ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ-ಕರ್ತಾರ್‌ಪುರ: ಪ್ರಯಾಣಿಕರಿಗೆ RTPCR ವರದಿ ಕಡ್ಡಾಯ

|
Google Oneindia Kannada News

ಅಮೃತಸರ, ಡಿಸೆಂಬರ್ 20: ಕರ್ತಾರ್‌ಪುರ ಕಾರಿಡಾರ್ ಮೂಲಕ ಗುರುದ್ವಾರ, ಕರ್ತಾರ್‌ಪುರ್ ಸಾಹಿಬ್‌ಗೆ ಬರುವ ಭಾರತೀಯ ಕಡ್ಡಾಯವಾಗಿ ಆರ್‌ಟಿಪಿಸಿಆರ್ ವರದಿ ಇಟ್ಟುಕೊಳ್ಳಬೇಕು ಎಂದು ಪಾಕಿಸ್ತಾನ ಸರ್ಕಾರ ಹೇಳಿದೆ.

ಕೇವಲ ಎರಡು ಡೋಸ್ ಲಸಿಕೆ ಪಡೆದವರು ಪಾಕಿಸ್ತಾನಕ್ಕೆ ತೆರಳಬಹುದು, ಕರ್ತಾರ್‌ಪುರ ಕಾರಿಡಾರ್ ಮೂಲಕ ತೆರಳಬೇಕಾದರೆ ಆರ್‌ಟಿಪಿಸಿಆರ್ ವರದಿ ಇರಬೇಕು 72 ಗಂಟೆಗಳ ಮುಂಚೆ ವರದಿ ಪಡೆದಿರಬೇಕು.

ಸಿಹಿಸುದ್ದಿ: ಓಮಿಕ್ರಾನ್ ಹರಡುವಿಕೆ ತಡೆಯಲು ಆಸ್ಟ್ರಾಜೆನಿಕಾ ಔಷಧಿ!ಸಿಹಿಸುದ್ದಿ: ಓಮಿಕ್ರಾನ್ ಹರಡುವಿಕೆ ತಡೆಯಲು ಆಸ್ಟ್ರಾಜೆನಿಕಾ ಔಷಧಿ!

ಪಾಕಿಸ್ತಾನ ಸಿಖ್ ಗುರುದ್ವಾರ ಪರ್ಬಂಧಕ್ ಕಮಿಟಿ(PSGPC)ಪಾಕಿಸ್ತಾನ ಸರ್ಕಾರಕ್ಕೆ ಮನವಿ ಮಾಡಿದ್ದು, ಭಾರತದಿಂದ ಬರುವವರರಿಗೆ ನಿಯಮ ಸಡಿಲಿಕೆ ಮಾಡಿ ಎಂದು ಕೇಳಿದೆ.

Pakistan Refuses To Allow Indian Pilgrims To Visit Kartarpur Gurudwara Without RT-PCR Report

ಜಗತ್ತಿನಾದ್ಯಂತ ಓಮಿಕ್ರಾನ್ ರೂಪಾಂತರಿ ವೈರಸ್ ನ ಭೀತಿ ಮುಂದುವರೆದಿರುವಂತೆಯೇ ಇತ್ತ ಭಾರತದಲ್ಲಿ ಕೋವಿಡ್ ಏರಿಳಿತ ಮುಂದುವರೆದಿದ್ದು, ಇಂದು ಕೂಡ ದೇಶಾದ್ಯಂತ 6500ಕ್ಕೂ ಅಧಿಕ ಹೊಸ ಸೋಂಕು ಪ್ರಕರಣಗಳು ವರದಿಯಾಗಿವೆ.

ಈ ಬಗ್ಗೆ ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ ದೇಶಾದ್ಯಂತ 6,563 ಹೊಸ ಸೋಂಕು ಪ್ರಕರಣಗಳು ವರದಿಯಾಗಿದ್ದು, ಇದು ನಿನ್ನೆ ದಾಖಲಾಗಿದ್ದ ಹೊಸ ಪ್ರಕರಣಗಳಿಗಿಂತ ಶೇ7ರಷ್ಟು ಕಡಿಮೆ ಎನ್ನಲಾಗಿದೆ. ನಿನ್ನೆ ದೇಶಾದ್ಯಂತ 7,081 ಹೊಸ ಸೋಂಕು ಪ್ರಕರಣಗಳು ದಾಖಲಾಗಿತ್ತು.

