ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೇನೆಗೆ ಮಕ್ಕಳ ಸೇರ್ಪಡೆ: ಅಸಮ್ಮತಿ ಸೂಚಿಸಿದ ಪಾಕಿಸ್ತಾನ

|
Google Oneindia Kannada News

ಇಸ್ಲಾಮಾಬಾದ್, ಜುಲೈ 03: ಮಕ್ಕಳನ್ನು ಸೇನೆಗೆ ಸೇರ್ಪಡೆ ಮಾಡುವ ಅಮೆರಿಕ ವಾದಕ್ಕೆ ಪಾಕಿಸ್ತಾನ ಅಸಮ್ಮತಿ ಸೂಚಿಸಿದೆ.

2020 ರಲ್ಲಿ ಸೈನ್ಯದಲ್ಲಿ ಮಕ್ಕಳನ್ನು ನೇಮಕ ಮಾಡಿದ್ದಅಥವಾ ಬಳಸಿದ ದೇಶಗಳ ಪಟ್ಟಿಗೆ ಯುನೈಟೆಡ್ ಸ್ಟೇಟ್ಸ್ ಪಾಕಿಸ್ತಾನವನ್ನು ಸೇರಿಸಿದೆ. ಈ ಪಟ್ಟಿಯಲ್ಲಿರುವ ದೇಶಗಳಿಗೆ ಮಿಲಿಟರಿ ನೆರವಿನ ಮೇಲೆ ನಿರ್ಬಂಧ ಹೇರಲು ಅವಕಾಶವಾಗಲಿದೆ.

ಈ ಒಂದು ವಿಚಾರಕ್ಕೆ ಚೀನಾವನ್ನು ಬೆಂಬಲಿಸುತ್ತೇನೆ ಎಂದ ಇಮ್ರಾನ್ ಖಾನ್ಈ ಒಂದು ವಿಚಾರಕ್ಕೆ ಚೀನಾವನ್ನು ಬೆಂಬಲಿಸುತ್ತೇನೆ ಎಂದ ಇಮ್ರಾನ್ ಖಾನ್

ಅಮೆರಿಕದ ಚೈಲ್ಡ್ ಸೋಲ್ಜರ್ಸ್ ಪ್ರಿವೆನ್ಷನ್ ಆಕ್ಟ್ (ಸಿಎಸ್‌ಪಿಎ) ಪಟ್ಟಿಯಲ್ಲಿ ಸೇರ್ಪಡೆಗೊಳ್ಳುವುದಕ್ಕೆ ಪಾಕಿಸ್ತಾನ ತನ್ನ ಅಸಮ್ಮತಿ ಸೂಚಿಸಿದೆ. ಈ ಕ್ರಮವು ವಾಸ್ತವಿಕವಾದ ದೋಷ ಹಾಗೂ ತಿಳುವಳಿಕೆ ಕೊರತೆಯಿಂದ ಕೂಡಿದೆ.

Pakistan Rejects Its Baseless Inclusion In US Child Soldier Recruiter List, Seeks Review

ಅಲ್ಲದೆ ಪಾಕಿಸ್ತಾನದ ವಿರುದ್ಧದ ಆಧಾರರಹಿತ ಸಮರ್ಥನೆಗಳನ್ನು ಹೊಂದಿದ್ದು ಅದನ್ನು ಪರಿಶೀಲಿಸಬೇಕು ಎಂದು ಅಮೆರಿಕಕಗಕೆ ಒತ್ತಾಯಿಸಿದೆ.

ಪಾಕಿಸ್ತಾನವು ಈ ಉಪಟಳದ ವಿರುದ್ಧ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೋರಾಡಲು ಬದ್ಧವಾಗಿದೆ ಎಂದು ಅದು ಹೇಳಿದೆ. ಸಿಎಸ್‌ಪಿಎ ಪಟ್ಟಿಯು ಸೈನ್ಯದಲ್ಲಿ ಮಕ್ಕಳನ್ನು ನೇಮಕ ಮಾಡಿದ ಅಥವಾ ಬಳಸಿದ ವಿದೇಶಿ ಸರ್ಕಾರಗಳನ್ನು ಒಳಗೊಂಡಿದೆ.

