ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೆರಿಗೆ ಸಂಗ್ರಹ: ಮೋದಿ ದಾರಿ ಅನುಕರಿಸಿದ ಇಮ್ರಾನ್ ಖಾನ್

|
Google Oneindia Kannada News

ಇಸ್ಲಾಮಾಬಾದ್, ಜೂನ್ 10: ತೀವ್ರ ಅರ್ಥಿಕ ಮುಗ್ಗಟ್ಟಿಗೆ ಸಿಲುಕಿರುವ ಪಾಕಿಸ್ತಾನದಲ್ಲಿ ತೆರಿಗೆ ಸಂಗ್ರಹಕ್ಕಾಗಿ ಪ್ರಧಾನಿ ಇಮ್ರಾನ್ ಖಾನ್, ತೆರಿಗೆ ಪಾವತಿಸಿ ದೇಶಕ್ಕೆ ನೆರವಾಗುವಂತೆ ಜನರಿಗೆ ಮನವಿ ಮಾಡಿದ್ದಾರೆ.

ಪಾಕಿಸ್ತಾನದಲ್ಲಿ ಆರ್ಥಿಕ ಸ್ಥಿತಿ ಸುಧಾರಣೆಗಾಗಿ ಕೊನೆಯ ಆಸ್ತಿ ಘೋಷಣೆ ಯೋಜನೆಯನ್ನು ಜಾರಿ ಮಾಡಲಾಗಿದ್ದು, ಜನರು ಅದರ ಪ್ರಯೋಜನ ಪಡೆದುಕೊಳ್ಳುವಂತೆ ಅವರು ಕರೆ ನೀಡಿದ್ದಾರೆ.

ಮಾತುಕತೆಗೆ ಮುಂದಾದ ಪಾಕ್, ಮೋದಿಗೆ ಇಮ್ರಾನ್ ಖಾನ್ ಪತ್ರಮಾತುಕತೆಗೆ ಮುಂದಾದ ಪಾಕ್, ಮೋದಿಗೆ ಇಮ್ರಾನ್ ಖಾನ್ ಪತ್ರ

ದೇಶವನ್ನು ಆರ್ಥಿಕವಾಗಿ ಸದೃಢಗೊಳಿಸಲು ಮತ್ತು ಕಪ್ಪು ಹಣದ ವಿರುದ್ಧ ಸಮರ ನಡೆಸಲು ಬೇನಾಮಿ ಆಸ್ತಿಗಳನ್ನು ಮುಟ್ಟುಗೋಲು ಹಾಕುವ ಸಲುವಾಗಿ ಪ್ರಧಾನಿ ಮೋದಿ ಸರ್ಕಾರ 2016ರಲ್ಲಿ ಇದೇ ರೀತಿಯ ಕ್ರಮ ತೆಗೆದುಕೊಂಡಿತ್ತು. ಇದರಿಂದ ತೆರಿಗೆ ಆಧಾರಿತ ಆದಾಯದಲ್ಲಿ ಹೆಚ್ಚಳವಾಗಿತ್ತು.

ಅತ್ತ ಪಾಕಿಸ್ತಾನದ ಆರ್ಥಿಕತೆ ನೆಲಕಚ್ಚಿರುವ ಸಂದರ್ಭದಲ್ಲಿ ದೇಶದ ವರಮಾನ ಹೆಚ್ಚಿಸಲು ಕಟ್ಟುನಿಟ್ಟಿನ ತೆರಿಗೆ ಸಂಗ್ರಹ ಅಗತ್ಯವಾಗಿರುವುದರಿಂದ ಪ್ರಧಾನಿ ಇಮ್ರಾನ್ ಖಾನ್, ಅಕ್ರಮ ಆಸ್ತಿಗಳ ಮೇಲೆ ಕಣ್ಣಿಟ್ಟಿದ್ದಾರೆ. ಇಮ್ರಾನ್ ಖಾನ್ ಸರ್ಕಾರದ ಹೊಸ ಆಸ್ತಿ ಘೋಷಣೆ ಯೋಜನೆಯಂತೆ ದೇಶದ ಶ್ರೀಮಂತರು ಈ ಹಿಂದೆ ಬಚ್ಚಿಟ್ಟಿದ್ದ ಆಸ್ತಿ ವಿವರಗಳ ಮಾಹಿತಿಯನ್ನು ಬಹಿರಂಗಪಡಿಸಬೇಕಾಗುತ್ತದೆ.

