ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೆ. 15ರಿಂದ ಶಾಲೆ, ಕಾಲೇಜು ಆರಂಭಿಸಲು ಮುಂದಾದ ಸರ್ಕಾರ

|
Google Oneindia Kannada News

ಇಸ್ಲಾಮಾಬಾದ್, ಜುಲೈ 13: ಕೊರೊನಾವೈರಸ್ ನಿಂದ ತತ್ತರಿಸಿದ್ದರೂ ಧೈರ್ಯ ಮಾಡಿ ಶಾಲೆ, ಕಾಲೇಜು ಪುನರ್ ಆರಂಭ ಮಾಡಲು ಸರ್ಕಾರ ಮುಂದಾಗಿದೆ. ಶಾಲೆಗಳನ್ನು ಆರಂಭಿಸಲು ಬೇಕಾದ ಸೂಕ್ತ ಮಾರ್ಗ ಸೂಚಿ, ನೀತಿ, ನಿಯಮಗಳನ್ನು ಸೂಚಿಸುವಂತೆ ತಜ್ಞರಿಗೆ ಇಮ್ರಾನ್ ಖಾನ್ ಸರ್ಕಾರ ಸೂಚಿಸಿದೆ.

ಪಾಕಿಸ್ತಾನದಲ್ಲಿ 2 ಲಕ್ಷಕ್ಕೂ ಅಧಿಕ ಕೊವಿಡ್ 19 ಪಾಸಿಟಿವ್ ಪ್ರಕರಣಗಳಿದ್ದು, 1.5 ಲಕ್ಷಕ್ಕೂ ಅಧಿಕ ಮಂದಿ ಗುಣಮುಖರಾಗಿದ್ದಾರೆ. ಕೊರೊನಾವೈರಸ್ ಸೋಂಕಿತರ ಪಟ್ಟಿಯಲ್ಲಿ 11ನೇ ಸ್ಥಾನದಲ್ಲಿದೆ. ಆದರೆ, ಸಾವಿನ ಸಂಖ್ಯೆ ಇತರೆ ದೇಶಗಳಿಗೆ ಹೋಲಿಸಿದರೆ ಕಡಿಮೆ ಪ್ರಮಾಣದಲ್ಲಿದ್ದು, 5,000ಕ್ಕೂ ಅಧಿಕ ಮೃತರನ್ನು ಕಂಡಿದೆ.

ಸರ್ಕಾರದಿಂದ ಸೂಕ್ತ ಮಾರ್ಗಸೂಚಿ ಹೊರ ಬರುವ ತನಕ ಯಾವುದೇ ಶಾಲೆ, ಕಾಲೇಜುಗಳು ಆರಂಭಿಸುವಂತಿಲ್ಲ ಎಂದು ಶಿಕ್ಷಣ ಸಚಿವ ಶಾಫ್ಕತ್ ಮೊಹಮ್ಮದ್ ಎಚ್ಚರಿಸಿದ್ದಾರೆ.

Pakistan: Schools, Colleges Reopening from September 15

ಸದ್ಯಕ್ಕೆ ಆತುರವಾಗಿ ಶಾಲೆ, ಕಾಲೇಜು ಪುನರ್ ಆರಂಭಿಸುವ ಯಾವುದೇ ಇರಾದೆ ನಮ್ಮ ಸರ್ಕಾರಕ್ಕಿಲ್ಲ. ದಿನ ಬಿಟ್ಟು ದಿನ ಶಾಲೆ ನಡೆಸಲು ಹಲವು ಪ್ರಾಂತ್ಯಗಳಿಂದ ಬೇಡಿಕೆ ಬಂದಿದೆ. ಆನ್ ಲೈನ್ ಶಾಲೆ ಬಗ್ಗೆ ಚರ್ಚೆ ನಡೆದಿದೆಯಾದರೂ ಪಾಕಿಸ್ತಾನದಲ್ಲಿ ಇಂಟರ್ನೆಟ್ ಜಾಲ ಅಷ್ಟು ಬಲವಾಗಿಲ್ಲ. ಬಯಲು ಶಾಲೆಗಳನ್ನು ತೆರೆದು, ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು ಮುಂತಾದ ಆರೋಗ್ಯ ಇಲಾಖೆ ನಿಯಮ ಅಳವಡಿಸುವುದರ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ, ಎಲ್ಲವೂ ಸರಿಯೆನಿಸಿದರೆ ಮಾತ್ರ ಸೆಪ್ಟೆಂಬರ್ 15ರ ವೇಳೆಗೆ ಶಾಲೆ, ಕಾಲೇಜುಗಳನ್ನು ಪುನರ್ ಆರಂಭ ಮಾಡಬಹುದು ಎಂದು ಮೊಹಮ್ಮದ್ ತಿಳಿಸಿದರು.

English summary
The Pakistan government has decided to re-open schools and colleges from September 15, after consulting with the stakeholders and deciding on standard operating procedures.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X