಲ್ಲ. ಈ ಪರಿಸ್ಥಿತಿ ಹೀಗೇ ಮುಂದುವರಿದರೆ ಪಾಕಿಸ್ತಾನದ ಆರ್ಥಿಕತೆ ಮುಂದಿನ ದಿನಗಳಲ್ಲಿ ಶೋಚನೀಯ ಸ್ಥಿತಿಗೆ ಇಳಿಯಲಿದೆ ಎಂದು ಅಲ್ಲಿನ ಆರ್ಥಿಕ ತಜ್ಞರು ಹೇಳಿದ್ದಾರೆ.

(ಒನ್ಇಂಡಿಯಾ ಸುದ್ದಿ)

English summary
Food prices in Pakistan have gone high after Govt's subsidy package for Ramzan comes to an end.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X