ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಯೋತ್ಪಾದನೆಯಲ್ಲಿ ಪಾಕ್ ಪಾತ್ರ: ಮೋದಿ-ಹ್ಯಾರಿಸ್ ಸಭೆಯಲ್ಲಿ ಇದೇ ಚರ್ಚೆ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 24: ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಯುಎಸ್ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಮೊದಲ ವ್ಯಕ್ತಿಗತ ಭೇಟಿ ವೇಳೆ ಭಯೋತ್ಪಾದನೆಯಲ್ಲಿ ಪಾಕಿಸ್ತಾನದ ಬಗ್ಗೆ ಸುಮೋಟೋ ಕುರಿತು ಉಲ್ಲೇಖಿಸಲಾಗಿದೆ.

ದೇಶದಲ್ಲಿ ಭಯೋತ್ಪಾದಕ ಗುಂಪುಗಳು ಕೆಲಸ ಮಾಡುತ್ತಿದ್ದು, ಕಠಿಣ ಕ್ರಮ ತೆಗೆದುಕೊಳ್ಳುವಂತೆ ಇಸ್ಲಾಮಾಬಾದ್ ಸರ್ಕಾರಕ್ಕೆ ತಿಳಿಸಲಾಗಿದೆ. ಆದ್ದರಿಂದ ಭಾರತ ಮತ್ತು ಅಮೆರಿಕಾದ ಭದ್ರತೆ ವಿಷಯದಲ್ಲಿ ಯಾವುದೇ ರೀತಿ ಪರಿಣಾಮ ಬೀರುವುದಿಲ್ಲ ಎಂದು ಹೇಳಲಾಗಿದೆ. ಎರಡು ದೇಶಗಳ ಜನರ ಹಿತಾಸಕ್ತಿಗಾಗಿ ಪ್ರಜಾಪ್ರಭುತ್ವವನ್ನು ರಕ್ಷಿಸುವುದು ಉಭಯ ರಾಷ್ಟ್ರಗಳ ಜವಾಬ್ದಾರಿ ಎಂದು ಕಮಲಾ ಹ್ಯಾರಿಸ್ ಹೇಳಿದ್ದಾರೆ.

ವೈರಲ್ ಫೋಟೋ; ವಿಮಾನದಲ್ಲೂ ಮೋದಿ ಕೆಲಸದಲ್ಲಿ ಬ್ಯುಸಿ!ವೈರಲ್ ಫೋಟೋ; ವಿಮಾನದಲ್ಲೂ ಮೋದಿ ಕೆಲಸದಲ್ಲಿ ಬ್ಯುಸಿ!

ಯುಎಸ್ ಶ್ವೇತ ಭವನದಲ್ಲಿ ಮೊದಲ ವ್ಯಕ್ತಿಗತ ಸಭೆಯಲ್ಲಿ ಪ್ರಧಾನಿ ಮೋದಿ ಮತ್ತು ಯುಎಸ್ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಚರ್ಚೆ ನಡೆಸಿದರು. ಉಭಯ ನಾಯಕರು ದ್ವಿಪಕ್ಷೀಯ ಕಾರ್ಯತಂತ್ರದ ಪಾಲುದಾರಿಕೆಯನ್ನು ಬಲಪಡಿಸುವುದು ಹಾಗೂ ಪರಸ್ಪರ ಮತ್ತು ಜಾಗತಿಕ ಹಿತಾಸಕ್ತಿಯ ಸಮಸ್ಯೆಗಳು, ಪ್ರಜಾಪ್ರಭುತ್ವದ ಮೇಲಿನ ಬೆದರಿಕೆ, ಅಫ್ಘಾನಿಸ್ತಾನ ಹಾಗೂ ಇಂಡೋ-ಫೆಸಿಫಿಕ್ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಯಿತು.

