ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಮೇಲಿದ್ದ ಅಂಚೆ ನಿಷೇಧ ತೆರವುಗೊಳಿಸಿದ ಪಾಕ್

|
Google Oneindia Kannada News

ನವದೆಹಲಿ, ನವೆಂಬರ್ 19: ಭಾರತದ ಮೇಲೆ ಹೇರಿದ್ದ ಅಂಚೆ ನಿಷೇಧವನ್ನು ಪಾಕಿಸ್ತಾನ ಹಿಂಪಡೆದಿದೆ. ಆದರೆ ಪಾರ್ಸೆಲ್ ಸೇವೆ ಮೇಲೆ ನಿಷೇಧ ಮುಂದುವರೆದಿದೆ ಎಂದು ಪಾಕಿಸ್ತಾನ ಮಾಧ್ಯಮಗಳು ವರದಿ ಮಾಡಿವೆ.

ಪಾಕಿಸ್ತಾನ ಯಾವುದೇ ಪೂರ್ವ ಮಾಹಿತಿ ನೀಡದೆ ಉಭಯ ರಾಷ್ಟ್ರಗಳ ನಡುವಿನ ಅಂಚೆ ಸೇವೆಯನ್ನು ಸ್ಥಗಿತಗೊಳಿಸಿತ್ತು. ಈ ಮೂಲಕ ಅಂತಾರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸಿದೆ. ಆದರೂ ಪಾಕಿಸ್ತಾನ ಪಾಕಿಸ್ತಾನೇ . ಅದು ಯಾವತ್ತೂ ಬದಲಾಗಲ್ಲ ಜೇಂದ್ರ ಸಚಿವರು ತೀವ್ರ ವಾಗ್ದಾಳಿ ನಡೆಸಿದ್ದರು.

ಭಾರತದ ಪರ ನಿಲ್ಲುವ ದೇಶಗಳ ಮೇಲೂ ಅಣುಯುದ್ಧ: ಪಾಕಿಸ್ತಾನದ ಬೆದರಿಕೆಭಾರತದ ಪರ ನಿಲ್ಲುವ ದೇಶಗಳ ಮೇಲೂ ಅಣುಯುದ್ಧ: ಪಾಕಿಸ್ತಾನದ ಬೆದರಿಕೆ

ಜಮ್ಮ ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ನಂತರ ಆಗಸ್ಟ್ 27ರಿಂದ ಪಾಕಿಸ್ತಾನ ಯಾವುದೇ ಅಂಚೆ ಪತ್ರಗಳನ್ನು ಸ್ವೀಕರಿಸುತ್ತಿಲ್ಲ ಮತ್ತು ಕಳುಹಿಸುತ್ತಿರಲಿಲ್ಲ.

Pakistan Resumes Postal Services With India

ಪಾಕಿಸ್ತಾನ ಅಂತಾರಾಷ್ಟ್ರೀಯ ನಿಯಮಗಳ ವಿಚಾರದಲ್ಲಿ ದ್ವಂದ್ವ ನೀತಿ ಅನುಸರಿಸರಿಸುತ್ತಿತ್ತು. ಕಳೆದ ಮೂರು ತಿಂಗಳಿಂದ ಉಭಯ ದೇಶಗಳ ನಡುವೆ ಅಂಚೆ ಸೇವೆ ನಡೆದಿಲ್ಲ.

ಪಾಕಿಸ್ತಾನ ಅಂಚೆ ಸೇವೆ ಸ್ಥಗಿತಗೊಳಿಸಿದ್ದರಿಂದಾಗಿ ಭಾರತಕ್ಕೆ ಅಲ್ಲಿಂದ ಯಾವುದೇ ಅಂಚೆ ಟಪಾಲು ಬಂದಿರಲಿಲ್ಲ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಮಾಹಿತಿ ನೀಡಿದ್ದರು.

ಈ ಎಲ್ಲ ವಿಚಾರಗಳು ಜಾಗತಿಕ ಪೋಸ್ಟಲ್ ಯೂನಿಯನ್​​ನ ನಿಯಮಾವಳಿ ವ್ಯಾಪ್ತಿಗೆ ಬರುತ್ತವೆ. ಜಗತ್ತಿನ ಎಲ್ಲ ದೇಶಗಳ ಅಂಚೆ ವ್ಯವಸ್ಥೆ ಈ ನಿಯಮಾವಳಿ ಪ್ರಕಾರವೇ ಕೆಲಸ ಮಾಡುವುದು. ಆದರೆ ಪಾಕಿಸ್ತಾನ ನಿಯಮ ಉಲ್ಲಂಘಿಸಿತ್ತು. ಇದೀಗ ನಿಷೇಧವನ್ನು ಸ್ವಲ್ಪ ಸಡಿಲಿಸಿದೆ ಆದರೂ ಪಾರ್ಸೆಲ್‌ ಮೇಲೆ ಹೇರಿದ್ದ ನಿಷೇಧವನ್ನು ಹಾಗೆಯೇ ಮುಂದುವರೆಸಿದೆ.

English summary
Pakistan Has Resumed Postal Mail Services with India and Lifted a ban on the delivery of Letters.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X