ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಡೆತ ತಿಂದ ನಂತರ ಮಾತುಕತೆಯ ಭಿಕ್ಷೆ ಬೇಡುತ್ತಿರುವ ಇಮ್ರಾನ್ ಖಾನ್

|
Google Oneindia Kannada News

ಇಸ್ಲಾಮಾಬಾದ್, ಫೆಬ್ರವರಿ 27: ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಕಳೆದೆರಡು ದಿನಗಳಿಂದ ಯುದ್ಧ ಸನ್ನಿವೇಶ ಉಲ್ಭಣವಾಗಿದೆ. ಇಂದು ಎರಡೂ ದೇಶದ ವಾಯು ಸೇನೆ ಪರಸ್ಪರ ಮುಖಾಮುಖಿ ಆಗಿದ್ದು, ಭಾರತ ಒಂದು ಮಿಗ್ ಅನ್ನು ಕಳೆದುಕೊಂಡಿದೆ ಪಾಕಿಸ್ತಾನ ಎರಡು ವಿಮಾನಗಳನ್ನು ಕಳೆದುಕೊಂಡಿದೆ.

ಆದರೆ ಇಷ್ಟೆಲ್ಲಾ ಆದಮೇಲೂ ಸಹ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಈಗಲೂ ತಾವು ಶಾಂತಿಮಾತುಕತೆಗೆ ಸಿದ್ಧವಿದ್ದೇವೆ ಎಂದು ಹೇಳುತ್ತಿದ್ದಾರೆ.

'ಪುಲ್ವಾಮಾದಲ್ಲಿ ಆದ ಘಟನೆ ಎಲ್ಲರಿಗೂ ಬೇಸರ ತರಿಸುವಂತಹದ್ದು, ಭಾರತೀಯ ಮನಸ್ಥಿತಿಯನ್ನು ನಾವು ಅರಿಯಬಲ್ಲೆವು. ಈ ಕುರಿತು ನಾವು ತನಿಖೆ ಮಾಡುವುದಾಗಿ ಮಾತುಕತೆ ನಡೆಸುವುದಾಗಿ ಹಿಂದೆಯೂ ಹೇಳಿದ್ದೆವು' ಎಂದು ಇಮ್ರಾನ್ ಖಾನ್ ಇಂದು ಹೇಳಿದ್ದಾರೆ.

'ನಿನ್ನೆ ಬೆಳಿಗ್ಗೆಯ ಘಟನೆ ನಡೆದ ಬಳಿಕ ನಾನು ಸದೇಶವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಯತ್ನ ಮಾಡುತ್ತಿದ್ದೇನೆ' ಎಂದು ಇಮ್ರಾನ್ ಖಾನ್ ಹೇಳಿದ್ದಾರೆ. ಯಾವುದೇ ಕಠಿಣ ನಿರ್ಧಾರಕ್ಕೆ ಮುನ್ನಾ ದೇಶದ ವಿಶ್ವಾಸ ಅತ್ಯಗತ್ಯವಾಗುತ್ತದೆ ಎಂದು ಅವರು ಹೇಳಿದ್ದಾರೆ.

'ಎರಡು ಮಿಗ್ ಉರುಳಿಸಿದ್ದೇವೆ ಎಂದ ಪಾಕ್'

'ಎರಡು ಮಿಗ್ ಉರುಳಿಸಿದ್ದೇವೆ ಎಂದ ಪಾಕ್'

ಭಾರತದ ಎರಡು ಮಿಗ್‌ ವಿಮಾನಗಳನ್ನು ಪಾಕಿಸ್ತಾನ ಸೇನೆ ಹೊಡೆದುರುಳಿಸಿದೆ, ಇಬ್ಬರು ಪೈಲೆಟ್‌ಗಳನ್ನು ವಶಕ್ಕೆ ಪಡೆದಿದೆ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ. ಆದರೆ ಭಾರತ ಸೇನೆಯು ತನ್ನ ಒಬ್ಬ ವಿಂಗ್ ಕಮಾಂಡರ್ ನಾಪತ್ತೆ ಆಗಿದ್ದು, ಒಂದು ಮಿಗ್ ಅನ್ನು ಕಳೆದುಕೊಂಡಿರುವುದಾಗಿ ಹೇಳಿದೆ.