 Pakistan Role In Terrorism: Discussed Between PM Modi and Kamala Harris Meet

ಸುಮೋಟೋ ಬಗ್ಗೆ ಉಲ್ಲೇಖ:

ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಯುಎಸ್ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ನಡುವಿನ ಸಭೆಯಲ್ಲಿ ಭಯೋತ್ಪಾದನೆ ವಿಷಯ ಚರ್ಚೆಗೆ ಬಂದಾಗ ಸುಮೋಟೋ ಬಗ್ಗೆ ಉಲ್ಲೇಖಿಸಲಾಗಿದೆ ಎಂದು ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ ಸುದ್ದಿಗಾರರಿಗೆ ತಿಳಿಸಿದ್ದಾರೆ. ಭಯೋತ್ಪಾದನೆಯಲ್ಲಿ ಪಾಕಿಸ್ತಾನದ ಪಾತ್ರ ಎಂಬ ವಿಷಯ ಚರ್ಚೆಗೆ ಬಂದ ಸಮಯದಲ್ಲಿ ಸುಮೋಟೋ ಬಗ್ಗೆ ಉಲ್ಲೇಖಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಶ್ರಿಂಗ್ಲಾ ಪ್ರಕಾರ, ಪಾಕಿಸ್ತಾನದಲ್ಲಿ ಭಯೋತ್ಪಾದಕ ಗುಂಪುಗಳು ಕಾರ್ಯನಿರ್ವಹಿಸುತ್ತಿವೆ ಎಂದು ಹ್ಯಾರಿಸ್ ಹೇಳಿದ್ದಾರೆ.

ಭಾರತ-ಯುಎಸ್ ಮೇಲೆ ಪರಿಣಾಮವಿಲ್ಲ:

"ಪಾಕಿಸ್ತಾನ ಸರ್ಕಾರವು ಅಂಥ ಭಯೋತ್ಪಾದಕರ ಮೇಲೆ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಲಾಗಿದ್ದು, ಇದರಿಂದ ಯುಎಸ್ ಭದ್ರತೆ ಮತ್ತು ಭಾರತದ ಮೇಲೆ ಪರಿಣಾಮ ಬೀರುವುದಿಲ್ಲ. ಗಡಿಯಾಚೆಗಿನ ಭಯೋತ್ಪಾದನೆಯ ಸತ್ಯದ ಕುರಿತು ಪ್ರಧಾನಿಯವರ ಮಾತನ್ನು ಹ್ಯಾರಿಸ್ ಒಪ್ಪಿಕೊಂಡರು. ಭಾರತವು ಹಲವು ದಶಕಗಳಿಂದ ಭಯೋತ್ಪಾದನೆಗೆ ಬಲಿಯಾಗುತ್ತಿದ್ದು, ಅದನ್ನು ನಿಯಂತ್ರಿಸುವ ಅಗತ್ಯತೆ ಮೇಲೆ ಮತ್ತು ಅಂತಹ ಭಯೋತ್ಪಾದಕ ಗುಂಪುಗಳಿಗೆ ಪಾಕಿಸ್ತಾನದ ಬೆಂಬಲವನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಹ್ಯಾರಿಸ್ ಹೇಳಿದ್ದಾರೆ," ಎಂದು ಶ್ರಿಂಗ್ಲಾ ತಿಳಿಸಿದ್ದಾರೆ.

"ಪ್ರಜಾಪ್ರಭುತ್ವದ ರಕ್ಷಣೆ ಅತ್ಯಗತ್ಯ":

