ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸ ನಕ್ಷೆ: ಪಾಕಿಸ್ತಾನಕ್ಕೆ ಸೇರಿತಾ ಭಾರತದ ಜಮ್ಮು-ಕಾಶ್ಮೀರ?

|
Google Oneindia Kannada News

ನವದೆಹಲಿ, ಆಗಸ್ಟ್.04: ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370 ಕಾಯ್ದೆ ರದ್ದುಗೊಳಿಸಿ ಆಗಸ್ಟ್.05ರ ಬುಧವಾರಕ್ಕೆ ಸರಿಯಾಗಿ ಒಂದು ವರ್ಷ ಪೂರ್ಣಗೊಳ್ಳಲಿದೆ. ಇದರ ಬೆನ್ನಲ್ಲೇ ಪಾಕಿಸ್ತಾನ ಬಿಡುಗಡೆ ಮಾಡಿರುವ ಹೊಸ ನಕ್ಷೆಯು ವಿವಾದವನ್ನು ಸೃಷ್ಟಿಸಿದೆ.

Recommended Video

Sushant ತಂದೆ ಪ್ರಕಾರ ಕೊಲೆ, Police report ಪ್ರಕಾರ ಆತ್ಮಹತ್ಯೆ | Oneindia Kannada

ಪಾಕಿಸ್ತಾನ ಪ್ರಧಾನಮಂತ್ರಿ ಇಮ್ರಾನ್ ಖಾನ್ ಬಿಡುಗಡೆಗೊಳಿಸಿರುವ ಹೊಸ ನಕ್ಷೆಯು ರಾಜಕೀಯ ಪ್ರೇರಿತ ಎನ್ನುವುದು ಸ್ಪಷ್ಟವಾಗಿ ಗೋಚರಿಸುವಂತಿದೆ. ಏಕೆಂದರೆ ಜಮ್ಮು-ಕಾಶ್ಮೀರವು ಪಾಕಿಸ್ತಾನದ ಭಾಗ ಎಂದು ಪಾಕ್ ಗುರುತಿಸಿಕೊಂಡಿದೆ.

ಶ್ರೀರಾಮನ ಬಗ್ಗೆ ಓಲಿ ಹೇಳಿಕೆ: ಸ್ಪಷ್ಟನೆ ಕೊಟ್ಟ ನೇಪಾಳ ಸರ್ಕಾರಶ್ರೀರಾಮನ ಬಗ್ಗೆ ಓಲಿ ಹೇಳಿಕೆ: ಸ್ಪಷ್ಟನೆ ಕೊಟ್ಟ ನೇಪಾಳ ಸರ್ಕಾರ

ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಪಾಕಿಸ್ತಾನ ಪ್ರಧಾನಮಂತ್ರಿ ಇಮ್ರಾನ್ ಖಾನ್ ಆಗಸ್ಟ್.04 ದೇಶದ ಪಾಲಿಗೆ ಐತಿಹಾಸಿಕ ದಿನ ಎಂದು ಕರೆದಿದ್ದಾರೆ. ಅಲ್ಲದೇ ಹೊಸ ನಕ್ಷೆಯು ಪಾಕಿಸ್ತಾನಿ ಪ್ರಜೆಗಳ ಮಹತ್ವಾಕಾಂಕ್ಷೆ ಪ್ರತಿನಿಧಿಸುತ್ತದೆ ಎಂದು ಹೇಳಿದ್ದಾರೆ.

ಪಾಕಿಸ್ತಾನದ ಪಠ್ಯೆಕ್ರಮದಲ್ಲಿ ವಿವಾಹಿತ ಹೊಸ ನಕ್ಷೆ

ಪಾಕಿಸ್ತಾನದ ಪಠ್ಯೆಕ್ರಮದಲ್ಲಿ ವಿವಾಹಿತ ಹೊಸ ನಕ್ಷೆ

ಆಗಸ್ಟ್.04ರಂದು ಪ್ರಧಾನಮಂತ್ರಿ ಇಮ್ರಾನ್ ಖಾನ್ ಬಿಡುಗಡೆಗೊಳಿಸಿರುವ ರಾಜಕೀಯ ಪ್ರೇರಿತ ಹೊಸ ನಕ್ಷೆಯನ್ನೇ ಪಾಕಿಸ್ತಾನದ ಶಾಲೆಗಳಲ್ಲಿನ ಪಠ್ಯಪುಸ್ತಕಗಳಲ್ಲಿ ಸೇರ್ಪಡೆಗೊಳಿಸಲಾಗುತ್ತದೆ ಎಂದು ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಷಿ ತಿಳಿಸಿದ್ದಾರೆ. ಇದಕ್ಕೂ ಮೊದಲು ಪಾಕಿಸ್ತಾನ ಸರ್ಕಾರ ಆಗಸ್ಟ್.5ರಂದು ಅನುಸರಿಸಬೇಕಾದ ನಿರ್ದೇಶನಗಳನ್ನು ಹೊರಡಿಸಿತ್ತು. ಆಗಸ್ಟ್ 5 ಅನ್ನು ಈಗ ಯೂಮ್-ಇ-ಇಸ್ತೇಸಲ್ ಮತ್ತು ಘಸ್ಬಾನಾ ಕಬ್ಜಾ ಎಂದು ಕರೆಯಲಾಗುತ್ತದೆ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.