ಅಂತೆಯೇ ಇದೇ ಅವಧಿಯಲ್ಲಿ 132 ಮಂದಿ ಸೋಂಕಿತರು ಸಾವನ್ನಪ್ಪಿದ್ದು ಆ ಮೂಲಕ ಕೋವಿಡ್ ಗೆ ದೇಶದಲ್ಲಿ ಬಲಿಯಾದವರ ಸಂಖ್ಯೆ 4,77,554ಕ್ಕೆ ಏರಿಕೆಯಾಗಿದೆ. ಇನ್ನು ಕಳೆದ 24 ಗಂಟೆಗಳ ಅವಧಿಯಲ್ಲಿ 8,077 ಮಂದಿ ಸೋಂಕಿತರು ಗುಣಮುಖರಾಗಿದ್ದು, ಆ ಮೂಲಕ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 3,41,87,017ಕ್ಕೆ ಏರಿಕೆಯಾಗಿದ್ದು, ದೇಶದಲ್ಲಿನ ಚೇತರಿಕೆ ಪ್ರಮಾಣ ಶೇ,98.39ಕ್ಕೆ ಏರಿಕೆಯಾಗಿದೆ. ಅಂತೆಯೇ ದೇಶದಲ್ಲಿನ ಸಕ್ರಿಯ ಸೋಂಕು ಪ್ರಕರಣಗಳ ಸಂಖ್ಯೆ 82, 267ರಷ್ಟಿದೆ ಎಂದು ತಿಳಿದುಬಂದಿದೆ.

ಅಂತೆಯೇ ದೇಶದಲ್ಲಿ ನಡೆಯುತ್ತಿರುವ ಲಸಿಕಾ ಅಭಿಯಾನ ಮುಂದುವರೆದಿದ್ದು, ಈ ವರೆಗೂ 137.67 ಕೋಟಿ ಡೋಸ್ ಲಸಿಕೆ ವಿತರಣೆ ಮಾಡಲಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಕೋವಿಡ್‌ 19 ನಿಂದಾಗಿ ಮುಚ್ಚಲಾಗಿದ್ದ , ಪಾಕಿಸ್ತಾನದಲ್ಲಿರುವ ಸಿಖ್‌ ಸಮುದಾಯ ಪ್ರಮುಖ ಯಾತ್ರಾ ಸ್ಥಳ, ಗುರುದ್ವಾರ ದರ್ಬಾರ್‌ ಸಾಹಿಬ್‌ಗೆ ತೆರಳುವ ಕರ್ತಾರ್‌ಪುರ ಕಾರಿಡಾರ್‌ ನವೆಂಬರ್‌ 17 ರಿಂದ ಸಾರ್ವಜನಿಕರಿಗೆ ಮುಕ್ತವಾಗಿದೆ. ಆ ಮೂಲಕ ಬರೋಬ್ಬರಿ ಇಪ್ಪತ್ತು ತಿಂಗಳ ಬಳಿಕ ಸಿಖ್ಖರಿಗೆ ತಮ್ಮ ಪವಿತ್ರ ಕ್ಷೇತ್ರದ ದರ್ಶನಕ್ಕೆ ಅವಕಾಶ ಸಿಕ್ಕಂತಾಗಿದೆ.

ಬುಧವಾರವೇ ಯಾತ್ರಿಗಳು ಕರ್ತಾರ್‌ಪುರ ಕಾರಿಡಾರ್‌ ಮೂಲಕ ಗುರುದ್ವಾರ ಸಾಹಿಬ್‌ಗೆ ತೆರಳಿ ದರ್ಶನ ಪಡೆದಿದ್ದಾರೆ. 28 ಮಂದಿಯಿಂದ ಮೊದಲ ತಂಡವು ಕರ್ತಾರ್‌ಪುರ ಕಾರಿಡಾರ್‌ ಮೂಲಕ ಪಾಕಿಸ್ತಾನದಲ್ಲಿರುವ ದರ್ಬಾರ್‌ ಸಾಹಿಬ್‌ಗೆ ತೆರಳಿತು.

ಕೋವಿಡ್‌ ಸಾಂಕ್ರಮಿಕ ರೋಗದಿಂದಾಗಿ 2020ರ ಮಾರ್ಚ್‌ನಿಂದ ಈ ಕಾರಿಡರ್‌ ಅನ್ನು ಬಂದ್‌ ಮಾಡಲಾಗಿತ್ತು. ಇದೀಗ ಪುನಾರಂಭಗೊಂಡಿದ್ದು, ಕೋವಿಡ್‌ 19 ಸೋಂಕು ತಗುಲಿಲ್ಲ ಎಂದು ಖಚಿತ ಪಡಿಸುವ ಆರ್‌ಟಿಪಿಸಿಆರ್‌ ಟೆಸ್ಟ್‌ ವರದಿ ಹಾಗೂ ಎರಡು ಡೋಸ್‌ ಲಸಿಕೆ ಪಡೆದವರಿಗೆ ಮಾತ್ರ ಇಲ್ಲಿ ಅವಕಾಶ ಕಲ್ಪಿಸಲಾಗಿದೆ.

English summary
The Pakistan government has refused to allow the Indian pilgrims to visit Gurdwara Darbar Sahib, Kartarpur Sahib, through Kartarpur Corridor without negative RT-PCR test reports.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X