ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ಕೆಟ್ಟ ದಿನಗಳು ಮುಂದಿವೆ ಎಂದ ಪಾಕ್ ಹಣಕಾಸು ಸಚಿವ!

|
Google Oneindia Kannada News

ಇಸ್ಲಾಮಾಬಾದ್, ಆ.05: ನಗದು ಕೊರತೆಯಿರುವ ದೇಶಕ್ಕೆ ಮುಂದೆ ಕೆಟ್ಟ ದಿನಗಳು ಬರಲಿವೆ ಎಂದು ಶುಕ್ರವಾರ ಪಾಕಿಸ್ತಾನದ ಹಣಕಾಸು ಸಚಿವ ಮಿಫ್ತಾ ಇಸ್ಮಾಯಿಲ್ ಎಚ್ಚರಿಕೆ ನೀಡಿದ್ದಾರೆ.

ಮುಂದಿನ ಮೂರು ತಿಂಗಳ ಕಾಲ ಆಮದುಗಳನ್ನು ನಿರ್ಬಂಧಿಸುವುದನ್ನು ಮುಂದುವರಿಸುವುದಾಗಿ ಪಾಕಿಸ್ತಾನದ ಹಣಕಾಸು ಸಚಿವ ಮಿಫ್ತಾ ಇಸ್ಮಾಯಿಲ್ ಅವರು ಶುಕ್ರವಾರ ಹೇಳಿದರು.

ಕರಾಚಿಯಲ್ಲಿ ನಡೆದ ಪಾಕಿಸ್ತಾನ ಸ್ಟಾಕ್ ಎಕ್ಸ್‌ಚೇಂಜ್‌ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ಉಚ್ಛಾಟಿತ ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದ ಹಿಂದಿನ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಆಡಳಿತದ ಆರ್ಥಿಕ ನೀತಿಗಳಿಂದಾಗಿ ಪ್ರಧಾನಿ ಶೆಹಬಾಜ್ ಷರೀಫ್ ನೇತೃತ್ವದ ಸರ್ಕಾರವು ಸಂಕಷ್ಟದಲ್ಲಿದೆ ಎಂದು ಹೇಳಿದರು.

Pakistans Finance Minister Warns Bad Days Ahead for country

"ಹಿಂದಿನ ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (PML-N) ಸರ್ಕಾರದ ಅವಧಿಯಲ್ಲಿ, ದೇಶದ ಬಜೆಟ್ ಕೊರತೆಯು USD 1,600 ಶತಕೋಟಿ ಆಗಿತ್ತು. ಕಳೆದ ನಾಲ್ಕು ವರ್ಷಗಳಲ್ಲಿ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಆಡಳಿತದಲ್ಲಿ, ಆ ಅಂಕಿಯು USD 3,500 ಕ್ಕೆ ಏರಿತ್ತು" ಎಂದರು.

"ಈ ರೀತಿಯ ಚಾಲ್ತಿ ಖಾತೆ ಕೊರತೆಯಿಂದ ಯಾವುದೇ ದೇಶವು ಬೆಳೆಯಲು ಮತ್ತು ಸ್ಥಿರವಾಗಿರಲು ಸಾಧ್ಯವಿಲ್ಲ. ನೀವು ಬಜೆಟ್ ಕೊರತೆಯನ್ನು, ಸಾಲವನ್ನು ಶೇಕಡಾ 80 ರಷ್ಟು ಹೆಚ್ಚಿಸಿದಾಗ ಅದು ಆರ್ಥಿಕತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ" ಎಂದು ವಿವರಿಸಿದರು.

Pakistans Finance Minister Warns Bad Days Ahead for country

"ಮೂರು ತಿಂಗಳವರೆಗೆ ಆಮದುಗಳನ್ನು ಹೆಚ್ಚಿಸಲು ನಾನು ಅನುಮತಿಸುವುದಿಲ್ಲ ಮತ್ತು ನಾವು ಒಂದು ನೀತಿಯನ್ನು ತರುತ್ತೇವೆ. ನನಗೆ ಬೇರೆ ಆಯ್ಕೆಯಿಲ್ಲ" ಎಂದರು.

ಪಾಕಿಸ್ತಾನವು ಕಳೆದ ತಿಂಗಳು ಅಂತರಾಷ್ಟ್ರೀಯ ಹಣಕಾಸು ನಿಧಿನೊಂದಿಗೆ ಸಿಬ್ಬಂದಿ ಮಟ್ಟದ ಒಪ್ಪಂದವನ್ನು ತಲುಪಿದೆ. ಬಳಿಕ ಇಂಧನ ಮತ್ತು ವಿದ್ಯುತ್ ಸಬ್ಸಿಡಿಗಳನ್ನು ತೆಗೆದುಹಾಕಿದ್ದು, ತೆರಿಗೆ ಮೂಲವನ್ನು ವಿಸ್ತರಿಸಲು ಹೊಸ ಕ್ರಮಗಳನ್ನು ಪರಿಚಯಿಸಿದೆ.

English summary
Pakistan's Finance Minister Miftah Ismail Warns bad days ahead for the cash-strapped country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X