ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಬೂಲ್ ನಗರಕ್ಕೆ ಕಾಲಿಟ್ಟ ಪಾಕ್ ಗುಪ್ತಚರ ಇಲಾಖೆ ಮುಖ್ಯಸ್ಥ

|
Google Oneindia Kannada News

ಕಾಬೂಲ್, ಸಪ್ಟೆಂಬರ್ 4: ಎರಡು ದಶಕಗಳ ನಂತರದಲ್ಲಿ ಅಫ್ಘಾನಿಸ್ತಾನವನ್ನು ತಾಲಿಬಾನ್ ಸಂಘಟನೆಯು ಸ್ವಾಧೀನಪಡಿಸಿಕೊಂಡ ಬೆನ್ನಲ್ಲೇ ಪಾಕಿಸ್ತಾನದ ಗುಪ್ತಚರ ಇಲಾಖೆ ಮುಖ್ಯಸ್ಥರು ಕಾಬೂಲ್ ನಗರಕ್ಕೆ ಭೇಟಿ ನೀಡಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಲು ಅಧಿಕಾರವಿಲ್ಲದ ಕಾರಣ ಪಾಕಿಸ್ತಾನದ ಇಬ್ಬರು ಅಧಿಕಾರಿಗಳು ತಮ್ಮ ಹೆಸರು ಬಹಿರಂಗಪಡಿಸದಂತೆ ಕೇಳಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಶನಿವಾರ ಜನರಲ್ ಫೈಜ್ ಹಮೀದ್ ತಾಲಿಬಾನ್ ನಾಯಕತ್ವಕ್ಕೆ ಏನು ಹೇಳಬೇಕು ಎಂಬುದು ತಕ್ಷಣವೇ ಸ್ಪಷ್ಟವಾಗಿಲ್ಲ. ಆದರೆ ಪಾಕಿಸ್ತಾನದ ಗುಪ್ತಚರ ಸೇವೆಯು ಬಹುಶಃ ತಾಲಿಬಾನ್ ಮೇಲೆ ಹೆಚ್ಚಿನ ಪ್ರಭಾವವನ್ನು ಹೊಂದಿದೆ ಎಂದು ಹೇಳಿದ್ದಾರೆ.

 ಪಂಜ್‌ಶೀರ್ ಇನ್ನೂ ಸೋತಿಲ್ಲ, ನಾನು ದೇಶದಿಂದ ಓಡಿಯೂ ಹೋಗಿಲ್ಲ: ಅಮ್ರುಲ್ಲಾ ಪಂಜ್‌ಶೀರ್ ಇನ್ನೂ ಸೋತಿಲ್ಲ, ನಾನು ದೇಶದಿಂದ ಓಡಿಯೂ ಹೋಗಿಲ್ಲ: ಅಮ್ರುಲ್ಲಾ

ಪಾಕಿಸ್ತಾನದಲ್ಲಿ ತಾಲಿಬಾನ್ ಸಂಘಟನೆಯ ನಾಯಕತ್ವವು ತನ್ನ ಪ್ರಧಾನ ಕಛೇರಿಯನ್ನು ಹೊಂದಿತ್ತು. ಆಗಾಗ್ಗೆ ಪ್ರಬಲ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ ಏಜೆನ್ಸಿಯೊಂದಿಗೆ ನೇರ ಸಂಪರ್ಕದಲ್ಲಿದೆ ಎಂದು ಹೇಳಲಾಗುತ್ತದೆ. ಪಾಕಿಸ್ತಾನ ವಾಡಿಕೆಯಂತೆ ತಾಲಿಬಾನ್ ಸಂಘಟನೆಗೆ ಸೇನಾ ನೆರವು ನೀಡುವುದನ್ನು ನಿರಾಕರಿಸಿದರೂ, ಈ ಆರೋಪವನ್ನು ಅಫ್ಘಾನ್ ಸರ್ಕಾರ ಮತ್ತು ವಾಷಿಂಗ್ಟನ್ ಆಗಾಗ್ಗೆ ಸಹಾಯ ಮಾಡುತ್ತಿದ್ದವು ಎಂದು ಹೇಳಲಾಗುತ್ತದೆ.

