ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನದ ಪ್ರಧಾನಿ ಹುದ್ದೆಯಲ್ಲಿರುವ ನಾಯಕರ ಪರಿಚಯ

By Gururaj
|
Google Oneindia Kannada News

ಇಸ್ಲಾಮಾಬಾದ್, ಜುಲೈ 25 : ಪಾಕಿಸ್ತಾನದ ಸಂಸತ್ ಮತ್ತು ಪ್ರಾಂತೀಯ ವಿಧಾನಸಭೆಗಳಿಗೆ ಇಂದು ಚುನಾವಣೆ ನಡೆಯುತ್ತಿದೆ. ಪಾಕಿಸ್ತಾನದ ಪ್ರಧಾನಿ ಯಾರಾಗಲಿದ್ದಾರೆ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಮೂವರು ನಾಯಕರ ಹೆಸರು ಪ್ರಬಲವಾಗಿ ಕೇಳಿಬರುತ್ತಿದೆ.

ಈ ಬಾರಿಯ ಚುನಾವಣೆಯಲ್ಲಿ ಜಮಾತ್ ಉದ್ ದವಾ (ಜೆಡಿಯು) ಸಂಘಟಯ ರಾಜಕೀಯ ವೇದಿಕೆ ಅಲ್ಲಾಹ್-ಒ-ತಕಬೀರ್ ಪಾಕಿಸ್ತಾನದಲ್ಲಿ ಅಧಿಕಾರಕ್ಕೆ ಏರಲು ಪ್ರಯತ್ನ ನಡೆಸುತ್ತಿದೆ. ಆದ್ದರಿಂದ ಈ ಬಾರಿಯ ಚುನಾವಣೆ ಕುತೂಹಲಕ್ಕೆ ಕಾರಣವಾಗಿದೆ.

ಪಾಕಿಸ್ತಾನ ಚುನಾವಣೆ: ಹತ್ತು ಪ್ರಮುಖ ಅಂಶಗಳುಪಾಕಿಸ್ತಾನ ಚುನಾವಣೆ: ಹತ್ತು ಪ್ರಮುಖ ಅಂಶಗಳು

ತೇಹ್ರೀಕ್-ಇ-ಇನ್ಸಾಫ್ (ಪಿಟಿಐ), ಪಾಕಿಸ್ತಾನ್ ಮುಸ್ಲಿಂ ಲೀಗ್ ನವಾಜ್ (ಪಿಎಂಎಲ್‌ಎನ್), ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ) ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ. ಇಂದು ಮತದಾನ ನಡೆಯಲಿದ್ದು, ರಾತ್ರಿ 8 ಗಂಟೆಯ ಬಳಿಕ ಮತ ಎಣಿಕೆ ಆರಂಭವಾಗಲಿದೆ. ಬಹುಮತ ಪಡೆಯಲು ಬೇಕಾದ ಮ್ಯಾಜಿಕ್ ನಂಬರ್ 172.

ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಮತ್ತು ಅವರ ಪುತ್ರಿ ಮರಿಯಮ್ ಭ್ರಷ್ಟಚಾರ ಪ್ರಕರಣದಲ್ಲಿ ಜೈಲು ಪಾಲಾಗಿದ್ದಾರೆ. ಆದ್ದರಿಂದ, ಪಾಕಿಸ್ತಾನ್ ಮುಸ್ಲಿಂ ಲೀಗ್ ನವಾಜ್ (ಪಿಎಂಎಲ್‌ಎನ್) ಪಕ್ಷಕ್ಕೆ ಚುನಾವಣೆಯಲ್ಲಿ ಹಿನ್ನಡೆಯಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಪಾಕಿಸ್ತಾನದ ಮುಂದಿನ ಪ್ರಧಾನಿ ಯಾರು? ಇಲ್ಲಿಗೆ ಪರಿಚಯ...