'ಆಯುಧ ಹೊಂದಿರುವ ದೇಶಗಳು ಲೆಕ್ಕತಪ್ಪಬಾರದು'

'ಆಯುಧ ಹೊಂದಿರುವ ದೇಶಗಳು ಲೆಕ್ಕತಪ್ಪಬಾರದು'

ಎರಡೂ ದೇಶಗಳ ಬಳಿ ದೊಡ್ಡ-ದೊಡ್ಡ ಆಯುಧಗಳಿವೆ ಇಂತಹಾ ಸಮಯದಲ್ಲಿ ನಾವು ತಪ್ಪು ಹೆಜ್ಜೆ ಇಡಲಾಗುತ್ತದೆಯೇ ಎಂದು ನಾನು ಭಾರತವನ್ನು ಕೇಳಿದೆ ಎಂದಿರುವ ಇಮ್ರಾನ್ ಖಾನ್ ಈ ಯುದ್ಧ ಭೀತಿಯ ಸನ್ನಿವೇಶ ಹೀಗೆ ಮುಂದುವರೆದರೆ ಮುಂದಿನ ಪರಿಣಾಮಗಳು ನನ್ನ ಕೈಯಲ್ಲೂ ಇರುವುದಿಲ್ಲ, ಮೋದಿ ಅವರ ಕೈಯಲ್ಲೂ ಇರುವುದಿಲ್ಲ ಎಂದು ಇಮ್ರಾನ್ ಹೇಳಿದ್ದಾರೆ.

'ಆತಂಕ ಸೃಷ್ಟಿಸುವ ಉಮೇದು ನಮಗಿಲ್ಲ'

'ಆತಂಕ ಸೃಷ್ಟಿಸುವ ಉಮೇದು ನಮಗಿಲ್ಲ'

ಮುಂದುವರೆದು ಮಾತನಾಡಿರುವ ಇಮ್ರಾನ್ ಖಾನ್, ನಾವು ಭಾರತದ ದಾಳಿಗೆ ಪ್ರತ್ಯುತ್ತರ ನೀಡಿರುವುದು ಗಡಿಯಲ್ಲಿ ಆತಂಕವನ್ನು ಇನ್ನಷ್ಟು ಹೆಚ್ಚಿಸಲು ಅಲ್ಲ, ನಾವು ಎದುರುತ್ತರ ನೀಡಬಲ್ಲೆವು ಎಂಬುದನ್ನು ಸಾಬೀತುಪಡಿಸಲು ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.

ಪುಲ್ವಾಮಾ ದಾಳಿ ಬಗ್ಗೆ ಇಮ್ರಾನ್ ಮರುಕ

ಪುಲ್ವಾಮಾ ದಾಳಿ ಬಗ್ಗೆ ಇಮ್ರಾನ್ ಮರುಕ

ಪುಲ್ವಾಮಾ ದಾಳಿ ಆದ ಕೂಡಲೇ ನಾವು ಭಾರತದೊಂದಿಗೆ ಮಾತುಕತೆ ನಡೆಸಲು ಸಿದ್ಧವೆಂದು ಹೇಳಿದ್ದೆವು. ಪುಲ್ವಾಮಾದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬದ ನೋವು ನಮಗೆ ಗೊತ್ತಾಗುತ್ತದೆ ಎಂದು ಇಮ್ರಾನ್ ಖಾನ್ ಅವರು ಪುಲ್ವಾಮಾ ಹುತಾತ್ಮರಿಗೆ ಈಗ ಸಹಾನುಭೂತಿ ತೋರಿದ್ದಾರೆ.

ಈಗಲೂ ಮಾತುಕತೆಗೆ ಸಿದ್ಧ

ಈಗಲೂ ಮಾತುಕತೆಗೆ ಸಿದ್ಧ

ಪುಲ್ವಾಮಾದಲ್ಲಿ ಆಗಿರುವ ನಷ್ಟಕ್ಕೆ ನಮ್ಮ ಸಂತಾಪ ಇದೆ, ಆ ಬಗ್ಗೆ ತನಿಖೆ ಮಾಡಿ ಕ್ರಮ ಕೈಗೊಳ್ಳಲು ನಾವು ಸಿದ್ಧರಿದ್ದೇವೆ. ಕುಳಿತುಕೊಳ್ಳೋಣ ಪರಸ್ಪರ ಮಾತನಾಡಿ ಸಮಸ್ಯೆ ಇತ್ಯರ್ಥಪಡಿಸಿಕೊಳ್ಳೋಣ ಎಂದು ಇಮ್ರಾನ್ ಖಾನ್ ಹೇಳಿದ್ದಾರೆ.

English summary
Pakistan prime minister Imran Khan asks peace talks with India one again. He talks with media today and said we are still ready to talk with India. we did not want to continue war situation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X