ಜೂನ್ 30ರ ಒಳಗೆ ಆಸ್ತಿ ಘೋಷಣೆ

ಜೂನ್ 30ರ ಒಳಗೆ ಆಸ್ತಿ ಘೋಷಣೆ

ಸೋಮವಾರ ಬೆಳಿಗ್ಗೆ ಟೆಲಿವಿಷನ್ ಮೂಲಕ ದೇಶದ ಜನತೆಗೆ ಸಂದೇಶ ರವಾನಿಸಿರುವ ಇಮ್ರಾನ್ ಖಾನ್, ತೆರಿಗೆ ಪಾವತಿಸುವುದು ರಾಷ್ಟ್ರೀಯ ಕರ್ತವ್ಯ ಎಂದು ಹೇಳಿದ್ದಾರೆ. ಜತೆಗೆ ತೆರಿಗೆದಾರರು ಸರ್ಕಾರ ಜಾರಿ ಮಾಡಿರುವ ಕಡೆಯ ಆಸ್ತಿ ಘೋಷಣೆ ಯೋಜನೆಯ ಪ್ರಯೋಜನ ಪಡೆದುಕೊಳ್ಳಬೇಕೆಂದು ತಿಳಿಸಿದ್ದಾರೆ.

ವಿದೇಶಗಳಲ್ಲಿ ಬೇನಾಮಿ ಆಸ್ತಿ ಹೊಂದಿರುವವರು ಜೂನ್ 30ರ ಒಳಗೆ ಆಸ್ತಿ ಘೋಷಣೆ ಮಾಡಬೇಕು ಎಂದು ಇಮ್ರಾನ್ ಖಾನ್ ಸೂಚನೆ ನೀಡಿದ್ದಾರೆ.

ಬೇನಾಮಿ ಆಸ್ತಿ ಸಕ್ರಮ

ಬೇನಾಮಿ ಆಸ್ತಿ ಸಕ್ರಮ

ದೇಶದ ಸಿರಿವಂತರು ಈ ಹಿಂದೆ ತಮ್ಮ ಬಹಿರಂಗಪಡಿಸದೆ ಇರುವ ಆಸ್ತಿಗಳ ಮೇಲೆ ಶೇ 4ರಷ್ಟು ತೆರಿಗೆ ಪಾವತಿ ಮಾಡುವ ಮೂಲಕ ಬೇನಾಮಿ ಆಸ್ತಿಯನ್ನು ಕಾನೂನುಬದ್ಧಗೊಳಿಸಿಕೊಳ್ಳಬಹುದು ಎಂಬ ಅವಕಾಶ ನೀಡಲಾಗಿದೆ. ಜೂನ್ 30ರ ಒಳಗೆ ಅವರು ಈ ರೀತಿ ಆಸ್ತಿ ಘೋಷಣೆ ಮಾಡಿದರೆ ಅವರು ಕಾನೂನಾತ್ಮಕ ದಂಡವನ್ನು ತಪ್ಪಿಸಿಕೊಳ್ಳಬಹುದಾಗಿದೆ.

ಹಡಾಲೆದ್ದ ಪಾಕಿಸ್ತಾನದ ಆರ್ಥಿಕ ಸ್ಥಿತಿ; ಸೇನಾ ಬಜೆಟ್ ಇಳಿಕೆ ಮಾಡಲು ಮುಂದಾದ ಸೈನ್ಯಹಡಾಲೆದ್ದ ಪಾಕಿಸ್ತಾನದ ಆರ್ಥಿಕ ಸ್ಥಿತಿ; ಸೇನಾ ಬಜೆಟ್ ಇಳಿಕೆ ಮಾಡಲು ಮುಂದಾದ ಸೈನ್ಯ

