ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾಗೆ ಕತ್ತೆ, ನಾಯಿ ಮಾರಿ ಹಣ ಗಳಿಸಲಿರುವ ಪಾಕಿಸ್ತಾನ

|
Google Oneindia Kannada News

ಇಸ್ಲಾಮಾಬಾದ್, ಅ. 4: ಆರ್ಥಿಕವಾಗಿ ಕಂಗೆಟ್ಟಿರುವ ಪಾಕಿಸ್ತಾನಕ್ಕೆ ಈಗ ಒಂದೊಂದು ರೂಪಾಯಿಯೂ ಮುಖ್ಯ ಎಂಬಂತಾಗಿದೆ. ಆರ್ಥಿಕ ದುಸ್ಥಿತಿ ಜೊತೆಗೆ ಮಳೆ, ಜಲಪ್ರವಾಹದ ಹೊಡೆತಕ್ಕೆ ಪಾಕಿಸ್ತಾನ ತತ್ತರಿಸಿಹೋಗಿದೆ. ಸಾಲದ ಶೂಲಕ್ಕೆ ಬಹುತೇಕ ಸಿಲುಕಿರುವ ಪಾಕಿಸ್ತಾನ ಹಳೆ ಸಾಲ ತೀರಿಸಲು ಹೊಸ ಸಾಲಗಳಿಗೆ ಅವರಿವರಲ್ಲಿ ಅಂಗಲಾಚುವ ಪರಿಸ್ಥಿತಿ ಇದೆ.

ಇದೇ ವೇಳೆ, ಪಾಕಿಸ್ತಾನದಲ್ಲಿ ಹೇರಳವಾಗಿ ಲಭ್ಯ ಇರುವ ಕತ್ತೆ, ನಾಯಿಗಳನ್ನು ರಫ್ತು ಮಾಡುವ ಮೂಲಕ ಒಂದಷ್ಟು ಆದಾಯ ಗಳಿಸಲಾಗುತ್ತಿದೆ. ಪಾಕಿಸ್ತಾನದ ಜಿಯೋ ನ್ಯೂಸ್ ವರದಿ ಪ್ರಕಾರ, ಕತ್ತೆಗಳನ್ನು ಆಮದು ಮಾಡಿಕೊಳ್ಳಲು ಚೀನಾ ಆಸಕ್ತಿ ತೋರಿರುವ ವಿಚಾರವನ್ನು ಸಂಸದೀಯ ಸ್ಥಾಯಿ ಸಮಿತಿ ಎದುರು ಪಾಕಿಸ್ತಾನದ ವಾಣಿಜ್ಯ ಸಚಿವಾಲಯ ಮಾಹಿತಿ ನೀಡಿದೆ.

ಪಾಕ್‌ಗೆ ಅಮೆರಿಕ ಕೋಟ್ಯಂತರ ಡಾಲರ್ ಈಗ ಶತ್ರು ಪಾಕ್ ಸೇನಾಪಡೆಗಳ ಮುಖ್ಯಸ್ಥ ಬಜ್ವಾಗೆ ಭವ್ಯ ಸ್ವಾಗತ!ಪಾಕ್‌ಗೆ ಅಮೆರಿಕ ಕೋಟ್ಯಂತರ ಡಾಲರ್ ಈಗ ಶತ್ರು ಪಾಕ್ ಸೇನಾಪಡೆಗಳ ಮುಖ್ಯಸ್ಥ ಬಜ್ವಾಗೆ ಭವ್ಯ ಸ್ವಾಗತ!

ವಾಣಿಜ್ಯ ಸ್ಥಾಯಿ ಸಮಿತಿಯ ಸದಸ್ಯನಾಗಿರುವ ದಿನೇಶ್ ಕುಮಾರ್ ಪ್ರಕಾರ ಪಾಕಿಸ್ತಾನದಿಂದ ಕತ್ತೆಗಳ ಜೊತೆ ನಾಯಿಗಳೂ ಬೇಕೆಂದು ಚೀನಾ ಬೇಡಿಕೆ ಇಟ್ಟಿದೆಯಂತೆ. ಚೀನಾದ ಮಾರುಕಟ್ಟೆ ಬಹಳ ದೊಡ್ಡದಾಗಿದ್ದು, ಅಲ್ಲಿ ಕತ್ತೆ, ನಾಯಿ ಇತ್ಯಾದಿ ಪ್ರಾಣಿಗಳ ಮಾಂಸಕ್ಕೆ ಒಳ್ಳೆಯ ಬೇಡಿಕೆ ಇದೆ.

