ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಮ್ರಾನ್ ಸರಕಾರಕ್ಕೆ ನೂರು ದಿನ; ಪಾತಾಳ ತಲುಪಿತು ಪಾಕಿಸ್ತಾನದ ರುಪಾಯಿ ಮೌಲ್ಯ

|
Google Oneindia Kannada News

ಕರಾಚಿ, ನವೆಂಬರ್ 30 : ಪಾಕಿಸ್ತಾನದ ರುಪಾಯಿ ಮೌಲ್ಯ ಶುಕ್ರವಾರ ಹತ್ತಿರ ಹತ್ತಿರ ಐದು ಪರ್ಸೆಂಟ್ ನಷ್ಟು ಕುಸಿತ ದಾಖಲಿಸಿದ್ದು, ದಾಖಲೆ ಮಟ್ಟಕ್ಕೆ ಕುಸಿತ ಕಂಡಿದೆ. ಪಾಕಿಸ್ತಾನದ ಕೇಂದ್ರ ಬ್ಯಾಂಕ್ ಆರನೇ ಬಾರಿಗೆ ದೇಶದ ರುಪಾಯಿ ಕರೆನ್ಸಿಯನ್ನು ಅಪಮೌಲ್ಯಗೊಳಿಸಿದೆ. ನಿರಂತರವಾಗಿ ವಿತ್ತೀಯ ಕೊರತೆ ಬಿಕ್ಕಟ್ಟು ಎದುರಿಸುತ್ತಿರುವ ಆ ದೇಶ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ.

ಡಾಲರ್ ವಿರುದ್ಧ ಪಾಕಿಸ್ತಾನದ ರುಪಾಯಿ ಮೌಲ್ಯ 143ಕ್ಕೆ ತಲುಪಿದೆ. ಇಮ್ರಾನ್ ಖಾನ್ ನೇತೃತ್ವದ ಆಡಳಿತಾರೂಢ ಪಕ್ಷವು ಗುರುವಾರವಷ್ಟೇ 100 ದಿನಗಳ ಆಡಳಿತ ಪೂರೈಸಿ, ಇಂಥಿಂಥ ಸಾಧನೆಗಳನ್ನು ಮಾಡಿದ್ದೇವೆ ಎಂದು ಜನರ ಮುಂದೆ ಹೇಳಿತ್ತು. ಅದಾಗಿ ಮರುದಿನವೇ ಹೀಗೆ ಪಾಕಿಸ್ತಾನ ರುಪಾಯಿ ಮೌಲ್ಯ ದಾಖಲೆ ಕುಸಿತ ಕಂಡಿದೆ.

ಅಮೆರಿಕ ಅಧ್ಯಕ್ಷರಿಗೆ ನಮಗಿಂತ ಸ್ನೇಹಿತರು ಸಿಗ್ತಾರಾ ಎಂದ ಇಮ್ರಾನ್ ಖಾನ್ ಅಮೆರಿಕ ಅಧ್ಯಕ್ಷರಿಗೆ ನಮಗಿಂತ ಸ್ನೇಹಿತರು ಸಿಗ್ತಾರಾ ಎಂದ ಇಮ್ರಾನ್ ಖಾನ್

ಪಾಕ್ ನ ರುಪಾಯಿ ಮೌಲ್ಯವನ್ನು ಸ್ಟೇಟ್ ಬ್ಯಾಂಕ್ ಪಾಕಿಸ್ತಾನವು ಪರೋಕ್ಷವಾಗಿ ಹಲವು ಬಾರಿ ಅಪಮೌಲ್ಯಗೊಳಿಸಿದೆ. ವಿತ್ತೀಯ ಕೊರತೆ ಪಾವತಿಯನ್ನು ಸರಿಪಡಿಸುವ ಪ್ರಯತ್ನದಲ್ಲಿ ಹೀಗೆ ಮಾಡಲಾಗಿದೆ. ಐಎಂಎಫ್ ಜತೆಗೆ ವಾರಗಟ್ಟಲೆ ಮಾತುಕತೆ ನಡೆಸಿದರೂ ಪಾಕ್ ನ ಪ್ರಧಾನಿ ಇಮ್ರಾನ್ ಖಾನ್ ಹಾಗೂ ಹಣಕಾಸು ಸಚಿವರಾದ ಅಸದ್ ಒಮರ್ ಗೆ ನಿರೀಕ್ಷಿತ ಫಲ ಸಿಕ್ಕಿಲ್ಲ. ಇದರಿಂದ ಉದ್ಯಮಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Pakistan rupee sinks to record low against US dollar

ಪಾಕ್ ಆರ್ಥಿಕ ಸ್ಥಿತಿ ಹೀನಾಯ, ಸೌದಿಯಿಂದ ನೆರವು ಕೇಳಲು ಹೊರಟ ಇಮ್ರಾನ್ ಪಾಕ್ ಆರ್ಥಿಕ ಸ್ಥಿತಿ ಹೀನಾಯ, ಸೌದಿಯಿಂದ ನೆರವು ಕೇಳಲು ಹೊರಟ ಇಮ್ರಾನ್

ಪಾಕಿಸ್ತಾನದಲ್ಲಿ ಹಣದುಬ್ಬರ ದರ ಹೊತ್ತಿ ಉರಿಯುತ್ತಿದೆ. ದೇಶದ ರುಪಾಯಿ ಮೌಲ್ಯವು ಈ ವರ್ಷದ ಆರಂಭದಿಂದ ಮೂರನೇ ಒಂದು ಭಾಗದಷ್ಟು ಮೌಲ್ಯ ಕಳೆದುಕೊಂಡಿದೆ. ಇದೊಂದೇ ವರ್ಷದಲ್ಲಿ ನಲವತ್ತು ಪರ್ಸೆಂಟ್ ನಷ್ಟು ಕುಸಿದಿದೆ.

English summary
Pakistan's rupee plunged almost five percent to a record low Friday after what appeared to be a sixth devaluation by the central bank in the past year as the country struggles with an acute balance of payment crisis.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X