ಭಾರತ ಆಕ್ರಮಿಕ ಜಮ್ಮು ಕಾಶ್ಮೀರ ಎಂದು ಉಲ್ಲೇಖ

ಭಾರತ ಆಕ್ರಮಿಕ ಜಮ್ಮು ಕಾಶ್ಮೀರ ಎಂದು ಉಲ್ಲೇಖ

ಪಾಕಿಸ್ತಾನದಲ್ಲಿ ಜಮ್ಮು ಕಾಶ್ಮೀರದ ಬಗ್ಗೆ ಬಳಸಬೇಕಾದ ಪದಗಳ ಬಗ್ಗೆಯೂ ಸರ್ಕಾರವು ಪ್ರಕಟಣೆಯಲ್ಲಿ ತಿಳಿಸಿದೆ. IIOJK (Indian llegally Occupied Jammu And Kashmir), ಅಥವಾ IOJK (Indian Occupied Jammu And Kashmir) ಅಥವಾ IOK (Indian Occupied Kashmir) ಎಂದು ಬಳಸುವಂತೆ ಟಿಪ್ಪಣಿಯಲ್ಲಿ ಉಲ್ಲೇಖಿಸಲಾಗಿದೆ. ಅದರ ಕನ್ನಡದ ಅರ್ಥವು ಹೀಗೆ ಇರುತ್ತದೆ.

IIOJK - ಭಾರತೀಯ ಅಕ್ರಮವಾಗಿ ಆಕ್ರಮಿತ ಜಮ್ಮು ಮತ್ತು ಕಾಶ್ಮೀರ

IOJK - ಭಾರತೀಯ ಆಕ್ರಮಿತ ಜಮ್ಮು ಮತ್ತು ಕಾಶ್ಮೀರ

IOK - ಭಾರತೀಯ ಆಕ್ರಮಿತ ಕಾಶ್ಮೀರ

ಪಾಕ್ ಟಿವಿ ನಿರೂಪಕರಿಗೆ ಕಪ್ಪು ಪಟ್ಟಿ ಧರಿಸಲು ಸೂಚನೆ

ಪಾಕ್ ಟಿವಿ ನಿರೂಪಕರಿಗೆ ಕಪ್ಪು ಪಟ್ಟಿ ಧರಿಸಲು ಸೂಚನೆ

ಎಲ್ಲಾ ಟಿವಿ ಮತ್ತು ರೇಡಿಯೊ ಚಾನೆಲ್‌ಗಳು ಆಗಸ್ಟ್.5ರಂದು ಒಂದು ನಿಮಿಷ ಮೌನವಾದ ಕೂಡಲೇ ಪಾಕಿಸ್ತಾನ ಮತ್ತು ಎಜೆಕೆ ರಾಷ್ಟ್ರಗೀತೆಗಳನ್ನು ಪ್ರಸಾರ ಮಾಡಸಬೇಕು. ಟಿವಿ ಚಾನೆಲ್‌ಗಳು ನಿರೂಪಕರು ಒಗ್ಗಟ್ಟಾಗಿ ಕಪ್ಪು ಬ್ಯಾಂಡ್‌ಗಳನ್ನು ಧರಿಸಬೇಕೆು. ಕಾಶ್ಮೀರದಲ್ಲಿ ಭಾರತೀಯ ದೌರ್ಜನ್ಯವನ್ನು ಖಂಡಿಸಲು ಚಾನೆಲ್ ಲೋಗೊಗಳನ್ನು ಕಪ್ಪು ಬಣ್ಣಕ್ಕೆ ತಿರುಗಿಸಬೇಕು ಎಂದು ಪಾಕಿಸ್ತಾನ ಸರ್ಕಾರ ಹೊರಡಿಸಿರುವ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

ಜುಲೈ ತಿಂಗಳಿನಲ್ಲಿ ನೇಪಾಳ, ಆಗಸ್ಟ್ ನಲ್ಲಿ ಪಾಕಿಸ್ತಾನ

ಜುಲೈ ತಿಂಗಳಿನಲ್ಲಿ ನೇಪಾಳ, ಆಗಸ್ಟ್ ನಲ್ಲಿ ಪಾಕಿಸ್ತಾನ

ನೇಪಾಳ-ಭಾರತ ಗಡಿ ವಿವಾದದ ಹಿನ್ನೆಲೆ ಏನು?