ಇಮ್ರಾನ್ ಖಾನ್

ಇಮ್ರಾನ್ ಖಾನ್

ಈ ಬಾರಿಯ ಪಾಕಿಸ್ತಾನದ ಚುನಾವಣೆಯಲ್ಲಿ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ನೇತೃತ್ವದ ತೇಹ್ರೀಕ್-ಇ-ಇನ್ಸಾಫ್ (ಪಿಟಿಐ) ಪಕ್ಷ ಮುಂಚೂಣಿಯಲ್ಲಿದೆ. ಇಮ್ರಾನ್ ಖಾನ್ ಅವರ ಹೆಸರು ಪ್ರಧಾನಿ ಪಟ್ಟಕ್ಕೆ ಕೇಳಿಬರುತ್ತಿದೆ.

* ಇಮ್ರಾನ್ ಖಾನ್ ಮಾಜಿ ಕ್ರಿಕೆಟಿಗ, ಸದ್ಯ ಪಿಟಿಐ ಪಕ್ಷದ ಮುಖ್ಯಸ್ಥ
* 2014ರಲ್ಲಿ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಿದ್ದರು.
* ಪಿಎಂಎಲ್‌ಎನ್ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ
* ಈ ಬಾರಿಯ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದು, ಇಮ್ರಾನ್ ಖಾನ್ ಪ್ರಧಾನಿ ಅಭ್ಯರ್ಥಿ

ನವಾಜ್ ಷರೀಫ್ ಸಹೋದರ

ನವಾಜ್ ಷರೀಫ್ ಸಹೋದರ

ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ನೇತೃತ್ವದ ಪಾಕಿಸ್ತಾನ್ ಮುಸ್ಲಿಂ ಲೀಗ್ ನವಾಜ್ (ಪಿಎಂಎಲ್‌ಎನ್) ಸಹ ಚುನಾವಣಾ ಕಣದಲ್ಲಿದೆ. ಆದರೆ, ಭ್ರಷ್ಟಾಚಾರ ಪ್ರಕರಣದಲ್ಲಿ ಷರೀಫ್ ಜೈಲು ಸೇರಿದ್ದು, ಪಕ್ಷಕ್ಕೆ ಹಿನ್ನಡೆ ಉಂಟಾಗಿದೆ.

* ನವಾಜ್ ಷರೀಫ್ ಸಹೋದರ ಶೆಹಬಾಜ್ ಷರೀಫ್ ಪ್ರಧಾನಿ ಅಭ್ಯರ್ಥಿ
* ದೇಶದ ಅತಿ ದೊಡ್ಡ ರಾಜ್ಯ ಪಂಜಾಬ್‌ನ ಮುಖ್ಯಮಂತ್ರಿಯಾಗಿದ್ದರು
* ಉತ್ತಮ ಆಡಳಿತಗಾರ ಎಂಬ ಹೆಸರು ಪಡೆದಿದ್ದಾರೆ
* ನವಾಜ್ ಷರೀಫ್ ಮಾಡಿರುವ ಭ್ರಷ್ಟಾಚಾರದಲ್ಲಿ ಶೆಹಬಾಜ್ ಪಾಲುದಾರ ಎಂದು ಆರೋಪಿಸಲಾಗುತ್ತಿದೆ

ಪಾಕಿಸ್ತಾನದಲ್ಲಿ ಜುಲೈ 25ಕ್ಕೆ ಚುನಾವಣೆ, ಸಾವು-ಬಂಧನದ ಹೈಡ್ರಾಮಾಪಾಕಿಸ್ತಾನದಲ್ಲಿ ಜುಲೈ 25ಕ್ಕೆ ಚುನಾವಣೆ, ಸಾವು-ಬಂಧನದ ಹೈಡ್ರಾಮಾ