ತೆರಿಗೆ ಪಾವತಿ ಪುಣ್ಯದ ಕೆಲಸ

ತೆರಿಗೆ ಪಾವತಿ ಪುಣ್ಯದ ಕೆಲಸ

ತೆರಿಗೆ ಪಾವತಿ ಮಾಡುವುದು ಪುಣ್ಯದ ಕೆಲಸ ಎಂಬಂತೆ ಪರಿಗಣಿಸಬೇಕು ಎಂದಿರುವ ಅವರು, ಪಾಕಿಸ್ತಾನವುಅತಿ ಹೆಚ್ಚು ದಾನ ದತ್ತಿಗಳನ್ನು ನೀಡುವ ಮತ್ತು ಕಡಿಮೆ ತೆರಿಗೆ ಪಾವತಿ ಮಾಡುವ ದೇಶ ಎಂದು ಬೇಸರದಿಂದ ಹೇಳಿದ್ದಾರೆ.

ದೇಶದಲ್ಲಿ ಸಮೃದ್ಧಿ ತರುವ ಸಲುವಾಗಿ ನಮ್ಮನ್ನು ನಾವು ಬದಲಾವಣೆ ಮಾಡಿಕೊಳ್ಳಬೇಕಾಗಿದೆ. ಯಾರು ತಮಗೆ ಸಹಾಯ ಮಾಡಿಕೊಳ್ಳುತ್ತಾರೋ ಅವರಿಗೆ ದೇವರು ಸಹಾಯ ಮಾಡುತ್ತಾನೆ ಎಂದು ಧರ್ಮ ಹಾಗೂ ದೇವರ ಹೆಸರಿನಲ್ಲಿ ಜನರ ಮೇಲೆ ಪ್ರಭಾವ ಬೀರಲು ಮುಂದಾಗಿದ್ದಾರೆ.

2 ಮಿಲಿಯನ್ ತೆರಿಗೆ ರಿಟರ್ನ್ಸ್ ಫೈಲ್

2 ಮಿಲಿಯನ್ ತೆರಿಗೆ ರಿಟರ್ನ್ಸ್ ಫೈಲ್

ಪಾಕಿಸ್ತಾನದಲ್ಲಿ ಇಮ್ರಾನ್ ಖಾನ್ ನೇತೃತ್ವದ ಪಿಟಿಐ ಪಕ್ಷದ ಮೊದಲ ಬಜೆಟ್ ಮಂಡನೆಯಾಗಲಿದೆ. ಈಗಾಗಲೇ ಅತಿಯಾದ ತೆರಿಗೆಯು ತೆರಿಗೆದಾರರಿಗೆ ತೀವ್ರ ಹೊರೆಯುಂಟುಮಾಡುತ್ತಿದೆ. ಈ ನಡುವೆ ಪಾಕ್ ಸರ್ಕಾರ ಮತ್ತಷ್ಟು ತೆರಿಗೆ ವಿಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಪಾಕಿಸ್ತಾನದಲ್ಲಿ ವರ್ಷಕ್ಕೆ ಕೇವಲ ಎರಡು ಮಿಲಿಯನ್ ಮಂದಿ ಮಾತ್ರ ಟ್ಯಾಕ್ಸ್ ರಿಟರ್ನ್ಸ್ ಫೈಲ್ ಮಾಡುತ್ತಿದ್ದಾರೆ ಎಂದು ಫೆಡರಲ್ ಬೋರ್ಡ್ ಆಫ್ ರೆವಿನ್ಯೂ ಅಂದಾಜಿಸಿದೆ.

ಪಾಕ್ ಅಧಿಕಾರಿಗಳಿಗೆ ತೆರಿಗೆ ವಿನಾಯಿತಿ ರದ್ದುಗೊಳಿಸಿದ ಅಮೆರಿಕಪಾಕ್ ಅಧಿಕಾರಿಗಳಿಗೆ ತೆರಿಗೆ ವಿನಾಯಿತಿ ರದ್ದುಗೊಳಿಸಿದ ಅಮೆರಿಕ

English summary
Pakistan Prime Minister Imran Khan introduces last Asset Declaration Scheme to legalise benami assets.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X