"ಜಗತ್ತಿನಾದ್ಯಂತ ಪ್ರಜಾಪ್ರಭುತ್ವ ರಾಷ್ಟ್ರಗಳು ಅಪಾಯದಲ್ಲಿದೆ, ನಾವು ನಮ್ಮ ದೇಶಗಳಲ್ಲಿ ಮತ್ತು ಪ್ರಪಂಚದಾದ್ಯಂತ ಪ್ರಜಾಪ್ರಭುತ್ವ ತತ್ವಗಳನ್ನು ಮತ್ತು ಸಂಸ್ಥೆಗಳನ್ನು ರಕ್ಷಿಸುವುದು ಅತ್ಯಗತ್ಯವಾಗಿದೆ. ನಾವು ಪ್ರಜಾಪ್ರಭುತ್ವವನ್ನು ಬಲಪಡಿಸುವ ನಿಟ್ಟಿನಲ್ಲಿ ನಮ್ಮ ವ್ಯಾಪ್ತಿಯಲ್ಲಿ ಏನು ಮಾಡಬೇಕು, ಜಗತ್ತಿನಲ್ಲಿ ಪ್ರಜಾಪ್ರಭುತ್ವ ರಕ್ಷಣೆಯನ್ನು ಹೇಗೆ ನಿರ್ವಹಣೆ ಮಾಡಬೇಕು ಎಂಬುದನ್ನು ಜನರ ಹಿತಾಸಕ್ತಿ ದೃಷ್ಟಿಯಿಂದ ಕಂಡುಕೊಳ್ಳಬೇಕಾಗಿದೆ." ಎಂದು ಕಮಲಾ ಹ್ಯಾರಿಸ್ ಹೇಳಿದ್ದಾರೆ.

"ಭಾರತ ಬಹುಮುಖ್ಯ ಪಾಲುದಾರ" ಎಂದ ಹ್ಯಾರಿಸ್:

"ಭಾರತ ಮತ್ತು ಅಮೆರಿಕಾ ರಾಷ್ಟ್ರಗಳು ಸಹಜ ಪಾಲುದಾರರಾಗಿವೆ. ನಮ್ಮಲ್ಲಿ ಒಂದೇ ರೀತಿಯ ಮೌಲ್ಯಗಳು, ಭೌಗೋಳಿಕ ಹಾಗೂ ರಾಜಕೀಯ ಹಿತಾಸಕ್ತಿಗಳಿವೆ" ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಯುಎಸ್ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರೊಂದಿಗಿನ ಜಂಟಿ ಸುದ್ದಿಗೋಷ್ಠಿಯಲ್ಲಿ ಹೇಳಿದರು. "ಭಾರತ ಮತ್ತು ಯುಎಸ್ ಅತಿದೊಡ್ಡ ಮತ್ತು ಹಳೆಯ ಪ್ರಜಾಪ್ರಭುತ್ವ ರಾಷ್ಟ್ರಗಳೆಂದು ತಿಳಿಸಿದ ಪ್ರಧಾನಿ ಮೋದಿ, ಎರಡು ದೇಶಗಳು ಮೌಲ್ಯಗಳನ್ನು ಹಂಚಿಕೊಳ್ಳುತ್ತವೆ ಮತ್ತು ಅವುಗಳ ಸಹಕಾರವು ಕ್ರಮೇಣ ಹೆಚ್ಚುತ್ತಿದೆ," ಎಂದರು. ಇದೇ ವೇಳೆ ಯುನೈಟೆಡ್ ಸ್ಟೇಟ್ಸ್ ಪಾಲಿಗೆ ಭಾರತವು ಬಹುಮುಖ್ಯ ಪಾಲುದಾರ ಎಂದು ಅಮೆರಿಕಾ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಹೇಳಿದ್ದಾರೆ. ಜೊತೆಗೆ ಶೀಘ್ರದಲ್ಲೇ ಕೊರೊನಾವೈರಸ್ ಲಸಿಕೆಗಳ ರಫ್ತು ಪುನರಾರಂಭಿಸುವ ಕುರಿತಾದ ನವದೆಹಲಿಯ ಘೋಷಣೆಯನ್ನು ಸ್ವಾಗತಿಸಿದ್ದಾರೆ.

English summary
"Pakistan Role In Terrorism": Discussed Between PM Modi and Kamala Harris Meet.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X