Pakistans powerful intel chief arrives in Kabul after Taliban takeover of Afghanistan

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ:

ಕಳೆದ ಆಗಸ್ಟ್ 15ರಂದು ಅಫ್ಘಾನ್ ರಾಜಧಾನಿ ಕಾಬೂಲ್ ಮೇಲೆ ತಾಲಿಬಾನ್ ಉಗ್ರ ಸಂಘಟನೆ ಹಿಡಿತ ಸಾಧಿಸಿತು. ಎರಡು ದಶಕಗಳ ಕಾಲ ಅಫ್ಘಾನಿಸ್ತಾನದಲ್ಲಿ ಸಂಘರ್ಷದ ಯುದ್ಧವನ್ನು ಯುಎಸ್ ಅಂತ್ಯಗೊಳಿಸಿತು. ಕಳೆದ ಆಗಸ್ಟ್ 31ರವರೆಗೂ ಯುಎಸ್ ಸೇನೆ ತಮ್ಮ ಪ್ರಜೆಗಳ ಸುರಕ್ಷಿತ ಸ್ಥಳಾಂತರಕ್ಕಾಗಿ ಕಾರ್ಯಾಚರಣೆ ನಡೆಸಿತು. ಯುಎಸ್ ಸೇನೆಯು ದೇಶದಿಂದ ವಾಪಸ್ ಆಗುತ್ತಿದ್ದಂತೆ ಇಡೀ ಅಫ್ಘಾನಿಸ್ತಾನ ತಾಲಿಬಾನ್ ಸಂಘಟನೆಯ ಕೈವಶವಾಯಿತು. ಅಫ್ಘಾನಿಸ್ತಾನದಲ್ಲಿ 20 ವರ್ಷಗಳ ನಂತರ ಮತ್ತೊಮ್ಮೆ ಅಧಿಕಾರ ಹಿಡಿಯಲು ಮುಂದಾಗಿರುವ ತಾಲಿಬಾನ್ ಸಪ್ಟೆಂಬರ್ 3ರಂದು ಸರ್ಕಾರ ರಚಿಸಿತು.

ತಾಲಿಬಾನ್ ಸಂಭ್ರಮಕ್ಕೆ 17 ಮಂದಿ ಸಾವು:

ಅಫ್ಘಾನಿಸ್ತಾನದಲ್ಲಿ ಪಂಜ್ ಶೀರ್ ಅನ್ನು ಮಣಿಸಿದ ಸಂಭ್ರಮದಲ್ಲಿ ತಾಲಿಬಾನ್ ಸಂಘಟನೆ ಸಿಡಿಸಿದ ಗುಂಡಿನ ದಾಳಿಯಲ್ಲಿ ಮಕ್ಕಳು ಸೇರಿದಂತೆ 17ಕ್ಕೂ ಹೆಚ್ಚು ಮಂದಿ ಪ್ರಾಣ ಬಿಟ್ಟಿದ್ದು, 41ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ ಎಂದು ಅಫ್ಘಾನಿಸ್ತಾನದ ಸ್ಥಳೀಯ ಸುದ್ದಿ ಸಂಸ್ಥೆ ಅಸ್ವಕಾ ವರದಿ ಮಾಡಿದೆ. ಅಫ್ಘಾನಿಸ್ತಾನದ ರಾಷ್ಟ್ರೀಯ ಪ್ರತಿರೋಧಕ ತಂಡವನ್ನು ಸೋಲಿಸಿದ ಖುಷಿಯಲ್ಲಿ ತಾಲಿಬಾನ್ ಉಗ್ರರು ಮನಸೋ-ಇಚ್ಛೆ ಗುಂಡಿನ ಸುರಿಮಳೆಗೈದರು. ಈ ವೇಳೆಯಲ್ಲಿ ಮಕ್ಕಳು ಸೇರಿದಂತೆ ಗುಂಡು ತಗುಲಿದ 17ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು ಗೊತ್ತಾಗಿದೆ. ಸರ್ವಶಕ್ತನಾದ ಅಲ್ಲಾಹನ ಕೃಪೆಯಿಂದ, ನಾವು ಇಡೀ ಅಫ್ಘಾನಿಸ್ತಾನವನ್ನು ನಿಯಂತ್ರಿಸುತ್ತೇವೆ. ನಮಗೆ ಅಡ್ಡಿಯಾದವರನ್ನು ಈಗಾಗಲೇ ಸೋಲಿಸಿದ್ದೇವೆ. ಪಂಜಶೀರ್ ಈಗ ನಮ್ಮ ಅಧೀನದಲ್ಲಿದೆ ಎಂದು ತಾಲಿಬಾನ್ ಕಮಾಂಡರ್ ಒಬ್ಬರು ರಾಯಿಟರ್ಸ್ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

English summary
Pakistan's powerful intel chief arrives in Kabul after Taliban takeover of Afghanistan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X