ಬಿಲಾವಲ್ ಭುಟ್ಟೊ

ಬಿಲಾವಲ್ ಭುಟ್ಟೊ

ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ) ಸಹ ಚುನಾವಣಾ ಕಣದಲ್ಲಿದೆ. 29 ವರ್ಷದ ಬಿಲಾವಲ್ ಭುಟ್ಟೊ ಜರ್ದಾರಿ ಪಕ್ಷ ನಾಯಕರು. ಚುನಾವಣಾ ಪ್ರಚಾರದಲ್ಲಿ ಅವರು ಸಕ್ರಿಯರಾಗಿದ್ದರು. ಸಿಂಧ್ ಪ್ರಾಂತ್ಯದಲ್ಲಿ ದಶಕಗಳ ಕಾಲ ಪಿಪಿಪಿ ಆಡಳಿತ ನಡೆಸಿದೆ. ಆದರೆ, ಅದೇ ಕ್ಷೇತ್ರದಲ್ಲಿ ಪಕ್ಷಕ್ಕೆ ಹೆಚ್ಚಿನ ಬೆಂಬಲವಿಲ್ಲ. ಪಕ್ಷದಿಂದ ಬಿಲಾವಲ್ ಭುಟ್ಟೊ ಅವರೇ ಪ್ರಧಾನಿ ಅಭ್ಯರ್ಥಿಯಾಗಿದ್ದಾರೆ.

ಅಲ್ಲಾಹ್-ಒ-ತಕಬೀರ್

ಅಲ್ಲಾಹ್-ಒ-ತಕಬೀರ್

ಉಗ್ರ ಹಫೀಜ್​ ಸಯೀದ್​ ನೇತೃತ್ವದ ಅಲ್ಲಾಹ್‌-ಒ-ತಕಬೀರ್‌ ಪಕ್ಷ ಚುನಾವಣೆಗೆ ಸ್ಪರ್ಧಿಸುತ್ತಿದ್ದು, ಅಧಿಕಾರಕ್ಕೆ ಏರಲು ಪ್ರಯತ್ನ ನಡೆಸುತ್ತಿದೆ. ಆದ್ದರಿಂದ ಈ ಬಾರಿಯ ಚುನಾವಣೆ ಕುತೂಹಲಕ್ಕೆ ಕಾರಣವಾಗಿದೆ. ಅಲ್ಲಾಹ್-ಒ-ತಕಬೀರ್ ಪಕ್ಷದಲ್ಲಿ ಪ್ರಧಾನಿ ಅಭ್ಯರ್ಥಿ ಯಾರು ಎಂಬುದು ಇನ್ನೂ ಖಚಿತವಾಗಿಲ್ಲ.

ಪಂಜಾಬ್ ಗೆದ್ದರೆ ಪಾಕಿಸ್ತಾನವೇ ಗೆದ್ದಂತೆ, ಇದು ಗದ್ದುಗೆ ಲೆಕ್ಕಾಚಾರಪಂಜಾಬ್ ಗೆದ್ದರೆ ಪಾಕಿಸ್ತಾನವೇ ಗೆದ್ದಂತೆ, ಇದು ಗದ್ದುಗೆ ಲೆಕ್ಕಾಚಾರ

ಮ್ಯಾಜಿಕ್ ನಂಬರ್ 172

ಮ್ಯಾಜಿಕ್ ನಂಬರ್ 172

ಪಾಕಿಸ್ತಾನದ ಸಂಸತ್ 342 ಸ್ಥಾನ ಮತ್ತು ಪ್ರಾಂತೀಯ ವಿಧಾನಸಭೆಯ 577 ಸ್ಥಾನಕ್ಕೆ ಇಂದು ಮತದಾನ ಚುನಾವಣೆ ನಡೆಯುತ್ತಿದೆ. ಸಂಸತ್‌ನಲ್ಲಿ ಬಹುಮತ ಪಡೆಯಲು ಬೇಕಾದ ಮ್ಯಾಜಿಕ್ ನಂ 172.

English summary
Pakistan Tehreek-e-Insaf (PTI) and the Pakistan People's Party (PPP) challenged to a Pakistan Muslim League-Nawaz (PML-N) in the July 25, 2018 elections. Who are the candidates for prime minister post.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X