ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಆತಂಕದಿಂದ ನಿಟ್ಟುಸಿರು ಬಿಟ್ಟ ಪಾಕ್ ಪ್ರಧಾನಿ ಇಮ್ರಾನ್ ಖಾನ್‌

|
Google Oneindia Kannada News

ಇಸ್ಲಾಮಾಬಾದ್​, ಏಪ್ರಿಲ್ 23: ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್‌ಗೆ ಕೊರೊನಾ ಸೋಂಕು ತಗುಲಿರಬಹುದು ಎಂಬ ಆತಂಕ ಸೃಷ್ಟಿಯಾಗಿತ್ತು. ಅನುಮಾನ ವ್ಯಕ್ತವಾಗುತ್ತಿದ್ದಂತೆ ಪಾಕ್‌ ಪ್ರಧಾನಿಯನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ.

ಇದೀಗ, ಪಾಕ್‌ ಪ್ರಧಾನಿಯ ಕೊರೊನಾ ಪರೀಕ್ಷೆಯ ಫಲಿತಾಂಶ ಹೊರಬಿದ್ದಿದ್ದು, ನೆಗಿಟಿವ್ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

Pakistan Prime minister Tested Coronavirus Negative

ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್‌ಗೂ ಕೊರೊನಾ ಆತಂಕಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್‌ಗೂ ಕೊರೊನಾ ಆತಂಕ

''ಪಾಕಿಸ್ತಾನ್ ಪ್ರಧಾನಮಂತ್ರಿ ಇಮ್ರಾನ್ ಖಾನ್ ಅವರಿಗೆ ಕೊರೊನಾ ವೈರಸ್ ಸೋಂಕು ತಪಾಸಣೆ ನಡೆಸಿದಾಗ ನೆಗೆಟಿವ್ ಎಂದು ಬಂದಿರುವುದನ್ನು ತಿಳಿಸುವುದಕ್ಕೆ ಸಂತಸವಾಗುತ್ತದೆ'' ಎಂದು ಪಾಕಿಸ್ತಾನ ಆರೋಗ್ಯ ಸಚಿವ ಜಾಫರ್ ಮಿರ್ಜಾ ಟ್ವೀಟ್ ಮಾಡಿದ್ದಾರೆ.

ಪಾಕಿಸ್ತಾನದ ಪ್ರಮುಖ ಸಮಾಜ ಸೇವಕನ ಪುತ್ರನಿಗೆ ಕೊರೊನಾ ಸೋಂಕು ದೃಢವಾಗಿತ್ತು. ಈ ವ್ಯಕ್ತಿ ಕೆಲವು ದಿನಗಳ ಹಿಂದೆಯಷ್ಟೇ ಪಾಕ್‌ ಪ್ರಧಾನಿಯನ್ನು ಭೇಟಿ ಮಾಡಿದ್ದರು. ಹಾಗಾಗಿ, ಇಮ್ರಾನ್‌ ಖಾನ್‌ಗೆ ಕೊರೊನಾ ಭೀತಿ ಶುರುವಾಗಿತ್ತು.

ಹೌದು, ಇದಿ ಫೌಂಡೇಶನ್​ನ ಮುಖ್ಯಸ್ಥ ಫೈಸಲ್​ ಇದಿ ಕೆಲದಿನಗಳ ಹಿಂದಷ್ಟೆ ಇಮ್ರಾನ್​ ಖಾನ್​ರನ್ನು ಭೇಟಿಯಾಗಿದ್ದರು. ಕೊರೊನಾ ಸೋಂಕಿನ ನಿರ್ಮೂಲನೆಗೆ ಒಂದು ಕೋಟಿ ರೂಪಾಯಿಗಳನ್ನು ನೀಡಿದ್ದರು. ಈ ವೇಳೆ ಇಮ್ರಾನ್​ ಖಾನ್​ರ ಕೈ ಕುಲುಕಿ ಅವರ ಕಚೇರಿಯಲ್ಲಿ ನಡೆದ ಮಾತುಕತೆ ವೇಳೆ ಸುಮಾರು ಅರ್ಧಗಂಟೆ ಕುಳಿತಿದ್ದರು ಎಂಬ ಮಾಹಿತಿ ಇದೆ.

ಕೊರೊನಾ ಸಾವಿನ ರುದ್ರ ನರ್ತನದಲ್ಲೂ ಪಾಕ್ ಸುಳ್ಳು: ಅಧಿಕೃತ ಸಾವು 143, ಅನಧಿಕೃತ 3,245?ಕೊರೊನಾ ಸಾವಿನ ರುದ್ರ ನರ್ತನದಲ್ಲೂ ಪಾಕ್ ಸುಳ್ಳು: ಅಧಿಕೃತ ಸಾವು 143, ಅನಧಿಕೃತ 3,245?

ಪಾಕಿಸ್ತಾನದಲ್ಲಿ ಇದುವರೆಗೂ 10,076 ಜನರಿಗೆ ಕೊವಿಡ್ ಸೋಂಕು ತಗುಲಿದೆ. ಅದಲ್ಲಿ 212ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ ಎಂಬ ಅಂಕಿ ಅಂಶ ಲಭ್ಯವಾಗಿದೆ.

English summary
'Prime Minister Imran Khan was tested today for SARS-CoV-2. I am happy to report that his test is NEGATIVE' says pak health minister.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X