ಈ ಕುರಿತು ಪರಿಶೀಲಿಸಲ್ಪಟ್ಟ ಘಟಕಗಳಲ್ಲಿ ಸಶಸ್ತ್ರ ಪಡೆಗಳು, ಪೊಲೀಸ್, ಇತರ ಭದ್ರತಾ ಪಡೆಗಳು ಮತ್ತು ಸರ್ಕಾರ ಬೆಂಬಲಿತ ಸಶಸ್ತ್ರ ಗುಂಪುಗಳು ಸೇರಿವೆ. 2010 ರಲ್ಲಿ ಮೊದಲ ಸಿಎಸ್‌ಪಿಎ ಪಟ್ಟಿಯಲ್ಲಿ 6 ಸರ್ಕಾರಗಳನ್ನು ಗುರುತಿಸಲಾಗಿದೆ. ಈ ವರ್ಷ ಈ ಪಟ್ಟಿಯಲ್ಲಿರುವ ದೇಶಗಳ ಸಂಖ್ಯೆ 15 ಕ್ಕೆ ತಲುಪಿದೆ, ಇದುವರೆಗೆ ಪಾಕಿಸ್ತಾನ ಹಾಗೂ ಟರ್ಕಿ ರಾಷ್ಟ್ರಗಳಲ್ಲಿ ಅತಿ ಹೆಚ್ಚು ಸಂಖ್ಯೆಯ ಮಕ್ಕಳನ್ನು ಸೈನ್ಯಕ್ಕೆ ಸೇರಿಸಲಾಗಿದೆ ಎಂದು ಪಟ್ಟಿ ವಿವರಿಸಿದೆ.

ಸಿಎಸ್‌ಪಿಎ ಈ ಕೆಳಗಿನ ಯುಎಸ್ ಕಾರ್ಯಕ್ರಮಗಳಟ್ಟಿ ಮಾಡಿದ ಸರ್ಕಾರಗಳನ್ನು ನಿಷೇಧಿಸುವ, ಅಂತಾರಾಷ್ಟ್ರೀಯ ಮಿಲಿಟರಿ ಶಿಕ್ಷಣ ಮತ್ತು ತರಬೇತಿ, ವಿದೇಶಿ ಮಿಲಿಟರಿ ಹಣಕಾಸು, ಹೆಚ್ಚುವರಿ ರಕ್ಷಣಾ ಸಾಮಗ್ರಿ ಮತ್ತು ಶಾಂತಿಪಾಲನಾ ಕಾರ್ಯಾಚರಣೆಗಳು. ಶಾಂತಿಪಾಲನಾ ಕಾರ್ಯಾಚರಣೆ ಪ್ರಾಧಿಕಾರಕ್ಕೆ ಅನುಸಾರವಾಗಿ ಕೈಗೊಂಡ ಕೆಲವು ಕಾರ್ಯಕ್ರಮಗಳಿಗೆ ವಿನಾಯಿತಿ ನೀಡಿಕೆ ಅಂತಹ ಸರ್ಕಾರಗಳಿಗೆ ಮಿಲಿಟರಿ ಸಾಮಗ್ರಿಗಳ ನೇರ ವಾಣಿಜ್ಯ ಮಾರಾಟಕ್ಕೆ ಪರವಾನಗಿ ನೀಡುವುದನ್ನು ಇದು ನಿಷೇಧಿಸಿದೆ.

ಅಮೆರಿಕದ ಈ ಕ್ರಮದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಪಾಕಿಸ್ತಾನದ ವಿದೇಶಾಂಗ ಕಚೇರಿ ಶನಿವಾರ ಹೇಳಿಕೆ ನೀಡಿ ವರದಿಯನ್ನು ಪ್ರಕಟಿಸುವ ಮೊದಲು ಯಾವುದೇ ಆಡಳಿತ ಸಂಸ್ಥೆಯನ್ನು ಅಮೆರಿಕ ಸಂಪರ್ಕಿಸಿಲ್ಲ. ತೀರ್ಮಾನಕ್ಕೆ ಬಂದ ಆಧಾರದ ಬಗ್ಗೆ ಯಾವುದೇ ವಿವರಗಳನ್ನು ನೀಡಲಾಗಿಲ್ಲ ಎಂದು ಹೇಳಿರುವುದಾಗಿ ಡಾನ್ ವರದಿ ಮಾಡಿದೆ.

English summary
The US added Pakistan and Turkey to the CSPA list on Thursday. The designation could lead to strict sanctions on military assistance and listed countries’ participation in peacekeeping programmes.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X