ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನ: ಒಂದೇ ದಿನದಲ್ಲಿ ಅತಿ ಹೆಚ್ಚು ಮಂದಿ ಕೊರೊನಾದಿಂದ ಸಾವು

|
Google Oneindia Kannada News

ಇಸ್ಲಾಮಾಬಾದ್, ಏಪ್ರಿಲ್ 21: ಪಾಕಿಸ್ತಾನದಲ್ಲಿ ಒಂದೇ ದಿನ ಅತಿ ಹೆಚ್ಚು ಕೊರೊನಾ ಸೋಂಕಿತರು ಮೃತಪಟ್ಟಿದ್ದಾರೆ.

ಒಂದೇ ದಿನದಲ್ಲಿ 17 ಮಂದಿ ಕೊರೊನಾ ವೈರಸ್‌ನಿಂದ ಮೃತಪಟ್ಟಿದ್ದಾರೆ. 24 ಗಂಟೆಗಳಲ್ಲಿ 705 ಕೊರೊನಾ ಹೊಸ ಪ್ರಕರಣಗಳು ದಾಖಲಾಗಿವೆ. ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 9,214ಕ್ಕೆ ಏರಿಕೆಯಾಗಿದೆ. ಇದುವರೆಗೆ 194 ಮಂದಿ ಸಾವನ್ನಪ್ಪಿದ್ದಾರೆ.

2053 ಮಂದಿ ಗುಣಮುಖರಾಗಿದ್ದಾರೆ. ಪಾಕಿಸ್ತಾನದಲ್ಲೂ ಕೊರೊನಾ ವೈರಸ್‌ನಿಂದ ದೂರವಿರಲು ಲಾಕ್‌ಡೌನ್ ನಿಯಮವನ್ನು ಪಾಲಿಸಲಾಗುತ್ತಿದೆ. 6969 ಆಕ್ಟೀವ್ ಪ್ರಕರಣಗಳಿವೆ.

Pakistan Records Highest Number Of COVID 19 Deaths In A Day

ಸರ್ಕಾರವು ಒಂದು ದಿನ 25 ಸಾವಿರ ಮಂದಿಯನ್ನು ಪರೀಕ್ಷೆಗೆ ಒಳಪಡಿಸುತ್ತಿದೆ. ಇದುವರೆಗೂ 111,806 ಮಂದಿ ತಪಾಸಣೆ ನಡೆಸಿದೆ.ಸೋಮವಾರ ಕೇವಲ 5347 ಮಂದಿಯನ್ನು ಪರೀಕ್ಷೆ ಮಾಡಲಾಗಿದೆ. ಸಾಕಷ್ಟು ಮಂದಿ ಇರಾನ್‌ನಿಂದ ಆಗಮಿಸಿದವರಿದ್ದಾರೆ.

ರಂಜಾನ್ ದಿನ ಎಲ್ಲಾ ಮಸೀದಿಗಳನ್ನು ತೆರೆಯಲಾಗುತ್ತದೆ ಸಾಮಾಜಿಕ ಅಂತರ ಕಾಯ್ದುಕೊಂಡು ಪ್ರಾರ್ಥನೆ ಸಲ್ಲಿಸಬೇಕು ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ತಿಳಿಸಿದ್ದಾರೆ.

ದೇಶದಲ್ಲಿ 18,601 ಮಂದಿ ಕೊರೊನಾ ಸೋಂಕಿತರಿದ್ದು, 3252 ಮಂದಿ ಗುಣಮುಖರಾಗಿದ್ದಾರೆ. 590 ಮಂದಿ ಸಾವನ್ನಪ್ಪಿದ್ದಾರೆ.ಇಡೀ ಜಗತ್ತಿನ ನಿದ್ದೆಗೆಡಿಸಿರುವ ಕೊರೊನಾ ವೈರಸ್‌ ಈಗ ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಅವರಲ್ಲಿ ಆತಂಕ ಸೃಷ್ಟಿಸಿದ್ದು, ಕೊರೊನಾ ಸೋಂಕು ತಗುಲುವ ಭೀತಿಯಲ್ಲಿದ್ದಾರೆ.

ಪಾಕಿಸ್ತಾನದ ಪ್ರಮುಖ ಸಮಾಜ ಸೇವಕ ಅವರ ಪುತ್ರರೊಬ್ಬರಿಗೆ ಕೊರೊನಾ ಸೋಂಕು ಇರುವುದು ಖಚಿತವಾಗಿದೆ. ಈ ವ್ಯಕ್ತಿ ಕೆಲವೇ ದಿನಗಳ ಹಿಂದೆ ಇಮ್ರಾನ್‌ ಖಾನ್‌ ಅವರನ್ನು ಭೇಟಿಯಾಗಿದ್ದರಿಂದ ಈಗ ಪಾಕ್‌ ಪ್ರಧಾನಿಗೂ ಕೊರೊನಾ ಭೀತಿ ಶುರುವಾಗಿದೆ.

ಇದೀ ಫೌಂಡೇಶನ್‌ನ ಮುಖ್ಯಸ್ಥ ಹಾಗೂ ಪ್ರಸಿದ್ಧ ಸಮಾಜ ಸೇವಕ ಅಬ್ದುಲ್‌ ಸತ್ತಾರ ಇದೀ ಅವರ ಪುತ್ರ ಫೈಸಲ್‌ ಇದೀ ಅವರಲ್ಲಿ ಕೊರೊನಾ ಸೋಂಕು ಇರುವುದು ದೃಢವಾಗಿದೆ.

ಅವರಲ್ಲಿ ಕೊರೊನಾ ಸೋಂಕಿನ ಲಕ್ಷಣಗಳು ಕಳೆದ ವಾರದಿಂದ ಕಾಣಿಸಲು ಶುರುವಾಗಿತ್ತು. ಇದರ ನಡುವೆಯೇ ಏಪ್ರಿಲ್‌ 15 ರಂದು ಇಸ್ಲಮಾಬಾದ್‌ನಲ್ಲಿ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಅವರನ್ನು ಫೈಸಲ್ ಭೇಟಿಯಾಗಿದ್ದರು.

English summary
Pakistan has seen its highest rise in deaths in a single day from the coronavirus, with 17 new cases taking the country's death toll from the highly contagious virus to at least 192,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X