ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನದಲ್ಲಿ ಕೊರೊನಾ ಸೋಂಕು ಏಕಾಏಕಿ ಕಡಿಮೆಯಾಗಲು ಕಾರಣವೇನು?

|
Google Oneindia Kannada News

ಇಸ್ಲಾಮಾಬಾದ್, ಸೆಪ್ಟೆಂಬರ್ 02: ವಿಶ್ವದಲ್ಲಿ ಕೊರೊನಾ ಸೋಂಕು ಹರಡಲು ಆರಂಭವಾಗಿ ಆರು ತಿಂಗಳುಗಳೇ ಕಳೆದಿದೆ.

Recommended Video

China ಗಡಿಗೆ ಎಂಟ್ರಿ ಕೊಟ್ಟ ಭಾರತೀಯ ಸೇನೆ | Oneindia Kannada

ಒಂದು ಸಮಯದಲ್ಲಿ ಅತಿ ಹೆಚ್ಚು ಕೊರೊನಾ ಸೋಂಕಿಗೆ ತುತ್ತಾಗಿದ್ದ ಪಾಕಿಸ್ತಾನದಲ್ಲಿ ಪ್ರಕರಣಗಳು ಕಡಿಮೆಯಾಗಿವೆ. ಸಾವಿನ ಸಂಖ್ಯೆಯೂ ಕೂಡ ಒಂದಂಕಿಗೆ ಬಂದು ನಿಂತಿದೆ.

ಆದರೆ ನೆರೆ ರಾಷ್ಟ್ರ ಭಾರತದಲ್ಲಿ ಮಾತ್ರ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಜನರು ಸಾಯುತ್ತಿದ್ದಾರೆ.ಪಾಕಿಸ್ತಾನದಲ್ಲಿ ಕೊರೊನಾ ಸೋಂಕು ಕಡಿಮೆಯಾಗಿದ್ದು ಒಗಟಿನಂತಿದೆ, ಕಾರಣವನ್ನು ಬಿಡಿಸಲು ಸಾಧ್ಯವಾಗುತ್ತಿಲ್ಲ.

ಸೆಪ್ಟೆಂಬರ್ ಮಧ್ಯದಿಂದ ಪಾಕಿಸ್ತಾನದಲ್ಲಿ ಶಾಲಾ, ಕಾಲೇಜು ಪುನರಾರಂಭಸೆಪ್ಟೆಂಬರ್ ಮಧ್ಯದಿಂದ ಪಾಕಿಸ್ತಾನದಲ್ಲಿ ಶಾಲಾ, ಕಾಲೇಜು ಪುನರಾರಂಭ

ಪಾಕಿಸ್ತಾನದಲ್ಲಿ ರೆಸ್ಟೋರೆಂಟ್, ಪಾರ್ಕ್, ಮಾಲ್‌ಗಳು, ಥಿಯೇಟರ್‌ಗಳು ತೆರೆದಿವೆ. ಸಾರ್ವಜನಿಕ ಸಾರಿಗೆ ಕೂಡ ಆರಂಭವಾಗಿವೆ. ಶಾಲಾ, ಕಾಲೇಜುಗಳು ಸೆಪ್ಟೆಂಬರ್ ಅಂತ್ಯದ ವೇಳೆಗೆ ಆರಂಭಗೊಳ್ಳಲಿವೆ.

ಜನರು ಕೊರೊನಾ ವೈರಸ್ ಮೊದಲನೇ ಅಲೆಯಿಂದ ಬಚಾವಾಗಿರಬಹುದು ಆದರೆ ಎರಡನೇ ಅಲೆ ಆರಂಭವಾಗುವ ಸಾಧ್ಯತೆ ಇದೆ.

ಪೋಲಿಯೋ, ಕ್ಷಯ ವಿಪರೀತವಾಗಿತ್ತು

ಪೋಲಿಯೋ, ಕ್ಷಯ ವಿಪರೀತವಾಗಿತ್ತು

ಪೋಲಿಯೋ, ಕ್ಷಯ ಹಾಗೂ ಹೆಪಟೈಟಿಸ್‌ನಂತಹ ಅಸಂಖ್ಯಾತ ಸಾಂಕ್ರಾಮಿಕ ಕಾಯಿಲೆಗಳನ್ನು ಒಳಗೊಂಡಿರುವಲ್ಲಿ ಪಾಕಿಸ್ತಾನ ಸುದೀರ್ಘ ಇತಿಹಾಸವನ್ನು ಹೊಂದಿದೆ. ಆದರೆ ಕೊರೊನಾ ಸೋಂಕಿನಿಂದ ಮುಕ್ತವಾಗುವ ಹಾದಿಯಲ್ಲಿ ಸಾಗುತ್ತಿದೆ.

