ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನ ಮಾಜಿ ಪ್ರಧಾನಿ ನವಾಜ್ ಷರೀಫ್ ಸ್ಥಿತಿ ಗಂಭೀರ

|
Google Oneindia Kannada News

ಇಸ್ಲಾಮಾಬಾದ್, ಅಕ್ಟೋಬರ್ 29: ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ 'ಸಾವು- ಬದುಕಿನ' ಮಧ್ಯೆ ಹೋರಾಟ ನಡೆಸುತ್ತಿದ್ದಾರೆ. ರಕ್ತದ ಪ್ಲೇಟ್ ಲೆಟ್ ಸಂಖ್ಯೆಯಲ್ಲಿ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದೆ ಎಂದು ನವಾಜ್ ಷರೀಫ್ ರ ವೈದ್ಯರು ಮಂಗಳವಾರ ತಿಳಿಸಿದ್ದಾರೆ. ಈಚೆಗೆ ಅವರನ್ನು ತುರ್ತಾಗಿ ಜೈಲಿನಿಂದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು.

ಅರವತ್ತೊಂಬತ್ತು ವರ್ಷದ ನವಾಜ್ ಷರೀಫ್ ಅವರನ್ನು ಸೋಮವಾರ ರಾತ್ರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಲಂಚ ವಿರೋಧಿ ದಳದ ವಶದಲ್ಲಿ ಇದ್ದ ಅವರ ಪ್ಲೇಟ್ ಲೆಟ್ ಸಂಖ್ಯೆ ಎರಡು ಸಾವಿರಕ್ಕೆ ಇಳಿದು, ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಇನ್ನು ಚಿಕಿತ್ಸೆ ಪಡೆಯುವ ವೇಳೆಯಲ್ಲೇ ಹೃದಯದ ಸಮಸ್ಯೆಯಿಂದ ನರಳುತ್ತಿದ್ದರು.

ನವಾಜ್ ಷರೀಫ್ ಮೇಲೆ ಮತ್ತೊಂದು ಆರೋಪ; ಜೈಲಿನಿಂದ NAB ವಶಕ್ಕೆನವಾಜ್ ಷರೀಫ್ ಮೇಲೆ ಮತ್ತೊಂದು ಆರೋಪ; ಜೈಲಿನಿಂದ NAB ವಶಕ್ಕೆ

ಈಚೆಗಿನ ವರದಿ ಪ್ರಕಾರ, ರಕ್ತದಲ್ಲಿನ ಸಕ್ಕರೆ ಮಟ್ಟ ಮತ್ತು ರಕ್ತದೊತ್ತಡದಲ್ಲಿ ಏರಿಕೆಯಾಗಿ ನವಾಜ್ ಷರೀಫ್ ಆರೋಗ್ಯದಲ್ಲಿ ಮತ್ತೂ ಸಮಸ್ಯೆಯಾಗಿತ್ತು. ಭಾನುವಾರ ಒಂದೇ ದಿನ ಅವರ ರಕ್ತದ ಪ್ಲೇಟ್ ಲೆಟ್ ಸಂಖ್ಯೆಯು ನಲವತ್ತೈದು ಸಾವಿರದಿಂದ ಇಪ್ಪತ್ತೈದು ಸಾವಿರಕ್ಕೆ ಇಳಿದಿತ್ತು ಎಂದು ವೈದ್ಯರು ತಿಳಿಸಿದ್ದಾರೆ.

Pakistan PM Nawaz Sharif Health Condition Critical

ಆಸ್ಪತ್ರೆಗೆ ದಾಖಲಾದ ಮೇಲೆ ನವಾಜ್ ಷರೀಫ್ ತೂಕ ಏಳು ಕೇಜಿ ತೂಕ ಕಡಿಮೆ ಆಗಿದ್ದಾರೆ. ಆ ಮೂಲಕ ನೂರಾ ಏಳು ಕೇಜಿ ತೂಕ ಇದ್ದವರು ನೂರು ಕೇಜಿಗೆ ಇಳಿದಿದ್ದಾರೆ. ಚೌಧರಿ ಶುಗರ್ ಮಿಲ್ಸ್ ಪ್ರಕರಣದಲ್ಲಿ ನವಾಜ್ ಷರೀಫ್ ಮತ್ತು ಕುಟುಂಬದವರ ವಿಚಾರಣೆಯನ್ನು ರಾಷ್ಟ್ರೀಯ ಉತ್ತರದಾಯಿತ್ವ ಸಂಸ್ಥೆಯು ನಡೆಸುತ್ತಿದೆ.

ಇದಕ್ಕೂ ಮುನ್ನ ಕಳೆದ ವರ್ಷ ಡಿಸೆಂಬರ್ ನಲ್ಲಿ ಅಲ್- ಅಜಿಜಿಯಾ ಸ್ಟೀಲ್ ಮಿಲ್ಸ್ ಭ್ರಷ್ಟಾಚಾರ ಪ್ರಕರಣದಲ್ಲಿ ನವಾಜ್ ಷರೀಫ್ ಗೆ ಏಳು ವರ್ಷ ಜೈಲು ಶಿಕ್ಷೆ ವಿಧಿಸಿದ್ದು, ಆ ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ.

English summary
Due to decrease in blood platelet count down and other health issues Pakistan PM Nawaz Sharif health condition is critical.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X