Pakistans Donkeys and Dogs To Be Exported to China

ಈ ಹಿಂದೆಯೂ ಪಾಕಿಸ್ತಾನದಿಂದ ಕತ್ತೆ, ನಾಯಿ ಮಾಂಸ ಆಮದು ಮಾಡಿಕೊಳ್ಳಲು ಚೀನೀ ರಾಯಭಾರಿ ಹಲವು ಬಾರಿ ಮಾತುಕತೆ ನಡೆಸಿದ್ದರು. ಈಗ ಪಾಕಿಸ್ತಾನಕ್ಕೆ ಕಾಲ ಕೂಡಿ ಬಂದಂತಿದೆ.

ಪಾಕ್ ಸರ್ಕಾರದ ವಿರುದ್ಧ ಮತ್ತೊಂದು ಆಡಳಿತ ವಿರೋಧಿ ರ್‍ಯಾಲಿಗೆ ಕರೆ ನೀಡಿದ ಇಮ್ರಾನ್ ಖಾನ್ಪಾಕ್ ಸರ್ಕಾರದ ವಿರುದ್ಧ ಮತ್ತೊಂದು ಆಡಳಿತ ವಿರೋಧಿ ರ್‍ಯಾಲಿಗೆ ಕರೆ ನೀಡಿದ ಇಮ್ರಾನ್ ಖಾನ್

ಪಾಕಿಸ್ತಾನದಲ್ಲಿ ಬಹಳ ಸಂಖ್ಯೆಯಲ್ಲಿ ಕತ್ತೆ ಮತ್ತು ನಾಯಿಗಳು ಇದ್ದರೂ ನೆರೆಯ ಅಫ್ಘಾನಿಸ್ತಾನದಲ್ಲಿ ಈ ಪ್ರಾಣಿಗಳು ಬಹಳ ಕಡಿಮೆ ಬೆಲೆಗೆ ದೊರೆಯುತ್ತವೆ. ಅಫ್ಘಾನಿಸ್ತಾನದಿಂದ ಈ ಪ್ರಾಣಿಗಳನ್ನು ಖರೀದಿಸಿ ನಂತರ ಅವುಗಳ ಮಾಂಸವನ್ನು ಚೀನಾಗೆ ರಫ್ತು ಮಾಡುವುದು ಪಾಕಿಸ್ತಾನದ ಆಲೋಚನೆ.

Pakistans Donkeys and Dogs To Be Exported to China

ಆದರೆ, ಇಲ್ಲೊಂದು ತಡೆ ಇದೆ. ದಕ್ಷಿಣ ಏಷ್ಯಾ ಭಾಗಗಳಲ್ಲಿ ಪ್ರಾಣಿಗಳಲ್ಲಿ ಚರ್ಮರೋಗಗಳು ಹೆಚ್ಚಾಗಿ ಕಾಣಿಸಿಕೊಂಡಿರುವುದರಿಂದ ಅಫ್ಘಾನಿಸ್ತಾನದಿಂದ ಪ್ರಾಣಿಗಳನ್ನು ಆಮದು ಮಾಡಿಕೊಳ್ಳುವುದನ್ನು ಪಾಕಿಸ್ತಾನ ನಿಲ್ಲಿಸಿದೆ. ಈ ರೋಗ ಹತೋಟಿಗೆ ಬರುವವರೆಗೂ ಪಾಕಿಸ್ತಾನದಲ್ಲಿರುವ ಕತ್ತೆ ಮತ್ತು ನಾಯಿಗಳ ಮಾಂಸವನ್ನೇ ಚೀನಾಗೆ ರಫ್ತು ಮಾಡುವ ಸಾಧ್ಯತೆ ಇದೆ.

(ಒನ್ಇಂಡಿಯಾ ಸುದ್ದಿ)

English summary
China is said to have asked Pakistan to provide meat of donkey and dogs. Pakistan may buy these animals from Afghanistan and export their meats to China.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X