ಹೆಚ್ಚು ಮಂದಿ ಒಟ್ಟಿಗೆ ವಾಸಿಸುತ್ತಾರೆ

ಹೆಚ್ಚು ಮಂದಿ ಒಟ್ಟಿಗೆ ವಾಸಿಸುತ್ತಾರೆ

ಪಾಕಿಸ್ತಾನದಲ್ಲಿ ಕೂಡು ಕುಟುಂಬ ಹೆಚ್ಚು, ಒತ್ತೊತ್ತು ಮನೆಗಳು ಕೂಡ ಇವೆ, ವಠಾರದ ರೀತಿಯಲ್ಲಿ ವಾಸಿಸುವವರು ತುಂಬಾ ಮಂದಿ ಇದ್ದಾರೆ.ಆದರೂ ಕೂಡ ಸೋಂಕು ಕಡಿಮೆಯಾಗಿದೆ ಇದರ ಹಿಂದಿರುವ ಕಾರಣವೇನು ಎಂಬುದು ಎಲ್ಲರಲ್ಲಿ ಕಾಡುತ್ತಿರುವ ಪ್ರಶ್ನೆಯಾಗಿದೆ.

ಪಾಕಿಸ್ತಾನದಲ್ಲಿ ಮೊದಲ ಕೊರೊನಾ ವೈರಸ್ ಅಲೆ ಮುಕ್ತಾಯವಾಗಿದೆ. ಭಾರತದಲ್ಲಿ 78,761 ಮಂದಿ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. 64 ಸಾವಿರ ಮಂದಿ ಸಾವನ್ನಪ್ಪಿದ್ದಾರೆ.

ಪಾಕಿಸ್ತಾನದಲ್ಲಿ ಸರಾಸರಿ ವರ್ಷ 22

ಪಾಕಿಸ್ತಾನದಲ್ಲಿ ಸರಾಸರಿ ವರ್ಷ 22

ಪಾಕಿಸ್ತಾನದಲ್ಲಿ ಸರಾಸರಿ ವರ್ಷ 22, ಕೊರೊನಾವು ವಯಸ್ಸಾದವರ ಮೇಲೆ ಹೆಚ್ಚು ಪರಿಣಾಮವನ್ನು ಉಂಟು ಮಾಡುತ್ತದೆ. ಇಟಲಿಗೆ ಹೋಲಿಕೆ ಮಾಡಿದಾಗ ಇಟಲಿಯಲ್ಲಿ 46.5 ಸರಾಸರಿ ವರ್ಷವಿದೆ. ಅಲ್ಲಿ 35 ಸಾವಿರ ಮಂದಿ ಸಾವನ್ನಪ್ಪಿದ್ದಾರೆ. ಪಾಕಿಸ್ತಾನದಲ್ಲಿ 6,300 ಮಂದಿ ಮೃತಪಟ್ಟಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ 295,000 ಮಂದಿ ಕೊರೊನಾ ಸೋಂಕಿತರಿದ್ದಾರೆ.

ಪರೀಕ್ಷೆ ಕಡಿಮೆ

ಪರೀಕ್ಷೆ ಕಡಿಮೆ

ಪರೀಕ್ಷೆ ಕಡೆಗೆ ಗಮನ ಕೊಡುವುದಾದರೆ ಕಡಿಮೆ ಪರೀಕ್ಷೆ ಮಾಡಿಸಿದಾಗ ಸೋಂಕಿತರ ಸಂಖ್ಯೆಯೂ ಕಡಿಮೆ ಇರುತ್ತದೆ, ಹೆಚ್ಚೆಚ್ಚು ಜನರನ್ನು ಪರೀಕ್ಷೆ ಮಾಡಿಸಿದಾಗ ಫಲಿತಾಂಶವೂ ಹೆಚ್ಚಿರುತ್ತದೆ. ಲಾಹೋರ್‌ನಲ್ಲಿ ಒಟ್ಟು ಜನಸಂಖ್ಯೆಯ ಶೇ.7ರಷ್ಟು ಮಂದಿಗೆ ಕೊರೊನಾ ಸೋಂಕು ತಗುಲಿದೆ. ಹಾಗೆಯೇ ಪಾಕಿಸ್ತಾನದ ಆಸ್ಪತ್ರೆಗಳು ನೀಡುವ ಮಾಹಿತಿ ಪ್ರಕಾರ ಪರೀಕ್ಷೆಗಳು ಕೂಡ ನಡೆದಿದೆ. ಆದರೂ ಸೋಂಕಿತರು ಕಡಿಮೆ ಪ್ರಮಾಣದಲ್ಲಿಯೇ ಇದ್ದಾರೆ ಎಂಬುದು ತಿಳಿದುಬಂದಿದೆ.

English summary
Six months after the coronavirus arrived in Pakistan, the country appears to have dodged the worst of the pandemic, baffling health experts and dampening fears its crowded urban areas and ramshackle hospitals will be overrun.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X