ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾರ್ಚ್ ನಲ್ಲಿ ಏಷ್ಯಾದ 7 ದೇಶಗಳಲ್ಲಿ ದಾಖಲಾದ ಗರಿಷ್ಠ ಉಷ್ಣಾಂಶ

|
Google Oneindia Kannada News

ಕಳೆದ ಮಾರ್ಚ್ ತಿಂಗಳಲ್ಲಿ ಏಷ್ಯಾದ ಏಳು ದೇಶಗಳಲ್ಲಿ ಉಷ್ಣಾಂಶದ ಪ್ರಮಾಣ ದಾಖಲೆ ನಿರ್ಮಿಸಿದೆ. ಈ ದಾಖಲೆಯಲ್ಲಿ ಪಾಕಿಸ್ತಾನ ಮೊದಲ ಸ್ಥಾನದಲ್ಲಿದೆ. ಈ ತಿಂಗಳಲ್ಲಿ ಕಳೆದ ಕೆಲ ವರ್ಷಗಳಲ್ಲಿ ಈ ಪ್ರಮಾಣದ ಉಷ್ಣಾಂಶ ಕಂಡಿರಲಿಲ್ಲ. ಮಾರ್ಚ್ ಕೊನೆ ವಾರದಲ್ಲಿ ಕಾಣಿಸಿಕೊಳ್ಳುವ ಬಿಸಿಲಿನ ಗಾಳಿ ಕರಾಚಿ ಹಾಗೂ ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಭಾರೀ ಪರಿಣಾಮ ಬೀರುತ್ತದೆ.

ಉತ್ತರ ಭಾರತದಲ್ಲಿ ಉಷ್ಣ ಹವೆ: ದಕ್ಷಿಣದಲ್ಲೂ ರಣಬಿಸಿಲುಉತ್ತರ ಭಾರತದಲ್ಲಿ ಉಷ್ಣ ಹವೆ: ದಕ್ಷಿಣದಲ್ಲೂ ರಣಬಿಸಿಲು

ಮಾರ್ಚ್ 30ರಂದು ಸಿಂಧ್ ನ ನವಾಬ್ ಶಾದಲ್ಲಿ 45.5 ಸೆಲ್ಷಿಯಸ್ ದಾಖಲಾಗಿದೆ. ಅದರ ಮರುದಿನ ಮೊಹೆಂಜೋದಾರೊದಲ್ಲೂ ಸಹ ಅದೇ ಪ್ರಮಾಣದ ಉಷ್ಣಾಂಶ ದಾಖಲಾಗಿದೆ. ಎಂಟು ವರ್ಷಗಳ ಹಿಂದೆ ಮೇ ತಿಂಗಳಲ್ಲಿ ಮೊಹೆಂಜೋದಾರೋದಲ್ಲಿ 53.5 ಸೆಲ್ಷಿಯಸ್ ಉಷ್ಣಾಂಶ ದಾಖಲಾಗಿ, ಸಾರ್ವಕಾಲಿಕ ದಾಖಲೆಯಾಗಿ ಉಳಿದಿದೆ.

Summer

ನಮ್ಮ ದೆಹಲಿಯಲ್ಲೇ ಕಳೆದ ವಾರ 37.22 ಸೆಲ್ಷಿಯಸ್ ದಾಖಲಾಗಿದೆ. ಇರಾಕ್ ನಲ್ಲಿ ಮಾರ್ಚ್ 29ರಂದು 43.77 ಸೆಲ್ಷಿಯಸ್ ಉಷ್ಣಾಂಶ ದಾಖಲಾಗಿದ್ದು, 2010ರ 42.38 ಸೆಲ್ಷಿಯಸ್ ನ ದಾಖಲೆ ಚಿಂದಿಯಾಗಿದೆ.

ಮಾರ್ಚ್ 29-31ರ ಮಧ್ಯೆ ದಾಖಲಾಗಿರುವ ಅತಿ ಹೆಚ್ಚು ಉಷ್ಣಾಂಶ
ಪಾಕಿಸ್ತಾನ 45.5 ಸೆಲ್ಷಿಯಸ್

ಇರಾಕ್ 43.77 ಸೆಲ್ಷಿಯಸ್

ಕತಾರ್ 40 ಸೆಲ್ಷಿಯಸ್

ತುರ್ಕ್ ಮೆನಿಸ್ತಾನ್ 40.22 ಸೆಲ್ಷಿಯಸ್

ಉಜ್ಬೇಕಿಸ್ತಾನ್ 37.22 ಸೆಲ್ಷಿಯಸ್

ತಜಕಿಸ್ತಾನ್ 35.27 ಸೆಲ್ಷಿಯಸ್

English summary
At least seven countries set new March hot temperature records late last week. The most incredible record was Pakistan's, where it's never been so hot this early in the season.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X