ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಕಷ್ಟದಲ್ಲೂ ಮಾಡಬಾರದ ಕೆಲಸ ಮಾಡುತ್ತಿರುವ ಪಾಕಿಸ್ತಾನ

|
Google Oneindia Kannada News

ನ್ಯೂಯಾರ್ಕ್, ಏಪ್ರಿಲ್ 21: ವಿಶ್ವ ಹಣಕಾಸು ಸಂಸ್ಥೆಯಲ್ಲಿ ಸಾಲ ನೀಡುವಂತೆ ಗೋಗರೆಯುತ್ತಿರುವ ಪಾಕಿಸ್ತಾನ, ಇನ್ನೊಂದೆಡೆ, ಉಗ್ರರಿಗೆ ಬೆಂಬಲ ನೀಡುವ ಕೆಲಸವನ್ನು ಮುಂದುವರಿಸುತ್ತಿದೆ.

Recommended Video

ದಾವಣಗೆರೆಯಲ್ಲಿ ಸುಮ್ ಸುಮ್ನೆ ಓಡಾಡಿದ್ರೆ ಡಿಸಿ ಮತ್ತು ಎಸ್ಪಿ ಏನ್ ಮಾಡ್ತಾರೆ ನೋಡಿ | Oneindia kannada

ಆರ್ಟಿಫಿಷಿಯಲ್ ಇಂಟೆಲಿಜೆನ್ಸಿ ಬಿಡುಗಡೆ ಮಾಡಿರುವ ವರದಿಯ ಪ್ರಕಾರ, ಸುಮಾರು 3,800ಕ್ಕೂ ಹೆಚ್ಚು ಉಗ್ರರನ್ನು, ತನ್ನ ಭಯೋತ್ಪಾದನಾ ವೀಕ್ಷಣಾ ಪಟ್ಟಿಯಿಂದ ಪಾಕಿಸ್ತಾನ ಸರಕಾರ ತೆಗೆದುಹಾಕಿದೆ.

 ಪಾಕಿಸ್ತಾನ: ಒಂದೇ ದಿನದಲ್ಲಿ ಅತಿ ಹೆಚ್ಚು ಮಂದಿ ಕೊರೊನಾದಿಂದ ಸಾವು ಪಾಕಿಸ್ತಾನ: ಒಂದೇ ದಿನದಲ್ಲಿ ಅತಿ ಹೆಚ್ಚು ಮಂದಿ ಕೊರೊನಾದಿಂದ ಸಾವು

ಈ ನಿರ್ಧಾರಕ್ಕೆ ಯಾವುದೇ ಸಕಾರಣವನ್ನಾಗಲಿ ಅಥವಾ ಸಾರ್ವಜನಿಕ ವಿವರಣೆಯನ್ನಾಗಲಿ ಪಾಕಿಸ್ತಾನ ನೀಡಲಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

Pakistan Removes Names Of 3,800 Terrorists From Its Watch list Including Mumbai Terror Attack Mastermind

2008ರ ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಝೂಕಿ-ಉರ್-ರೆಹಮಾನ್-ನಕ್ವಿ ಸೇರಿದಂತೆ, ಸುಮಾರು 3,800 ಉಗ್ರರ ಹೆಸರನ್ನು ಕಣ್ಗಾವಲು ಪಟ್ಟಿಯಿಂದ ಪಾಕಿಸ್ತಾನ ತೆಗೆದುಹಾಕಿದೆ. ಕಳೆದ ನಲವತ್ತು ದಿನಗಳಿಂದ, ಉಗ್ರರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕುವ ಕೆಲಸ ಮುಂದುವರಿಯುತ್ತಲೇ ಇದೆ.

ಇಮ್ರಾನ್ ಖಾನ್ ಸರಕಾರ ಅಧಿಕಾರಕ್ಕೆ ಬಂದ ನಂತರ, 1,070 ಉಗ್ರರ ಹೆಸರು ಪಟ್ಟಿಯಿಂದ ನಾಪತ್ತೆಯಾಗಿದೆ ಎಂದು ಆರ್ಟಿಫಿಷಿಯಲ್ ಇಂಟೆಲಿಜೆನ್ಸಿ ವರದಿಯಲ್ಲಿ ಹೇಳಲಾಗಿದೆ.

 ಕೊರೊನಾ ಸಾವಿನ ರುದ್ರ ನರ್ತನದಲ್ಲೂ ಪಾಕ್ ಸುಳ್ಳು: ಅಧಿಕೃತ ಸಾವು 143, ಅನಧಿಕೃತ 3,245? ಕೊರೊನಾ ಸಾವಿನ ರುದ್ರ ನರ್ತನದಲ್ಲೂ ಪಾಕ್ ಸುಳ್ಳು: ಅಧಿಕೃತ ಸಾವು 143, ಅನಧಿಕೃತ 3,245?

ಉಗ್ರರಿಗೆ ಅಕ್ರಮವಾಗಿ ಹಣಕಾಸು ನೆರವು ನೀಡುತ್ತಿರುವುದಕ್ಕಾಗಿ ಪಾಕಿಸ್ತಾನವನ್ನು ಈಗಾಗಲೇ ಎಫ್.ಎ.ಟಿ.ಎಫ್ ಬೂದುಪಟ್ಟಿಯಲ್ಲಿ ಸೇರಿಸಿದೆ.

English summary
Pakistan Removes Names Of 3,800 Terrorists From Its Watch list Including Mumbai Terror Attack Mastermind,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X