ಗಡಿಯಲ್ಲಿ ವಿವಾದ ಸೃಷ್ಟಿಸುತ್ತಿರುವುದೇಕೆ ನೇಪಾಳ?

ಕಳೆದ ಜೂನ್ ಮತ್ತು ಜುಲೈ ತಿಂಗಳಿನಲ್ಲಿ ಇದೇ ರೀತಿ ಹೊಸ ನಕ್ಷೆಯ ಬಿಡುಗಡೆಗೊಳಿಸಿದ ನೇಪಾಳ ಭಾರತದ ಜೊತೆಗೆ ಜಗಳಕ್ಕೆ ನಿಲ್ಲುವಂತೆ ವರ್ತಿಸಿತು. ಅದಾಗಿ ಒಂದೇ ತಿಂಗಳಿನಲ್ಲಿ ಲಡಾಖ್ ಪೂರ್ವ ಗಡಿಯಲ್ಲಿ ಚೀನಾ ಯೋಧರು ಉದ್ದಟತನದಿಂದ ಭಾರತೀಯ ಗಡಿಯನ್ನು ನುಗ್ಗಲು ಯತ್ನಿಸಿದ್ದರು. ಅದಾಗಿ ತಿಂಗಳ ಒಳಗೆ ಪಾಕಿಸ್ತಾನದ ಸರದಿ ಶುರುವಾಗಿದೆ. ಜಮ್ಮು-ಕಾಶ್ಮೀರವನ್ನು ಭಾರತವು ಅಕ್ರಮವಾಗಿ ಅತಿಕ್ರಮಿಸಿಕೊಂಡಿದೆ ಎನ್ನುವಂತೆ ಬಿಂಬಿಸುವ ಹೊಸ ನಕ್ಷೆಯನ್ನು ಪಾಕಿಸ್ತಾನ ಬಿಡುಗಡೆಗೊಳಿಸಿದೆ. ಆ ಮೂಲಕ ನೆರೆಯ ರಾಷ್ಟ್ರಗಳು ಭಾರತದ ವಿರುದ್ಧ ಪದೇ ಪದೆ ಕಾಲ್ಕೆರೆದು ನಿಲ್ಲುತ್ತಿರುವುದು ಸ್ಪಷ್ಟವಾಗುತ್ತಿದೆ.

ಈ ಹಿಂದೆ ಉಭಯ ರಾಷ್ಟ್ರಗಳ ಗಡಿಯಲ್ಲಿರುವ ಲಿಪುಲೇಖ್, ಕಲಪನಿ, ಹಾಗೂ ಲಿಂಪಿಯಾಧುರ ಭೂಪ್ರದೇಶಗಳನ್ನೂ ಒಳಗೊಂಡಂತೆ ನೇಪಾಳ ಹೊಸ ಭೂನಕ್ಷೆ ಬಿಡುಗಡೆ ಮಾಡಿದೆ. ಇದಕ್ಕೆ ಭಾರತವು ವಿರೋಧ ವ್ಯಕ್ತಪಡಿಸಿತ್ತು. ಗಡಿ ವಿಚಾರವನ್ನು ರಾಜತಾಂತ್ರಿಕ ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವಂತೆ ನೇಪಾಳ ವಿದೇಶಾಂಗ ಸಚಿವ ಪ್ರದೀಪ್ ಕುಮಾರ್ ಗ್ಯಾವಾಲಿ ಕೂಡಾ ಹೇಳಿದ್ದರು. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಉತ್ತರಾಖಂಡದ ಪಿಥೋರಗರ್‌ ಹಾಗೂ ಕೈಲಾಶ್ ಮಾನಸರೋವರ್ ಮಾರ್ಗದಲ್ಲಿ ಲಿಪುಲೆಖ್ ಬಳಿ ಲಿಂಕ್ ರಸ್ತೆಯನ್ನು ಉದ್ಘಾಟಿಸಿದ್ದರು. ಅದಾದ ನಂತರ 10 ದಿನಗಳ ನಂತರ ನೇಪಾಳದ ವಿದೇಶಾಂಗ ಸಚಿವಾಲಯವು ಲಿಂಕ್ ರಸ್ತೆಯನ್ನು ಆಕ್ಷೇಪಿಸಿ ಪತ್ರಿಕಾ ಪ್ರಕಟಣೆ ನೀಡಿತ್ತು. ಭಾರತವು ನೇಪಾಳದ ವಾದವನ್ನು ತಿರಸ್ಕರಿಸಿದೆ, ಅದು ಸಂಪೂರ್ಣವಾಗಿ ಭಾರತದ ಭೂಪ್ರದೇಶದಲ್ಲಿದೆ ಎಂದು ಹೇಳಿತ್ತು.

English summary
Pakistan Releases New Map Including Jammu Kashmir As Its Own. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X